ಸುಪ್ತ ವಿಕಲತೆಸಂಪಾದಿಸಿ

 
Wikimedia Mexico - Outreach class for deaf children

ಲೋಕೋಭಿನ್ನಾಭಿರುಚಿ: ಎಂಬ ನಾಣ್ಣುಡಿಯಂತೆ ವ್ಯಕ್ತಿ ಅಥವಾ ಮಗು ದೈಹಿಕ,ಮಾನಸಿಕ,ದೈಹಿಕ, ಮಾನಸಿಕ,ಜೈವಿಕ ಆಸಕ್ತಿ,ಅಭಿರುಚಿ,ವರ್ತನೆ,ಆಲೋಚನೆ,ಭಾವನಾತ್ಮಕವಾಗಿ ಒಂದೇ ರೀತಿ ಇರಲು ಸಾಧ್ಯವಿಲ್ಲ, ಉದಾ:ನೋಡುವ ರೀತಿ,ಮತ್ತು ಸ್ರಜನ ಆಸಕ್ತಿ ಅಭಿರುಚಿಗಳು, ಇತ್ಯದಿ -ಇತ್ಯದಿ ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತ್ತದೆ.

ಶಿಕ್ಷಕರ ದೃಷ್ಟಿಯಲ್ಲಿ ವ್ಯಕ್ತಿಬಿನ್ನತೆ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಶಾಲಾ ತರಗತಿಯಲ್ಲಿ ಎಲ್ಲಾ ಮಕ್ಕಳು ಒಂದೇ ರೀತಿ ಆಲಿಸುವ, ಮಾತನಾಡುವ, ಓದುವ, ಬರೆಯುವ, ಚಿಂತಿಸುವ, ಶಕ್ತಿ ಸಾಮರ್ಥ್ಯವಿರುವುದು ಸಾಧ್ಯವಿಲ್ಲ. ಹಲವಾರು ವಿಷಯಗಳಲ್ಲಿ ಸಾಮ್ಯತೆ ಕಂಡುಬಂದರೂ ಅದು ನಿಖರತೆ ಅಲ್ಲ, ಹಾಗಾಗಿ ನಾವು ವ್ಯಕ್ತಿ ಭಿನ್ನತೆಯನ್ನು ಸಹಜವೆಂದೇ ಪರಿಗಣಿಸಬೇಕು.

ಬೇರೆ ಬೇರೆ ತರಹದ ವ್ಯಕ್ತಿಗಳುಸಂಪಾದಿಸಿ

 • ನೋಡುವ ಸಾಮರ್ಥ್ಯ ಹೊಂದುವುದಿಲ್ಲವೋ ಅವರನ್ನು ನಾವು ಅಂಧರು / ಕುರುಡರು ಎಂದು ಕರೆಯುತ್ತೇವೆ.
 • ಯಾರು ಸಂಪೂರ್ಣವಾಗಿ ಆಲಿಸುವ ಸಾಮರ್ಥ್ಯವನ್ನು ಹೊಂದಿರುವುದುದಿಲ್ಲವೋ ಅವರನ್ನು ನಾವು ಕಿವುಡರು ಎಂದು ಕರೆಯುತ್ತೇವೆ.
 • ಯಾರು ಸಂಪೂರ್ಣವಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿರುವುದುದಿಲ್ಲವೋ ಅವರನ್ನು ನಾವು ಮೂಗರು ಎಂದು ಕರೆಯುತ್ತೇವೆ.

