ಅಕಿಲೀಸ್

ಗ್ರೀಕ್ ಪುರಾಣದ ನಾಯಕ

ಅಕಿಲೀಸ್ ಟ್ರೋಜನ್ ಯುದ್ಧದಲ್ಲಿ ಹೋರಾಡಿದ ಗ್ರೀಕ್ ವೀರರಲ್ಲಿ ಅಗ್ರಗಣ್ಯ. ಪೀಲಯೂಸ್ ಮತ್ತು ಥೀಟಿಸ್ ಅವರ ಮಗ. ಅಕಿಲೀಸನ ದೇಹ ಅಭೇದ್ಯವಾಗಿ ಇರುವುದಕ್ಕಾಗಿ ಅವನ ತಾಯಿ ಅವನನ್ನು ಪಾತಾಳವನ್ನು ಸುತ್ತುವರಿದಿರುವ ಸ್ಟಿಕ್್ಸ ನದಿಯಲ್ಲಿ ಮುಳುಗಿಸಿದಳಂತೆ. ಹಾಗೆ ಮಾಡುವಾಗ ಆಕೆ ಅವನ ಹಿಮ್ಮಡಿಗಳನ್ನು ತನ್ನ ಕೈಯಲ್ಲಿ ಹಿಡಿದಿದ್ದರಿಂದ ಹಿಮ್ಮಡಿಗಳು ಮಾತ್ರ ನೀರಿನಲ್ಲಿ ಮುಳುಗಲಿಲ್ಲ. ಆದ್ದರಿಂದ ಅವನ ಹಿಮ್ಮಡಿಗಳನ್ನು ಬಿಟ್ಟು ದೇಹದ ಉಳಿದ ಭಾಗವೆಲ್ಲ ವಜ್ರದಂತೆ ಗಟ್ಟಿಯಾಯಿತು. ಇದಲ್ಲದೆ ಅವನು ಟ್ರೋಜನ್ ಯುದ್ಧದಲ್ಲಿ ಭಾಗವಹಿಸದೆ ಇರುವಂತೆ ಮಾಡಲು ಅವನ ತಾಯಿ ಅವನಿಗೆ ಹೆಣ್ಣು ಹುಡುಗಿಯ ವೇಷಹಾಕಿ ಸ್ಕೈರೂಸ್ ನಗರದ ದೊರೆಯ ಆಸ್ಥಾನದಲ್ಲಿ ಬಚ್ಚಿಟ್ಟಿದ್ದಳು. ಆದರೆ ಒಡೀಸ್ಸಿಯೂಸ್ ಅವನ ಮುಂದೆ ಆಯುಧಗಳನ್ನು ಇಟ್ಟಾಗ ಅವನ ನಡತೆಯಿಂದ ಅವನು ಹೆಣ್ಣಲ್ಲವೆಂದು ಖಚಿತವಾಯಿತು. ಟ್ರಾಯ್ ನಗರದ ಮುತ್ತಿಗೆಯಾದಾಗ ಅಕಿಲೀಸ್ ಮರ್ಮಿಡನ್ನರ ನಾಯಕನಾಗಿದ್ದ.

  • ಇವನು ಸಮರ್ಥನೂ ಪ್ರಬಲನೂ ಶೀಘ್ರಗಾಮಿಯೂ ಉಗ್ರನೂ ಕಠೋರನೂ ಆಗಿದ್ದ ವೀರನೆಂದು ಹೆಸರು ಪಡೆದಿದ್ದ. ಅಗಮೆಮ್ನಾನಿನ ಸಂಗಡ ಜಗಳವಾಡಿ ಅಕಿಲೀಸ್ ತನ್ನ ಗುಡಾರದಲ್ಲಿ ಕುಳಿತುಬಿಟ್ಟಾಗ ಗ್ರೀಕರು ಏನೂ ಮಾಡಲು ತೋರದೆ ತಮ್ಮ ಹಡಗುಗಳಿಗೆ ವಾಪಸಾದರು. ಆದರೆ ಅಗಮೆಮ್ನಾನಿನ ಜೊತೆಯಲ್ಲಿ ರಾಜಿಯಾದ ಮೇಲೆ ಅಕಿಲೀಸ್ ಯುದ್ಧಮಾಡಿ ಹೆಕ್ಟರನನ್ನು ಕೊಂದುಹಾಕಿದ. ಕೊನೆಗೆ ಪ್ಯಾರಿಸ್ ಅವನ ಹಿಮ್ಮಡಿಗೆ ಬಾಣ ಹೊಡೆದು ಅವನನ್ನು ಕೊಂದ. ಅಕಿಲೀಸ್ ಚಿರಂಜೀವಿಯಾಗಿ ತನ್ನದೇ ಆದ ದ್ವೀಪದಲ್ಲಿದ್ದಾನೆಂಬ ಕಥೆಯೂ ಇದೆ. ಕೋಪಾವೇಶದ ಪರಮಾವಧಿಗೇರುತ್ತಿದ್ದ ಅಕಿಲೀಸ್ ದುರಂತ ನಾಯಕರೆಲ್ಲರ ಮೊದಲಿಗ. ಹೀಲ್ ಆಫ್ ಅಕಿಲೀಸ್-ಅಕಿಲೀಸನ ಹಿಮ್ಮಡಿ ಎಂಬ ಮಾತು ಅಪಾಯಸ್ಥಾನ ಎಂಬ ಅರ್ಥವನ್ನು ಸೂಚಿಸುವ ಆಡುನುಡಿಯಾಗಿ ಇಂದಿಗೂ ಉಳಿದು ಬಂದಿದೆ.[೧]
ವಿಜಯಶಾಲಿ ಅಕಿಲೀಸ್ ಹೆಕ್ಟರ್‌ನ ನಿರ್ಜೀವ ದೇಹವನ್ನು ಟ್ರಾಯನ ಕೊಟೆ ದಿಡ್ಡಿಬಾಗಿಲಿನ (ಗೇಟ್ಸ್ ಆಫ್ ಟ್ರಾಯ್‌ನ) ಮುಂದೆ ಎಳೆದು ತರುತ್ತಾನೆ. (ಅಕಿಲಿಯನ್ ಮುಖ್ಯ ಸಭಾಂಗಣದ ಮೇಲ್ಭಾಗದ ವಿಹಂಗಮ ತೈಲಚಿತ್ರದಿಂದ): ಟ್ರಾಯ್ ಯುದ್ಧದಲ್ಲಿ ಅಕಿಲೀಸ್.

ಉಲ್ಲೇಖಗಳು ಬದಲಾಯಿಸಿ

ಉಲ್ಲೇಖ ಬದಲಾಯಿಸಿ

"https://kn.wikipedia.org/w/index.php?title=ಅಕಿಲೀಸ್&oldid=1159286" ಇಂದ ಪಡೆಯಲ್ಪಟ್ಟಿದೆ