ಸಿಮೊನ್ ದಿ ಬೋವ್ಹೆರ್

ಸಿಮೊನ್ ದಿ ಬೋವ್ಹೆರ್

ಬದಲಾಯಿಸಿ

ಸಿಮೊನ್ ದಿ ಬೋವ್ಹೆರ್ (೧೯೦೮ ಜನವರಿ ೦೯ -೧೯೮೬ ಎಪ್ರಿಲ್ ೧೪) ಫ್ರೆಂಚ್ ಬರಹಗಾರ್ತಿ, ಬುದ್ಧಿಜೀವಿ, ಅಸ್ಥಿತ್ವವಾದದ ತತ್ವಜ್ಞಾನಿ, ರಾಜಕೀಯ ಕಾರ್ಯಕರ್ತೆ,ಮಹಿಳಾವಾದಿ, ಮತ್ತು ಸಾಮಾಜಿಕ ಸಿದ್ಧಾಂತಿಯಾಗಿದ್ದಳು.ಅವಳು ತಾನು ಎಂದು ತತ್ವಜ್ಞಾನಿಯೆಂದು ಪರಿಗಣಿಸಿರಲಿಲ್ಲ ಆದರೆ ಮಹಿಳಾ ಅಸ್ಥಿತ್ವವಾದ ಮತ್ತು ಮಹಿಳಾ ಸಿದ್ಧಾಂತದ ಮೇಲೆ ಗಣನೀಯ ಪರಣಾಮ ಭೀರಿದ್ದಾಳೆ.ಬೊವ್ಹೆರ್ ತತ್ವಶಾಸ್ತ್ರ, ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಮೇಲೆ ಕಾದಂಬರಿಗಳು,ಪ್ರಭಂದಗಳು,ಜೀವನಚರಿತ್ರೆಗಳು,ಆತ್ಮಚರಿತ್ರೆ ಮತ್ತು ಏಕವಿಷಯಾತ್ಮಕ ಲೇಖನಗಳನ್ನು ಬರೆದಿದ್ದಾಳೆ.ಇವಳ ಪ್ರಮುಖ ಕಾದಂಬರಿಗಳೆಂದರೆ 'She Came to Stay'ಜೊತೆಗೆ ೧೯೪೯ ರಲ್ಲಿ ಪ್ರಕಟವಾದ ಪುಸ್ತಕ 'The Second Sex' ಈ ಕಾದಂಬರಿಯು ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ಕುರಿತಾದ ಸಂರ್ಪೂಣ ವಿವರಣೆ ಮತ್ತು ಸಮಕಾಲೀನ ಮಹಿಳಾವಾದಕ್ಕೆ ಆಧಾರದಂತಿದೆ. ಬೋವ್ಹೆರ್ ಪ್ಯಾರಿಸ್ ನಲ್ಲಿ ಜಾರ್ಜ್ ಬರ್ಟ್ಯಾಂಡ್ ದಿ ಬೋವ್ಹೆರ್ ಹಾಗೂ ಫ್ರಾಂಕೋಯಿಸ್ ಬೋವ್ಹೆರ್ ದಂಪತಿಗಳ ಹಿರಿಯ ಮಗಳಾಗಿ ಜನಿಸಿದಳು.ಕಾನೂನಿನ ಕಾರ್ಯದರ್ಶಿಯಾದ ಈಕೆಯ ತಂದೆ ಒಮ್ಮೆ ನಾಯಕನಾಗಲು ಬಯಸಿದ್ದನು.ಇವಳ ತಾಯಿ ಸಿರಿವಂತರ ಮಗಳು ಮತ್ತು ಕ್ಯಾಥೋಲಿಕ್ ಪಂಗಡದ ಅನುಯಾಯಿಯಾಗಿದ್ದಳು.ಇವಳ ತಂಗಿ ಹೆಲೆನ್ ಇವಳಿಗಿಂತ ಎರಡು ವರ್ಷ ಚಿಕ್ಕವಳಾಗಿದ್ದಳು.ಮಹಾಯುದ್ದದ ನಂತರ ತಮ್ಮ ಅಂತಸ್ತನ್ನು ಕಳೆದುಕೊಂಡ ಇವರು ಮಧ್ಯಮ ವರ್ಗಕ್ಕೆ ಹೊಂದಿಕೊಳ್ಳುವಲ್ಲಿ ತೊಂದರೆ ಅನುಭವಿಸಿದರು.