ಹೀಗೆ ಬಾಹ್ಯ ರೂದಿಂದ ಯಾರು ಕುರುಡರು,ಕಿವುಡರು ,ಮೂಗರು, ಎಂದು ಸುಲಭವಾಗಿ ಪತ್ತೆ ಹಚ್ಛಬಹುದು. ಅವು ನಮಗೆ ನೇರವಾಗಿ ಗೋಚರಿಸುವುದು ನ್ಯೂನ್ಯತೆಗಳಾಗಿರುವುದರಿಂದ ಈ ನ್ಯೂನ್ಯತೆಗಳಿಗೆ ಸೂಕ್ತಚಿಕಿತ್ಸೆ ಅಥವಾ ಪರಿಹಾರಗಳನ್ನು ಕೊದುಬಹುದು ಆದರೆ ಆಂತರಿಕ ನ್ಯುನ್ನತೆಗಳಿಗೆ ಸೂಕ್ತಚಿಕಿತ್ಸೆ ಅಥವಾ ಪರಿಹಾರಗಲನ್ನು ಕೊಡಬಹುದು ಆದರೆ ಆಂತರಿಕ ನ್ಯೂನ್ಯತೆ ಅಥವಾ ಸೂಪ್ತ ವಿಕಲತೆ ಇರುವ ಮಕ್ಕಳು ಮುಜುಗರ ಅನುಭವಿಸುತ್ತಿರುವ/ನರಳುವ ಮಕ್ಕಳು ಹಲವಾರು.ಅವರು ನಮಗೆ ಸುಲಭವಾಗಿ ಗೋಚರಿಸದೇ ಇರುವುದರಿಂದ ಅವರಿಗೆ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕೊಟ್ಟಾಗ ಮಾತ್ರ ಅವರ ಸುಪ್ತ ವಿಕಲತೆ ಪತ್ತೆಹಚ್ಚಬಹುದು.

ಸುಪ್ತ ವಿಕಲತೆ ಒಂದು ರೋಗವೂ ಅಲ್ಲ, ಅದು ಮಗುವಿಗೆ ಒಂದು ಮಾರಕವೂ ಅಲ್ಲಸಂಪಾದಿಸಿ

ಯಾವುದಾದರೂ ವಿಶಿಷ್ಟ ಕ್ಷೇತ್ರದಲ್ಲಿ ಪ್ರಕಶಕ್ಕೆ ಬಾರದೆ ಅಂತರಂಗದಲ್ಲಿ ಹುದುಗಿದ್ದು ಮುಂದೆ ಶೀಘ್ರಗತಿಯಲ್ಲಿ ಮುಂದುವರಿಯಬಹುದಾದ ವ್ಯಕ್ತಿಯ ಸಹಜ ಸಾಮರ್ಥ್ಯವನ್ನು ಸುಪ್ತವಿಕಲತೆ/ ಅವ್ಯಕ್ತ ಸಾಮರ್ಥ್ಯ(TALENT HIDDEN) ಎಂದು ಹೆಸರು.

ಸುಪ್ತ ವಿಕಲತೆ ಇರುವ ಮಕ್ಕಳನ್ನು ಅಜ್ಞಾನ ಪ್ರತಿಭಾವಂತರೆಂದು ಕರೆಯಬಹುದು, ಒಂದು ಅಥವಾ ಹಲವು ಕ್ಷೇತ್ರಗಲಳಲ್ಲಿ ನೈಪುಣ್ಯ ಸಾಧಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದರೂ ಅವಕಾಶ ಸಿಗದೆ ಮೂಲೆಗುಂಪಾಗಿ ಬೆಳಕಿಗೆ ಬಾರದಿರುವುದು ಸುಪ್ತ ವಿಕಲತೆ.

