ಸೋಮನಳ್ಳಮ್ಮನ ದೇವಾಲಯವು ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಸೋಮನಹಳ್ಳಿ ಕ್ಷೇತ್ರ ದಲ್ಲಿದೆ. ನಾಗಮಂಗಲದಿಂದ ದಕ್ಷಿಣಕ್ಕೆ ಸುಮಾರು ೧೫ ಕಿ.ಮಿ.ದೂರದಲ್ಲಿದೆ. ಸಮೀಪದಲ್ಲಿಯೇ ಲೋಕಪಾವನಿ ನದಿ ಹರಿಯುತ್ತಿದೆ. ಸೋಮನಳ್ಳಮ್ಮ ನ ಮೂಲ ಹೆಸರು ಸೋಮನಾಯಕಿ, ಈಕೆ ಬೊಮ್ಮನಾಯಕ ಎಂಬ ಪಾಳೇಗಾರನ ಮಗಳು. ಬೊಮ್ಮನಾಯಕನ ಸೇನಾನಿ ತಿಮ್ಮನಾಯಕನ ಮಗ ಹಿಮ್ಮಡಿದಾಸ ಮತ್ತು ಸೋಮನಾಯಕಿ ಒಟ್ಟಿಗೆ ಬೆಳೆಯುತ್ತಾರೆ. ಈಕೆಯನ್ನು ನಾಗಮಂಗಲದ ಪಾಳೆಯಗಾರನ ಮಗನಿಗೆ ಮದುವೆ ಮಾಡಲಾಗಿತ್ತು. ಆದರೆ ಒಮ್ಮೆ ಹಿಮ್ಮಡಿದಾಸ ರಾಜ್ಯಕ್ಕಾಗಿ ದುರಾಸೆಪಟ್ಟು ಸೋಮನಾಯಕಿಯನ್ನು ಅಪಹರಿಸುತ್ತಾನೆ. ಸೋಮನಾಯಕಿ ವಾಸ್ತವವಾಗಿ ನಿರ್ದೋಷಿ. ಇದನ್ನು ತಿಳಿಯದ ಈಕೆಯ ತಂದೆ ಮಾಯಿಗನೆಂಬ ವ್ಯಕ್ತಿಯ ಮೂಲಕ ಇಬ್ಬರನ್ನೂ ಹಿಡಿಸಿ ಬೆಂಕಿಗೆ ಹಾಕಿಸುತ್ತಾನೆ.. ಸೋಮನಾಯಕಿ (ಸೋಮನಳಮ್ಮ) `ನಿಮ್ಮ ವಂಶದ ಹೆಣ್ಣು ಮಕ್ಕಳು ಹೆಸರೆತ್ತದಿರಲಿ`ಎಂದು ಶಪಿಸಿ ಅಗ್ನಿಗೆ ಆಹುತಿಯಾಗುತ್ತಾಳೆ. ಅದೇ ಜಾಗದಲ್ಲಿ ದೇವಾಲಯವಿದೆ. ಅದೇ ಸೋಮನಳ್ಳಮ್ಮನ ದೇವಾಲಯ.

ಸೋಮನಳ್ಳಮ್ಮನ ದೇವಾಲಯ