ಅಂಬ್ಲಾಚೆರಿ (ಗೋವಿನ ತಳಿ)

ಅಂಬ್ಲಾಚೆರಿ ಭಾರತದ ತಮಿಳುನಾಡು ಪ್ರದೇಶ ಮೂಲದ ಒಂದು ಗೋತಳಿ. ಇದು ಉತ್ತಮ ಕೆಲಸಗಾರ ತಳಿ. ಇವು ಸುಮಾರು ಎರಡೂವರೆ ಟನ್ನುಗಳಷ್ಟು ಭಾರ ಎಳೆಯಬಲ್ಲವು. ಬಿರುಬಿಸಿಲಿನಲ್ಲೂ ಸತತ ೭ ಗಂಟೆ ಬಿಡುವಿಲ್ಲದೆ ದುಡಿಯುವ ಸಾಮರ್ಥ್ಯವಿರುತ್ತದೆ. ಉತ್ತಮ ದೈಹಿಕಸಾಮರ್ಥ್ಯವಿರುವ ಅತಿ ಕಡಿಮೆ ನಿರ್ವಹಣಾ ವೆಚ್ಚವಿರುವ ಬಹಳ ರೈತೋಪಯೋಗಿ ತಳಿ ಇದು. ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ.[][][] ತಮಿಳುನಾಡಿನ ತಂಜಾವೂರು ಪಕ್ಕದ ಅಂಬ್ಲಚೆರಿ ಗ್ರಾಮ ಇದರ ತವರೂರು. ಮೊಟ್ಟೈ ಮಡು, ಮೊಲೈ ಮಡು ಎಂಬ ಹೆಸರುಗಳೂ ಇವೆ. ಬಣ್ಣ ಕೆಂಪು ಅಥವಾ ಕಂದು. ಹುಟ್ಟುವಾಗ ಕೆಂಪಾಗಿದ್ದ ಕರು ಮೂರು ನಾಲ್ಕು ತಿಂಗಳ ನಂತರ ಬೂದು ಬಣ್ಣಕ್ಕೆ ತಿರುಗುವುದೂ ಇದೆ. ಮೈ ತುಂಬ ಹರಡಿರುವ ಬಿಳಿಗುರುತುಗಳು ಅಂಬ್ಲಾಚೆರಿಯ ಲಕ್ಷಣ ಎನ್ನಬಹುದು. ಕಂಗಾಯಂ ತಳಿಯಿಂದ ಬೆಳವಣಿಗೆ ಹೊಂದಿದ ತಳಿ ಇದು.[] ತಮಿಳುನಾಡಿನಲ್ಲಿ ಈ ಗೋವುಗಳ ಕಿವಿಯನ್ನು ಅರ್ಧದಷ್ಟು ಕತ್ತರಿಸುತ್ತಾರೆ. ಹಣೆಯ ಮಧ್ಯದಲ್ಲಿ ಬೆಂಕಿಯಿಂದ ಸುಟ್ಟು ನಾಮದಂತೆ ಮಾಡುತ್ತಾರೆ. ಇತರೆ ಭಾರತೀಯ ತಳಿಗಳಂತೆ ಇವುಗಳ ಸಂಖ್ಯೆ ಕೂಡ ಕ್ಷೀಣಿಸುತ್ತಿದೆ. ೧೯೯೮ರಲ್ಲಿ ಇವುಗಳ ಸಂಖ್ಯೆ ಸುಮಾರು ೨.೮೩ ಲಕ್ಷಗಳಷ್ಟಿತ್ತು. ಇವುಗಳ ಸಂತತಿ ನಾಶವಾಗಬಾರದೆಂದು ತಮಿಳುನಾಡಿನಲ್ಲಿ ಸಂಸ್ಥೆಯೊಂದನ್ನು ಕಟ್ಟಿಕೊಂಡು ಇದನ್ನು ಬೆಳೆಸುತ್ತಿದ್ದಾರೆ.

ಅಂಬ್ಲಾಚೆರಿ
ತಳಿಯ ಹೆಸರುಅಂಬ್ಲಾಚೆರಿ
ಮೂಲತಂಜಾವೂರು, ತಿರವಾವೂರು, ನಾಗಪಟ್ಟಣಂ ಜಿಲ್ಲೆಗಳು - ತಮಿಳುನಾಡು
ವಿಭಾಗಕೆಲಸಗಾರ ತಳಿ. ಕಂಗಾಯಂ ತಳಿಯಿಂದ ಬೆಳವಣಿಗೆ ಹೊಂದಿದ ತಳಿ.
ಬಣ್ಣದನಗಳು - ಬೂದು ಬಣ್ಣದಲ್ಲಿ ಬಿಳಿ ಬಣ್ಣ (ಮುಖ ಹಾಗೂ ಕಾಲುಗಳಲ್ಲಿ). ಹೋರಿ - ಕಡು ಬೂದು, ಮುಖ, ಬೆನ್ನು ಹಿಂಬಾಗ - ಕಪ್ಪು ಇರುತ್ತದೆ.
ಮುಖಮೂತಿ : ಕಪ್ಪು, ಕಪ್ಪು ಕಣ್ಣು ರೆಪ್ಪೆಗಳು ಇರುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. "Lactation performance and milk constituents of Umblachery breed of cattle (Bos indicus) in its native coastal ecology of Tamilnadu, India". R Rajendran. Department of Animal Genetics and Breeding, Madras Veterinary College, Chennai, Tamilnadu, India. Retrieved 16 May 2015.
  2. "Morphobiometrical characteristics and management of Umblachery cattle from coastal region of Tamilnadu, India". Department of Animal Genetics and Breeding, Madras Veterinary College, Chennai-600 007, Tamilnadu, India. Retrieved 16 May 2015.
  3. "Umblachery". Retrieved 16 May 2015.
  4. "Breed Characteristics and Performance of Umblachery cattle". Premkumar V Thomas. Retrieved 16 May 2015.

ಹೊರಕೊಂಡಿಗಳು

ಬದಲಾಯಿಸಿ

ಚಿತ್ರಗಳು

ಬದಲಾಯಿಸಿ