ಏನಿದು ಸಮಸ್ಯೆಯೇ? ಇದು ಕಾಯೆಲೆಯೇ ಅಥವ ಇದೊಂದು ಶಪವೇ? ಎಂಬ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಉಧ್ಭವಿಸಿದಾಗ ತಕ್ಷಣ ಅದಕ್ಕೆ ಉತ್ತರ ಸಿಗುವುದು ಕಷ್ಟ. ಇದು ಕಾಯಿಲೆಯೂ ಅಲ್ಲ, ಶಾಪವು ಅಲ್ಲ. ಇಂತಹ ಸಮಸ್ಯೆಗಳು ಮಕ್ಕಳಲ್ಲಿ ಯಾವಾಗ ಪ್ರಾರಂಭವಾಗುತ್ತವೆ? ಅವುಗಳನ್ನು ಗುರುತಿಸುವುದು ಹೇಗೆ? ಎಂಬ ಪೂರ್ಣ ಮಾಹಿತಿ ಪಡೆಯಲು ಶಿಕ್ಷಕರಲ್ಲಿ ಹಾಗೂ ಪೋಷಕರಲ್ಲಿ ತಾಳ್ಮೆ ಸಹನೆ ಇದ್ದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರವಿದೆ. (ತಾಳ್ಮೆ ಮತ್ತು ಸಮಯ ನಿಮ್ಮಲ್ಲಿ ಇಲ್ಲದಿದ್ದರೆ ಮುಂದಿನ ಪುಟಗಳನ್ನು ಓದಬೇಕು ಹಾಗು ಪುಟ್ಟ ಮಕ್ಕಳಿಗೆ ಸೇವೆ ಮಾಡುವ ಗೋಜಿಗೂ ಹೋಗಬೇಕಿಲ್ಲ. ಏಕೆಂದರೆ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಲು ಮಾಹಿತಿ ಅಗತ್ಯ. ತಮ್ಮ ಸಮಸ್ಯೆಗಳಿಗೆ ವಿವರೆಸಿ ಹೇಳುವ ಸಾಮರ್ಥ್ಯ ಮಕ್ಕಳಲ್ಲಿರುವುದಿಲ್ಲ. ವಯಸ್ಕರರೇ ಅದನ್ನುತಿಳಿದುಕೊಳ್ಳಬೇಕು.ಸ್ವಲ್ಪ ದೊಡ್ದ ಮನಸ್ಸು ಮಾಡಿ ತ್ಯಾಗ ಮಾಡಬೇಕಾಗಬಹುದು(ತ್ಯಗ ಎಂದರೆ ದುಡ್ಡಿನ ತ್ಯಗ ಬೇಡ) ಸಮಯ ತ್ಯಾಗ ಮಾಡಿ ಪುಟ್ಟ ಮಕ್ಕಳಿಗೆ ಅಪಾರ ಸೇವೆ ಸಲ್ಲಿಸುವ ಪುಣ್ಯತ್ಮರಾಗಬಹುದು.

ನಾವು ಹೇಳುವುದುಂಟು ನಮ್ಮ ಮಕ್ಕಳೇ ನಮ್ಮ ಆಸ್ತಿಎಂದು, ನಮಗಿಂತ ನಮ್ಮ ಮಕ್ಕಳು ಅವರ ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಬೇಕು. ವೈದ್ಯನಾಗಿಯೋ, ಇಂಜಿನಿಯರ್ ಆಗಿಯೋ.......ಇತ್ಯಾದಿ ಪೋಷಕರ ಆಸೆ ಆಕಾಂಕ್ಷೆಗಳು ಅಥವಾ ಹಗಲು ಕನಸುಗಳೊ ಅವು ಈಡೇರಿದರೆ ಮನಸ್ಸಿಗೆ ತೃಪ್ತಿ.ಅಪ್ಪಿ ತಪ್ಪಿ ಎಲ್ಲಿಯಾದರೂ ನಮ್ಮ ಮಕ್ಕಳು ಕಲಿಕೆಯಲ್ಲಿ ಬಹಳ ಹಿಂದೆ ಉಳಿದು ಮೊದಲನೇ ಎರಡನೇ ರಾಂಕ್ ಪಡೆಯದೇ ಇದ್ದರಂತೂ ಮುಗಿಯಿತು ಕತೆ. ಪೋಷಕರ ಮನಸಿನಲ್ಲಿ ನೆಮ್ಮದಿಯೇಇಲ್ಲ ಸದಾ ಸಿಡುಕು ಜಿಗುಪ್ಸೆ, ಯಾವುದೇ ಶಾಲೆಯಲ್ಲಿ ಆದರೂ ಮೂರು ಮಕ್ಕಳಲ್ಲಿ ಇಪ್ಪತ್ತು ಮಕ್ಕಳಾದರೂ (ಶೇ 20) ಕಲಿಕೆಯಲ್ಲಿ ಹಿಂದುಳಿದವರಿಗಿಂತ ಅಂಕ ಪಟ್ಟಿಯಲ್ಲಿ ಕಡಿಮೆ ಅಂಕಗಳನ್ನು ಪಡೆದಿರಬಹುದು. ಇದಕ್ಕೆಲ್ಲಾ ನಾವು ಕಾರಣಗಳು ತಿಳಿಯುವುದು ತೀರಾ ಅಗತ್ಯ.

