ಜೆ.ಕೆ.ಕೃಷ್ಣರೆಡ್ಡಿ ಅವರೊಬ್ಬ ಹೆಸರಾಂತ ರಾಜಕಾರಣಿ.ಶ್ರೀ ರೆಡ್ಡಿ ಕರ್ನಾಟಕದಲ್ಲಿ ಚಿಂತಾಮಣಿ ತಾಲ್ಲೂಕಿನ ವಿಧಾನಸಭಾ ಶಾಸಕರಾಗಿದ್ದಾರೆ.ಜೆ.ಕೆ.ಕೃಷ್ಣ ರೆಡ್ಡಿ ಅವರು ಜನತಾದಳ(ಸೆಕ್ಯುಲರ್) ಎಂಬ ರಾಜಕೀಯ ಪಕ್ಷದ ಸದಸ್ಯರಾಗಿ, ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.

ಅವರ ವೈಯಕ್ತಿಕ ವಿಚಾರವೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಅಂಜನಿ ಬಡಾವಣೆಯಲ್ಲಿ ಮನೆಯ ಸಂಖ್ಯೆ ಆರು ಸುನಂದಾ ನಿಲಯದಲ್ಲಿ ಸುಮಾರು ದಿನಗಳಿಂದ ವಾಸವಾಗಿದ್ದಾರೆ.ಅವರ ತಂದೆಯ ಹೆಸರು ಮುನಿವೆಂಕಟ ರೆಡ್ಡಿ. ಹೆಂಡತಿ ರೂಪ ರೆಡ್ಡಿ ಹಾಗು ಇಬ್ಬರು ಮಕ್ಕಳು ಕೀರ್ತಿ ರೆಡ್ಡಿ ಮತ್ತು ಐಶ್ವರ್ಯ ರೆಡ್ಡಿ. ಅವರು ವಾರ್ತೂರ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವರೆಗು ವಿಧ್ಯಾಭ್ಯಾಸ ಪಡೆದಿದ್ದಾರೆ. ಅವರ ಅಫಿಡವಿಟ್ ಪ್ರಕಾರ, ಅವರ ಉದ್ಯೋಗವು ಕೃಷಿ ಮತ್ತು ವ್ಯವಹಾರಕ್ಕೆ ಸಂಬಂಧಪಟ್ಟದ್ದು. ಅವರ ಹೆಂಡತಿ ಕೂಡ ಕೃಷಿ ಮತ್ತು ವ್ಯವಹಾರಕ್ಕೆ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಅವರ ವಯಸ್ಸು ೫೧.

ಜೆ ಕೆ ಕೃಷ್ಣ ರೆಡ್ಡಿ ಅವರು ಕರ್ನಾಟಕ ರಾಜ್ಯದ ೧೫ ನೇ ವಿಧಾನಸಭಾ ಚುನಾವಣೆಯಲ್ಲಿ,ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ೮೭೭೫೩ ವೋಟುಗಳನ್ನು ಪಡೆದು ವಿಜೇತರಾಗಿ ಆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಇವರೊಬ್ಬ ನಿಷ್ಠಾವಂತ ಜನನಾಯಕ.ಇವರ ಆಡಳಿತಾವಧಿಯಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಅನೇಕ ಕಾಮಗಾರಿ ಮತ್ತು ಜನಾನುಕೂಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಯಿತು.ಇದರಿಂದಾಗಿ ಈ ಕ್ಷೇತ್ರವು ಶ್ರೀಘ್ರಕಾಲದಲ್ಲಿ ಉನ್ನತ ಬೆಳವಣಿಗೆ ಕಂಡಿತು ಹಾಗೂ ಮಾದರಿ ಕ್ಷೇತ್ರವೆಂದು ಹೆಗ್ಗಳಿಕೆ ಪಡೆದಿದೆ. ಇವರು ಯಾವುದೇ ರೀತಿಯ ಭೇದಭಾವವನ್ನು ಮಾಡದೇ ಎಲ್ಲಾ ರೀತಿಯ ಜನಾಂಗಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುವಂತೆ ಮಾಡಿ ಸಮಾನತೆಯನ್ನು ಮೆರೆದಿದ್ದಾರೆ.

ಇನ್ನೂ ಚಿಂತಾಮಣಿ ಕ್ಷೇತ್ರದ ಬಗ್ಗೆ ಹೇಳಬೇಕೆಂದರೆ ಭಾರತದ ಕರ್ನಾಟಕ ರಾಜ್ಯದ ತಾಲೂಕು ಪ್ರಧಾನ ಕಚೇರಿಯಾಗಿದೆ. ಕರ್ನಾಟಕದ ಆಗ್ನೇಯ ಭಾಗದಲ್ಲಿರುವ ಡೆಕ್ಕನ್ ಪ್ರಸ್ಥಭೂಮಿಯಲ್ಲಿದೆ. ಚಿಂತಮಣಿ ಕೋಲಾರ ಜಿಲ್ಲೆಯ (ವಿಭಜಿಸುವ ಮೊದಲು) ಮತ್ತು ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ಯೋಜಿತ ಮತ್ತು ಅಭಿವೃದ್ಧಿ ಹೊಂದಿದ ಪಟ್ಟಣಗಳಲ್ಲಿ ಒಂದಾಗಿದೆ. ಚಿಂತಮಣಿ ಅದರ ಸಿಲ್ಕ್ ಮತ್ತು ಟೊಮೇಟೊ ಉತ್ಪಾದನೆ ಮತ್ತು ಕರ್ನಾಟಕದಲ್ಲಿನ ಅವರ ದೊಡ್ಡ ಮಾರುಕಟ್ಟೆಗಳಿಗೆ ಹೆಸರುವಾಸಿಯಾಗಿದೆ.ಅದೇ ರೀತಿ ಚಿಂತಾಮಣಿ ಕಡಲೆಕಾಯಿ ಬೀಜ ಕೂಡ ಹೆಸರುವಾಸಿಯಾಗಿದೆ.

ಚಿಂತಮಣಿಯು ಬೆಂಗಳೂರು ವಿಭಾಗ ಹಾಗು ಚಿಕ್ಕಬಳ್ಳಾಪುರ ಉಪ-ವಿಭಾಗದ ಅಡಿಯಲ್ಲಿ ಬರುತ್ತದೆ. ಈ ತಾಲ್ಲೂಕಿನಲ್ಲಿ ೬ ಹೋಬಳಿಗಳಿವೆ. ಚಿಂತಾಮಣಿ, ಅಂಬಾಜೀದುರ್ಗ, ಕೈವಾರ, ಮುರಗಮಲ್ಲ, ಮುಂಗನಹಳ್ಳಿ ಮತ್ತು ಚಿಲಕಾಲನರ್ಪು ಎಂದು ಕರೆಯುತ್ತಾರೆ. ೬ ಹೋಬಳಿಗಳನ್ನು ೩೩೬ ಗ್ರಾಮಗಳಾಗಿ ವಿಭಜಿಸಲಾಗಿದೆ. ಈ ರಾಜ್ಯ ವಿಧಾನಸಭಾ ಕ್ಷೇತ್ರ ಮತ್ತು ಕೋಲಾರ ಸಂಸತ್ / ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಪ್ರಸ್ತುತ ಈ ಕ್ಷೇತ್ರವು ವ್ಯವಸಾಯ ಹಾಗೂ ಕೈಗಾರಿಕಾ ವಿಭಾಗದಲ್ಲಿ ಪ್ರಗತಿ ಹೊಂದುತ್ತಿದೆ.