ಅಂಗಳದ ವ್ಯಾಪಾರ(ಫ್ಲೋರ್ ಟ್ರೇಡ್)

ಷೇರು ಪೇಟೆಗಳಲ್ಲಿ ವ್ಯವಹಾರದಲ್ಲಿರುವ ವಿವಿಧ ವ್ಯಾಪಾರ ವಿಧಾನಗಳಲ್ಲಿ ಒಂದು (ಫ್ಲೋರ್ ಟ್ರೇಡ್)

ಅಂಗಳದ ವ್ಯಾಪಾರಿಯ ವ್ಯವಹಾರಗಳು

ಬದಲಾಯಿಸಿ

ಅಂಗಳದ ವ್ಯಾಪಾರಿ (ಕೊಠಡಿಯ ವ್ಯಾಪಾರಿ) ತನ್ನ ಲೆಕ್ಕದಲ್ಲಿಯೇ ಲಾಭದಾಸೆಯಿಂದ ಷೇರುಗಳನ್ನು ಕೊಳ್ಳುತ್ತಾನೆ; ಮಾರುತ್ತಾನೆ. ಇವನು ಇತರ ಸದಸ್ಯರಿಗಾಗಲಿ, ಸದಸ್ಯೇತರರಿಗಾಗಲಿ, ವ್ಯವಹಾರ ಮಾಡುವುದಿಲ್ಲ. ಇವನ ವ್ಯವಹಾರ ಲಂಡನ್ ಷೇರು ವಿನಿಮಯ ಕೇಂದ್ರದ ಸ್ವಂತವ್ಯಾಪಾರಿಯ ಅಥವಾ ಮುಂಬಯಿ ವಿನಿಮಯ ಕೇಂದ್ರದ ತರವಣಿವಾಲನ ರೀತಿಯದು. ಆದರೆ ಅವರಂತೆ ಇವನು ಯಾವ ಒಂದೇ ಬಂಡವಾಳಪತ್ರದ ವ್ಯಾಪಾರದಲ್ಲಿ ನಿರತನಾಗುವುದಿಲ್ಲ. ಯಾವ ಪತ್ರಗಳಲ್ಲಿ ಚುರುಕು ವ್ಯವಹಾರಗಳಾಗಬಹುದೆಂಬ ಸೂಚನೆ ಕಂಡುಬರುವುದೋ ಅವುಗಳಲ್ಲಿ ಮಾತ್ರವೇ ವ್ಯವಹರಿಸುತ್ತಾನೆ. ಅಂಗಳದ ವ್ಯಾಪಾರಿಗೆ ಸಾಮಾನ್ಯವಾಗಿ ತನ್ನದೇ ಆದ ಕಾರ್ಯಾಲಯವಿರುವುದಿಲ್ಲ. ಸರಕಿನ ಮಾರಾಟಕ್ಕಾಗಿಯೂ ವ್ಯವಹಾರಕ್ಕಾಗಿಯೂ ನಾಮಪತ್ರ ಶುಲ್ಕ ಕೊಟ್ಟು ಒಂದು ಕೋಣೆಯನ್ನು ಬಾಡಿಗೆಗೆ ಹಿಡಿಯುತ್ತಾನೆ. ಸ್ವಲ್ಪ ಲಾಭ ಸಿಕ್ಕರೂ ಅವನು ಬಿಡುವುದಿಲ್ಲ. ಸ್ವಲ್ಪ ನಷ್ಟವಾಗುವಂತಿದ್ದರೂ ಜಾಗರೂಕತೆಯಿಂದ ಅದನ್ನು ನಿವಾರಿಸಿಕೊಳ್ಳುತ್ತಾನೆ. ಬೆಲೆಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾದರೂ ಅವುಗಳ ಮೇಲೆ ವ್ಯವಹಾರ ನಡೆಸುವುದರಿಂದಲೂ ದೊಡ್ಡ ದೊಡ್ಡ ವ್ಯಾಪಾರ ಒಪ್ಪಂದಗಳನ್ನು ಬೇಗ ಬೇಗ ನಿರ್ವಹಿಸಿ, ಸರಕುಗಳನ್ನು ಕೊಂಡು ಮಾರುವುದರಿಂದಲೂ ಅವನು ತನ್ನ ಈ ಉದ್ದೇಶವನ್ನು ಸಾಧಿಸಿಕೊಳ್ಳುವನು. ಕೊಳ್ಳುವ ಅಥವಾ ಮಾರುವ ಯಾವ ವ್ಯವಹಾರವನ್ನೂ ಅರ್ಧಂಬರ್ಧ ಮಾಡದ ರೀತಿಯಲ್ಲಿ ಪ್ರತಿ ದಿನವೂ ಆತ ತನ್ನ ವ್ಯಾಪಾರವನ್ನು ಪುರೈಸುವನು. ನಷ್ಟ ತಪ್ಪಿಸುವ ಆದೇಶಗಳ ಸೂಚನೆಗಳನ್ನನುಸರಿಸಿ ಬಹು ಎಚ್ಚರಿಕೆಯಿಂದ ವ್ಯವಹರಿಸಿ, ಕೈ ಖಾಲಿಮಾಡಿ ಕೊಂಡು, ಪೇಟೆ ಮುಚ್ಚುವ ಮುನ್ನವೇ ಅಲ್ಲಿಂದ ಹೊರಡುತ್ತಾನೆ.

ಅಂಗಳದ ವ್ಯಾಪಾರಿಯ ಪಾತ್ರ

ಬದಲಾಯಿಸಿ

ಅಂಗಳದ ವ್ಯಾಪಾರಿ ಇರುವುದರಿಂದ ಪೇಟೆಯು ಅವಿಚ್ಛಿನ್ನವಾಗಿ ನಡೆಯುವುದಕ್ಕೂ ಸವಾಲು ಬೆಲೆಗೂ ಕೊಡಲೊಪ್ಪಿದ ಬೆಲೆಗೂ ನಡುವಣ ಅಂತರವನ್ನು ಕಡಿಮೆ ಮಾಡುವುದರ ಮೂಲಕ ದಿನದಿನದ ವ್ಯಾಪಾರಾವಧಿಯಲ್ಲಿ ಗಂಟೆ ಗಂಟೆಗೂ ಬೆಲೆಯನ್ನು ಸ್ಥಿರಗೊಳಿಸುವುದಕ್ಕೂ ಸಹಾಯಕವಾಗಿದೆ. ಆದರೆ ವಿಶೇಷ ಸಂದರ್ಭಗಳಲ್ಲಿ ಈ ವ್ಯಾಪಾರಿಗಳ ವ್ಯವಹಾರಗಳಿಂದ ಏರಿಳಿತಗಳು ಕಡಿಮೆಯಾಗಿ ಸ್ಥಿರತೆ ಏರ್ಪಡುವ ಬದಲು ಅವುಗಳ ಅಂತರಗಳು ಹೆಚ್ಚಬಹುದು. ಆದರೆ ಇವನು ಬಹುಕಾಲ ತೇಜಿ ಅಥವಾ ಮಂದಿ ವ್ಯಾಪಾರಿಯಾಗಿರುವುದಿಲ್ಲ. ಆದ್ದರಿಂದ ಇವನ ವ್ಯವಹಾರ ತೀಕ್ಷ್ಣವಾಗಿರುವುದಿಲ್ಲ. ಪೇಟೆಯ ವ್ಯವಹಾರಗಳನ್ನು ಸ್ಥಿರಗೊಳಿಸುವ ಕಾರ್ಯಭಾರವೂ ಅಷ್ಟೇನೂ ಮುಖ್ಯವಲ್ಲ. ಏಕೆಂದರೆ ಈ ವ್ಯಾಪಾರಿ ಪೇಟೆಯ ಪ್ರವೃತ್ತಿಗೆ ವಿರುದ್ಧವಾದ ದಿಕ್ಕಿನಲ್ಲಿ ಕೇವಲ ಮೂರನೆಯ ಒಂದು ಭಾಗದಷ್ಟು ಕಾಲದಲ್ಲಿ ಮಾತ್ರ ವ್ಯವಹರಿಸುತ್ತಾನೆ. ಏನಾದರಾಗಲಿ, ಈ ವ್ಯಾಪಾರದ ನಿರ್ವಹಣೆ ಬೇಗಬೇಗ ಪುರೈಸುವುದರಿಂದ ಉದ್ದಿಷ್ಟ ಪರಿಣಾಮ ಉಂಟಾಗುತ್ತದೆ [][]

(ನೋಡಿ - ಷೇರುಪೇಟೆ).

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Floor Trader (FT)". National Futures Association 2 April 2014.
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: