ಹರ್ಮನ್ಪ್ರೀತ್ ಕೌರ್

ಹರ್ಮನ್ಪ್ರೀತ್ ಕೌರ್ (ಜನನ ೮ ಮಾರ್ಚ್ ೧೯೮೯) ಒಬ್ಬ ಭಾರತೀಯ ಕ್ರಿಕೆಟ್ ಆಟಗಾರ್ತಿ[೧]. ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡ[೨]ದ ಆಲ್ರೌಂಡರ್ ಆಗಿದ್ದಾರೆ ಮತ್ತು ಅವರಿಗೆ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ[೩] ೨೦೧೭ ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಯನ್ನು ನೀಡಲಾಯಿತು.

ಹರ್ಮನ್ಪ್ರೀತ್ ಕೌರ್
ಅರ್ಜುನ ಪ್ರಶಸ್ತಿ
Personal information
ಪೂರ್ಣ ಹೆಸರು
ಹರ್ಮನ್ಪ್ರೀತ್ ಕೌರ್ ಭುಲ್ಲರ್
ಜನನ (1989-03-08) ೮ ಮಾರ್ಚ್ ೧೯೮೯ (ವಯಸ್ಸು ೩೫)
ಮೊಗ, ಪಂಜಾಬ್, ಭಾರತ
ಅಡ್ಡಹೆಸರುಹರ್ಮನ್
ಬ್ಯಾಟಿಂಗ್ಬಲಗೈ
ಚೆಂಡೆಸೆತಬಲಗೈ
ಪಾತ್ರಅಲ್ ರೌಂಡರ್
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಟೆಸ್ಟ್ (ಟೋಪಿ ಸಂಖ್ಯೆ ೭೪)೧೩ ಆಗಸ್ಟ್ ೨೦೧೪ v ಇಂಗ್ಲೆಂಡ್
ಕೊನೆಯ ಟೆಸ್ಟ್೧೬ ನವೆಂಬರ್ ೨೦೧೪ v ದಕ್ಷಿಣ ಆಫ್ರಿಕಾ
ಪ್ರಥಮ ಒಡಿಐ (ಟೋಪಿ ಸಂಖ್ಯೆ ೯೧)೭ ಮಾರ್ಚ್ ೨೦೦೯ v ಪಾಕಿಸ್ತಾನ
ಕೊನೆಯ ಒಡಿಐ೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಒಡಿಐ ಅಂಗಿ ಸಂ.
ಪ್ರಥಮ ಅಂ.ರಾ. ಟಿ೨೦ (ಟೋಪಿ ಸಂಖ್ಯೆ ೧೬)೧೧ ಜೂನ್ ೨೦೦೯ v ಇಂಗ್ಲೆಂಡ್
ಕೊನೆಯ ಅಂ.ರಾ. ಟಿ೨೦೮ ಮಾರ್ಚ್ ೨೦೨೦ v ಆಸ್ಟ್ರೇಲಿಯಾ
ದೇಶೀಯ ಪಂದ್ಯ ಮತ್ತು ತಂಡಗಳ ಮಾಹಿತಿ
ವರ್ಷತಂಡ
200/07-2013/14ಪಂಜಾಬ್ ವುಮೆನ್
2013/14-presentರೈಲ್ವೆ ವುಮೆನ್
2016-presentಸಿಡ್ನಿ ಥಂಡರ್
2018-presentಸೂಪರ್ನೋವಾಸ್
Career statistics
Competition WTests WODI WT20I WBBL
Matches ೯೯ ೧೧೩ ೧೪
Runs scored ೨೬ ೨,೩೭೨ ೨,೧೮೨ ೩೧೨
Batting average ೮.೬೬ ೩೪.೮೮ ೨೭.೧೭ ೬೨.೪೦
100s/50s 0/0 ೩/೧೧ ೧/೬ 0/೧
Top score ೧೭ ೧೭೧* ೧೦೩ ೬೪*
Balls bowled ೨೬೬ ೧,೨೮೬ ೬೬೪ ೯೦
Wickets ೨೩ 29
Bowling average ೧೦.೭೭ ೪೮.೦೮ ೨೩.೪೧ ೧೭.೬೬
5 wickets in innings 0 0 0
10 wickets in match 0 0 0 0
Best bowling ೫/೪೪ ೨/೧೬ ೪/೨೩ ೪/೨೭
Catches/stumpings 0/– ೩೪/– ೪೩/0 ೩/0
Source: ESPNcricinfo, ೮ ಮಾರ್ಚ್ ೨೦೨೦

ಆರಂಭಿಕ ಜೀವನ ಬದಲಾಯಿಸಿ

ಕೌರ್ ಅವರು ಮಾರ್ಚ್ ೮, ೧೯೮೯ ರಂದು ಪಂಜಾಬಿನ ಮೊಗಾದಲ್ಲಿ ಜನಿಸಿದರು.ಇವರ ತಂದೆ ವಾಲಿಬಾಲ್ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಾರ ಹರ್ಮಂದರ್ ಸಿಂಗ್ ಭುಲ್ಲಾ ಮತ್ತು ಸತ್ವಿಂದರ್ ಕೌರ್ ಇವರ ತಾಯಿ[೪]. ಅವರ ಕಿರಿಯ ಸಹೋದರಿ ಹೆಮ್ಜಿತ್ ಅವರು ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಮೊಗಾದಲ್ಲಿನ ಗುರು ನಾನಕ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಮೋಗಾದಿಂದ ೩೦ ಕಿಲೋಮೀಟರ್ (೧೯ ಮೈಲಿ) ದೂರದಲ್ಲಿದ್ದ ಜಿಯಾನ್ ಜ್ಯೋತಿ ಸ್ಕೂಲ್ ಅಕಾಡೆಮಿಯಲ್ಲಿ , ಕಮಲ್ಡೀಶ್ ಸಿಂಗ್ ಸೋಧಿ ಮಾರ್ಗದರ್ಶನದಲ್ಲಿ ಇವರ ಕ್ರಿಕೆಟ್ ಬದುಕು ಪ್ರಾರಂಭವಾಯಿತು. ಹರ್ಮನ್ ತನ್ನ ವೃತ್ತಿಜೀವನದ ಆರ್ಂಭದ ದಿನಗಳಲ್ಲಿ ಪುರುಷರೊಂದಿಗೆ ಆಡುತ್ತಿದ್ದರು. ೨೦೧೪ ಅಲ್ಲಿ ಅವರು ಮುಂಬೈಗೆ ತೆರಳಿದರು ಭಾರತೀಯ ರೈಲ್ವೆಯಲ್ಲಿ ಕೆಲಸ ಆರಂಭಿಸಿದರು.ವೀರೇಂದ್ರ ಸೆಹ್ವಾಗ್ ಅವರು ಹರ್ಮನ್ಪ್ರೀತ್ಗೆ ಸ್ಫೂರ್ತಿ ನೀಡಿದರು.

ವೃತ್ತಿ ಜೀವನ ಬದಲಾಯಿಸಿ

ಅವರು ತಮ್ಮ ೨೦ ನೇ ವಯಸ್ಸಿನಲ್ಲಿ ಏಕದಿನದ ಚೊಚ್ಚಲ ಪ್ರವೇಶವನ್ನು ಬೌವ್ರಲ್ ಬ್ರಾಡ್ಮನ್ ಓವಲ್ನಲ್ಲಿ ನಡೆದ , ೨೦೦೯ ರ ಮಹಿಳಾ ಕ್ರಿಕೆಟ್ ವಿಶ್ವಕಪ್ನಲ್ಲಿ ಮಾರ್ಚ್ ೨೦೦೯ ರಲ್ಲಿ ಪಾಕಿಸ್ತಾನದ ಮಹಿಳಾ ತಂಡದ ವಿರುದ್ಧ ಮಾಡಿದರು. ಪಂದ್ಯದಲ್ಲಿ, ಅವರು ನಾಲ್ಕು ಒವರ್ಗಳನ್ನು ಎಸೆದು ಕೇವಲ ಹತ್ತು ಓಟಗಳನ್ನು ನೀಡಿದರು.

