ಕವಿ ಸಿದ್ಧಲಿಂಗಯ್ಯನವರ ಎರಡನೆಯ ಕವನ ಸಂಕಲನ ೧೯೭೯ ರಲ್ಲಿ ಪ್ರಕಟವಾಯಿತು. ಮೊದಲ ಸಂಕಲನ 'ಹೊಲೆಮಾದಿಗರ ಹಾಡು' ರಚನೆಗಳಿಗಿಂತ ಇದರ ಕವಿತೆಗಳು ಕವಿಯ ಪ್ರಬುದ್ಧ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. 'ಸಾವಿರಾರು ನದಿಗಳು' ಸಂಕಲನದಲ್ಲಿ ಕ್ರಮವಾಗಿ ಹದಿನಾರು ಕವಿತೆಗಳಿವೆ. ಅವುಗಳು ಯಾವುವು ಎಂದರೆ; ಸಾವಿರಾರು ನದಿಗಳು, ಬೆಲ್ಚಿಯಹಾಡು, ಕೆಂಪುಸೂರ್ಯ, ದಲಿತರು ಬರುವರು, ಬಿದ್ದಾವು ಮನೆಗಳು, ಕರಳ ರಾಣಿಯ ಕಥೆ, ಕತ್ತೆ ಮತ್ತು ಧರ್ಮ, ಈ ದೇಶದ ಸೆರಮನೆ, ಕಂಡೆ ನನ್ನವಳ ಒಂದು ದಿವಸ, ಹೋರಾಟದ ದಾರಿ, ನಿನ್ನ ಮಗನ ಕೊಂದರು, ಚೋಮನ ಮಕ್ಕಳ ಹಾಡು, ಮಾತಾಡಬೇಕು, ಮೆರವಣಿಗೆ, ಬಂದಿರುವರು ಹುಲಿಗಳಾಗಿ, ಅಲ್ಲೆ ಕುಂತವರೆ- ಇವುಗಳನ್ನು ಎರಡು ರೀತಿಯ ರಚನೆಗಳೆಂದು ಇಲ್ಲಿ ಗುರುತಿಸಲಾಗಿದೆ,