ಸೀಮೆ ಹುಣಸೆ
Pithecellobium dulce | |
---|---|
In Kolkata, West Bengal (India) | |
Ripe Pithecellobium dulce bean | |
Conservation status | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಫ್ಯಾಬೇಲ್ಸ್ |
ಕುಟುಂಬ: | ಫ್ಯಾಬೇಸಿಯೇ |
ಉಪಕುಟುಂಬ: | ಸಿಸ್ಯಾಲ್ಪಿನಿಯಾಯ್ಡಿಯೇ |
ಏಕಮೂಲ ವರ್ಗ: | ಮಿಮೊಸಾಯ್ಡಿಯೇ |
ಕುಲ: | ಪಿಥೆಸೆಲೋಬಿಯಮ್ |
ಪ್ರಜಾತಿ: | P. dulce
|
Binomial name | |
Pithecellobium dulce |
ಸೀಮೆ ಹುಣಸೆ ಮರದ ವೈಜ್ಞಾನಿಕ ಹೆಸರು ಇಂಗಾ ಡೂಲ್ಸ್. ಇದನ್ನು ದೊರ ಹುಣಸೆ, ಚಕ್ಕುಲಿ ಮರ, ಇಲಾಚಿ ಕಾಯಿ, ಇಲಾಚ್-ಹುಂಚಿ ಎಂದೂ ಕರೆಯುತ್ತಾರೆ. ಪಿಥೆಸೆಲೋಬಿಯಮ್ ಡುಲ್ಸೆ ಎಂಬುದು ಬಟಾಣಿ ಕುಟುಂಬದ ಒಂದು ಹೂಬಿಡುವ ಸಸ್ಯವಾಗಿದೆ. ಇದನ್ನು ಹವಾಯಿಯಲ್ಲಿ ಆಕ್ರಮಣಕಾರಿ ಜಾತಿ ಎಂದು ಪರಿಗಣಿಸಲಾಗಿದೆ.[೪]ಸೀಮೆ ಹುಣಸೆಯು ಪೆಸಿಫಿಕ್ ಕೋಸ್ಟ್‌ಗೆ ಮತ್ತು ಮೆಕ್ಸಿಕೊ, ಮಧ್ಯ ಅಮೆರಿಕಾ ಮತ್ತು ಉತ್ತರ ಅಮೆರಿಕಾದ ಎತ್ತರದ ಪ್ರದೇಶಗಳಿಗೆ ಸ್ಥಳೀಯವಾಗಿದೆ ಮತ್ತು ಕೆರಿಬಿಯನ್, ಗುವಾಮ್, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಥೈಲ್ಯಾಂಡ್ ಹಾಗೂ ಫಿಲಿಪ್ಪೀನ್ಸ್ ನಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಇದು 60 ಅಥವಾ 70 ರ ದಶಕದಲ್ಲಿ ಕುವೈಟ್‍ನಲ್ಲಿ ಪರಿಚಯಿಸಲ್ಪಟ್ಟಿತು ಮತ್ತು ಬಹುಶಃ ಭಾರತೀಯರಿಂದ ಪರಿಚಯಿಸಲ್ಪಟ್ಟಿದೆ. 1980 ರ ದಶಕದಲ್ಲಿ ಕುವೈತ್ ನಗರದಲ್ಲಿ 60 ರ ದಶಕದಲ್ಲಿ ಸ್ಥಾಪಿಸಲಾದ ಸಾರ್ವಜನಿಕ ಉದ್ಯಾನವನಗಳಲ್ಲಿ ಮರದ ಅವಶೇಷಗಳನ್ನು ಅಥವಾ ಜೀವಂತ ಮರಗಳನ್ನು ಈಗಲೂ ನೋಡಬಹುದು.
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿ- ವೈಜ್ಞಾನಿಕ ಹೆಸರು:- ಇಂಗಾ ಡೂಲ್ಸ್
- ಕುಟುಂಬ :- ಲೆಗೋಮಿನೋಸಾಯಿ
- ಉಪಕುಟುಂಬ :- ಮಿಮೋಸಿಯ
ವಿವರಣೆ
ಬದಲಾಯಿಸಿಸೀಮೆ ಹುಣಸೆಯು ಸುಮಾರು 10 ರಿಂದ 15 ಮೀ (33 ರಿಂದ 49 ಅಡಿ) ಎತ್ತರವನ್ನು ತಲುಪುತ್ತದೆ. ಇದರ ಕಾಂಡವು ಮುಳ್ಳುಮುಳ್ಳಾಗಿರುತ್ತದೆ ಮತ್ತು ಇದರ ಎಲೆಗಳು ಉಭಯಪಕ್ಷಕವಾಗಿರುತ್ತವೆ. ಪ್ರತಿಯೊಂದು ಉಪಪರ್ಣವು ಒಂದೇ ಜೋಡಿ ಅಂಡಾಕಾರದ-ಉದ್ದದ ಚಿಗುರೆಲೆಗಳನ್ನು ಹೊಂದಿದೆ. ಇದು ಸುಮಾರು 2 ರಿಂದ 4 ಸೆಂ.ಮೀ (0.79 ರಿಂದ 1.57 ಇಂಚು) ಉದ್ದವಿರುತ್ತದೆ. ಹೂವುಗಳು ಹಸಿರು-ಬಿಳಿ, ಪರಿಮಳಯುಕ್ತ, ಅಚಲವಾಗಿದ್ದು ಮತ್ತು 12 ಸೆಂ.ಮೀ. (4.7 ಇಂಚು) ಉದ್ದವನ್ನು ತಲುಪುತ್ತವೆ, ಆದರೂ ಅವು ಸುರುಳಿ ಸುತ್ಕೊಂಡಿರುವುದರಿಂದ ಕಡಿಮೆ ಉದ್ದ ಕಾಣಿಸುತ್ತವೆ. ಹೂವುಗಳು ಒಂದು ಬೀಜಕೋಶವನ್ನು ಉತ್ಪತ್ತಿ ಮಾಡುತ್ತವೆ, ಇದು ಮಾಗಿದಾಗ ಗುಲಾಬಿ ಬಣ್ಣ ಪಡೆಯುತ್ತದೆ ಮತ್ತು ಬೀಜಚೋಲಗಳನ್ನು ಒಡ್ಡಲು ತೆರೆದುಕೊಳ್ಳುತ್ತದೆ; ಖಾದ್ಯ ತಿರುಳು ಗುಲಾಬಿ ಅಥವಾ ಬಿಳಿಯಾಗಿರುತ್ತದೆ. ವೃತ್ತಾಕಾರ ಮತ್ತು ಸಮತಟ್ಟಾದ ಕಪ್ಪು ಹೊಳೆಯುವ ಬೀಜಗಳನ್ನು ಈ ತಿರುಳು ಹೊಂದಿರುತ್ತದೆ. ಮರವು ಬರ ನಿರೋಧಕವಾಗಿದೆ ಮತ್ತು ಸಮುದ್ರ ಮಟ್ಟದಿಂದ 1,500 m (4,900 ಜಿಣ) ವರೆಗೆ ಒಣ ಪ್ರದೇಶಗಳಲ್ಲಿ ಬದುಕಬಲ್ಲದು, ಇದು ರಸ್ತೆ ಮರದಂತೆ ಕೃಷಿಗೆ ಸೂಕ್ತವಾಗಿದೆ.[೫]
ಶೀಘ್ರಗತಿಯಲ್ಲಿ ಬೆಳೆಯುತ್ತದೆ. ಹೂಗಳು ಜನವರಿ-ಫೆಬ್ರವರಿಯಲ್ಲಿ ಮೂಡಿ, ಡೊಂಕುಡೊಂಕಿನ ಕಾಯಿಗಳು ಏಪ್ರಿಲ್-ಜೂನ್‌ನಲ್ಲಿ ಮಾಗುತ್ತವೆ.
ಕೃಷಿ
ಬದಲಾಯಿಸಿಬೀಜಬಿತ್ತಿ ಬೆಳೆಸಬಹುದು. ಕತ್ತರಿಸಿದಾಗ ಚೆನ್ನಾಗಿ ಚಿಗುರೊಡೆಯುವುದು.
ವಿವಿಧ ಹೆಸರುಗಳು
ಬದಲಾಯಿಸಿಮೆಕ್ಸಿಕೊದಲ್ಲಿ, ಮರವನ್ನು ಹೂಮಾಚೆ, ಗ್ವಾಮುಚೆ, ಹುಮಾಮೂಚಿಲ್, ಗುಮಾಚುಲ್, ಕ್ಯುಮೌಚಿಲ್ ಎಂದು ಕರೆಯುತ್ತಾರೆ. ಅಮೇರಿಕದಲ್ಲಿ ಪ್ಯುರ್ಟೊ ರಿಕೊ ಎಂದು ಕರೆಯಲಾಗುತ್ತದೆ.
