ಅಂಜದ ಗಂಡು (೧೯೮೮ರ ಚಲನಚಿತ್ರ)
(2014ರ ಅಂಜದ ಗಂಡು ಚಿತ್ರಕ್ಕಾಗಿ ಅಂಜದ ಗಂಡು (೨೦೧೪ರ ಚಲನಚಿತ್ರ) ಪುಟವನ್ನು ನೋಡಿರಿ)ಟೆಂಪ್ಲೇಟು:Infobox film/short description
ಅಂಜದ ಗಂಡು | |
---|---|
ರವಿಚಂದ್ರನ್ ಹಾಗು ಖುಷ್ಬೂ ಮುಖ್ಯಪಾತ್ರಗಳಲ್ಲಿ ನಟಿಸಿದ ಅಂಜದ ಗಂಡು, ೧೯೮೮ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. [೧]ಈ ಚಿತ್ರವನ್ನು ರೇಣುಕಾಶರ್ಮ ನಿರ್ದೇಶಿಸಿದರು. ಈ ಚಿತ್ರವು ತಮಿಳಿನಲ್ಲಿ ರಜನೀಕಾಂತ್ ನಟಿಸಿದ ತಂಬಿಕು ಎಂದ ಊರು(೧೯೮೪) ಚಿತ್ರದ ರೀಮೇಕ್ ಆಗಿದೆ. ಹಂಸಲೇಖರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಚಿತ್ರದ ಎಲ್ಲಾ ಹಾಡುಗಳು ಈ ಚಿತ್ರವನ್ನು ಜನಮನದಲ್ಲಿ ಈಗಲೂ ಸಹ ಅಚ್ಚಳಿಯದಿಂತೆ ಉಳಿದಿವೆ. ಈ ಚಿತ್ರದ ಎರಡು ಹಾಡುಗಳನ್ನು ತೆಲುಗಿನ ಎರಡು ಬೇರೆ ಬೇರೆ ಚಿತ್ರಗಳಲ್ಲಿ ಉಪಯೋಗಿಸಲಾದವು.
ಚಿತ್ರ ಮಂದಿರಗಳಲ್ಲಿ ೨೫ ವಾರಗಳ ಕಾಲ ಪ್ರದರ್ಶನವಾಯಿತು. ಈ ಚಿತ್ರವು, ೧೯೮೮ರ ಎರಡನೇ ಅತಿ ಹೆಚ್ಚು ಗಳಿಕೆಯನ್ನು ಸಂಪಾದಿಸಿ ಮನ್ನಣೆ ಗಳಿಸಿಕೊಂಡಿತು. ಮೊದಲನೇ ಸ್ಥಾನದಲ್ಲಿದ್ದ ರಣಧೀರ ಸಹ ರವಿಚಂದ್ರನ್ ಹಾಗು ಖುಷ್ಬೂರವರನ್ನು ಮುಖ್ಯ ತಾರಾಗಣದಲ್ಲಿ ಹೊಂದಿತ್ತು.
೧೯೮೦ರ ದಶಕದ ರವಿಚಂದ್ರನ್ ರವರ ಗಮನಾರ್ಹ ಚಿತ್ರಗಳಲ್ಲಿ, ಅಂಜದ ಗಂಡು ಸಹ ಒಂದು.