ಸೌಟು ಸೂಪ್, ಸ್ಟ್ಯೂ, ಸಾರು, ಹುಳಿ, ಅಥವಾ ಇತರ ಆಹಾರಗಳಿಗಾಗಿ ಬಳಸಲಾದ ಚಮಚದ ಒಂದು ಬಗೆ.[೧] ವಿನ್ಯಾಸಗಳು ಬದಲಾಗುತ್ತಾವಾದರೂ, ಒಂದು ಸಾಮಾನ್ಯ ಸೌಟು ಉದ್ದವಾದ ಹಿಡಿಕೆಯನ್ನು ಹೊಂದಿದ್ದು ಆಳವಾದ ಬೋಗುಣಿಯಲ್ಲಿ ಅಂತ್ಯಗೊಳ್ಳುತ್ತದೆ. ದ್ರವವನ್ನು ಗಡಿಗೆ ಅಥವಾ ಇತರ ಪಾತ್ರೆಯ ಹೊರಗೆ ಎತ್ತಿ ಬೋಗುಣಿಗೆ ಸಾಗಿಸುವುದನ್ನು ಸರಾಗವಾಗಿಸಲು ಆಗಾಗ್ಗೆ ಬೋಗುಣಿಯು ಹಿಡಿಕೆಗೆ ಒಂದು ಕೋನದಲ್ಲಿರುತ್ತದೆ. ಕೆಲವು ಸೌಟುಗಳು ದ್ರವವನ್ನು ಸುರಿಯುವಾಗ ನಯವಾದ ಹರಿವಿಗೆ ಅವಕಾಶ ಕೊಡಲು ಬೋಗುಣಿಯ ಬದಿಯ ಮೇಲೆ ಒಂದು ಬಿಂದುವನ್ನು ಹೊಂದಿರುತ್ತವೆ; ಆದರೆ ಇದು ಎಡಗೈಯ ಬಳಕೆದಾರರಿಗೆ ತೊಂದರೆಯನ್ನು ಸೃಷ್ಟಿಸಬಹುದು, ಏಕೆಂದರೆ ಒಬ್ಬರ ಕಡೆಗೆ ಸುರಿಯುವುದು ಹೆಚ್ಚು ಸುಲಭ. ಹಾಗಾಗಿ, ಅನೇಕ ಸೌಟುಗಳು ಇಂತಹ ಭಾಗಗಳನ್ನು ಎರಡೂ ಕಡೆಗಳಲ್ಲಿ ಹೊಂದಿರುತ್ತವೆ.

ಗ್ರೀಕ್ ಸೌಟು, ಸುಮಾರು ಕ್ರಿ.ಪೂ. ೪ನೇ ಶತಮಾನ

ಉಲ್ಲೇಖಗಳು ಬದಲಾಯಿಸಿ

  1. Swartz, Oretha D. (October 2, 1988). Service although not actually a spoon as is commonly found on a table, serving spoons are grouped under the 'utensil' umbrellaEtiquette (4th ed.). United States Naval Institute. p. 228. ISBN 978-0870216206.
"https://kn.wikipedia.org/w/index.php?title=ಸೌಟು&oldid=947442" ಇಂದ ಪಡೆಯಲ್ಪಟ್ಟಿದೆ