ಜೋಶುವಾ ಲೆಡರ್ಬರ್ಗ್

ಜೋಶುವ ಲೆಡರ್ಬರ್ಗ್ ಬದಲಾಯಿಸಿ

ಪರಿಚಯ ಬದಲಾಯಿಸಿ

ಜೋಶುವ ಲೆಡರ್ಬರ್ಗ್ ರವರು ೨೩ನೇ ಮೇ ೧೯೨೫ರಲ್ಲಿ ನ್ಯೂ ಜೆರ್ಸಿಯ ಮಾಂಟ್ಕ್ಲೇರ್ನಲ್ಲಿ ಜನಿಸಿದರು. ಅಮೆರಿಕಾದ ಆಣ್ವಿಕ ಜೀವವಿಜ್ಞಾನಿಯಾಗಿದ್ದು, ಸೂಕ್ಷ್ಮಜೀವಿಯ ತಳಿಶಾಸ್ತ್ರ, ಕೃತಕ ಬುದ್ಧಿಮತ್ತೆ, ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಬಾಹ್ಯಾಕಾಶ ಕಾರ್ಯಕ್ರಮದ ಕೆಲಸಕ್ಕೆ ಹೆಸರುವಾಸಿಯಾದರು. ಇವರು ನಡೆಸಿದ ಬ್ಯಾಕ್ಟೀರಿಯಾವು ಜೀನ್ಗಳನ್ನು (ಬ್ಯಾಕ್ಟೀರಿಯಲ್ ಕಾಂಜುಗೇಶನ್) ಮತ್ತು ವಿನಿಮಯ ಮಾಡಿಕೊಳ್ಳುವುದನ್ನು ಪತ್ತೆಹಚ್ಚಲು ಮಾಡಿದ ಸಂಶೋಧನೆಗೆ ೧೯೫೮ರ ಶರೀರವಿಜ್ಞಾನ ಅಥವಾ ಔಷಧಶಾಸ್ತ್ರದಲ್ಲಿ ಅವರು ನೊಬೆಲ್ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿ ದೊರೆತಾಗ ಅವರಿಗೆ ೩೩ ವರ್ಷ ವಯಸ್ಸಾಗಿತ್ತು. ಅವರು ಎಡ್ವರ್ಡ್ ಟಾಟಮ್ ಮತ್ತು ಜಾರ್ಜ್ ಬೀಡಲ‍್ ರವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡರು.

 
ಸ್ಟುಯ್ವೆಂಟ್ ಹೈ ಸ್ಕೂಲ್
 
ಎಸ್ಚೆರಿಚಿಯಾ ಕೋಲಿ

ಶಿಕ್ಷಣ ಮತ್ತು ಕೆಲಸ ಬದಲಾಯಿಸಿ

೧೯೪೧ ರಲ್ಲಿ, ೧೫ ನೇ ವಯಸ್ಸಿನವರಾಗಿದ್ದಾಗ ನ್ಯೂಯಾರ್ಕ್ ನಗರದಲ್ಲಿನ ಸ್ಟುಯೆಸೆಂಟ್ ಹೈಸ್ಕೂಲಿನಿಂದ ಪದವಿ ಪಡೆದರು. ಪದವಿಯ ನಂತರ, ವೆಸ್ಟಿಂಗ್ಹೌಸ್ ಸೈನ್ಸ್ ಟ್ಯಾಲೆಂಟ್ ಸರ್ಚಿನ ಮುಂಚೂಣಿಯಲ್ಲಿರುವ ಅಮೇರಿಕನ್ ಇನ್ಸ್ಟಿಟ್ಯೂಟ್ ಸೈನ್ಸ್ ಲ್ಯಾಬೊರೇಟರಿಯ ಲ್ಯಾಬ್ ಜಾಗವನ್ನು ಪ್ರಯೋಗ ನಡೆಸಲು ಅವರಿಗೆ ಅನುಮತಿ ನೀಡಲಾಗಿತ್ತು. ಫ್ರಾನ್ಸಿಸ್ ಜೆ. ರಯಾನ್ ರವರ ಮಾರ್ಗದರ್ಶನದಲ್ಲಿ, ಬ್ರೆಡ್ ಅಚ್ಚುಗಳ ಮೇಲೆ ಬೆಳೆಯುವ ನ್ಯೂರೊಸ್ಪೊರಾ ಕ್ರಾಸ್ಸ ಎಂಬ ಬ್ಯಾಕ್ಟೀರಿಯಾಗಳ ಬಗೆಗಿನ ಜೀವರಾಸಾಯನಿಕ ಮತ್ತು ಆನುವಂಶಿಕ ಅಧ್ಯಯನಗಳನ್ನು ನಡೆಸಿದರು.ತಮ್ಮೆ ಎಂ.ಡಿ. ಸ್ವೀಕರಿಸಿದನಂತರ, ಮಿಲಿಟರಿ ಸೇವಾ ಹೊಣೆಗಾರಿಕೆಯನ್ನು ಪೂರೈಸುವ ಉದ್ದೇಶದಿಂದ, ೧೯೪೩ ರಲ್ಲಿ ಸೇಂಟ್ ಅಲ್ಬನ್ಸ್ ನೇವಲ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಪ್ಯಾಥಾಲಜಿ ಪ್ರಯೋಗಾಲಯದಲ್ಲಿ ಆಸ್ಪತ್ರೆ ಕಾರ್ಪ್ಸ್ಮ್ಯಾನ್ ಆಗಿ ಕೆಲಸ ಮಾಡಿದರು, ಅಲ್ಲಿ ಅವರು ನಾವಿಕರ ರಕ್ತ ಮತ್ತು ಮಲ ಮಾದರಿಗಳನ್ನು ಸಂಗ್ರಹಿಸಿ ಮಲೇರಿಯಾ ಕಾಯಿಲೆಗಾಗಿ ಪರೀಕ್ಷೆ ನಡೆಸಿದರು.


ಸಂಶೋಧನೆ ಬದಲಾಯಿಸಿ

ಲೆಡರ್ಬರ್ಗ್ ಮತ್ತು ಟ್ಯಾಟಮ್ ಬ್ಯಾಕ್ಟೀರಿಯಂ ಎಸ್ಚೆರಿಶಿಯಾ ಕೊಲಿ ಬ್ಯಾಕ್ಟೀರಿಯಾದ ಸಂಯೋಗದ ಮೂಲಕ ಆನುವಂಶಿಕ ಮಾಹಿತಿಯನ್ನು ಲೈಂಗಿಕ ಹಂತದಲ್ಲಿ ಪ್ರವೇಶಿಸುತ್ತದೆ ಎಂದು ತೋರಿಸಿದರು.ಜೋಶುವಾ ಲೆಡೆರ್ಬರ್ಗ್ ಮತ್ತು ನಾರ್ಟನ್ ಝಿಂಡರ್ ೧೯೫೧ ರಲ್ಲಿ ಜೆನೆಟಿಕ್ ವಸ್ತುವನ್ನು ಬ್ಯಾಕ್ಟೀರಿಯಮ್ ಸಾಲ್ಮೊನೆಲ್ಲಾ ಟೈಫಿಮುರಿಯಮ್ನ ಒಂದು ತಳಿಯಿಂದ (ಸ್ಟ್ರೈನ್ನಿಂದ)  ವೈರಲ್ ಮಧ್ಯಸ್ತಿಕೆ ಮೂಲಕ ವರ್ಗಾಯಿಸಬಹುದೆಂದು ತೋರಿಸಿದರು.  ಈ ಪ್ರಕ್ರಿಯೆಯನ್ನು ಟ್ರಾನ್ಸ್ಡಕ್ಷನ್ ಎಂದು ಕರೆಯಲಾಗುತ್ತದೆ.

 
ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು

ಪ್ರಶಸ್ತಿಗಳು ಮತ್ತು ಸಾಧನೆಗಳು ಬದಲಾಯಿಸಿ

೧೯೫೮ ರಲ್ಲಿ, ಜೋಶುವಾ ಲೆಡರ್ಬರ್ಗ್ ನೊಬೆಲ್ ಪ್ರಶಸ್ತಿ ಪಡೆದರು ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ಅಲ್ಲಿ ಅವರು ತಳಿಶಾಸ್ತ್ರ (ಜೆನೆಟಿಕ್ಸ್) ಇಲಾಖೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು.


ಇವರು ಫೆಬ್ರವರಿ ೨, ೨೦೦೮ರಲ್ಲಿ ಮರಣ ಹೊಂದಿದರು.

ಉಲ್ಲೇಖಗಳು: https://www.nobelprize.org/prizes/medicine/1958/lederberg/biographical/ https://www.britannica.com/biography/Joshua-Lederberg http://www.dnaftb.org/18/bio.html


ReplyForward