ಟ್ವೆಂಟಿ ೨೦ ಯಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪ್ರವೇಶವನ್ನು,ಜೂನ್ ೨೦೦೯ ರಲ್ಲಿ, ೨೦೦೯ ರ ಐಸಿಸಿ ವುಮೆನ್ಸ್ ವರ್ಲ್ಡ್ ಟ್ವೆಂಟಿ ೨೦ ಯಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಟೌಂಟೌನ್ ಎಂಬ ನಗರದ ಕೌಂಟಿ ಎಂಬ ಮೈದಾನದಲ್ಲಿ ಮಾಡಿದರು. ಅಲ್ಲಿ ಅವರು ೭ ಎಸೆತಗಳಲ್ಲಿ ೮ ರನ್ ಗಳಿಸಿದರು .[೫]

೨೦೧೦ ರಲ್ಲಿ ಮುಂಬೈನಲ್ಲಿ ನಡೆದ ಟ್ವೆಂಟಿ -೨೦ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ವೇಗವಾಗಿ ೩೩ ರನ್ ಗಳಿಸಿದ್ದರಿಂದ ,ಅವರ ರಭಸವಾಗಿ ಚೆಂಡನ್ನು ಹೊಡೆಯುವ ಸಾಮರ್ಥ್ಯವನ್ನು ಎಲ್ಲರು ಕಂಡುಕೊಂಡರು.[೬]

ನಾಯಕಿ ಮಿಥಾಲಿ ರಾಜ್ ಮತ್ತು ಉಪ ನಾಯಕಿ ಕ್ಯಾಪ್ಟನ್ ಜುಲಾನ್ ಗೋಸ್ವಾಮಿ ಗಾಯಗಳಿಂದಾಗಿ ಔಟ್ ಆಗಿದ್ದರಿಂದ, ೨೦೧೨ ರ ಮಹಿಳಾ ಟ್ವೆಂಟಿ -೨೦ ಏಷ್ಯಾ ಕಪ್ ಫೈನಲ್ಗೆ ಭಾರತದ ಮಹಿಳಾ ನಾಯಕಿಯಾಗಿ ಅವರು ಹೆಸರಿಸಲ್ಪಟ್ಟರು. ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಅವರು ನಾಯಕಿಯಾಗಿ ತಮ್ಮ ಪ್ರಥಮ ಪ್ರವೇಶವನ್ನು ನೀಡಿದರು, ಅಲ್ಲಿ ಭಾರತವು ೮೧ ರನ್ನುಗಳನ್ನು ನಿಯಂತ್ರಿಸಿ ಜಯವನ್ನು ತನ್ನದಾಗಿಸಿಕೊಂಡು,ಈ ಮೂಲಕ ಏಷ್ಯಾಕಪನ್ನು ಗೆದ್ದಿತು.

ಮಾರ್ಚ್ ೨೦೧೩ ರಲ್ಲಿ, ಭಾರತದಲ್ಲಿ ಬಾಂಗ್ಲಾದೇಶ ಮಹಿಳಾ ಪ್ರವಾಸ ಕೈಗೊಂಡಾಗ ಭಾರತ ಮಹಿಳಾ ತಂಡದ ಏಕದಿನದ ನಾಯಕಿಯಾಗಿದ್ದರು. ಸರಣಿಯಲ್ಲಿ, ಕೌರ್ ತನ್ನ ಎರಡನೇ ಏಕದಿನ ಶತಕವನ್ನು ೨ ನೇ ಏಕದಿನದಲ್ಲಿ ಗಳಿಸಿದರು. ಕೌರ್ ಈ ಸರಣಿಯಲ್ಲಿ ೯೭.೫೦ ಸರಾಸರಿಯಲ್ಲಿ ಒಂದು ಅರ್ಧಶತಕ ಮತ್ತು ಒಂದು ಶತಕದ ನೆರವಿನಿಂದ ೧೯೫ ಓಟಗಳನ್ನು ಗಳಿಸಿದರು ಅಲ್ಲದೆ ೨ ವಿಕೆಟ್ಗಳ್ನನ್ನೂ ಪಡೆದುಕೊಂಡರು. ಆಗಸ್ಟ್ ೨೦೧೪ ರಲ್ಲಿ, ಸರ್ ಪಾಲ್ ಗೆಟ್ಟಿಸ್ ಗ್ರೌಂಡ್ನಲ್ಲಿ ನಡೆದ ಇಂಗ್ಲೆಂಡಿನ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆಗೈದ ಎಂಟು ಮಹಿಳೆಯರಲ್ಲಿ ಒಬ್ಬರಾಗಿದ್ದರು.ಆ ಪಂದ್ಯದಲ್ಲಿ ಅವರು ೯ ಮತ್ತು ೦ ಓಟಗಳನ್ನು ಗಳಿಸಿದರು. ನವೆಂಬರ್ ೨೦೧೫ ರಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಮೈಸೂರುನ ಗಂಗೊಥ್ರಿ ಗ್ಲೇಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಡಿದ ಟೆಸ್ಟ್ ಪಂದ್ಯವೊಂದರಲ್ಲಿ ೯ ವಿಕೆಟ್ಗಳನ್ನು ಪಡೆದರು.ಅವರ ಈ ಪ್ರದರ್ಶನದಿಂದಾಗಿ ಭಾರತಕ್ಕೆ ಇನ್ನಿಂಗ್ಸ್ ಮತ್ತು ೩೪ ರನ್ಗಳಿಂದ ಗೆಲ್ಲಲು ನೆರವಾಯಿತು.

ವನಿತೆಯರ ಅಂತರಾಷ್ಟ್ರೀಯ ಶತಕಗಳು ಬದಲಾಯಿಸಿ

ಹರ್ಮನ್ಪ್ರೀತ್ ಅವರ ಅಂತರಾಷ್ಟ್ರೀಯ ಶತಕಗಳು
# ಓಟಗಳು ಪಂದ್ಯ ವಿರುದ್ಧ ನಗರ/ದೇಶ ಸ್ಥಳ ವರ್ಷ ಫಲಿತಾಂಶ
1 1೧೦೭* ೩೧ ಇಂಗ್ಲೆಂಡ್ ಮುಂಬಯಿ, ಭಾರತ ಬ್ರಾಬೊರ್ನ್ ಮೈದಾನ ೨೦೧೩ ಸೋಲು
2 ೧೦೩ ೩೫ ಬಾಂಗ್ಲದೇಶ ಅಹಮದಬಾದ್, ಭಾರತ ಸರ್ದಾರ್ ಪಟೇಲ್ ಮೈದಾನ ೨೦೧೩ ಗೆಲುವು
3 ೧೭೧* ೭೭ ಆಸ್ಟ್ರೇಲಿಯಾ ಡರ್ಬಿ, ಇಂಗ್ಲೆಂಡ್, ಯುನೈಟೆಡ್ ಕಿಂಗ್ಡ್ಮ್ ಕೌಂಟ್ರಿ ಕ್ರಿಕೆಟ್ ಮೈದಾನ ೨೦೧೭ ಗೆಲುವು

ಉಲ್ಲೇಖಗಳು ಬದಲಾಯಿಸಿ

  1. http://www.espncricinfo.com/story/_/id/19651150/aggression-my-genes
  2. http://www.espncricinfo.com/ci/content/squad/627050.html
  3. https://en.wikipedia.org/wiki/Ministry_of_Youth_Affairs_and_Sports
  4. http://indianexpress.com/article/sports/cricket/icc-womens-world-cup-back-home-moga-star-harmanpreet-kaur-gets-mega-welcome-4774978/
  5. "Recent Match Report - India Women vs West Indies Women 2nd ODI 2011 | ESPNcricinfo.com". ESPNcricinfo (in ಇಂಗ್ಲಿಷ್). Retrieved 19 March 2020.
  6. "Recent Match Report - India Women vs England Women 2nd T20I 2010 | ESPNcricinfo.com". ESPNcricinfo (in ಇಂಗ್ಲಿಷ್). Retrieved 19 March 2020.