ಸಿಂಕ್ರೊಟ್ರಾನ್ ವಿಕಿರಣ
ಸಿಂಕ್ರೊಟ್ರಾನ್ ವಿಕಿರಣ ಎಂದರೆ ಸಾಪೇಕ್ಷತಾತ್ಮಕ ಶಕ್ತಿಗಳಲ್ಲಿ ವರ್ತುಳೀಯ ಚಲನೆಯಲ್ಲಿರುವ ಆವಿಷ್ಟಕಣಗಳು ಉತ್ಸರ್ಜಿಸುವ ವಿದ್ಯುತ್ಕಾಂತ ವಿಕಿರಣ (ಸಿಂಕ್ರೊಟ್ರಾನ್ ರೇಡಿಯೇಶನ್). ಎಲೆಕ್ಟ್ರಾನ್‌ಗಳಿಂದ ಉತ್ಸರ್ಜಿತವಾಗಿ ಖಗೋಳೀಯ ಕಾಂತಕ್ಷೇತ್ರಗಳಿಂದ ಮಾರ್ಗದರ್ಶಿತವಾಗುವ ಇಂಥ ಬೆಳಕು ಖಗೋಳವಿಜ್ಞಾನಿಗಳಿಗೆ ಬಲು ಹಿಂದಿನಿಂದಲೂ ತಿಳಿದಿದೆ. ಉದಾಹರಣೆಗೆ ಏಡಿ ನೀಹಾರಿಕೆಯ (ಕ್ರ‍್ಯಾಬ್ ನೆಬ್ಯುಲ) ಹಿನ್ನೆಲೆಯಲ್ಲಿ ಪಸರಿಸಿರುವ ಸುಂದರ ಪ್ರಭೆ. ಉಚ್ಚಶಕ್ತಿ-ಭೌತವಿಜ್ಞಾನದಲ್ಲಿ ಸಂಶೋಧನೆಯ ಸಲುವಾಗಿ ಉಚ್ಚಶಕ್ತಿ-ಎಲೆಕ್ಟ್ರಾನ್-ಸಿಂಕ್ರೊಟ್ರಾನುಗಳ ಮತ್ತು ದಾಸ್ತಾನು ವಲಯಗಳ ನಿರ್ಮಾಣವಾದ ಬಳಿಕ, ಹಲವಾರು ದೇಶಗಳಲ್ಲಿ ರೋಹಿತದ ಅತಿನೇರಿಳೆ ಮತ್ತು ಎಕ್ಸ್‌ಕಿರಣ ಭಾಗಗಳಲ್ಲಿಯ ಅತಿ ಪ್ರಬಲ ಆಕರಗಳು ಲಭ್ಯವಾದುವು. ಈ ರೀತಿ ಸೃಷ್ಟಿಯಾದ ವಿಕಿರಣವು ವಿಶಿಷ್ಟವಾದ ಧ್ರುವೀಕರಣವನ್ನು ಹೊಂದಿರುತ್ತದೆ. ಉತ್ಪತ್ತಿಯಾದ ಆವರ್ತನಗಳು ವಿದ್ಯುತ್ಕಾಂತೀಯ ರೋಹಿತದ ದೊಡ್ಡ ಭಾಗವನ್ನು ವ್ಯಾಪಿಸುತ್ತವೆ.[೧]
ಉಲ್ಲೇಖಗಳು
ಬದಲಾಯಿಸಿ- ↑ "What is synchrotron radiation?". NIST (in ಇಂಗ್ಲಿಷ್). 2010-03-02.
ಹೊರಗಿನ ಕೊಂಡಿಗಳು
ಬದಲಾಯಿಸಿ- Cosmic Magnetobremsstrahlung (synchrotron Radiation), by Ginzburg, V. L., Syrovatskii, S. I., ARAA, 1965
- Developments in the Theory of Synchrotron Radiation and its Reabsorption, by Ginzburg, V. L., Syrovatskii, S. I., ARAA, 1969
- Lightsources.org
- BioSync – a structural biologist's resource for high energy data collection facilities
- X-Ray Data Booklet
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: