ಹಾರ್ನಹಳ್ಳಿ ರಾಮಸ್ವಾಮಿ

(ಹಾ.ರಾ. ಇಂದ ಪುನರ್ನಿರ್ದೇಶಿತ)

ಹಾ.ರಾ. ಎನ್ನುವ ಹೆಸರಿನಲ್ಲಿ ಅನೇಕ ಹಾಸ್ಯಲೇಖನಗಳನ್ನು ಬರೆದು ಹಾಸ್ಯಸಾಹಿತ್ಯದಲ್ಲಿ ಪ್ರಸಿದ್ಧರಾದ ಹಾರ್ನಹಳ್ಳಿ ರಾಮಸ್ವಾಮಿಯವರು ತಮ್ಮ ದೇಶಸೇವೆಯಿಂದ ಇನ್ನೂ ಹೆಚ್ಚು ಖ್ಯಾತರಾಗಿದ್ದಾರೆ.

ಕೌಟಂಬಿಕ ಬದಲಾಯಿಸಿ

ಇವರ ತಾಯಿ ಭವಾನಮ್ಮ; ತಂದೆ ಅನಂತರಾಮಯ್ಯ. ಶೈಶವದಲ್ಲೆ ತಂದೆ, ತಾಯಿಯರನ್ನು ಕಳೆದುಕೊಂಡ ಹಸುಗೂಸನ್ನು ಸಲಹಿದವರು ಗಿರಿಯಮ್ಮ ಹಾಗು ದಾಸಪ್ಪ ದಂಪತಿಗಳು.

ಚಿಕ್ಕಂದಿನಿಂದಲೆ ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿತರಾದ ರಾಮಸ್ವಾಮಿಯವರ ಅತ್ತೆ ಗೌರಮ್ಮ ಹಾಗು ಮಾವ ಸರದಾರ ವೆಂಕಟರಾಮಯ್ಯನವರೂ ಸಹ ಸ್ವಾತಂತ್ರ್ಯ ಹೋರಾಟಗಾರರೇ. ಲಲಿತಾ ಇವರ ಹೆಂಡತಿ.


ರಾಜಕೀಯ ಬದಲಾಯಿಸಿ

೧೯೪೨ ರಿಂದ ೧೯೪೭ರವರೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡು,ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್ ಹಾಗು ಏ.ಐ.ಸಿ.ಸಿ. ಗಳಲ್ಲಿ ದುಡಿದರು; ಶಾಸನಸಭಾ ಸದಸ್ಯರಾದರು; ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಯ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.


ಸಾಮಾಜಿಕ ಬದಲಾಯಿಸಿ

ಹಾರ್ನಹಳ್ಳಿ ರಾಮಸ್ವಾಮಿಯವರು ಮಲ್ನಾಡ ಇಂಜನಿಯರಿಂಗ್ ಕಾಲೇಜು, ಕಾಂತಮ್ಮ ಮಹಿಳಾ ಕಾಲೇಜು ಮೊದಲಾದ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಪ್ರಸಾರಕ್ಕಾಗಿ ಶ್ರಮಿಸಿದ್ದಾರೆ.

ಪ್ರಸ್ತುತ ಲೋಕಶಿಕ್ಷಣ ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ. (ಈ ಟ್ರಸ್ಟ್‍ನಿಂದ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಕರ್ಮವೀರ ವಾರಪತ್ರಿಕೆ ಹಾಗೂ ಕಸ್ತೂರಿ ಮಾಸಿಕಗಳು ಪ್ರಕಟವಾಗುತ್ತಿವೆ.


ಸಾಹಿತ್ಯ ಬದಲಾಯಿಸಿ

ಹಾ.ರಾ. ಅನೇಕ ಬಿಡಿ ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. ತಮ್ಮ ವಕೀಲಿ ವೃತ್ತಿಯಲ್ಲಿ ಕಂಡ ಹಾಸ್ಯಾನುಭವಗಳ ಸಂಕಲನ ‘ಮೈ ಲಾರ್ಡ್’ ಸಹ ಪ್ರಕಟಿಸಿದ್ದಾರೆ.