ಅಕ್ಕಿಯ ಮುಡಿ ಎಂದರೆ ಅಕ್ಕಿಯನ್ನು ಹಾಕಿ ಇಡುವ ಒಂದು ವಸ್ತು. ಹಿಂದಿನ ಕಾಲದಲ್ಲಿ ಅಕ್ಕಿಯನ್ನು ವವರ್ಷ ದಿಂದ ವರ್ಷಕ್ಕೆ ದಾಸ್ತಾನು ಮಾಡಿ ಇಡುತ್ತಿದ್ದರು. ತುಳುವರು ಅಕ್ಕಿಯನ್ನು ಹಾಲಾಗದ ರೀತಿಯಲ್ಲಿ ಇಡಲು ಮುಡಿಯನ್ನು ಕಟ್ಟುತ್ತಿದ್ದರು. ಅದರಲ್ಲಿ ಅಕ್ಕಿಯನ್ನು ಹಾಕಿ ಬೆಚ್ಚಗೆ ಇಟ್ಟು ಉಪಯೋಗಿಸುತ್ತಿದ್ದರು. []

ಅರಿತ ಮುಡಿ

ಅಕ್ಕಿಯ ಮುಡಿಯನ್ನು ಕಟ್ಟಲು ಬೇಕಾದ ವಸ್ತು

ಬದಲಾಯಿಸಿ

ಬರೀ ಬೈಹುಲ್ಲಿನ ಹಗ್ಗ , ಬಾಳೆಗಿಡದ ಅಗಲವಾದ ಹಗ್ಗ, ಬೈಹುಲ್ಲಿನ ಕಂತೆ, ಬೈಹುಲ್ಲು, ಬೆತ್ತ, ಇದರಲ್ಲಿ ಕಟ್ಟುತ್ತಾರೆ. ಮುಡಿ ಅಂತ ಹೇಳಿದರೆ ಮೂರು ಕಲಸೆ ಅಕ್ಕಿ. [].

ಮುಡಿ ಕಟ್ಟುವ ವಿಧಾನ

ಬದಲಾಯಿಸಿ

ಸುರುವಿಗೆ ಮುಡಿಯ ಗಾತ್ರಕ್ಕೆ ಸರಿ ಹೊಂದುವ ಮೂರು ಬೈಹುಲ್ಲಿನ ಹಗ್ಗವನ್ನು ತಯಾರಿಸಿ ಇಡಬೇಕು. ಅದಕ್ಕಿಂತ ಮುಂಚೆ ಆದಷ್ಟು ಉದ್ದದ ಬೈಹುಲ್ಲಿನ ಕಂತೆಯನ್ನು ಹುಡ್ಕಿ ಇಡಬೇಕು. ಅದಕ್ಕೆ ನೀರು ಸ್ವಲ್ಪ ಚಿಮ್ಮಿಸಿ ಅದರ ಕಡೆಯನ್ನು ಕಟ್ಟುವರು. ನೆಲದ ಮೇಲೆ ಮೊದಲು ತಯಾರಿಸಿ ಇಟ್ಟ ಹಗ್ಗವನ್ನು ಇಟ್ಟು ಅದ್ರ ಮದ್ಯ, ಬೈಹುಲ್ಲಿನ ಕಂತೆಯ ಕಟ್ಟ ಮದ್ಯ ಬರುವ ಹಾಗೆ ಕಂತೆಯ ತಲೆಯನ್ನು ಮೇಲೆ ಮಾಡಿಸಿ ಇಡುತ್ತಾರೆ. ಅದರ ಕೋಡಿಯನ್ನು ಕೈಯಲ್ಲಿ ಹಿಡ್ಕೊಂಡು ಕೆಳಗೆ ಇರುವ ಕಟ್ಟಿನ ಸುತ್ತ ಹರಡಿಸಿ ಕಾಲಲ್ಲಿ ಮೆಟ್ಟಿ ನಿಂತು ಅದಕ್ಕೆ ಉದ್ದದ ಬೈಹುಲ್ಲನ್ನು ಬಾರೀ ಜಾಗ್ರತೆಯಿಂದ ಹರಾಡುತ್ತಾರೆ. ನಂತರ ಅದಕ್ಕೆ ತೆಳು ಬೈಹುಲ್ಲನ್ನು ಅದರ ಮೇಲೆ ಒಂದೇ ರೀತಿಯಲ್ಲಿ ಹಾಕಿ ಚೆನ್ನಾಗಿ ಬೈಹುಲ್ಲಿನ ಪದರ ಮಾಡ್ತಾರೆ. ನಂತರ ಒಂದೊಂದೇ ಹಗ್ಗವನ್ನು ಮೇಲೆ ಮೇಲೆ ಎಳೆಯುತ್ತಾರೆ. ಈಗ ಮುಡಿಯ ಕಲ್ಲೆ ರೆಡಿ ಆಯಿತು. ಇನ್ನೂ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಅದರ ಒಳಗೆ ಹಾಕುತ್ತಾರೆ. ಕಲ್ಲೆಯ ಸುತ್ತ ಇರುವ ಬೈಹುಲ್ಲು ಆಚೆಈಚೆ ಆಗದ ಹಾಗೆ ಎಚ್ಚರಿಕೆಯಿಂದ ಹಿಡ್ಕೊಂಡು ಒಂದು ಮುಡಿ ಅಕ್ಕಿಯನ್ನು ಅದಕ್ಕೆ ಹಾಕಿ ಉರುಟಾಗಿ ಬರುವ ಹಾಗೆ ಕಲ್ಲೆಯ ಹಗ್ಗವನ್ನು ಗಟ್ಟಿ ಮಾಡ್ತಾ ಬರ್ತಾರೆ. ಅದರ ನಂತರ ಅಕ್ಕಿಯನ್ನು ಕಲಸೆಯ ಬೆತ್ತದಲ್ಲಿ ಕುತ್ತಿ ಕುತ್ತಿ ಸರಿ ಮಾಡ್ತಾರೆ. ಇನ್ನು ಉಳಿದ ಬೈಹುಲ್ಲಿನ ಕೊಡಿಯನ್ನು ಒಟ್ಟು ಮಾಡಿ ಅದರ ಒಳಗೆ ನೀಟಾಗಿ ತುಂಬಿಸಿ ಚಂದ ಮಾಡ್ತಾರೆ. ಮುಡಿಯ ಅಡ್ಡ ಸುತ್ತು ಸುತ್ತಿಸಿ ಮುಗಿಯುವಾಗ ಹಗ್ಗವನ್ನು ಮೇಲೆಯಿಂದ ಕೆಳಗೆ ಅದರ ಅಡಿಗೆ ಹಾಕಿ ಗಟ್ಟಿಯಾಗಿ ಸುತ್ತಿಕೊಂಡು. ಪುನ್ಯ ಮರದಿಂದ ಮಾಡಿದ ಬೆತ್ತದಲ್ಲಿ ಗಟ್ಟಿ ಮಾಡಿ ಅದಕ್ಕೆ ಕುಟ್ಟಿ ತಟ್ಟಿ ಒಂದು ಸುಂದರ ರೂಪವನ್ನು ಕೊಡುತ್ತಾರೆ.ಈಗ ಉದ್ದಕ್ಕೆ ಹಾಕಿದ ಹಗ್ಗವನ್ನು ಕಲ್ಲೆಯ ಸುತ್ತ ನೀಟಾಗಿ ಚಂದಕ್ಕೆ ಸುತ್ತಿ ಆ ಹಗ್ಗದ ಸುತ್ತ ಹಹಗ್ಗದ ಕೊಡಿಯನ್ನು ಮುಡಿಯ ಅಡಿಭಾಗಕ್ಕೆ ಸಿಕ್ಕಿಸಿ ಕಟ್ಟ ಹಾಕಿ ಬೆತ್ತದಲ್ಲಿ ಗುದ್ದಿ ಮುಡಿಯನ್ನು ಭೂಮಿಯ ಮೇಲೆ ಹೊರಳಾಡಿಸಿ ಇಡುತ್ತಾರೆ. ಇಲ್ಲಿಗೆ ಅಕ್ಕಿಯ ಮುಡಿ ಆಯಿತು. []

