College photo
PREM.PKG

ಪರಿಚಯ:-

ನನ್ನ ಹೆಸರು ಪ್ರೇಮ್ ಕಿಶನ್. ಜಿ. ನಾನು ಕ್ರೈಸ್ಟ್ ವಿಶ್ವ ವಿದ್ಯಾಲಯದಲಿ ಓದುತಿದೇನೆ. ನಾನು ಬಿ.ಕಾಂ 'ಸಿ' ವಿಭಾಗದಲ್ಲಿ ಓದುತಿದೇನೆ. ನನ್ನ ತರಗತಿಯಲ್ಲಿ ಒಟ್ಟು ತೊಂಬತು ಮಕ್ಕಳು ಓದುತಿಧಾರೆ. ಅದರಲ್ಲಿ ನಲವತ್ತು ಹುಡುಗಿಯಾರು ಹಾಗೂ ಐವತ್ತು ಹುಡುಗರು ಇದ್ದಾರೆ. ನನ್ನ ತರಗತಿಯ ಅಧ್ಯಾಪಕಿಯ ಹೆಸರು ಪಿ.ಅರುಣಾ. ಅವರು ನಮಗೆ ಅಕೌಂಟ್ಸ್ ಹೇಳಿಕೊಡುತಾರೆ. ನನ್ನಗೆ ಕಾಲೇಜಿಗೆ ಹೋಗಲು ತುಂಬಾ ಇಷ್ಟ, ಏಕೆಂದರೆ ನಮ್ಮ ಗುರುಗಳು ನಮ್ಮಗೆ ತುಂಬಾ ಚೆನ್ನಾಗಿ ವಿದ್ಯೆ ಕಲಿಸುತಾರೆ.ನನ್ನ ಬಗ್ಗೆ ನಾನು ಹೇಳಿಕೋಲುಬೇಕೆಂದರೆ ನಾನು ಅಷ್ಟು ಸುಲಭವಾಗಿ ಯಾರ ಹತ್ತಿರವೂ ಸಹ ಮಾತನಾಡುವುದಿಲ. ನಾನು ಸ್ವಲ್ಪ ಸೈಲೆಂಟ್ ಸ್ವಾಬಾವಿ. ನಾನು ಎಲ್ಲರ ಹತ್ತಿರ ನಗು-ನಗುತಲೆ ಇರುತೇನೆ. ಎಲ್ಲಾರಿಗೂ ಸಹಾಯ ಮಾಡಲು ನಾನು ಮುಂದಾಗಿರುತೆನೆ, ಯಾರಾದರೂ ನನ್ನ ಬಳಿ ಕೆಲಸ ಕೇಳಿದರೆ ನಾನು ಅದನ್ನು ಖುಷಿಯಾಗಿ ಮಾಡಿ ಕೊಡುವೆನು. ನಾನು ಯಾವಾಗಲೂ ಹೀಗೆಯೇ ಇದೇ- ಇರುವೆನು.

ತಂದೆ ತಾಯಿಯ ಪರಿಚಯ:-

   ನನ್ನ ತಂದೆ ಯ ಹೆಸರು ಬಿ.ಗಣೇಶ್. ಅವರು ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತಿದಾರೆ. ಅವರ ವಯಸ್ಸು ನಲ್ವತೈದು. ಅವರು ನನ್ನನು ತುಂಬಾ ಚೆನ್ನಾಗಿ ನೋಡಿಕೊಳ್ಳುತಾರೆ. ನನ್ನಗೆ ಅವರೆಂದರೆ ತುಂಬಾ ಇಷ್ಟ. ಅವರು ನನಗೆ ಬೇಕಾಗಿದೆಲ್ಲಾ ಕೊಡುತ್ತಾರೆ. ನನ್ನ ಹತ್ತಿರ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತಾರೆ. ನನ್ನ ತಾಯಿ ಯ ಹೆಸರು ರಶ್ಮಿ.ಜಿ. ಅವರು ಚಿನ್ಮಯ ವಿದ್ಯಾಲಯ ಎಂಬ ಶಾಲೆಯಲ್ಲಿ ಆದ್ಯಪಕಿಯಾಗಿ ಕೆಲಸ ಮಾಡುತಿಧಾರೆ. ಅವರಿಗೆ ಮಕ್ಕಳು ಎಂದರೆ ಪ್ರಾಣ ಇದರಿಂದ ಅವರು ಚಿಕ್ಕ ಪ್ರಾಯದ ಮಕ್ಕಳ್ಳಿಗೆ ಪಾಠ ಹೇಳ್ಲಿಕೊಡುತಾರೆ. ಅವರಿಗೆ ತುಂಬಾ ಗುಣವಂತದ ಸ್ವಭಾವ. ಯುವತು ಯಾರಿಗು ಇಲ್ಲ ಎಂದು ಹೇಳ್ಲಿ ಅವರಲ್ಲ. ನನ್ನಗೆ ಯಾವುದೇ ಕಷ್ಟ ಅಥವಾ ತೊಂದರೆ ಬಂದರೆ ನಾನು ಅವರಬಲಿ ಹೋಗಿ ಹೇಳಿಕೊಳ್ಳುತೆನೆ. ಅವರು  ನನ್ನ ಕಷ್ಟಕ್ಕೆ ಪರಿಹಾರ ನೀಡುತಾರೆ.


ಶಾಲೆ ವಿವರಣೆ:-


 ನಾನು ನನ್ನ ಶಾಲೆಯ ಶಿಕ್ಷಣೆ ಚಿನ್ಮಯ ವಿದ್ಯಾಲಯ ಎಂಬ ಶಾಲೆಯಲಿ ಮಾಡಿಧೆ. ನಮ್ಮ ಶಾಲೆಯಲ್ಲಿ ಸಂಸ್ಕೃತಿ ಹಾಗೂ ಪುರಾಣ ಶ್ಲೋಕಗಳಿಗೆ ತುಂಬ ಪ್ರಾಮುಖ್ಯತೆ ಕೊಡುತಾರೆ. ನಾವು ಪ್ರತಿ ದಿನ ಶಾಲೆಯಲ್ಲಿ 4 ಅಥವಾ 5 ಶ್ಲೋಕ ಹಾಡುತೆವೆ. ಶಾಲೆಯಲ್ಲಿ ನನ್ನಗೆ ತುಂಬಾ ಜನ ಮಂದಿ ಸ್ನೇಹಿತರು ಇದ್ದರು. ಶಾಲೆಯಲ್ಲಿ ನಾವು ಮಾಡದ ಚೇಷ್ಟೆಯೇ ಇಲ್ಲ, ಪ್ರತಿ ದಿನ ಸಹ ನಾವು ಯಾವುದಾದರೂ ಒಂದು ಚೇಷ್ಟೆಗೆ ಸಿಕ್ಕಿ ಹಕ್ಕಿಕೊಲುತಿದೆವು. ಶಾಲೆ ಬಿಟ್ಟು ಕಾಲೇಜಿಗೆ ಹೋಗುವಾಗ ನಾನು ತುಂಬಾ ದುಃಖ ಪಟೇ.

ನಮ್ಮ ಕುಟುಂಬ:-

        ನಮ್ಮ ಮನೆಯಲ್ಲಿ ನನ್ನ ಅಜ್ಜಿ ಹಾಗು ಅಜ್ಜ ಸಹ ವಾಸಿಸುತಾರೆ. ನಮದೊಂದು ತುಂಬಿದ ಕುಟುಂಬ, ನನ್ನ  ಚಿಕ್ಕಪನದಿರು ಸಹ ನಮ್ಮ ಮನೆಯಲೆ ಇದಾರೆ, ಇದರಿಂದ ಮಕ್ಕಳ ಸಂಖ್ಯೆ ನಮ್ಮ ಮನೆಯಲ್ಲಿ ಹೆಚ್ಚು. ನನ್ನಗೆ ನನ್ನ ಕುಟುಂಬಎಂದರೆ ಪ್ರಾಣ. 

ಹವ್ಯಾಸಗಳು:-

          ನಾನು ಪ್ರತಿ ದಿನ ಮನೆಗೆ ಬಂದಮೆಲೆ ನನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತೆನೆ. ನನ್ನಗೆ ಕ್ರಿಕೆಟ್ ಎಂದರೆ ಪ್ರಾಣ, ನಾನು ತುಂಬಾ ಸಣ್ಣ ಪ್ರಾಯದಲ್ಲಿಯೇ ಐ.ಯೇ.ಸಿ.ಯೇ. ಎಂಬ ಒಂದು ಕ್ರಿಕೆಟ್ ಸಂಸ್ಥೆಗೆ ಸೇರಿ.

ಕ್ರಿಕೆಟ್ ಹಾಡಲು ಶ್ರೀ ಲಂಕಾ, ಮೈಸೂರು, ಕೇರಳ ಹೀಗೆ ಬೇರೆ ಬೇರೆ ಸ್ಥಳಗಳಿಗೆ ಕರ್ನಾಟಕ ತಂಡದ ಒಂದು ಪ್ರಮುಖ ಬ್ಯಾಟ್ಸಮನ್ ಆಗಿ ರೆಪ್ರೆಸೆಂಟ್ ಮಾಡಿದೀನಿ. ಇದರಿಂದ ನನಗೆ ಬಹಳ ಅನುಭವ ಹಾಗೂ ಪ್ರಶಸ್ತಿಗಳು ಸಿಕಿವೆ. ಇದಲ್ಲದೆ ನಾನು 9ನೇ ತರಗತಿಯಲ್ಲಿ ಶಾಲೆಗೆ ಮೊದಲನೇ ಅಂಕ ಗೆಳಸಿದೆ. ಇದು ನನಗೆ ಹಾಗು ನನ್ನ ತಂದೆ ತಾಯಿಗೆ ತುಂಬ ಸಂತೋಷ ತಂದಿತು.


ನಮ್ಮ ಮನೆಯ ಶ್ವಾನಗಳು:-

          ಇದಲ್ಲದೇ ನಮ್ಮ ಮನೆಯಲ್ಲಿ ಎರಡು ಶ್ವಾನಗಳಿವೆ. ಒಂದರ ಹೆಸರು ಜೆಸ್ಸಿ, ಇನೋದರ ಹೆಸರು ಸ್ನೋ. ಶ್ವಾನಗಳನ್ನು ನಾವು ಸ್ವನಗಳಂತೆ ಕಾಣದೆ ಅವರು ಸಹ ನಮ್ಮ ಕುಟುಂಬದ ವೊಬರು ಎಂದೇ ನಾವು ಅವರನ್ನು ಕಾಣು ವರು. ನನ್ನಗೆ ನನ್ನ ನಾಯಿಗಳೆಂದರೆ ಪ್ರಾಣ, ಅವರು ಜಗಳ ವಡದೆ ಯಾವಾಗಲು ಜೊತೆಯಾಗಿ ಖುಷಿಯಾಗಿ ಇರುತಾರೆ. ಪ್ರತಿ ಬಾನುವಾರ ನಾನು ನನ್ನ ಸ್ವನಗಳನ್ನು ಲಾಲ್.ಬ್ಯಾಗ್ ಬೊಟಾನಿಕಲ್ ಗಾರ್ಡನ್ಗೆ ಕರದು ಕೊಂಡು ಹೋಗುವೇನು. ಅಲ್ಲಿ ಪ್ರತಿ ಬನುವಾರ ಎಲ್ಲಾರು ತನ ನಾಯಿಗಳನ್ನು ತಂದು ಬೇರೆ ನಾಯಿಗಳ ಜೊತೆ ಪಾಲುಗಿಸಲು ಪ್ರಯತ್ನಿಸುತಾರೆ. ಇದು ಲಾಲ್.ಬ್ಯಾಗ್ ನಲ್ಲಿ ನಡೆಯುವ ಒಂದು ವಿಶೇಷವಾದ ಸಂಗತಿ.
          

ನನ್ನ ಪ್ರವಾಸದ ಬಗ್ಗೆ:-

ನಾನು ನನ್ನ ಮೂರು ಜನ ಸ್ನೇಹಿತರ ಜೊತೆ ಊಟಿ ಹೋದೆ, ಅಲ್ಲಿ ನಾವು ಮಸಿನಗುಡಿ ಎಂಬ ಒಂದು ಚಿಕ್ಕ ಊರಿಗೆ ಹೋದೆವು. ಅಲ್ಲಿಯ ಪ್ರಕೃತಿಯನ್ನು ಕಂಡು ನಾವು ಮೈಮರೆತರು. ಅಲ್ಲಿ ನಾವು ಮೂರು ದಿನಗಳ ಕಾಲ ಕಳೆದವು, ಮೊದಲ ದಿನ ನಾವು ತಲುಪಿದ ನಂತರ ಪಕ್ಕದಲ್ಲಿ ಇರುವ ಒಂದು ಕೆರೆಗೆ ಹೋಗಿ ಈಜಾಡಿದೇವು. ನಂತರ ಪಕ್ಕದಲ್ಲಿ ಇರುವ ಒಂದು ಹೋಟೆಲಿನಲ್ಲಿ ತಿಂದೆವು. ಅಲ್ಲಿ ಪಕ್ಕದಲ್ಲಿರುವ ಮೈದಾನಕ್ಕೆ ಹೋಗಿ ನಾವು ಕ್ರಿಕೆಟ್ ಆಡಿದೇವು. ಹಿಂಗೆ ಮೊದಲನೆಯ ದಿನ ಕಳೆಯಿತು. ಎರಡನೆಯ ದಿನ ನಾವು ಸಫಾರಿ ಗೆ ಹೋದೆವು, ಹುಲಿ ಸಿಂಹ ಕರಡಿ ಜಿಂಕೆ ಆನೆ ಮತ್ತು ಇತ್ಯಾದಿ ಪ್ರಾಣಿಗಳನ್ನು ಕಂಡು  ಕಣ್ಣು ತುಂಬಿದವು. ಇದು ನಮಗೆ ಒಂದು ವಿಶೇಷ ವಾದ ಅನುಭವವಾಗಿತು. ಮೂರನೆಯ ದಿನ ನಾವು ಬೆಂಗಳೂರಿಗೆ ಹೊರಟೆವು, ಬರುವ ದಾರಿಯಲ್ಲಿ ನಾವು ಮೈಸೂರ್ ಅರಮನೆ ಗೆ ಹೋದೆವು. ಅದರ ಬ್ರಹ್ಮಾಂಡ ಸ್ಥಾಪನೆಯನ್ನು ಕಂಡು ನಾವು ಮೈಮರೆತರು. ಇದಲ್ಲ ನಂತರ ನಾವು ಕೊನೆಗೆ ಬೆಂಗಳೂರಿಗೆ ಬಂದೆವು. ಇದೇ ನನಗೆ ತುಂಬಾ ಸ್ಮರಣೀಯ ಪ್ರವಾಸ. ನನ್ನ ತಂದೆ ತಾಯಿಗೆ ಎಲ್ಲಾ ವಿವರಣೆಯನ್ನು ಕೊಟ್ಟೆ. ನನಗೆ ತುಂಬಾ ಖುಷಿಯಾಗಿತ್ತು.

ಧನ್ಯವಾದಗಳು:-

        ಕೊನೆಯಾಗಿ ನನ್ನಗೆ ಈ ಅದ್ಬುತವಾದ 
 ಕಾರ್ಯಯೋಜನೆ ಕೋಟ ನನ್ನ ಕನ್ನಡ ಆದ್ಯಪಕರಾದ   
  ಡಾ. ಶಿವಪ್ರಸಾದ್ರವರಿಗೆ ವಂದನೆಯನು ಸಲ್ಲಿಸುತೆನೆ.
               ಧನ್ಯವಾದಗಳು