ಗೋಪಾಲಗಡ್ ಕೋಟೆ / ಅಂಜನವೇಲ್ ಕೋಟೆ ಭಾರತದ ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ಕೋಟೆ. ಈ ಕೋಟೆಯು ರತ್ನಾಗಿರಿ ಜಿಲ್ಲೆಯ ಪ್ರಮುಖ ಕೋಟೆಯಾಗಿದೆ. ಈ ಕೋಟೆಯು ಒಂದು ಎದ್ದುಕಾಣುವ ಆಯಕಟ್ಟಿನ ಬಿಂದುವಿನ ಮೇಲೆ ಸ್ಥಿತವಾಗಿದೆ. ವಶಿಷ್ಠಿ ನದಿಯ ಉದ್ದಕ್ಕಿರುವ ವ್ಯಾಪಾರ ಮಾರ್ಗವನ್ನು ಮತ್ತು ಮಧ್ಯಕಾಲೀನ ಸಮಯದಲ್ಲಿ ಚಟುವಟಿಕೆಯಿಂದ ತುಂಬಿದ ದಾಭೋಲ್ ಬಂದರನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು. ಇದು ಸಮುದ್ರದ ಸಮೀಪವಿರುವ ಒಂದು ಗುಡ್ಡದ ಮೇಲಿರುವ ಕೋಟೆಯಾಗಿದೆ.

ಅಂಜನ್‍ವೇಲ್ ಕೋಟೆ

ಇತಿಹಾಸ ಬದಲಾಯಿಸಿ

ಈ ಕೋಟೆಯ ನಿರ್ಮಾಣದ ಅವಧಿಯ ಬಗ್ಗೆ ಯಾವುದೇ ದಾಖಲೆ ಪುರಾವೆಗಳು ತಿಳಿದಿಲ್ಲ. ಧಾಬೋಲ್ ಕಡಲಚಾಚಿನ ವಿಜಯದ ವೇಳೆ ಈ ಕೋಟೆಯನ್ನು ರಾಜ ಶಿವಾಜಿ 1660 ರಲ್ಲಿ ಬಿಜಾಪುರದ ಮೊಹಮ್ಮದ್ ಆದಿಲ್ ಷಾ. ನಂತರ ಅವನು ಒಂದು ನೌಕಾನೆಲೆ/ಹಡಗು ನಿರ್ಮಾಣದ ಢಕ್ಕೆಯನ್ನು ನಿರ್ಮಿಸಿದನು ಮತ್ತು ಕೋಟೆಗೆ ಗೋಪಾಲ್‍ಗಡ್ ಎಂದು ಹೆಸರಿಡಲಾಯಿತು.

ನೋಡಬೇಕಾದ ಸ್ಥಳಗಳು ಬದಲಾಯಿಸಿ

ಕೋಟೆಯು 7 ಎಕರೆ ಪ್ರದೇಶದಲ್ಲಿ ಹರಡಿದೆ. ಕೋಟೆಯು ಆಯತಾಕಾರದಲ್ಲಿದೆ ಮತ್ತು ಎಲ್ಲ ಬದಿಗಳಲ್ಲಿ ಒಣ ಕಂದಕವಿದೆ. ಕೋಟೆಯ ಗೋಡೆಗಳು 12 ಅಡಿ ಎತ್ತರ ಮತ್ತು 8 ಅಡಿ ದಪ್ಪವಿವೆ.[೧] ಕೋಟೆಯ ಹೊರ ಗೋಡೆಗಳ ಮೇಲೆ ಫಿರಂಗಿಗಳಿಂದ ಶಸ್ತ್ರಸಜ್ಜಿತವಾದ 15 ಬುರುಜುಗಳಿದ್ದವು. 1707 ರವರೆಗೆ ಕೋಟೆಯ ಮೇಲೆ ಪರ್ಷಿಯನ್ ಭಾಷೆಯಲ್ಲಿ ಒಂದು ಶಾಸನವಿತ್ತು, ಈಗ ಅದು ಎಲ್ಲಿಯೂ ಕಂಡುಬರುವುದಿಲ್ಲ. ಇಡೀ ಕೋಟೆಯನ್ನು ಲ್ಯಾಟರೈಟಿಕ್ ಕಲ್ಲಿನಿಂದ ನಿರ್ಮಿಸಲಾಗಿದೆ. ಕೋಟೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ: ವರ್ಚಕೋಟ್, ಪರ್ಕೋಟ್ ಮತ್ತು ಬಾಲೆಕೋಟ್. ಪರ್ಕೋಟ್‍ಗೆ ಸಣ್ಣ ಪ್ರವೇಶದ್ವಾರವಿದೆ. ಅದು ಹೊರಭಾಗಕ್ಕೆ ತೆರೆದುಕೊಳ್ಳುತ್ತದೆ. ಕೋಟೆಯ ಗೋಡೆಯೊಳಗೆ ಮಾವಿನ ತೋಟವಿದೆ, ಕೋಟೆಯು ಮಾಲೀಕತ್ವ ವಿವಾದದಲ್ಲಿ ಉಳಿದುಕೊಂಡಿದೆ.[೨] ಕೋಟೆಯ ಬಳಿ ಉದ್ದಾಲಕೇಶ್ವರನ ಪುರಾತನ ದೇವಾಲಯವಿದೆ. ಕೋಟೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿ ಒಂದು ಬೆಳಕಿನ ಮನೆಯಿದೆ.[೩]

ಉಲ್ಲೇಖಗಳು ಬದಲಾಯಿಸಿ

  1. "The Gazetteers Department - Ratnagiri". Cultural.maharashtra.gov.in. Retrieved 2019-01-30.
  2. "Guhagar Forts - Ratnagiri - Gopalgad - Forts in Guhagar - Guhagar Travel Guide". www.guhagar.ind.in. Archived from the original on 2022-09-29. Retrieved 2022-08-11.
  3. "Gopalgad Fort & Anjanvel Lighthouse – Travel Info". Trawell.in.

ಚಿತ್ರಸಂಪುಟ ಬದಲಾಯಿಸಿ