ಅಕ್ಕಿಯ ಮುಡಿಯನ್ನು ಸಾಂಪ್ರದಾಯಿಕವಾಗಿ ಉಪಯೋಗಿಸುವುದು

ಬದಲಾಯಿಸಿ

ಮನೆಯ ಗ್ರಹಪ್ರವೇಶದ ದಿನ, ಪ್ರವೇಶ ಮಾಡುವಾಗ ಮನೆಯ ಎದುರಿನ ಬಾಗಿಲಿನ ದಾರಂದ ದ ಮೇಲೆ ಮುಡಿಯನ್ನು ಇಟ್ಟು. ಮನೆಯ ಮರದ ಕೆಲಸ ಮಾಡಿದ ವ್ಯಕ್ತಿ ಅದರ ಮೇಲೆ ನಿಂತು ತನ್ನ ಉಳಿಯಲ್ಲಿ ಒಂದು ಗೆರೆ ಎಳೆಯುತ್ತಾನೆ. ಮತ್ತೆ ಇಳಿದು ಆ ಮುಡಿಯನ್ನು ಒಳಗೆ ಎಳೆದು ಕೊಳ್ಳುತ್ತಾನೆ. ನಂತರ ಅದು ಅವನಿಗೆ ಸೇರಿದ್ದು. ಈಗ ಆ ಕ್ರಮ ಇಲ್ಲ ಗ್ರಹ ಪ್ರವೇಶದ ದಿನ ಮನೆ ತುಂಬಿಸಲಿಕ್ಕೆ ತೆಂಗಿನಕಾಯಿ, ಫಲ ವಸ್ತುಗಳ ಜೊತೆ ಅಕ್ಕಿ ಮುಡಿಯನ್ನು ಒಳಗೆ ತೆಗೆದುಕೊಂಡು ಹೋಗುತ್ತಾರೆ.


ತುಳುವಲ್ಲಿ ಗಾದೆ

ಬದಲಾಯಿಸಿ
  1. ಅರಿತ್ತ ಮುಡಿತ್ತ ಮಿತ್ತ್, ಕಡೆಪಿ ಕಲ್ಲ್ ದ ಮಿತ್ತ್ ಕುಲ್ಯರೆ ಬಲ್ಲಿ
  2. ಅಡಿ ತೂದು ಮುಡಿ ಒಯಿಪೊಡು

ಉಲ್ಲೇಖ

ಬದಲಾಯಿಸಿ
  1. http://tuluculture.blogspot.in/2014/06/blog-post_2.html
  2. [http://nambarkur.wordpress.com/2013/01/03/akkimudi
  3. http://vijaykarnataka.indiatimes.com/lavalavk/languages/tulu/-/articleshow/44951216.cms