ಅಂತರಾಷ್ಟ್ರೀಯ ಅಹಿಂಸಾ ದಿನ
ಅಕ್ಟೋಬರ ೨ ಮಹಾತ್ಮ ಗಾಂಧಿ ಯವರ ಹುಟ್ಟುಹಬ್ಬವನ್ನು ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಈ ದಿನವನ್ನು ಮಹಾತ್ಮ ಗಾಂಧಿ ಜಯಂತಿ ಎಂದು ಆಚರಿಸಲಾಗುತ್ತದೆ.
ಹುಟ್ಟು
ಬದಲಾಯಿಸಿ೨೦೦೪ರ ಜನವರಿಯಲ್ಲಿ ಇರಾನಿಯನ್ ನೊಬೆಲ್ ಪ್ರಶಸ್ತಿ ವಿಜೇತ ಶಿರಿನ್ ಎಬಾಡಿ ಪ್ಯಾರಿಸ್ನಾ ಅಂತರಾಷ್ಟ್ರೀಯ ಅಹಿಂಸಾ ದಿನದ ಪ್ರಸ್ತಾಪವನ್ನು ಕೈಗೆತ್ತಿಕೊಂಡರು. ಮುಂಬೈಯ ವರ್ಲ್ಡ್ ಸೋಶಿಯಲ್ ಫ಼ಾರಮ್ ನ ಹಿಂದಿ ಶಿಕ್ಷಕರಿಂದ ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ಯಾರೀಸ್ ನಲ್ಲಿ ಪಾಠ ಮಾಡುತ್ತಿದ್ದಾಗ ಈ ಕಲ್ಪನೆ ಬಂದಿತ್ತು. ಈ ಯೋಚನೆ ಕ್ರಮೇಣ ಭಾರತದ ಕಾಂಗ್ರೆಸ್ ಪಕ್ಷದ ನಾಯಕರ ಗಮನಕ್ಕೆ ಬಂದಿತ್ತು. ಕೊನೆಗೆ ಜನವರಿ ೨೦೦೭ರಲ್ಲಿ ನವದೆಹಲಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆರ್ಚ್ ಬಿಷಪ್ ಡೆಸ್ಮ್ಂಡ್ ಟುಟು ನಡೆಸಿದ ಸತ್ಯಾಗ್ರಹ ಸಮಾವೇಶದಿಂದ ಈ ಕಲ್ಪನೆಯನ್ನು ಅಳವಡಿಸಿಕೊಳ್ಳಲು ಯುನೈಟೆಡ್ ನೇಷನ್ಸ್ ಗೆ ಕರೆ ನೀಡಿದರು.
ಅಂಗೀಕಾರ
ಬದಲಾಯಿಸಿ೨೦೦೭ ರ ಜೂನ್ ೧೫ ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಕ್ಟೋಬರ್ ೨ ನ್ನು ಅಂತರಾಷ್ಟ್ರೀಯ ಅಹಿಂಸಾ ದಿನವಾಗಿ ಸ್ಥಾಪಿಸಲು ಮತ ಹಾಕಿತು. ಜನರಲ್ ಅಸೆಂಬ್ಲಿಯ ನಿರ್ಣಯದಂತೆ ಯುನೈಟೆಡ್ ನೇಷನ್ಸ್ ವ್ಯವಸ್ಥೆಯ ಎಲ್ಲಾ ಸದಸ್ಯರನ್ನು ಅಕ್ಟೋಬರ್ ೨ ದಿನವನ್ನು "ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಸೇರಿದಂತೆ ಅಹಿಂಸೆಯ ಸಂದೇಶವನ್ನು ಸೂಕ್ತ ರೀತಿಯಲ್ಲಿ ಪ್ರಸಾರ ಮಾಡಬೇಕು" ಎಂದು ಕೇಳಿಕೊಳ್ಳುತ್ತದೆ.
ಪ್ರಚಾರ
ಬದಲಾಯಿಸಿಯುನೈಟೆಡ್ ನೇಷನ್ಸ್ ನೊಂದಿಗೆ ಭಾರತದ ಖಾಯಂ ಕಾರ್ಯಾಚರಣೆಯ ನಿಟ್ಟಿನಲ್ಲಿ, ಭಾರತದ ರಾಯಭಾರಿಯ ಕೋರಿಕೆಯ ಮೇರೆಗೆ, ನ್ಯೂಯಾರ್ಕ್ ನಗರದ ಯುನೈಟೆಡ್ ಪೋಸ್ಟಲ್ ಅಡ್ಮಿನಿಸ್ಟ್ರೇಷನ್ (UNPA) ವಿಶೇಷ ಸ್ಟಾಂಪ್ ಒಂದನ್ನು ತಯಾರಿಸಿತ್ತು.[೧] ಯು.ಎನ್.ಪಿ.ಎ ದಿಂದ ತಯಾರಿಸಲ್ಪಟ್ಟ ಈ ಪೆಟ್ಟಿಗೆಯ ಚಿತ್ರಣದ ಸ್ಟಾಂಪ್ ಯು.ಎನ್.ಪಿ.ಎ. ದ ಎನ್.ವೈ. ಸ್ಥಳದಲ್ಲಿ ರದ್ದುಗೊಳಿಸಲಾಗುತ್ತಿತ್ತು. ಅಕ್ಟೋಬರ್ ೨ ರಿಂದ ೩೧ ರವರೆಗೆ ಯು.ಎನ್.ಪಿ.ಎ. ಯಿಂದ ಹೊರಹೋಗುವ ಎಲ್ಲಾ ಮೈಲ್ ಗಳೂ ಕೂಡ, ಈ ಛಾಪು ಹೊಂದಿರಲೇಬೇಕೆಂದು ಯು.ಎನ್.ಪಿ.ಎ. ಸೂಚಿಸಿತ್ತು.
ಅಂತರಾಷ್ಟ್ರೀಯ ಅಹಿಂಸಾ ಶಿಲ್ಪ
ಬದಲಾಯಿಸಿಅಂತರಾಷ್ಟ್ರೀಯ ಅಹಿಂಸಾ ದಿನದ ದ್ಯೋತಕವಾಗಿ ಕಾರ್ಲ್ ಫ಼್ರೆಡ್ರಿಕ್ ರಾಯಿಟರ್ ಸ್ವಾರ್ಡ್ ರಿಂದ ನಿರ್ಮಿತವಾದ ಅಹಿಂಸಾ ಶಿಲ್ಪ ಸ್ವೀಡನ್ ನ ಮಾಲ್ಮೋನಲ್ಲಿದೆ.[೨]
ಉಲ್ಲೇಖಗಳು
ಬದಲಾಯಿಸಿ