ಅಂಭಿ
ಅಂಭಿಯು ಅಲೆಗ್ಸಾಂಡರ್ ಮಹಾಶಯ ಸಿಂಧೂನದಿಯನ್ನು ದಾಟಿ ಪ್ರ.ಶ.ಪು. 326ರಲ್ಲಿ ಪಂಜಾಬಿಗೆ ಕಾಲಿಟ್ಟಾಗ, ಸಿಂಧೂ ಮತ್ತು ಜೀಲಂ ನದಿಗಳ ಮಧ್ಯೆ ಇದ್ದ ರಾಜ್ಯವನ್ನು ಆಳುತ್ತಿದ್ದ ರಾಜ.
ಇವನಿಗೂ ಜೀಲಂ ಮತ್ತು ಚೀನಾಬ್ ನದಿಗಳ ಮಧ್ಯದ ರಾಜ್ಯಕ್ಕೆ ದೊರೆಯಾಗಿದ್ದ ಪೌರವ ರಾಜನಿಗೂ ಶತ್ರುತ್ವವಿತ್ತು. ಈ ಇಬ್ಬರು ಹಿಂದೂ ರಾಜರು ಪರಸ್ಪರ ವೈರಿಗಳಾಗಿದ್ದರು. ಆದ್ದರಿಂದ ಅಂಭಿ ಅಲೆಗ್ಸಾಂಡರನ ಮೈತ್ರಿಯನ್ನು ಯಾಚಿಸಿ ಅವನಿಗೆ ತನ್ನ ರಾಜಧಾನಿಯಾದ ತಕ್ಷಶಿಲೆಯಲ್ಲಿ ಕೊಂಚಕಾಲ ನಿಂತು ವಿಶ್ರಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ. ಅಲೆಗ್ಸಾಂಡರ್ ತಾನು ಗೆದ್ದ ರಾಜ್ಯಗಳ ವ್ಯವಸ್ಥೆಯನ್ನು ಮಾಡಿದಾಗ ಅಂಭಿ ಗ್ರೀಕ್ ಮಾಂಡಲಿಕನ ಅಧೀನನಾಗುಳಿಯಬೇಕಾಯಿತು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: