ಕಾರ್ಲ್ ಲಿನೆಯಸ್
(ಚಿತ್ರದ ಗಾತ್ರ - Default is ೧೦೦px)
ಕಾರ್ಲ್ ಲಿನೆಯಸ್
ಪ್ರಭಾವಗಳುಡೇನಿಯಲ್,ರಾತ್ಮಾನ್
ಸಂಗಾತಿಸಾರಾ ಎಲಿಸಬೆತ್
    ಕಾರ್ಲ್ ಲಿನೆಯಸ್

ಕರ್ಲ್ ಲಿನೆಯಸ್ ಅವರ ಕಾಲ ೨೩ ಮಾರ್ಚ್ ೧೭೦೭- ೧೦ಜನವರಿ ೧೭೭೮.ಇವರು ಸ್ವೀಡಿಷ್ ಸಸ್ಯ ಶಾಸ್ತ್ರ ಹಾಗೂ ವೈದ್ಯಕೀಯದಲ್ಲಿ ನಿಪುಣರು. ಆಧುನಿಕ, ಜೈವಿಕ ನಾಮಕರಣ ಅಂದರೆ ಜೀವಿಗಳ ದ್ವಿಪದ ನಾಮಕರಣದ ಹೆಮ್ಮೆ ಇವರನ್ನು ಸೇರುತ್ತದೆ. ಇವರನ್ನು ಆಧುನಿಕ ಜೀವಿಗಳ ವರ್ಗೀಕರಣದ ಪಿತಾಮಹರೆಂದೆ ಕರೆಯುತ್ತಾರೆ. ಇವರ ಹಲವು ಕೃತಿಗಳನ್ನು ಲ್ಯಾಟಿನ್ ಅಲ್ಲಿಯೇ ಇರುವುದು. ಹಾಗೆಯೇ ಇವರ ಹೆಸರು ಕಾರ್ಲ್ಸ್ ಲಿನೆಯಸ್ ಎಂದು ಲ್ಯಾಟಿನಲ್ಲಿಯೇ ಸಲ್ಲಿಸಲಾಗಿದೆ. ಲಿನೆಯಸ್ ಅವರು ಸ್ವೀಡನ್ ಇನ, ಸ್ಮಾಲ್ಯಂಡಿನಲ್ಲಿ ಜನಿಸಿದರು. ಇವರು ತನ್ನ ಉನ್ನತ ಶಿಕ್ಷ್ಹಣವನ್ನು ಉಪ್ಸಲಾ ವಿಶ್ವವಿದ್ಯಾಲಯದಲ್ಲಿ ಪಡೆದರು.ಇವರು ೧೭೩೦ರಲ್ಲಿ ಸಸ್ಯ ಶಾಸ್ತ್ರದ ಉಪನ್ಯಾಸ ಮಾಡಲಾರಂಭಿಸಿದರು. ಇವರು ೧೭೩೫ - ೧೭೩೮ರ ಅವಧಿಯಲ್ಲಿ ವಿದೇಶದಲ್ಲಿ ನೆಲೆಸಿದ್ದರು. ಅಲ್ಲಿಯೆ ಇವರು ತಮ್ಮ ಓದನ್ನು ಮುಂದುವರೆಸಿ, ತಮ್ಮ ಪುಸ್ತಕ "ಸಿಸ್ಟೆಮಾ ನ್ಯಾಚುರಾ" ನೆದೆಲ್ಯಾಂಡ್ಸ್ನಮೊದಲ ಆವ್ರುತ್ತಿಯನ್ನು ಪ್ರಕಟಿಸಿದರು. ನಂತರ ಅವರು ಸ್ವೀಡನ್ನಿಗೆ ಮರಳಿದರು. ಅಲ್ಲಿಯೆ ಇವರು ಉಪ್ಸಲಾದ ವೈದ್ಯಕೀಯ ಹಾಗೂ ಸಸ್ಯಶಾಸ್ಥ್ರದ ಪ್ರಾದ್ಯಾಪಕರಾಗಿ ಕೆಲಸ ಮಾದಿದರು. ೧೭೪೦ರ ದಶಕದಲ್ಲಿ ಇವರನ್ನ ಸಸ್ಯಗಳು ಮತ್ತು ಪ್ರಾಣಿಗಳ ವರ್ಗೀಕರಣ ಮಾಡಲು ಹಲವು ಪ್ರಯಾಣಗಳಿಗೆ   ಕಳುಹಿಸಲಾಯಿತು. ತಮ್ಮ ಸಾವಿನ ಸಮಯದಲ್ಲಿ ಇವರು ಯುರೋಪ್ನ ಅತ್ಯಂತ ಮೆಚ್ಚುಗೆ ಪಡೆದ ವಿಜ್ಞಾನಿಯಾಗಿದ್ದರು. ಅಮೇರಿಕಾದ ವಾರ್ತಾಸಂಸ್ಥೆಯವರು ಲಿನೀಯಸ್ ಅವರನ್ನು ಮಾನವ ಇತಿಹಾಸದಲ್ಲಿ ೩೧ ನೇ ಅತ್ಯಂತ ಪ್ರಭಾವಿತ ವ್ಯಕ್ತಿಯೆಂದು ಮತ್ತು ೫ನೇ ಅತ್ಯಂತ ಪ್ರಭಾವಿ ವಿಜ್ಞಾನಿ ಎಂದು ಘೋಷಿಸಿತು. ಸಸ್ಯ ಶಾಸ್ತ್ರದಲ್ಲಿ ಲೇಖಕ ಸಂಕ್ಷೇಪಣೆ "ಎಲ್" ಎನ್ನುವುದು ಲಿನೇಯಸ್ ಎಂದು ಸೂಚಿಸುತ್ತದೆ.



           ಬಾಲ್ಯ-

ಲಿನೆಯಸ್ ಅವರು ಸ್ಮಾಲ್ಯಾಂಡಿನ ರಸಲ್ಟ ಎಂಬುವ ಹಳ್ಳಿಯಲ್ಲಿ ಜನಿಸಿದರು.ಈತ ಇಂಗೆಮರ್ಸ್ ಲಿನೆಯಸ್ ಅವರ ಮೊದಲ ಮಗ.ಕಾರ್ಲ್ ಹುಟ್ಟಿದಾಗ ಆತ ತನ್ನ ತಂದೆಯ ಕುಟುಂಬದ ಹೆಸರಾದ ಲಿನೆಯಸ್ ಇವರ ನಾಮದೊಂದಿಗೆ ಸೇರಿತು.ತನ್ನ ಆರಂಭದ ವರ್ಷಗಳಲ್ಲಿ ಈತನಿಗೆ ಸಸ್ಯಗಳು ಹಾಗೂ ವಿಶೇಷವಾದ ಹೂಗಳ ಮೇಲೆ ಆಸಕ್ತಿ ಇರುವುದು ಕಾಣಿಸಿತು. ಅವರ ಮನಸ್ಸಿನಲ್ಲಿ ಅಸಮಾಧಾನ ಉಂಟಾದಾಗ, ಅವರನ್ನು ಸಾಂತ್ವನಗೊಳಿಸಲು ಹೂವು ನೀಡುತ್ತಿದ್ದರು. ಇವರು ಹೆಚ್ಛು ಸಮಯವನ್ನು ಉದ್ಯಾನವನದಲ್ಲಿ ಕಳೆಯುತ್ತಿದ್ದರು. ಶೀಘ್ರದಲ್ಲಿಯೆ ಅವರಿಗೆ ಅಲ್ಲಿಯ ಭೂಮಿಯ ಒಂದು ಭಾಗವನ್ನು ಸಸ್ಯಗಳನ್ನು ಬೆಳೆಸಲು ನೀಡಲಾಯಿತು.


