ನನ್ನ ಹೆಸರು ಪ್ರತೀಕ್ಷ. ನಾನು ಮೂಲತಃ ಬೆಂಗಳೂರಿನವಳು. ನಾನು ೧೯೯೯ರ ಮಾರ್ಚ್ ತಿಂಗಳಲ್ಲಿ ಜನಿಸಿರುತ್ತೇನೆ. ನನ್ನ ಪೋಷಕರಿಗೆ ನಾನೇ ಜೇಷ್ಠ ಪುತ್ರಿ.

ನನ್ನ ವಿದ್ಯಾಭ್ಯಾಸವನ್ನು ೧೦ನೇ ತರಗತಿಯವರೆಗು ಲಿಟಿಲ್ ಫ಼್ಲವರ್ ಪಬ್ಲಿಕ್ ಶಾಲೆಯಲ್ಲಿ ಮುಗಿಸಿರುತ್ತೇನೆ.ನಂತರ ಪದವಿಪೂರ್ವ ಶಿಕ್ಷಣವನ್ನು "ಶ್ರೀ ಕುಮಾರನ್ಸ್" ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಮುಗಿಸಿರುತ್ತೇನೆ. ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ.

ಹವ್ಯಾಸ

ಬದಲಾಯಿಸಿ
 
ಪೌರಾಣಿಕ ನಾಟಕ

ನನಗೆ ಬಾಲ್ಯದಿಂದಲೂ ಕಲೆ, ಚಿತ್ರಕಲೆ ಬಗ್ಗೆ ಬಹಳ ಆಸಕ್ತಿ ಇದೆ. ಸಣ್ಣ ವಯಸ್ಸಿನಿಂದಲೂ ಚಿತ್ರಗಳನ್ನು ಬಿಡಿಸುವುದು, ಅದಕ್ಕೆ ಬಣ್ಣ ತುಂಬುವುದು ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ.

 
ಮೈಸೂರು ಅರಮನೆ

ನಾನು ಸುಮಾರು ೭ ವರ್ಷಗಳಿಂದ ಸಂಗೀತ ಅಭ್ಯಾಸವನ್ನು ಮಾಡುತ್ತಿದ್ದೇನೆ. ಶಾಸ್ತ್ರೀಯ ಸಂಗೀತ ಅಲ್ಲದೇ ಸುಗಮ ಸಂಗೀತದಲ್ಲೂ ತರಬೇತಿ ಪಡೆಯುತ್ತಿದ್ದೇನೆ. ಭರತನಾಟ್ಯ ಹಾಗು ಪಾಶ್ಚಾತ್ಯ ನೃತ್ಯದಲ್ಲು ಅಲ್ಪ ಮಟ್ಟಿಗಿನ ತರಬೇತಿ ಪಡೆದಿದ್ದೇನೆ. ಪೌರಾಣಿಕ ನಾಟಕದಲ್ಲು ನನಗೆ ಹೆಚ್ಚಿನ ಆಸಕ್ತಿ. ಅದೆಷ್ಟೋ ಪೌರಾಣಿಕ ಪಾತ್ರಗಳ ವ್ಯಕ್ತಿತ್ವವು ನನ್ನ ಜೀವನಕ್ಕೆ ಆದರ್ಶವಾಗಿ ನಿಂತಿವೆ.

ನಾನು ಒಬ್ಬ ಕ್ರೀಡಾಪಟುವೂ ಹೌದು. ೨೦೦೮ರಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತಳಾಗಿದ್ದೆ. ಸುಮಾರು ೩ ವರ್ಷಗಳ ಕಾಲ ನನ್ನ ಶಾಲೆಯ "ಥ್ರೋ ಬಾಲ್" ತಂಡದ ನಾಯಕಿಯಾಗಿದ್ದೆ.

ಪ್ರಯಾಣ ಮಾಡುವುದು ಎಂದರೆ ನನಗೆ ಬಹಳ ಪ್ರೀತಿ. ಜಗತ್ತಿನ ಎಲ್ಲಾ ವಿಶೇಷ ಸ್ಥಳಗಳನ್ನು ನೋಡಬೇಕು ಎಂಬ ಆಸೆ. ಮೈಸೂರು ಅರಮನೆ ನನಗೆ ಪ್ರಿಯವಾದ ತಾಣ.

ಜೀವನದಲ್ಲಿ ನನ್ನದು ಸಣ್ಣ ನಿಯಮ: ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು. ನನಗೆ ನರೇಂದ್ರ ಮೋದಿ ಅವರು ಆದರ್ಶವಾಗಿ ಇದ್ದಾರೆ. ಅವರಂತೆ ದಿಟ್ಟ ಹಾಗು ನೇರವಾಗಿ ಮಾತನಾಡಬೇಕು ಎಂಬುದು ನನ್ನ ಆಸೆ. ಇರುವ ಜೀವನವ ಆನಂದದಿಂದ ಅನುಭವಿಸಬೇಕು.