ಸದಸ್ಯ:Naveen.s.navi/ನನ್ನ ಪ್ರಯೋಗಪುಟ

Naveen.s.navi/ನನ್ನ ಪ್ರಯೋಗಪುಟ
Titleಸಾರ್ವಜನಿಕ ಕಂಪೆನಿಗಳ ಲೆಕ್ಕತನಿಖೆ

ಸಾರ್ವಜನಿಕ ಕಂಪೆನಿಗಳ ಲೆಕ್ಕತನಿಖೆ ಬದಲಾಯಿಸಿ

೧೯೧೩ನೆ ಇಂಡಿಯನ್ ಕಂಪೆನಿಗಳ ಕಾನೂನಿನಲ್ಲಿ ಸಂವತ್ಸರದ ನಂತರ ಅನೇಕ ತಿದ್ದುಪಡಿಗಳು ಆಚರಣೆಗೆ ಬಂದಿವೆ.ಅವುಗಳಲ್ಲಿ ೧೯೩೬ನೆಯ ಸಂವತ್ಸರದ ತಿದ್ದುಪಡಿಯೇ ಮುಖ್ಯವಾದುದು.ಈ ತಿದ್ದುಪಡಿಯ ಕಾನೂನು ಇಂಗ್ಲಿಷ್ ಕಾನೂನನ್ನು ಅನೇಕ ಅಂಶಗಳಲ್ಲಿ ಹೋಲುತ್ತಿದ್ದುದ ರಿಂದ ಇಂಡಿಯಾ ದೇಶದ ಕಂಪೆನಿಗಳಲ್ಲಿ ಶಿಸ್ತು ಮತ್ತು ದಕ್ಷತೆಗಳು ತಲೆ ದೋರಲು ಕಾರಣವಾಯಿತು.ಅಲ್ಲದೆ,ಷೇರುದಾರರಿಗೆ ಆಧಿಕ ಹಕ್ಕು ಬಾಧ್ಯತೆಗಳನ್ನು ದೊರಕಿಸಿಕೊಟ್ಟಿತು.ಆಡಳಿತ ವ್ಯವಸ್ಥೆಯ ಏಜೆಂಟರ ಮತ್ತು ಡರೆಕ್ಟರುಗಳ ಅಧಿಕಾರವನ್ನು ನೊಟಕುಮಾಡಲಾಯಿತು.ಲೆಕ್ಕ ಪರಿಶೋಧಕನ ಜವಾಬ್ದಾರಿಯನ್ನೂ ಗುರುತರವನ್ನಾಗಿ ಮಾಡಲಾಯಿತು.೧೯೫೬ನೆಯ ಇಸವಿಯಲ್ಲಿ ನಮ್ಮ ದೇಶದಲ್ಲಿ ಕ್ರೋಡೀಕರಿಸಿದ ಅಧಿಕಾರ ವ್ಯಾಪ್ತಿಯುತವಾದ ಕಂಪೆನಿಗಳ ಕಾನೂನು ಜಾರಿಗೆ ಬಂತು.ಈ ಕಾನೂನಿಗೆ ೧೯೫೬ನೆಯ ಇಸವಿ, ಜನವರಿ ತಿಂಗಳು ೧೮ನೆಯ ದಿನಾಂಕ ಇಂಡಿಯದ ಅಧ್ಯಕ್ಷರ ಅನುಮತಿ ದೊರಕಿ ಅದೇ ಸಾಲಿನಲ್ಲಿ ಏಪ್ರಿಲ್ ೧ ರಿಂದ ಜಾರಿಗೆ ಬಂತು.ಈ ಕಾನೂನಿನ ಪ್ರಕಾರ, ಕಂಪೆನಿಗಳ ಆಡಳಿತ ವಿಷಯದಲ್ಲಿ ಅಧಿಕ ಬಂದೋನಸ್ತನ್ನುಂಟುಮಾಡಿದ್ದಲ್ಲದೆ, ಆಡಳಿತ ವ್ಯವಸ್ಥೆಯ ಏಜೆಂಟರ ಮತ್ತು ಡರೆಕ್ಟರುಗಳ ಸ್ವೇಚ್ಛಾಡಳಿತ, ಅಧಿಕಾರ ಕಾಲಾವಧಿ, ಕಂಪೆನಿಯಿಂದ ಪಡೆಯುವ ವರಮಾನ ಇತ್ಯಾದಿಗಳಿಗೆ ವಿತಿಯನ್ನು ಜಾಹೀರು ಮಾಡಾಲಾಯಿತು. ಅಲ್ಲದೆ ಲೆಕ್ಕಪರಿಶೋಧಕನ ಹಕ್ಕು ಬಾಧ್ಯತೆಗಳನ್ನು ವೃದ್ಧಿಪಡಿಸಿದುದೇ ಅಲ್ಲದೆ, ಆತನ ಜನಾಬ್ದಾರಿಯನ್ನೂ ಗುರುತರವನ್ನಾಗಿ ಮಾಡಾಲಾಯಿತು.