            ಆರಂಭಿಕ ಶಿಕ್ಷಣ-

ಲಿನೆಯಸ್ನ ತಂದೆ ಬಾಲ್ಯದಲ್ಲೇ ಅವರಿಗೆ ಲ್ಯಾಟಿನ್ ಧರ್ಮ ಮತ್ತು ಭೌಗೋಳಿಕ ಕಲಿಸಲು ಪ್ರಾರಂಭಿಸಿದರು.ಲಿನೆಯಸ್ ಏಳು ವರ್ಷದವರಿದ್ದಾಗ ಅವರ ತಂದೆ ಇವರಿಗೆ ಒಬ್ಬಬೋಧಕರನ್ನು ನೇಮಿಸಿದ್ದರು. ಬೋಧಕರ ಹೆಸರು ಜೋಹಾನ್ ಟಿಲಾಂಡಾರ್. ಲಿನೆಯಸ್ ಟಿಲಾಂಡರ್ ಎಂದು ತನ್ನ ಆತ್ಮಚರಿತ್ರೆಯಲ್ಲಿ ಬರೆಯುತ್ತಾರೆ. ಬೋಧನೆಯ ಎರಡು ವರ್ಷಗಳ ನಂತರ ಅವರನ್ನು ವಕ್ಸ್ಜೊದ ಗ್ರಾಮರ್ ಶಾಲೆಯೊಂದಕ್ಕೆ ಕಳುಹಿಸಲಾಯಿತು. ಲಿನೆಯಸ್ ಅವರು ಸಾಮಾನ್ಯವಾಗಿ ಸಸ್ಯಗಳನ್ನು ನೋಡಲು ಹಳ್ಳಿಗೆ ಹೋಗುತ್ತಿದ್ದರು ಹಾಗು ವಿರಳವಾಗಿ ಅಧ್ಯಯನವನ್ನು ಮಾಡುತ್ತಿದ್ದರು. ಇವರು ಹದಿನೈದು ವರ್ಷದವರಿದ್ದಾಗ ಶಾಲೆಯ ಕೊನೆಯ ವರ್ಷದಲ್ಲಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಡೇನಿಯಲ್ರವರು ಸಸ್ಯಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ಡೇನಿಯಲ್ರವರು ಸಸ್ಯಶಾಸ್ತ್ರದಲ್ಲಿ ಲಿನೇಯಸ್ರವರ ಆಸಕ್ತಿಯನ್ನು ಗಮನಿಸಿ ತನ್ನ ತೋಟವನ್ನು ನೋಡಲು ಅವಕಾಶ ನೀಡಿದರು. ಅವರು ಸ್ಮಾಲ್ಯಾಂಡ್ ರಾಜ್ಯದ ವೈದ್ಯರು ಮತ್ತು ಶಿಕ್ಷಕಿಯಾದ ಜೋಹಾನ್ ರಾತ್ಮಾನ್ನನನ್ನು ಪರಿಚಯಿಸಿದರು. ರಾತ್ಮಾನ್ರವರು ಸಸ್ಯ ಶಾಸ್ತ್ರದಲ್ಲಿ ಇವರ ಆಸಕ್ತಿಯನ್ನು ಹೆಚ್ಚಿಸಿದರು. ಲಿನೇಯಸ್ರವರು ೧೭೨೪ರಲ್ಲಿ ಕೆಥ್ಹೀಡ್ರಲ್ ಸ್ಕೋಲಾ ಶಾಲೆಯನ್ನು ಪ್ರವೇಶಿಸಿದರು. ಅಲ್ಲಿಯೇ ಇವರು ಗ್ರೀಕ್, ಹೀಬ್ರು, ಧರ್ಮಶಾಸ್ತ್ರ ಮತ್ತು ಗಣಿತವನ್ನು ಕಲಿತರು. ಮುಂದೆ ಲಿನೇಯಸ್ರವರು ರಾತ್ಮಾನ್ರವರ ನೇತೃತ್ವದಲ್ಲಿ ಸಸ್ಯಶಾಸ್ತ್ರವನ್ನು ಅಭ್ಯಾಸ ಮಾಡಿದರು. ಲಿನೇಯಸ್ರವರು ತನ್ನ ಸಸ್ಯಶಾಸ್ತ್ರದ ಅಧ್ಯಯನವನ್ನು ಲುಂಡ್- ಉಪ್ಸಲಾದ ವಿಶ್ವವಿದ್ಯಾನಿಲಯದಲ್ಲಿ ಮಾಡಿದರು. ನಂತರ ಸಸ್ಯಶಾಸ್ತ್ರದಲ್ಲಿ ಇವರ ಆಸಕ್ತಿ ಇಮ್ಮಡಿಯಾಯಿತು. ಇವರು ತನ್ನ ಡಾಕ್ಟರೇಟ್ ಪದವಿಯನ್ನು ಪಡೆದರು.



           ಅಂತಿಮ ವರ್ಷಗಳು_

ಲಿನೇಯಸ್ ೧೭೬೩ ರಲ್ಲಿ ರಾಯಲ್ಸ್ ಸ್ವೀಡಿಷ್ ಅಕಾಡಮಿ ಆಫ್ ಸೈನ್ಸ್ ತನ್ನ ಕರ್ತವ್ಯದಿಂದ ಬಿಡುಗಡೆಗೊಂಡರು. ಅದರ ನಂತರ ಹತ್ತು ವರ್ಷಗಳಿಗಿಂತ ಹೆಚ್ಚಾಗಿ ಅಲ್ಲಿಯೇ ಕೆಲಸ ನಿಭಾಯಿಸಿದರು. ಅವರು ಅನಾರೋಗ್ಯದ ಕಾರಣದಿಂದಾಗಿ ಉಪ್ಸಲಾದ ಮುಖ್ಯಾಧಿಕಾರಿ ಪದವಿಯಿಂದ ಕೆಳಗಿಳಿದರು. ಅವರು ೧೭೬೪ ರಂದು ಉಪ್ಸಲಾ ಜ್ವರ ಎಂಬ ರೋಗದಿಂದ ಬಳಲುತ್ತಿದ್ದರು. ೧೭೭೬ ರಂದು ಅವರು ೨ನೆಯ ಸ್ಟ್ರೋಕ್ ಅನುಭವಿಸಿದರು. ಇದರಿಂದ ಅವರ ದೇಹದ ಬಲ ಭಾಗದ ಬಳಕೆಯನ್ನು ಕಳೆದುಕೊಂಡಿದ್ದಲ್ಲದೆ ನೆನಪಿನ ಶಕ್ತಿಯನ್ನು ಕಳೆದುಕೊಂಡರು. ಡಿಸೆಂಬರ್ ೧೭೭೭ರಂದು ಮತ್ತೊಂದು ಪಾರ್ಶ್ವವಾಯು ಅವರನ್ನು ದುರ್ಬಲಗೊಳಿಸಿ ಅಂತಿಮವಾಗಿ ಜನವರಿ ೧೦ , ೧೭೭೮ ರಂದು ಕಣ್ಮರೆಯಾದರು. ಅವರ ಗ್ರಂಥಗಳ ಸಂಗ್ರಹಣೆಯನ್ನು ಅವರ ಮರಣದ ನಂತರ ಉಪ್ಸಲಾ ಗ್ರಂಥಾಲಯಕ್ಕೆ ನೀಡಲಾಯಿತು. ನಂತರ ಅವರ ಗ್ರಂಥಗಳನ್ನೆಲ್ಲ ಜೇಮ್ಸ್ ಸ್ಮಿತ್ ೨೪ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬನಿಗೆ ದೊರೆಯಿತು. ೧೪೦೦೦ ಸಸ್ಯಗಳು, ೩೧೯೮ ಕೀಟಗಳು, ೧೫೬೪ ಚಿಪ್ಪುಗಳನ್ನು ಸುಮಾರು ೩೦೦೦ ಅಕ್ಷರಗಳು ಮತ್ತು ೧೬೦೦ ಪುಸ್ತಕಗಳು ಲಿನೇಯಸ್ ರವರ ಸಂಗ್ರಹಣೆಯಾಗಿತ್ತು. ಸ್ಮಿತ್ ರವರು ೫ ವರ್ಷಗಳ ನಂತರ " ಲಿನೇಯಸ್ ಸೊಸೈಟಿ ಆಫ್ ಲಂಡನ್ " ಸ್ಥಾಪಿಸಿದರು.


          ಪ್ರಮುಖ ಪ್ರಕಟಣೆಗಳು

೧. ಸಿಸ್ಟೆಮಾ ನ್ಯಾಚುರಾ :

               ಇದರ ಮೊದಲ ಆವ್ರುತ್ತಿ ಹನ್ನೆರಡು ಪುಟದ ಕೃತಿಯಾಗಿತ್ತು. ನೆದರ್ಲ್ಯಾಂಡ್ನಲ್ಲಿ ಮುದ್ರಿಸಲಾಯಿತು. ೧೭೩೫ - ೧೭೫೬ರ ವೇಳೆಗೆ ಇದರ ೧೦ನೇ ಆವ್ರುತ್ತಿಯನ್ನು ಪ್ರಕಟಿಸಲಾಗಿದೆ.  ಅಷ್ಟರಲ್ಲಿ ೪೪೦೦ ಜಾತಿಗಳ ಪ್ರಾಣಿಗಳನ್ನು ಹಾಗು ೭೭೦೦ ಜಾತಿಗಳ ಹೂಗಳನ್ನು ವರ್ಗೀಕರಿಸಲಾಯಿತು. ಈ ಪ್ರಾಣಿಗಳಿಗೆ ಮತ್ತು ಹೂವುಗಳಿಗೆ ದ್ವಿಪದ ನಾಮಗಳನ್ನು ಹೆಸರಿಸಿದರು.  ಇದು ವಿಶ್ವದಿಡಿ ಪ್ರಚಲಿತವಾಯಿತು. 

೨. ಸ್ಪೀಸೀಸ್ ಫ್ಲಾಂಟಾರಂ :

೧೭೫೫ರಂದು ಮೊದಲು ಪ್ರಕಟವಾಯಿತು. ಮೊದಲು ಎರಡು ಸಂಪುಟಗಳು ಇದ್ದವು. ಇದರ ಪ್ರಾಮುಖ್ಯತೆಯು ಏನೆಂದರೆ ಅಸ್ತಿತ್ವದಲ್ಲಿರುವ ಸಸ್ಯ ನಾಮಕರಣದ ಪ್ರಾಥಮಿಕ ಆರಂಭವಾಯಿತು. 

೩. ಕುಲಗಳ ಪ್ಲಾಂಟಾರಂ  :

ಇದು ಪ್ರಕಟವಾದದ್ದು ೧೭೩೭ರಲ್ಲಿ . ಹತ್ತು ಸಂಪುಟಗಳನ್ನು ಅಳವಡಿಸಿಕೊಂಡಿತ್ತು. ಪ್ರಮುಖವಾದದ್ದು ೧೭೫೪ ರ ಐದನೆ ಆವೃತ್ತಿ. ಇದರಲ್ಲಿ ಸಸ್ಯ ಕುಲಗಳು ಇಪ್ಪತ್ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. 

೪. ತತ್ವ ಬೊಟಾನಿಕ  : ಸಸ್ಯ ವರ್ಗೀಕರಣ ಮತ್ತು ನಾಮಕರಣದ ಮೇಲೆ ಲಿನ್ನೀಯಸಿನ ಚಿಂತನೆಯ ಸಾರಾಂಶ ಮತ್ತು ಅವರು ಹಿಂದೆ ಪ್ರಕಟಿಸಿದ ಕೃತಿಯ ವಿವರವಾಗಿತ್ತು.


    ಲಿನೇಯಸ್ನ ಸ್ಮಾರಕ: 

ಇವರ ಹುಟ್ಟಿದ ವಾರ್ಷಿಕೋತ್ಸವದ ದಿನಗಳು , ಪ್ರಮುಖ ಆಚರಣೆಗಳ ದಿನಗಳಾಗಿದೆ. ಹಲವಾರು ಸ್ವೀಡಿಷ್ ಅಂಚೆಯ ಚೀಟಿಗಳ ಮೇಲೆ ಮತ್ತು ದೇಶಗಳಲ್ಲಿ ಲಿನೆಯಸ್ಸಿನ ಪ್ರತಿಮೆಗಳಿವೆ. ಲಿನೆಯಸ್ ಸೊಸೈಟಿ ಆಫ್ ಲಂಡನ್, ಲಿನೇಯಸಿನ ಕಾರ್ಯಗಳನ್ನು ಮೆಚ್ಚಿ ಹಲವಾರು ಪದಕಗಳನ್ನು ನೀಡಿದ್ದಾರೆ.



ಲಿನೇಯಸ್ ಮೇಲಿನ ವ್ಯಾಖ್ಯಾನ : ಆಂಡ್ರೂ ಡಿಕ್ಸೆನ್ ವೈಟ್ರವರು" ಕ್ರಿಶ್ಚಿಯನ್ ಥಿಯಾಲಜಿ ಆಫ್ ವಾರ್ಫೇರ್ " ಎಂಬ ಪುಸ್ತಕದಲ್ಲಿ ಈ ರೀತಿ ಬರೆದಿರುವರು.

         ಲಿನೇಯಸ್ ತನ್ನ ಕಾಲದ ಅತ್ಯಂತ ಶ್ರೇಷ್ಟ ಪರಿಸರವಾದಿ , ವಿಶಾಲ ವೀಕ್ಷಕರು ಹಾಗು ಆಪ್ತ ಚಿಂತಕರಾದವರು ಎಂಬ ಮಾತುಗಳಾನ್ನು ಹೇಳಿರುವರು. 

ಗಮನಾರ್ಹ ಕೊಡುಗೆಗಳು :

  • ಲಿನೇಯಸ್ ಸೂಚಕ ಪಟ್ಟಿಗಳನ್ನು ಕಂಡುಹಿಡಿದರು. ಸಸ್ಯ ಜಾತಿಗಳ ಪಟ್ಟಿಗಳು ಬೆಳೆಯುತ್ತಿರುವ ಪ್ರತಿಕ್ರಿಯೆಯಾಗಿ ಅವರು ಸುಲಭವಾಗಿ ವಿಸ್ತರಿಸಬಲ್ಲ ಹಾಗು ಗುರುತಿಸಬಲ್ಲ ಸೂಚಕ ಪಟ್ಟಿಗಳನ್ನು ಕಂಡುಹಿಡಿದರು.
  • ಲಿನೇಯಸ್ ಮಾನವರನ್ನು ಮುಖ್ಯ ಕುಟುಂಬದಲ್ಲಿ ಇರಿಸದರು ಹಾಗು ಬಾವಲಿಗಳನ್ನು ಪಕ್ಷಿಗಳ ಬದಲಿಗೆ ಸಸ್ತನಿಗಳೆಂದು ವಿವರಿಸಲು ಮೊದಲ ವ್ಯಕ್ತಿಯಾಗಿದ್ದರು.
  • ಜೀವಿಗಳ ಮತ್ತು ಅದರ ಪರಿಸರದ ನಡುವಿನ ಸಂಬಂಧವನ್ನು ವಿವರಿಸುವಲ್ಲಿ - ಲಿನೇಯಸ್ ಪರಿಸರ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
  • ಲಿನೇಯಸ್ , ಸೆಲ್ಸಿಯಸ್ ತಾಪಮಾನವನ್ನು ನಾವು ಇಂದು ಬಳಸುವ ರೂಪಕ್ಕೆ ಅಥವಾ ಪರಿಮಾಣಕ್ಕೆ ಬದಲಾಯಿಸಿದ್ದಾರೆ.

ಲಿನೇಯಸ್, ಜೀವಿಗಳ ವರ್ಗೀಕರಣ :ತನ್ನ ಪರಮಾಧಿಕಾರ ನ್ಯಾಚುರಾದಲ್ಲಿ, ಲಿನೇಯಸ್ ಮೂರು ರಾಜ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ಅವುಗಳು

 ೧.  ಪ್ರಾಣಿಗಳ ವರ್ಗ
 ೨.  ತರಕಾರಿಗಳ ವರ್ಗ
 ೩.  ಖನಿಜಗಳ ವರ್ಗ
 
ಪ್ರಾಣಿಗಳ ರಾಜ್ಯವನ್ನು ಆರು ವರ್ಗಗಳಾಗಿ ವಿಂಗಡಿಸಿದ್ದಾರೆ.
 ೧.  ಸಸ್ತನಿಗಳು
 ೨.  ಪಕ್ಷಿಗಳು
 ೩.  ಉಭಯಚರಗಳು
 ೪.  ಮೀನುಗಳು
 ೫.  ಕೀಟಗಳು
 ೬.  ಹುಳುಗಳು

ಲಿನೇಯಸ್ನ ಕೆಲಸ, ಸಸ್ಯ ಮತ್ತು ಪ್ರಾಣಿಗಳ ಮೇಲೆ ಭಾರಿ ಪ್ರಭಾವ ಉಂಟುಮಾಡಿತು. ಜೈವಿಕ ನಾಮಕರಣದ ಪದ್ಧತಿಗೆ ಆಧಾರವಾಗಿರುವ ಅವರ ಎರಡು ಗ್ರಂಥಗಳು

 ೧.  ಸಿಸ್ಟೆಮಾ ನ್ಯಾಚುರಾ ಹತನೆಯ ಆವ್ರುತ್ತಿ
 ೨.  ಸಿಸ್ಟೆಮಾ ಪ್ಲಾಂಟಾರಮ್
ತನ್ನ ದ್ವಿಪದೋಕ್ತಿಗಳು (ಜಾತಿಯ ಹೆಸರುಗಳು) ಮತ್ತು ಜಾತಿವಾಚಕ ಹೆಸರುಗಳನ್ನು ಇತರರ ಮೇಲೆ ಅಧ್ಯತೆ ಕೊಡಲಾಗಿದೆ.


ಸಂಪರ್ಕಗಳೂ http://www.encyclopedia.com/topic/Carolus_Linnaeus.aspx http://www.famousscientists.org/carolus-linnaeus/ http://www.ucmp.berkeley.edu/history/linnaeus.html http://www.infoplease.com/encyclopedia/people/linnaeus-carolus.html http://biography.yourdictionary.com/carl-linnaeus http://global.britannica.com/biography/Carolus-Linnaeus