ಸಲ್ಲೇಖನ ಜೈನ ಧರ್ಮೀಯರ ಒಂದು ಕಠಿಣ ವ್ರತ. ಜೈನಧರ್ಮದ ಅನುಸಾರವಾಗಿ ಪ್ರತೀಕಾರವಿಲ್ಲದ ಉಪಸರ್ಗವಾಗಲೀ, ಮುದಿತನವಾಗಲೀ ಅಥವಾ ರೋಗವಾಗಲೀ ಬಂದೊದಗಿದ್ದಲ್ಲಿ, ಮೋಕ್ಷ ಅಥವಾ ಸದ್ಗತಿಗಾಗಲೀ ಧರ್ಮಪೂರ್ವಕವಾಗಿ ಶರೀರ ತ್ಯಾಗಮಾಡುವ ವಿಧಿಗೆ ಸಲ್ಲೇಖನ ವ್ರತ ಎನ್ನಲಾಗುತ್ತದೆ. ಇದಕ್ಕೆ ಸಮಾಧಿ ಮರಣ ಎಂಬ ಹೆಸರೂ ಇದೆ. ಸಲ್ಲೇಖನ ವ್ರತವು ಗೃಹಸ್ಥನ ನೈಮಿತ್ತಿಕ ಕ್ರಿಯೆಯಾಗಿದೆ. ಗೃಹಸ್ಥನು ಜೀವನದಲ್ಲಿ ಅದುವರೆಗೆ ಅಭ್ಯಾಸಿಸಿದ ಶ್ರಾವಕೀಯ {ಶ್ರಾವಕ/ಶ್ರಾವಕಿ :- ಜೈನ ಧರ್ಮದ ಶ್ರದ್ಧಾಳು} ಆಚಾರಗಳ ಅಂತಿಮ ಪರೀಕ್ಷೆಯೇ ಸಲ್ಲೇಖನ ವ್ರತ.

  • ಜೈನ ಪುರಾಣದಲ್ಲಿ ಸಲ್ಲೇಖನ ವ್ರತದ ಬಗ್ಗೆ ಪ್ರಸ್ತಾಪಿಸಲ್ಪಟ್ಟಿದೆ. ಮೊದಲ ಜೈನ ತೀರ್ಥಂಕರ ಆದಿದೇವ, ಅತ್ತಿಮಬ್ಬೆ, ವಡ್ಡಾರಾಧನೆಯಲ್ಲಿ ಬರುವ ಕೆಲವು ಪಾತ್ರಗಳು ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ್ದಾರೆ ಎನ್ನಲಾಗಿದೆ.
  • ಚರಿತ್ರೆಯಲ್ಲಿ ಹೊಯ್ಸಳ ರಾಣಿ ಶಾಂತಲೆ ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ್ದಳು ಎನ್ನಲಾಗಿದೆ.
"https://kn.wikipedia.org/w/index.php?title=ಸಲ್ಲೇಖನ&oldid=616737" ಇಂದ ಪಡೆಯಲ್ಪಟ್ಟಿದೆ