ಇದನ್ನು "ತೋಮಾ ಚಿಂತಕಯ" (ಸೀಮ ಚಿಂತಕಯ) ಎಂದು ತೆಲುಗು ಭಾಷೆಯಲ್ಲಿ ಕರೆಯಲಾಗುತ್ತದೆ. ಮಂಕಿಪಾಡ್ ಎಂಬುದು ಇಂಗ್ಲಿಷ್ ಹೆಸರು. ತಮಿಳಿನಲ್ಲಿ ಕೊಕ್ಕೈ ಕೊಡುಕಪ್ಪುಲಿ ಅಥವಾ ಕೊಡೈಕೈ , ಇನ್ನು ಕನ್ನಡದಲ್ಲಿ ಡೋರಾ ಹುಣಸೆ, ಸೀಮೆ ಹುಣ್ಣೆ, ಇಲಾಚಿ ಕಾಯಿ, ಇಲಾಚ್-ಹುಂಚಿ ಕಾಯಿ ಡೋರಾ ಹನೇಸ್ ಅಥವಾ ತೋನೆ ಹನೇಸ್ ಅಥವಾ ಇಲೈಚಿ ಕೈ ಇಲಾಚ್ -ಹಂಚಿ ಕೈ ಎಂದು ಹೆಸರು. ಗುಜರಾತಿನಲ್ಲಿ ಗೊರಾಸ್ ಅಂಬ್ಲಿ ಎಂದು ಕರೆಯುತ್ತಾರೆ.
ಹಿಂದಿಯಲ್ಲಿ "ಸಿಂಗರಿ" ಅಂದರೆ "ಸಿಂಗಡಿ", ಜಲೇಬಿ (ಬೆಂಗಾಲಿ), ಫಿರಿಂಗಿ ಚಿಂಚ್(ಮರಾಠಿ) ಮತ್ತು "ಅಚಿ ಗತಿಮರಿ" (ಸಿಂಧಿ). ಒಡಿಶಾದಲ್ಲಿ ಇದನ್ನು ಸೀಮಾ ಕೈಯಾನ್ (ಓಡಿಯಾ) ಎಂದು ಕರೆಯಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಇದನ್ನು "ಜಂಗಲ್ ಜಲೆಬಿ" ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇದು "ಮದ್ರಾಸ್ ಮುಳ್ಳು" ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಉಪಯೋಗಗಳು
ಬದಲಾಯಿಸಿಮೊದಲು ಬೇಲಿಗೂ ಸೌದೆಗೂ ಭಾರತದಲ್ಲಿ ಸಾಗುವಳಿ ಮಾಡಲಾಯಿತು. ಪೂರ್ವ ಕರಾವಳಿ ಪ್ರದೇಶಗಳಲ್ಲಿ ಸರುವೆ ಮರಗಳಿಗೆ ಬೂಸ್ಟಿನ ಸೋಂಕು ಬಂದು ಹಾಳಾದ ಪ್ರಯುಕ್ತ ಸೀಮೆಹುಣಿಸೆ ಮರವನ್ನು ಸೌದೆ ಮತ್ತು ಇತರ ಉಪಯೋಗಗಳಿಗೆ ಬಳಸಿಕೊಳ್ಳಲಾಯಿತು. ರೋಗತಗಲದಂತೆ, ಇದನ್ನು ಸರುವೆ ಮರದೊಂದಿಗೆ ಬೆಳೆಸುತ್ತಾರೆ.
ಬೀಜಕೋಶಗಳು ಒಂದು ಸಿಹಿ ಮತ್ತು ಹುಳಿ ತಿರುಳನ್ನು ಒಳಗೊಂಡಿರುತ್ತವೆ.
- ಇದನ್ನು ಮೆಕ್ಸಿಕೋ ಮತ್ತು ಭಾರತದಲ್ಲಿ ಹೆಚ್ಚಾಗಿ ತಿನ್ನುತ್ತಾರೆ.[೬]
- ವಿವಿಧ ಮಾಂಸದ ಭಕ್ಷ್ಯಗಳಿಗೆ ಇದನ್ನು ಬಳಸುತ್ತಾರೆ.
