ಸದಸ್ಯ:Sudheerbs/ನನ್ನ ಪ್ರಯೋಗಪುಟ

ರಾಕ್‌ಲೈನ್ ವೆಂಕಟೇಶ್
೨೦೧೮ರಲ್ಲಿ ವೆಂಕಟೇಶ್
ಜನನ
ತಿರುಪತಿ ನರಸಿಂಹಲುನಾಯ್ಡು ವೆಂಕಟೇಶ್

(1963-03-24) ೨೪ ಮಾರ್ಚ್ ೧೯೬೩ (ವಯಸ್ಸು ೬೦)
ಉದ್ಯೋಗನಟ, ಚಲನಚಿತ್ರ ನಿರ್ಮಾಪಕ
ಜೀವನ ಸಂಗಾತಿಪುಷ್ಪ ಕುಮಾರಿ
ಮಕ್ಕಳು

ತಿರುಪತಿ ನರಸಿಂಹಲುನಾಯ್ಡು ವೆಂಕಟೇಶ್ (ಜನನ ೨೩ ಮಾರ್ಚ್ ೧೯೬೩) ಇವರು, ರಾಕ್‌ಲೈನ್ ವೆಂಕಟೇಶ್ ಎಂಬ ಹೆಸರಿನಿಂದಲೇ ಹೆಚ್ಚು ಪರಿಚಿತರಾಗಿದ್ದಾರೆ ವೆಂಕಟೇಶ್‌ರವರು ಭಾರತೀಯ ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಕನ್ನಡ,ಹಿಂದಿ,ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ ಜೊತೆಗೆ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣ ಮತ್ತು ವಿತರಣಾ ಕಂಪನಿಯ ಸ್ಥಾಪಕರಾಗಿದ್ದಾರೆ. ೨೦೧೫ರಲ್ಲಿ "ಬಜರಂಗಿ ಭಾಯಿಜಾನ್" ಎಂಬ ಚಲನಚಿತ್ರವನ್ನು ಸಹ-ನಿರ್ಮಾಣ ಮಾಡಿದ್ದು, ಇದು 63ನೇ ರಾಷ್ಟ್ರೀಯ ಚಲನಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿತು.

ವೃತ್ತಿ ಜೀವನ ಬದಲಾಯಿಸಿ

ವೆಂಕಟೇಶ್ ಅವರು ಸಾಹಸ ಕಲಾವಿದ, ಖಳನಾಯಕ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆರಂಭದ ದಿನಗಳಲ್ಲಿ ಕನ್ನಡ ದೂರದರ್ಶನ ಧಾರಾವಾಹಿಗಳನ್ನು ನಿರ್ಮಿಸಿದ್ದರು. ೧೯೯೬ರಲ್ಲಿ "ಆಯುಧ" ಎಂಬ ಚಲನಚಿತ್ರವನ್ನು ಸಹ ನಿರ್ಮಾಣ ಮಾಡುವುದರೊಂದಿಗೆ ತಮ್ಮ ನಿರ್ಮಾಣ ಉದ್ಯಮವನ್ನು ಪ್ರಾರಂಭಿಸಿದರು. ಹಲವಾರು ಮೂಲ ಕಥೆಗಳನ್ನೊಳಗೊಂಡ ಚಲನಚಿತ್ರಗಳ ಜೊತೆಗೆ ಇತರ ಭಾಷೆಗಳಿಂದ ಮರುನಿರ್ಮಾಣದ ಹಕ್ಕು ಪಡೆದು ಕನ್ನಡದಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಡಾ.ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್, ಪುನೀತ್ ರಾಜ್ ಕುಮಾರ್, ದರ್ಶನ್, ವಿಜಯ್ ಮುಂತಾದ ಕನ್ನಡ ಚಿತ್ರರಂಗದ ಜನಪ್ರಿಯ ನಟರ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ ಜೊತೆಗೆ ಕೆಲವು ಸಣ್ಣ ಮಟ್ಟದಲ್ಲಿ ಹೂಡಿಕೆ ಇರುವ ಚಿತ್ರಗಳನ್ನು ಸಹ ಮಾಡಿದ್ದಾರೆ. ರವಿಚಂದ್ರನ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಡಿ.ರಾಜೇಂದ್ರ ಬಾಬು, ಎಸ್.ನಾರಾಯಣ್, ಕೆ.ವಿ.ರಾಜು, ಓಂ ಪ್ರಕಾಶ್ ರಾವ್, ಎಂ.ಎಸ್.ರಾಜಶೇಖರ್, ಸಾಧು ಕೋಕಿಲ, ದಯಾಳ್ ಪದ್ಮನಾಭನ್, ​​ಮೆಹರ್ ರಮೇಶ್ ಮುಂತಾದ ಕನ್ನಡದ ಜನಪ್ರಿಯ ನಿರ್ದೇಶಕರನ್ನು ಬಳಸಿಕೊಂಡಿದ್ದಾರೆ. . ಪ್ರೀತ್ಸೆ, ಪ್ರೀತ್ಸೋಧ್ ತಪ್ಪಾ, ಯಾರೇ ನೀನು ಚೆಲುವೆ, ಅಜಯ್, ಮೌರ್ಯ, ದಿಗ್ಗಜರು ಮತ್ತು ಡಕೋಟಾ ಎಕ್ಸ್‌ಪ್ರೆಸ್‌ನಂತಹ ಹಲವಾರು ನಿರ್ಮಿಸಿದ ರಾಕ್‌ಲೈನ್ ಪ್ರೊಡಕ್ಷನ್ಸ್ ಈಗ ಕನ್ನಡ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರನ್ನು ಪಡೆದುಕೊಂಡಿದೆ.