ಕಾರಣ ಒಂದಲ್ಲ ಹಲವಾರುಸಂಪಾದಿಸಿ

 • ಬೇರೆ ಮಕ್ಕಳ ಜೊತೆಗೆ ಹೋಲಿಸಿದಾಗ ಬುದ್ಧಿ ಶಕ್ತಿ ಸ್ವಲ್ಪ ಕಡಿಮೆ ಇರಬಹುದು.
 • ಕಣ್ಣಿನ ದೃಷ್ಟಿಯಲ್ಲಿ, ಕಿವಿ ಕೇಳುವಿಕೆಯಲ್ಲಿ, ಅಲ್ಪ ಪ್ರಮಾಣದ ಲೋಪದೋಷಗಳು ಇರಬಹುದು.
 • ಬೆಳವಣಿಗೆಯ ಹಂತಗಳು ವಿಳಂಬವಾಗಿರಬಹುದು.
 • ಬುದ್ಧಿ ಮಾಂಧ್ಯತ್ವ ಇರಬಹುದು.
 • ಗಮನದ ಅವಧಾನ ಕೊರತೆ ಇರಬಹುದು.
 • ಗಮನದ ಅವಧಾನ ಕೊರತೆ ಜೊತೆಗೆ ಮಿತಿ ಮೀರಿದ ತೀವ್ರತೆ (ಉದ್ವೇಗ) ಇರಬಹುದು.
 • ಕಲಿಕೆಯೆಲ್ಲಿ ವಿಕಲತೆ ಇರಬಹುದು.
 • ಭಾವನೆಯಲ್ಲಿ ಅವ್ಯವಸ್ಥೆ ಇರಬಹುದು.
 • ಮನೆಯಲ್ಲಿ ಸದಾ ತಾಯಿ ತಂದೆಯರ ಜಗಳ/ಮನೆಯ ಅವ್ಯವಸ್ಥೆಯ ಮತ್ತು ಕಲುಶಿತ ವಾತಾವರಣ ಕೂಡಾ ಒಂದು ಕಾರಣವಾಗಬಹುದು.
 • ಶಾಲೆಯ ವಾತಾವರಣಕ್ಕೆ ಮಗುವು ಹೊಂದಿಕೊಳ್ಳದೇ ಇರಬಹ್ದುದು.

ಮಾನವನಾಗಿ ಜನ್ಮ ತಾಳಿದಾಗ ಹಾಗೂ ನಂತರ ನಾವೆಲ್ಲರೂ ಒಂದೇ ಸಾಮಾನವಾಗಿರುವುದಿಲ್ಲ. ಅಂದರೆ ಒಬ್ಬ ಇನ್ನೊಬರ ಹಾಗೆ ಇರುವುದಿಲ್ಲ.ಹೆಬ್ಬೆರಳಿನ ರೇಖೆಯ ಗುರುತುಗಳು, ಮುಖ ಚರ್ಯ,ಧ್ವನಿ,ಸ್ವರ,ಮೈಬಣ್ಣ, ಮೈ ಗಾತ್ರ, ಶರೀರದೆತ್ತರ,ಯೋಚನೆ ಶಕ್ತಿ,ಬುದ್ಧಿ ಶಕ್ತಿ,ಕೌಶಲ್ಯತೆ,ಪ್ರತಿಭೆ,ಎಲ್ಲವೂ ಒಂದು ತರಹ/ ಒಂದೇ ಸಮಾನವಾಗಿರುತ್ತದೆಯೊ.ಇವೆಲ್ಲವೂ ವಿಬ್ಭಿನ್ನವಲ್ಲವೇ?ಹಾಗೆಯೇ ಎಲ್ಲರು ಅಲ್ಪ ಕೆಲವರಾದರೂ ಅಂಗವಿಕಲತೆಯಾಗಿ ಹುಟ್ಟುವುದಿಲ್ಲವೆ? ಉದಾಹರಣೆ :

 1. ಕಣ್ಣಿದ್ದು ಹುಟ್ಟಬಹುದು-ಪೂರ್ತಿ ದೃಷ್ಟಿ ಇರುವುದಿಲ್ಲ-ಕುರುಡ
 2. ಕಿವಿ ಇದ್ದು ಹುಟ್ಟಬಹುದು-ಪೂರ್ತಿ ಕೆಳುವುದಿಲ್ಲ -ಕಿವುಡ
 3. ಬಾಯಿ, ನಾಲಿಗೆ ಇದ್ದು ಹುಟ್ಟಬಹುದು-ಮಾತನಾಡಲು ಆಗುವುದಿಲ್ಲ---ಹೀಗೆ ಮೂಗ,ಕಿವುಡ,ಕುರುಡ,ಮೂಕ ಎಂದು ವಿವಿಧ ವಿಕಲತೆಗಳಿಂದ ಹುಟ್ಟುವ ಮಕ್ಕಳನ್ನು ನಾವು ನೋಡುವಾಗ ಅಂತಹ ಗೋಚರಣವಾಗುತ್ತದೆ.

ಆದರೆ ಅವರ ಅಂತರಂಗದಲ್ಲಿರುವಭಾವನೆಗಳು, ಅನುಭವಗಳು ನೋಡುವವರ ಕಣ್ಣಿಗೆ ಗೋಚರಿಸುವುದಿಲ್ಲ. ಎಷ್ಟೋ ಸಲ ನಾವು ಅವರ ಸಹಾಯಕ್ಕೆ ಮುಂದೆ ಹೋಗುತ್ತೇವೆ.......ಏಕೆ? ಅವರ ಅಸಹಾಯಕತೆ ನಮ್ಮ ಕಣ್ಣಿಗೆ ಗೋಚರವಾಗುವುದರಿಂದ ನಮ್ಮ ಅಂತರಾಳದಲ್ಲಿ ಅಯ್ಯೋ ಪಾಪ!.........ಎಂದು ಅನುಕಂಪ ತೋರಿಸುತ್ತೇವೆ. ಆದರೆ ಎಷ್ಟೋ ಸಲ ಎಷ್ಟೋ ಮಕ್ಕಳಿಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ...........ಏಕೆ? ಅವರ ಅಸಹಾಯಕತೆ ನಮ್ಮ ಕಣ್ಣಿಗೆ ಕಾಣುವುದಿಲ್ಲ............?

ಈಗ ಒಂದು ಪ್ರಶ್ನೆ .......ಗೋಚರವಾಗದೆ ಇರುವಂತಹ ವಿಕಲತೆಗಳು ಇದೆಯೇನು? ಅದೇನದು ಅಂತಹ ಅಗೋಚರ ವಿಕಲತೆ..........ಕಂಡೇ ಇಲ್ವಲ್ಲ.........ಆಹಾ ಗೊಂದಲ ಪಡಬೇಡಿ,ಅದರ ಮಾಹಿತಿ ನೀಡುವುದೇ ಈ ಕಿರು ಹೊತ್ತಿಗೆಯ ಮೂಲ ಉದ್ದೇಶಃ ಅಗೋಚರ ಅಥವಾ ಸುಪ್ತವಾಗಿ ಹುದುಗಿರುವ / ಅಥವಾ ಗುಪ್ತ ಸುಪ್ತ-ವಿಕಲತೆ ಅದು ಮಕ್ಕಳಲ್ಲಿ ಇರುತ್ತದೆಯೇ? ಅದರಿಂದ ಏನಾದರು ಸಮಸ್ಯೆ ಇದೆಯೇ? ಅದರ ಪ್ರಾರಂಭ ಹೇಗೆ ಗುರುತಿಸುವುದು / ಪತ್ತೆ ಹಚ್ಛುವುದು ಹೇಗೆ? ಸಮಸ್ಯೆಯನ್ನು ಬಗೆಹರಿಸಬಹುದೇ?............ ಎಂಬಿತ್ಯಾದಿ.

ಶಿಕ್ಷಕನಾದವ ನಾನು ಏನು ಮಾಡಬಹುದು? ಪೋಷಕರಾದವರು ನಾವು ಏನು ಮಾಡಬಹುದು?, ಸಮಾಜ ಸೇವಕನಾದ ನಾನೇನು ಮಾಡಬಹುದು? ಹೌದು ಹೀಗೆ ಪ್ರಶ್ನೆಗಳ ಸರಮಾಲೆ.......ಉತ್ತರ? ಹೀಗೆ ಪ್ರಶ್ನೆಗಳು ಹುಟ್ಟುತ್ತಲೇ ಇರುತ್ತವೆ..