ಒಬ್ಬಟ್ಟು

(ಹೋಳಿಗೆ ಇಂದ ಪುನರ್ನಿರ್ದೇಶಿತ)

ಒಬ್ಬಟ್ಟು ಅಥವಾ ಹೋಳಿಗೆ ಕರ್ನಾಟಕದ ಒಂದು ರುಚಿಕರವಾದ ಸಿಹಿ ತಿಂಡಿ. ಒಬ್ಬಟ್ಟನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ಒಂದು ತೆಂಗಿನಕಾಯಿಯಿಂದ, ಇನ್ನೊಂದು ತೊಗರಿಬೇಳೆಯಿಂದ. ಒಬ್ಬಟ್ಟನ್ನು ಪ್ರಮುಖವಾಗಿ ದೀಪಾವಳಿ, ಯುಗಾದಿ ಹಬ್ಬಗಳಲ್ಲಿ ಮತ್ತು ಮದುವೆ ಮುಂತಾದ ಸಮಾರಂಭಗಳಲ್ಲಿ ಮಾಡುತ್ತಾರೆ. ಒಬ್ಬಟ್ಟನ್ನು ತುಪ್ಪದ ಜೊತೆ ಅಥವಾಾ ಬಿಸಿ ಹಾಲಿನೊಂದಿಗೆ ತಿಂದರೆ ಬಹಳ ಚೆನ್ನಾಗಿರುತ್ತದೆ.

ಬೇಳೆ ಹೂರಣದಿಂದ ತಯಾರಿಸಿರುವ ಹೋಳಿಗೆ

ಬಗೆ ಬಗೆ ಒಬ್ಬಟ್ಟುಗಳು: ಬದಲಾಯಿಸಿ

  1. ಕಾಯಿ ಒಬ್ಬಟ್ಟು (ತೆಂಗಿನಕಾಯಿ,ಬೆಲ್ಲದ ಹೂರಣದಿಂದ ಮಾಡುವುದು)
  2. ಬೇಳೆ ಅಥವಾಾ ಹೂರಣದ ಒಬ್ಬಟ್ಟು (ತೊಗರಿಬೇಳೆ/ಕಡಲೆಬೇಳೆ,ಬೆಲ್ಲದ ಹೂರಣದಿಂದ ಮಾಡುವುದು)
  3. ಸಕ್ಕರೆ ಒಬ್ಬಟ್ಟು ಅಥವಾಾ ಮಂಡಿಗೆ(ಸಕ್ಕರೆಯ ಹೂರಣದಿಂದ ಮಾಡುವುದು)
  4. ಕೊಬ್ಬರಿ ಒಬ್ಬಟ್ಟು (ಸಕ್ಕರೆ,ಕೊಬ್ಬರಿಯ ಹೂರಣದಿಂದ ಮಾಡುವುದು)
 
ಕೊಬ್ಬರಿ ಹೋಳಿಗೆ