ಅಂಗುತ್ತರ ನಿಕಾಯ

(ಅಂಗುತ್ತರನಿಕಾಯ ಇಂದ ಪುನರ್ನಿರ್ದೇಶಿತ)

ಅಂಗುತ್ತರನಿಕಾಯ

ಬದಲಾಯಿಸಿ

ಬೌದ್ಧರ ಪಾಳಿ ತ್ರಿಪಿಟಕಗಳಲ್ಲಿ ಎರಡನೆಯದಾದ ಸುತ್ತಪಿಟಕದಲ್ಲಿ ಸೇರಿರುವ ಐದು ನಿಕಾಯಗಳಲ್ಲಿ ನಾಲ್ಕನೆಯದು.

ಅಂಗುತ್ತರವೆಂದರೆ ಇನ್ನೊಂದು ಅಂಗವೆಂದರ್ಥ.

ಈ ನಿಕಾಯದಲ್ಲಿರುವ 2,308 ಸುತ್ತಗಳನ್ನು ಹನ್ನೊಂದು ನಿಪಾತಗಳಲ್ಲಿ ಅಡಕ ಮಾಡಿದ್ದಾರೆ. ಒಂದೇ ಒಂದಿರುವ ವಸ್ತುಗಳನ್ನು ಕುರಿತು ಮೊದಲನೆಯ ನಿಪಾತದಲ್ಲಿ, ಎರಡಿರುವ ವಸ್ತುಗಳನ್ನು ಕುರಿತು ಎರಡನೆಯ ನಿಪಾತದಲ್ಲಿ, ಹತ್ತಿರುವ ವಸ್ತುಗಳನ್ನು ಕುರಿತು ಹತ್ತನೆಯ ನಿಪಾತದಲ್ಲಿ- ಹೀಗೆ ಬೌದ್ಧ ಸಂಪ್ರದಾಯದ ವಿವರಗಳನ್ನು ಇಲ್ಲಿ ನಿರೂಪಿಸಿದ್ದಾರೆ. ಒಂದೊಂದು ನಿಪಾತದಲ್ಲೂ ಹಿಂದಿನ ನಿಪಾತದಲ್ಲಿ ಹೇಳಿದುದಕ್ಕಿಂತ ಒಂದು ಹೆಚ್ಚಾಗಿ ಹೇಳುವುದರಿಂದ ಇದಕ್ಕೆ ಅಂಗುತ್ತರವೆನ್ನುತ್ತಾರೆ. ಸಂಸ್ಕೃತ ತ್ರಿಪಿಟಕದಲ್ಲಿ ಇದನ್ನು ಏಕೋತ್ತರಾಗಮ ಎಂದು ವ್ಯವಹರಿಸುತ್ತಾರೆ. ಒಂದೊಂದು ನಿಪಾತವನ್ನೂ ವಗ್ಗಗಳಲ್ಲಿ ಮತ್ತೆ ಅಡಕ ಮಾಡಿದ್ದಾರೆ. ತತ್ತ್ವಗಳನ್ನು ಸಂಖ್ಯಾನ ಮಾಡುವ ಪದ್ಧತಿ ಈ ನಿಕಾಯದಲ್ಲಿ ಆರಂಭವಾಗಿ ಅಭಿದಮ್ಮಪಿಟಕದಲ್ಲಿ ಬೆಳೆಯಿತು. ಸಂಗ್ರಹರೂಪವಾದ ನಿರೂಪಣೆ ಅಂಗುತ್ತರನಿಕಾಯದ ವೈಶಿಷ್ಟ್ಯ, ಗೌತಮಬುದ್ಧ ಲೋಕೋತ್ತರನಾದ, ದೇವಾಂಶಸಂಭೂತನಾದ ಗುರುವೆಂಬ ಭಾವನೆ ಬಲಿತಿದ್ದ ಕಾಲದಲ್ಲಿ ಈ ನಿಕಾಯದ ಸ್ವರೂಪ ನಿರ್ಧಾರವಾಯಿತು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: