ಸದಸ್ಯ:Pallavi570/ನನ್ನ ಪ್ರಯೋಗಪುಟ

ಪರಿಚಯ ಬದಲಾಯಿಸಿ

 

ಡಾ||ಮನಮೋಹನ್ ಸಿಂಗ್ (ಜನನ: ಸೆಪ್ಟೆಂಬರ್ ೨೬, ೧೯೩೨ ಪಶ್ಚಿಮ ಪಂಜಾಬ್ ನ ಗಾಹ್ ನಲ್ಲಿ - ಈಗದು ಪಾಕಿಸ್ತಾನದಲ್ಲಿದೆ) ಭಾರತದ ೧೩ನೆಯ ಪ್ರಧಾನ ಮಂತ್ರಿಗಳು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಮನಮೋಹನ್ ಸಿಂಗ್, ಮೇ ೨೨ ೨೦೦೪ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.[೨] "ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ" ಎಂದು ಮನಮೋಹನ್ ಸಿಂಗ್ ಪ್ರಸಿದ್ಧರಾಗಿದ್ದಾರೆ. ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ 'ವಿತ್ತಮಂತ್ರಿ'ಯಾಗಿ ಮನಮೋಹನ್ ಸಿಂಗ್ ಪರಿಚಯಿಸಿದ ಆರ್ಥಿಕ ಸ್ವತಂತ್ರೀಕರಣ ನೀತಿಗಳು ಭಾರತದ ಆರ್ಥಿಕ ವ್ಯವಸ್ಥೆಯನ್ನು ದುಸ್ಥಿತಿಯಿಂದ ಸುಧಾರಿಸಿದವು ಎನ್ನಲಾಗುತ್ತದೆ.

ಪ್ರಧಾನಮಂತ್ರಿಯಾಗಿ ಪಯಣ ಬದಲಾಯಿಸಿ

ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದವರು. ರಾಜಕೀಯದಲ್ಲಿ ಎಂದಿಗೂ ವಿವಾದ ಸೃಷ್ಟಿಸದ ಮನಮೋಹನ್ ಸಿಂಗ್ ೨೦೦೨ ರಲ್ಲಿ "ಅತ್ಯುತ್ತಮ ಸಂಸದ್ ಸದಸ್ಯ" ಪ್ರಶಸ್ತಿಯನ್ನೂ ಪಡೆದಿದ್ದರು.ಜವಾಹರಲಾಲ್ ನೆಹರು ನಂತರ ಸತತ ಎರಡನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ ಮನಮೋಹನ್ ಸಿಂಗ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಅಧಿಕಾರದ ಚುಕ್ಕಾಣಿ ಹಿಡಿದರು.ರಾಷ್ಟ್ರಪತಿ ಭವನದ ಅಶೋಕ ಹಾಲ್ ನಲ್ಲಿ ನಡೆದ ವರ್ಣರಂಜಿತ ಐತಿಹಾಸಿಕ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಧಿಕಾರ ಗೌಪ್ಯತೆ ಹಾಗೂ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಪ್ರಮಾಣವಚನ ಬದಲಾಯಿಸಿ

 

ದೇಶದ ಘಟಾನುಘಟಿ ಗಣ್ಯರ ಸಮ್ಮಖದಲ್ಲಿ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಸೇರಿ ಸಚಿವ ಸಂಪುಟದ ೧೯ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಪ್ರಣಬ್ ಮುಖರ್ಜಿ, ಪಿ ಚಿದಂಬರಂ, ಮಮತಾ ಬ್ಯಾನರ್ಜಿ, ಎಸ್ ಎಂ ಕೃಷ್ಣ, ಶರದ್ ಪವಾರ್, ವೀರಪ್ಪ ಮೊಯ್ಲಿ, ಕಮಲನಾಥ್, ಕಪಿಲ್ ಸಿಬಲ್, ಸುಶೀಲ್ ಕುಮಾರ್ ಶಿಂಧೆ, ವಯಲಾರ್ ರವಿ, ಸಿಪಿ ಜೋಶಿ, ಜೈಪಾಲ್ ರೆಡ್ಡಿ, ಮೀರಾ ನಾಯರ್, ಗುಲಾಮ್ ನಬಿ ಅಜಾದ್, ಆನಂದ ಶರ್ಮಾ, ಅಂಬಿಕಾ ಸೋನಿ, ಮುರಳಿ ದೇವೋರಾ, ಮತ್ತು ಬಿ ಕೆ ಹಂಡಿಕ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿಯಲ್ಲಿದ್ದಾರೆ.೭೬ರ ಹರೆಯ ಮನಮೋಹನ್ ಸಿಂಗ್ ಕೊನೆಗೂ ದೇಶದ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿಂಗ್ ಹೇಳಿಕೊಂಡಂತೆ ಆಕಸ್ಮಿಕವಾಗಿ ರಾಜಕಾರಣಿಯಾದವರು. ದೇಶ ಮುನ್ನಡೆಸುವ ಅವಕಾಶ ದೊರೆತದ್ದು ಬಯಸದೆ ಬಂದ ಭಾಗ್ಯ. ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಅವರಿಂದ ದುರ್ಬಲ ಪ್ರಧಾನಿ ಎಂಬ ವೈಯಕ್ತಿಕ ನಿಂದನೆ, ಬಿಜೆಪಿ ಸ್ಟಾರ್ ಕ್ಯಾಂಪೇನರ್ ನರೇಂದ್ರ ಮೋದಿ ಅವರ ನಿಂದನೆಯ ವಾಗ್ಬಾಣಗಳು ಸಿಂಗ್ ಅವರನ್ನು ಕೆಲ ದಿನಗಳ ಮಟ್ಟಿಗೆ ನಿದ್ದೆಗೆಡಿಸಿತ್ತು ಎನ್ನುವುದು ಸುಳ್ಳಲ್ಲ.

ಸಾಧನೆಗಳು ಬದಲಾಯಿಸಿ

 

ಸಿಂಗ್ ದೇಶ ಕಂಡ ಪ್ರಕಾಂಡ ಅರ್ಥಶಾಸ್ತ್ರಜ್ಞ. ಕೇಂಬ್ರಿಡ್ಜ್ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ವಿದ್ಯಾಭ್ಯಾಸ. ಭಾರತದ ಆರ್ಥಿಕ ಸಲಹೆಗಾರರಾಗಿ ನೇಮಕ. ಪಿವಿ ನರಸಿಂಹರಾವ್ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿ ಕಾರ್ಯನಿರ್ವಹಣೆ. ಕಾಂಗ್ರೆಸ್ ಕಾರ್ಯಾಕಾರಿ ಸಮಿತಿಯಲ್ಲಿ ಸದಸ್ಯತ್ವ ಸ್ಥಾನ. ೧೯೯೮ರಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ. ೨೦೦೪ ರಲ್ಲಿ ಯುಪಿಎ ಮೈತ್ರಿಕೂಟದ ಸರಕಾರದಲ್ಲಿ ಪ್ರಧಾನಮಂತ್ರಿಯಾಗಿ ನೇಮಕ. ಕಳೆದ ಐದು ವರ್ಷಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಣೆ. ರೈತರ ಸಾಲಮನ್ನಾ, ಅಮೆರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದ. ಉದ್ಯೋಗ ಖಾತ್ರಿ ಯೋಜನೆಗಳು ಸಿಂಗ್ ನೇತೃತ್ವದ ಸರಕಾರದ ಸಾಧನೆಗಳಾಗಿವೆ.

ಉಲ್ಲೇಖನೆಗಳು ಬದಲಾಯಿಸಿ

೧. ದ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್,ಸಂಜಯ್ ಬರು.

೨. ಡಾ||ಮನಮೋಹನ್ ಸಿಂಗ್ ,ಸುಜಯ್ ಶಾಸ್ತ್ರಿ.