- ಸಕ್ಕರೆ ಮತ್ತು ನೀರಿನೊಂದಿಗೆ ಪಾನೀಯಗಳ ಮೂಲವಾಗಿ ಬಳಸಲಾಗುತ್ತದೆ.
ಔಷಧಿಯ ಸಸ್ಯವಾಗಿ
ಬದಲಾಯಿಸಿ- ಇದು ಕಣ್ಣಿನ ಉರಿಯೂತಕ್ಕೆ ಜ್ವರಹಾರಿಯಾಗಿ ಬಳಸಲ್ಪಡುತ್ತದೆ ಎಂದು ಹೇಳಲಾಗುತ್ತದೆ.
- ಹಲ್ಲುನೋವು ಮತ್ತು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಮರದ ವಿವಿಧ ಭಾಗಗಳನ್ನು ಬಳಸಲಾಗುತ್ತಿತ್ತು.[೭][೮]
- ಎಲೆಗಳನ್ನು ಮದ್ಯದೊಂದಿಗೆ ಪಿತ್ತರಸದ ಚಿಕಿತ್ಸೆಗೆ ಮತ್ತು ಗರ್ಭಪಾತವನ್ನು ತಡೆಗಟ್ಟಲು ಇದರ ಎಲೆಗಳನ್ನು ಬಳಸಲಾಗುತ್ತದೆ.
- ಸಸ್ಯದ ವಿವಿಧ ಭಾಗಗಳನ್ನು ರಕ್ತಸ್ರಾವ, ದೀರ್ಘಕಾಲದ ಅತಿಸಾರ, ಮತ್ತು ಕ್ಷಯರೋಗಗಳಿಗೆ ಮದ್ದಾಗಿ ಬಳಸಲಾಗುತ್ತದೆ.
ಉಲ್ಲೇಖ
ಬದಲಾಯಿಸಿ- ↑ Botanic Gardens Conservation International (BGCI); IUCN SSC Global Tree Specialist Group (2019). "Pithecellobium dulce". IUCN Red List of Threatened Species. 2019: e.T130519803A149057978. doi:10.2305/IUCN.UK.2019-2.RLTS.T130519803A149057978.en. Retrieved 14 December 2022.
- ↑ "Pithecellobium dulce Guama Americano". NatureServe Explorer. NatureServe. Retrieved 2020-01-10.
- ↑ "Pithecellobium dulce". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 2010-03-29.
- ↑ ವನಸಿರಿ, ಅಜ್ಜಂಪುರ ಕೃಷ್ಣಾಸ್ವಾಮಿ. ಮುದ್ರಣ ೨೦೧೪ ,ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
- ↑ https://npgsweb.ars-grin.gov/gringlobal/taxonomydetail.aspx?id=28697
- ↑ Parrotta, John A. (January 1991). Pithecellobium dulce (Roxb.) Benth. Guamuchil, Madras thorn. Leguminosae (Mimosoideae.) Legume family. (Report). New Orleans, LA: USDA Forest Service, Southern Forest Experiment Station, Institute of Tropical Forestry. SO-ITF-SM-40. https://www.fs.fed.us/global/iitf/pubs/sm_iitf040%20%20%285%29.pdf. Retrieved 17 July 2018.
- ↑ Commission for the Knowledge and Use of Biodiversity: Pithecellobium Dulce: http://www.conabio.gob.mx/conocimiento/info_especies/arboles/doctos/45-legum38m.pdf
- ↑ Alcorn, Janis B. (1984). Huastec Mayan Ethnobotany. Austin: University of Texas Press. ISBN 978-0292715431.
ಹೊರಗಿನ ಕೊಂಡಿಗಳು
ಬದಲಾಯಿಸಿ- USDA Plants Profile: Pithecellobium dulce
- Kamatsile: Pithecellobium dulce
- PIER species: Pithecellobium dulce Archived 2023-06-03 ವೇಬ್ಯಾಕ್ ಮೆಷಿನ್ ನಲ್ಲಿ.
- Manila Tamarind: Pithecellobium dulce
- Mexican Government's Commission for the Knowledge and Use of Biodiversity: Pithecellobium dulce