ಲೆಕ್ಕಪರಿಶೋಧಕನ ನೇಮಕ ಮತ್ತು ಸಂಭಾವನೆ ಬದಲಾಯಿಸಿ

ನೂತನ ಕಾನೂನಿನ ೨೨೪ನೆಯ ಕಲಮ್ ಈ ವಿಷಯದಲ್ಲಿ ವಿವರಣೆಯನ್ನಿತ್ತಿದೆ. ಅದರ ಪ್ರಕಾರ ೧.ಪ್ರತಿಯೊಂದು ಕಂಪೆನಿಯೂ ಅದು ಸಾಂವತ್ಸರಿಕ ಸಾಮಾನ್ಯ ಸದಸ್ಯರ ಸಭೆಯಲ್ಲಿ ಏಕ ಅಥವಾ ಹಲವು ಲೆಕ್ಕಪರಿಶೋಧಕರನ್ನು ತಾತ್ಕಾಲಿಕ ಸಭೆಯು ಆಖರ್ ಆಗುವ ಕಾಲದಿಂದ ಅಂತಹುದೇ ಮತ್ತೊಂದು ಸಭೆಯು ಸೇರಿ ಮುಕ್ತಾಯವಾಗುವವರೆಗೆ ನೇವಿಸತಕ್ಕದ್ದು.೨.ನಿವೃತ್ತನಾಗುವ ಲೆಕ್ಕಪರಿಶೋಧಕನು ಪುನ ನಿಯಮಿಸಲ್ಪಡಲು ಅರ್ಹನು.ಆದರೆ ಸ್ವತಹ ಆತನೇ ಅಂತಹ ನೇಮಕಕ್ಕೆ ಒಪ್ಪ ದಿದ್ದಲ್ಲಿ,ಅಥವಾ ಆತನ ಸ್ಥಳಕ್ಕೆ ಮತ್ತೊಬ್ಬನನ್ನು ಆರಿಸಿದಲ್ಲಿ ಆತನು ತನ್ನ ಸ್ಥಾನವನ್ನು ಕಳೆದುಕೊಳ್ಳುವನು.ಅಲ್ಲದೆ ಆತನ ಮರಣ,ಅಸಾಮರ್ಥ್ಯತೆ ಅಥವಾ ಇತರ ಅನರ್ಹತೆಗಳಿಂದ ಆತನ ಸ್ಥಳವು ಖಾಲಿಯಾಗಬಹುದು.೩.ಕಂಪೆನಿಯ ಸಾಂವತ್ಸರಿಕ ಸಾಧಾರಣ ಸದಸ್ಯರ ಸಭೆಯಲ್ಲಿ ಲೆಕ್ಕಪರಿಶೋಧಕನನ್ನು ನೇಮಿಸದೆ ಹೋದರೆ ಆಗ ಕೇಂದ್ರ ಸರ್ಕಾರವು ಲೆಕ್ಕಪರಿಶೋಧಕನನ್ನು ನೇಮಿಸಬಹುದು.೪.ವಾರ್ಷಿಕ ಸಾಧಾರಣ ಸದಸ್ಯರ ಸಭೆಯಲ್ಲಿ ಲೆಕ್ಕಪರಿಶೋಧಕನನ್ನು ಆರಿಸಲಾಗಲಿಲ್ಲವೆಂಬ ವಿಷಯವನ್ನು ಕಂಪೆನಿಯ ಆಧಿಕಾರಿಗಳು ಏಳು ದಿನಸಗಳೊಳಗಾಗಿ ಸರ್ಕಾರಕ್ಕೆ ವರದಿ ಮಾಡಬೇಕು.ಹಾಗೆ ವರದಿ ಮಾಡದಿದ್ದಲ್ಲಿ, ಕರ್ತವ್ಯಹೀನನಾದ ಪ್ರತಿಯೊಬ್ಬ ಕಂಪೆನಿಯ ಅಧಿಕಾರಿಯು ೫೦೦ ರೂಪಾಯಿಗಳ ಮಿತಿಯ ದಂಡವನ್ನು ತೆರಬೇಕಾಗಬಹುದು.೫.ನೇಮಿತವಾದ ಲೆಕ್ಕಪರಿಶೋಧಕನನ್ನು ಆತನ ನಿಯಮಿತ ಕಾಲಾವಧಿಯ ಮಧ್ಯಕಾಲದಲ್ಲಿ ತೆಗೆದುಹಾಕಬೇಕಾದರೆ,ಅದು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಬೇಕು.ಇದಕ್ಕೂ ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಮೊದಲು ಪಡೆಯಬೇಕು.೬.ವರ್ಷದ ಮಧ್ಯೆ ಲೆಕ್ಕಪರಿಶೋಧಕನನ್ನು ಸ್ಥಳವು ಖಾಲಿಯಾದರೆ,ಆಗ ಆ ಸ್ಥಳವನ್ನು ಕಾಯನಿರ್ವಾಹಕ ಸಮಿತಿಯವರು ಭರ್ತಿಮಾಡಬಹುದು.

೨೨೩ನೆಯ ಸೆಕ್ಷನ್ ಕಂಪೆನಿಯ ಲೆಕ್ಕಪರಿಶೋಧಕನಿಗಿರಬೇಕಾದ ಅರ್ಹತೆ ಮತ್ತು ಅನರ್ಹತೆಗಳ ವಿಷಯವನ್ನೂ ಸೂಚಿಸುತ್ತದೆ ಬದಲಾಯಿಸಿ

೧.೧೯೪೯ನೆಯ ಇಸವಿಯ ಚಾರ್ಟರಕೌಂಟೆಂಟ್ ರಕಾನೂನಿನಲ್ಲಿ ತಿಳಿಸಿರುವಂತೆ,ಲೆಕ್ಕಪರಿಶೋಧಕನು ಲೆಕ್ಕಶಾಸ್ತ್ರ ಪಾಂಡಿತ್ಯವನ್ನು ಪಡೆದಿರಬೇಕು.ಅಂದರೆ ಆತನು ಚಾರ್ಟರ್ ಅಕೌಂಟೆಂಟ್ ಆಗಿರಬೇಕು.ಇಂತಹವರ ಒಂದು ಪಾಲುದಾರಿಕೆ ಸಂಘವಿದ್ದರೆ ಅವರಲ್ಲಿ ಯಾರೂ ಬೇಕಾದರೂ ಸಂಘದ ಪರವಾಗಿ ಲೆಕ್ಕಪರಿಶೋಧನಾ ಕಾರ್ಯವನ್ನು ಕೈಗೊಳ್ಳುಬಹುದು.

೧೯೫೬ನೇ ಇಸವಿಯ ಕಂಪೆನಿಗಳ ಕಾನೂನಿನ ಬದಲಾಯಿಸಿ

೧೨ ರಿಂದ ೨೫ರ ವರೆಗಿನ ಸೆಕ್ಷನ್ನುಗಳು ಕಂಪೆನಿಯ ಮನವಿಯ ವಿಷಯದಲ್ಲಿ ಅನುಸರಿಸ ಬೇಕಾದ ಎಲ್ಲ ನೀತಿನಿಯಮಗಳನ್ನು ಮತ್ತು ವಿವರಗಳನ್ನು ಸೂಚಿಸುತ್ತವೆ.೧೩ನೇ ಸೆಕ್ಷನ್ ಪ್ರಕಾರ ಪ್ರತಿಯೊಂದು ಕಂಪೆನಿಯೂ ಪರಿಮಿತ ಎಂಬ ಅಂತ್ಯ ಪದದೊಡನೆ ತನ್ನ ಹೆಸರು ರಿಜಿಸ್ಟರ್ ಆದ ಕಚೇರಿಯಿರುವ ಸಂಸ್ಥಾನ,ತನ್ನ ಉದ್ದೇಶಗಳು,ಕಂಪೆನಿಯ ಸದಸ್ಯರ ಹೊಣೆಗಾರಿಕೆಯ ಮಿತಿ,ಪೇರು ಬಂಡವಾಳ ಮತ್ತು ಅದರ ವಿಭಾಗ ಪ್ರತಿಯೊಬ್ಬ ವರ್ಗಣಿದಾರನು ಒಂದು ಷೇರನ್ನಾದರೂ ಪಡೆದಿರುವನೆಂಬ ಪ್ರಮಾಣ ಮತ್ತು ಅವರ ಷೇರುಗಳ ಸಂಖ್ಯಾಯುತವಾದ ಸಹಿ ಇನೇ ಮೊದಲಾದ ವಿವರಗಳನ್ನು ಸೂಚಿಚಲೇಬೇಕು.೫೬ನೆಯ ಸೆಕ್ಷನ್ ಕಂಪೆನಿಯ ಮಾಹಿತಿಪತ್ರದಲ್ಲಿ ಕಾಣಿಸಬೇಕಾದ ವಿವರಗಳನ್ನು ಸೂಚಿಸುತ್ತದೆ.

೫೬ನೆಯ ಸೆಕ್ಷನ್ ಬದಲಾಯಿಸಿ

ಚಾಲ್ತಿಯಲ್ಲಿರುವ ಒಂದು ಕಂಪೆನಿಯು ಹೆಚ್ಚಿನ ಷೇರುಗಳನ್ನಾಗಲೀ,ಡಿಬೆಂಚರುಗಳನ್ನಾಗಲೀ ಪ್ರಕಟಿಸುವುದಾದರೆ ಆಗ ಲೆಕ್ಕಪರಿಶೋಧಕನ ವರದಿಯೊಂದು ಅತ್ಯಗತ್ಯ.ಅದನ್ನು ಪ್ರಕಟಸ ಬೇಕು.ಅಂತಹ ವರದಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಪಡೆದ ಲಾಭ ಆಮೂರು ವರ್ಷಗಳ ಲಾಭ ಹಿಸ್ಸೆಗಳ ಹಂಚಿಕೆಯ ವಿವರ,ಅವುಗಳನ್ನು ಯಾವ ಬಾಬತ್ತುಗಳಿಂದ ಕೊಡಲಾಯಿತು,ಆ ಮೂರು ವರ್ಷಗಳಲ್ಲಿ ಒಂದೆರೆಡು ವರ್ಷಗಳು ಲಾಭ ಹಿಸ್ಸೆಗಳನ್ನು ಹಂಚದಿದ್ದರೆ ಅದಕ್ಕೆ ಕಾರಣ ಮಾಹಿತಿಪತ್ರದ ದಿನಾಂಕಾದ ಮೂರು ತಿಂಗಳ ಹಿಂದಿನವರೆಗೆ ಲೆಕ್ಕಪತ್ರಗಳನ್ನು ಸರಿನೋಡಿದೆಯೆ ಇವೇ ಮೊದಲಾದ ವಿಷಯಗಳು ಅಡಕವಾಗಿರ ಬೇಕು.ಹಾಗೆಯೇ ಷೇರು ಅಥವಾ ಡಿಬೆಂಚರುಗಳನ್ನು ಪ್ರಕಟಿಸುವುದು ಅಥವಾ ವ್ಯಾಪಾರಸಂಸ್ಥೆಯನ್ನು ಕೊಳ್ಳುವಾಗ ಆ ವ್ಯಾಪಾರಸಂಸ್ಥೆಯ ಕಳೆದ ಮೂರು ವರ್ಷಗಳ ಲಾಭದ ವಿಷಯವನ್ನು ಯೋಗ್ಯತಾಧಿಕಾರವನ್ನು ಪಡೆದ ಒಬ್ಬ ಲೆಕ್ಕಪರಿಶೋಧಕನು ಸಮರ್ಥಿಸಬೆಕು ಆತನ ವರದಿಯನ್ನು ಮಾಹಿತಿಪತ್ರದಲ್ಲಿ ಸೂಚಿಸಬೇಕು.ಲೆಕ್ಕಪರಿಶೋಧಕನು ಕಂಪೆನಿಯು ವ್ಯಾಪಾರಸಂಸ್ಥೆಯನ್ನು ಮಾರಿದವ ರೊಡನೆ ಮಾಡಿಕೊಂಡಿರುವ ಕರಾರುಗಳನ್ನು ಹಾಗೂ ಆಡಳಿತ ಡೈರೆಕ್ಟರ್ ಅಥವಾ ಏಜಂಟರೊಡನೆ ಷೇರುಗಾಳ ಮಾರಾಟದ ಹೊಣೆ ಹೊತ್ತವರೊಡನೆ ಕಂಪನಿ ಪ್ರವರ್ತಕರೊಡನೆ ಮತ್ತು ಇತರರೊಡನೆ ಮಾಡಿಕೊಂಡಿರುವ ಎಲ್ಲ ಕರಾರುಗಳನ್ನೂ ಕೂಲಂಕಷವಾಗಿ ಪರೀಕ್ಷಿಸ ಬೇಕು.

ಷೇರು ಬಂಡವಾಳ ಬದಲಾಯಿಸಿ

೧೯೫೬ನೆಯ ಕಂಪೆನಿಗಳ ಕಾನೂನಿನ ಸೆಕ್ಷನ್ ೮೬ರ ಪ್ರಕಾರ ಒಂದು ಕಂಪೆನಿಯ ಷೇರು ಬಂಡವಾಳವು ಎರಡು ತೆರನಾಗಿ ಮಾತ್ರ ಇರಬಹುದು ಈ ಷೇರುಗಳ ಬಂಡವಾಳ ಮತ್ತು ಅವುಗಳ ವಿವರಗಳನ್ನು ತಿಳಿಯಬೇಕು.ಷೇರು ಬಂಡವಾಳದ ತನಿಖೆಯು ಲೆಕ್ಕಪರಿಶೋಧಕನ ಬಹುಮುಖ್ಯವಾದ ಕರ್ತವ್ಯ.ಬಾಕಿ ಇರುವ ಕರೆಯ ಹಣ:ಈ ವಿಷಯವನ್ ಷೇರುದಾರರ ದಾಖಲೆ ಪುಸ್ತಕದೊಡನೆ ಹೋಲಿಸಿನೋಡಿ ಆ ಹಣವನ್ನು ವಸೊಲಿ ಮಾಡಲು ಕಂಪೆನಿಯ ಪ್ರಯತ್ನಗಳೇನೆಂಬುದನ್ನು ತಿಳಿಯಬೇಕು.ಆಡಳಿತ ಏಜೆಂಟರು ಮತ್ತು ಡೈರೆಕ್ಟರುಗಳಿಂದ ಇಂತಹ ಕರೆಯ ಹಣವು ಬಾಕಿ ಇದ್ದರೆ ಆ ವಿಷಯವನ್ನು ಲೇಣೆ ದೇಣೆಗಳ ಪಟ್ಟಯಲ್ಲಿವಿವರವಾಗಿ ಸೂಚಿಸ ಬೇಕು.ಮುಂಗಡ ಪಡೆದ ಕರೆಯ ಹಣ: ಹೀಗೆ ಕರೆಯ ಹಣವನ್ನು ಮುಂಗಡ ಪಡೆಯಲು ಕಂಪೆನಿಗೆ ಅಧಿಕಾರವಿದೆ ಎಂಬುದನ್ನು ಲಿಖಿತ ಒಳ ಕಾನೂನುಗಳಲ್ಲಿ ಸೂಚಿಸಬೇಕು.ಅನೇಕ ಸಲ ಅಂತಹ ಹಣದ ಮೇಲೆ ಬಡ್ಡಿಯನ್ನು ಕೊಡಬೇಕಾಗುವುದು.ಮುಂಗಡ ಪಡೆದ ಕರೆಯ ಹಣವನ್ನು ಬಂಡವಾಳದ ಒಂದು ಭಾಗವೆಂದು ಪರಿಗಣಿಸಕೂಡದು.ಅಂತಹ ಹಣವನ್ನು ಪ್ರತ್ಯೇಕ ಖತಾಯಿತಿಯಾಗಿ ತೋರಿಸಬೇಕು. ಈ ಹಣದ ಮೇಲೆ ಲಾಭಹಿಸ್ಸೆಯನ್ನು ಕೊಡುವಂತಿಲ್ಲ.ಷೇರುಗಳಿಗೆ ಮುಟ್ಟುಗೋಲು ಹಾಕುವುದು:ಕರೆಯ ಹಣವು ಸಕಾಲಕ್ಕೆ ಪಾವತಿಯಾಗದೇ ಹೋದಲ್ಲಿ ಅಂತಹ ಷೇರುಗಳಿಗೆ ಮುಟ್ಟುಗೋಲು ಹಾಕುವ ಅಧಿಕಾರವನ್ನು ಡೈರೆಕ್ಟರುಗಳು ಪಡೆದಿರಿವರೆಂಬುದನ್ನು ಕಂಪೆನಿಯ ಲಿಖಿತ ಕಟ್ಟಳೆಗಳು ಸೂಚಿಸುತ್ತವೆ.ಇಂತಹ ಅಧಿಕಾರವು ಡೈರೆಕ್ಟರುಗಳಿಗೆ ಇದೆಯೆ ಎಂಬುದನ್ನು ಪರೀಕ್ಷಿಸಬೇಕು.ಡಿಬೆಂಚರುಗಳ ಉತ್ಪನ್ನ:ಡಿಬೆಂಚುರುಗಳ ಮೇಲಿನ ಹಣವನ್ನು ಷೇರುಗಳ ಮೇಲಿನ ಹಣವನ್ನು ಪಡೆಯುವ ರೀತಿಯಲೇ ಪಡೆಯುತ್ತಾರೆ.ಅಂದರೆ ಅರ್ಜಿಯ ಹಣ ಹಂಚಿಕೆಯ ಹಣ ಮತ್ತು ಕರೆ ಹಣಗಳ ಹೆಸರಿನಲ್ಲಿ ಕಂತುಗಳ ರೂಪದಲ್ಲಿ ಪಡೆಯುತ್ತಾರೆ.

ಕಂಪೆನಿಯು ಒಂದು ವ್ಯಾಪಾರ ಸಂಸ್ಥೆಯನ್ನು ಕೊಡಾಗ ಬದಲಾಯಿಸಿ

ವ್ಯಾಪಾರ ಸಂಸ್ಥೆಯನ್ನು ಮಾರಿದವರ ಲೆಕ್ಕಪತ್ರಗಳನ್ನು ವಿಶದವಾಗಿ ಪರಿ ಶೀಲಿಸಬೇಕು.ಆ ಸಂಸ್ಥೆಯಿಂದ ಪಡೆದ ಲೇಣೆ ದೇಣೆಗಳನ್ನು ತಕ್ಕ ರೀತಿಯಲ್ಲಿ ದಿನಂಪ್ರತಿ ಲೆಕ್ಕದ ವರ್ಗದಲ್ಲೂ ಕಾಣಿಸಬೇಕು.ಆಸಂಸ್ಥೆಯನ್ನು ಕೊಳ್ಳಲು ಕೊಟ್ಟ ಬೆಲೆ ಮತ್ತು ಈ ಬೆಲೆಯನ್ನು ಪಾವತಿಮಾಡಿದ ಬಗೆ ಇವನ್ನು ಪರೀಕ್ಷಿಸಬೇಕು.ಹಾಗೂ ಯೋಗ್ಯತಾ ಕಾಣಿಕೆಯನ್ನು ಕೊಟ್ಟಿದ್ದರೆ ಆ ಯೋಗ್ಯತಾ ಕಾಣಿಕೆಯ ವಿವರವನ್ನು ಕಂಪೆನಿಯ ಮಾಹಿತಿ ಪತ್ರದಲ್ಲಿ ಸೂಚಿಸಿರಬೇಕು.ಮೇಲಿನ ಎಲ್ಲ ಖರ್ಚುಗಳನ್ನು ಪ್ರಾರಂಭದಲ್ಲಿ ತಾತ್ಕಾಲಿಕಾವಾಗಿ ಲೇಣಿಯಾಗಿ ಲೇಣೆ ದೇಣೆಗಳ ಪಟ್ಟಿಯಲ್ಲಿ ತೋರಿಸಿ ಅನಂತರ ಮುಂಬರುವ ವರ್ಷಗಳಲ್ಲಿ ಇದನ್ನು ಕಡಿಮೆ ಮಾಡಬಹುದು ಅಥವಾ ತೊಡೆದುಹಾಕಬಹುದು.ಸ್ಟ್ಯಾಚುಟರಿ ವರದಿ ಮತ್ತು ಲೆಕ್ಕತನಿಖೆ ೧೯೫೬ನೆಯ ಇಸವಿಯ ಕಂಪೆನಿಗಳ ಕಾನೂನಿನ ೧೬೫ನೆಯ ಸೆಕ್ಷನ್ ಸ್ಟ್ಯಾಚುಟರಿ ಮೀಟಂಗ್ ಮತ್ತು ಸ್ಟ್ಯಾಚುಟರಿ ವರದಿಯ ವಿಷಯವನ್ನು ಪ್ರಸ್ತಾಪಿಸುತ್ತದೆ.ಎಲ್ಲ ಸಾರ್ವಜನಿಕ ಸಂಯುಕ್ತ ಬಂಡವಾಳ ಸಂಸ್ಥೆಗಳು ತಾವು ವ್ಯಾಪಾರವನ್ನು ಪ್ರಾರಂಭಿಸಿದ ಒಂದು ಮಾಸದನಂತರ ಆರು ಮಾಸಗಳೊಳಗಾಗಿ ಇಂತಹ ಸಭೆಯನ್ನು ಕರೆಯಬೇಕು.ಈ ಸಭೆಯಲ್ಲಿ ಜರುಗಲಿರುವ ವಿಷಯವನ್ನು ೨೧ ದಿವಸಗಳ ಮುಂಚಿತವಾಗಿ ತಿಳಿಸುವುದಲ್ಲದೆ ಸ್ಟ್ಯಾಚುಟರಿ ವರದಿಯನ್ನು ಪ್ರತಿಯೊಬ್ಬ ಸದಸ್ಯನಿಗೂ ಕಳುಹಿಸಬೇಕು.ಈ ವರದಿಯನ್ನು ಕನಿಷ್ಟಪಕ್ಷ ಇಬ್ಬರು ಡೈರೆಕ್ಟರುಗಳು ಸಮರ್ಥಿಸಿ ಸಹಿಹಾಕಿರಬೇಕು.ಆಡಳಿತ ಏಜಿಂಟರಿದ್ದಲ್ಲಿ ಆವರಲ್ಲಿ ಒಬ್ಬರಾದರೂ ಸಮರ್ಥನಾ ಸಹಿಯನ್ನು ಹಾಕಬೇಕು. [೧]

ಉಲ್ಲೇಖನಗಳು ಬದಲಾಯಿಸಿ