ಸದಸ್ಯ:Madhuri1820181/ನನ್ನ ಪ್ರಯೋಗಪುಟ

ಬಾಲ್ಯ ಮತ್ತು ಶಿಕ್ಷಣ: ಬದಲಾಯಿಸಿ

ಮಾಧುರಿ ಮುರಳಿ ಕಷ್ಯಪ್
ಚಿತ್ರ:Img
ರಾಷ್ಟ್ರೀಯತೆ ಭಾರತ

ಮಾಧುರಿ ಮುರಳಿ ಕಷ್ಯಪ್ ದಾವಣಗೆರೆಯಲ್ಲಿ ೨೧ ಸೆಪ್ಟೆಂಬರ್, ೧೯೯೯ರಲ್ಲಿ ಜನಿಸಿದರು. ಇವರ ತಂದೆ ಮುರಳಿ ಕೃಷ್ಣಮೂರ್ತಿ ಹಾಗು ತಾಯಿ ಅನುರಾಧ ಕಿಕ್ಕೇರಿ

ಸತ್ಯನಾರಾಯಣ. ಇವರ ಮಾತೃಭಾಷೆ ಕನ್ನದ. ಪ್ರಾಥಮಿಕ ಹಂತದಿಂತದ ಹತ್ತನೆಯ ತರಗತಿಯವರೆಗಿನ ಶಿಕ್ಷಣವನ್ನು ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೊಲ್(Delhi Public School Bangalore South)ನಲ್ಲಿ ಮಾಡಿದ್ದಾರೆ. ಪದವಿ ಪೂರ್ವ(Pre-University) ಹಂತದ ಶಿಕ್ಷಣವನ್ನು ಶ್ರೀ ಭಗವಾನ್ ಮಹವೀರ್ ಜೈನ್ ಕಾಲೇಜ್(Sri Bhagawan Mahaveer Jain College)ನಲ್ಲಿ ಮುಗಿಸಿದ್ದಾರೆ. ಪ್ರಸ್ತುತ ತಮ್ಮ ಪದವಿ ವ್ಯಾಸಂಗವನ್ನು ವಿಷ್ವವಿದ್ಯಾನಿಲಯ ಎಂದು ಪರಿಗಣಿಸಲಾದ ಕ್ರೈಸ್ಟ್ ವಿಷ್ವವಿದ್ಯಾನಿಲಯ(Christ Deemed to be University)ದಲ್ಲಿ ವ್ಯಾವಹಾರಿಕ ನಿರ್ವಹಣೆಯ ಸ್ನಾತಕ ಪದವಿ(Bachelor of Business Administration)ಯ ಎರಡನೆ ದ್ವೈವಾರ್ಷಿಕ(second semester)ವನ್ನು ಮಾಡುತಿದ್ದಾರೆ.

ಶಾಸ್ತ್ರೀಯ ಸಂಗೀತ: ಬದಲಾಯಿಸಿ

ಶಿಕ್ಷಣವೇ ಅಲ್ಲದೆ ಮಾಧುರಿ ಅವರು ಸಂಗೀತದಲ್ಲೂ ಆಸಕ್ತಿ ಹೊಂದಿರುವರು. ಇವರು ತಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತ ಆಭ್ಯಾಸವನ್ನು ಐದನೇ ವಯಸ್ಸಿಗೇ ಪ್ರಾರಂಭಿಸಿದರು. ಇವರ ಮೊದಲ ಗುರು ವಿದುಷಿ ರೇಖರವರು. ಮುಂದೆ, ಇವರು ತಮ್ಮ ಸಂಗೀತ ಅಭ್ಯಾಸವನ್ನು ಕರ್ನಾಟಕ ಕಲಾಶ್ರೀ, ಲಯ-ಕಲಾ ಪ್ರತಿಭಾಮಣಿ ವಿದ್ವಾನ್ ಶ್ರೀ ತಿರುಮಲೆ ಶ್ರೀನಿವಾಸ್ ರವರ ಬಳಿ ಮುಂದುವರೆಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಜೂನಿಯರ್ ಹಾಗು ಸೀನಿಯರ್ ಹಂತದ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮುಂತಾದ ಕಲಿಕೆಗಳು: ಬದಲಾಯಿಸಿ

ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆಯ ಸಂಗೀತ ನಾಟಕ ಅಕಾಡಮಿಯವರು ಕೊಡುವ ವಿದ್ಯಾರ್ಥಿ ವೇತನವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನಕ್ಕಾಗಿ ಪಡೆದಿರುತ್ತಾರೆ. ಜೊತೆಗೆ, ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಎಚ್. ಎಸ್. ವೇಣುಹಗೋಪಾಲ್ ರವರ ಬಳಿ ವೇಣುವಾದನವನ್ನು ಅಭ್ಯಾಸ ಮಾಡುತ್ತಿರುವರು. ಗೋಕುಲಂ ಕಲಾಶಾಲೆಯು ವಾರ್ಷಿಕವಾಗಿ ನಡೆಸುವ 'ಕಲಾರ್ಣವ' ಎಂಬ ಕಲಾ ಉತ್ಸವದಲ್ಲಿ ಐದು ವರ್ಷಗಳಿಂದ ಭಾಗವಹಿಸುತ್ತಿರುವರು. ಇದಲ್ಲದೆ, ಅನೇಕ ಶಾಲಾ-ಕಾಲೇಜುಗಳು ನಡೆಸುವ ವಿವಿಧ ಸ್ಪರ್ಧೆಗಳಲ್ಲಿ ಹಾಗು ಸಾಂಸ್ಕೃತಿಕ ಉತ್ಸವಗಳ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುವರು.

ಇದರ ಜೊತೆಗೆ ಪಾಶ್ಚಾತ್ಯ ಸಂಗೀತ ಕಡೆಗೂ ಒಲವು ಬೆಳೆಸಿಕೊಂಡಿರುವ ಇವರು ಬ್ರೆಜಿಲ್ ದೇಶದ ಕಲಾವಿದರಾದ ಬ್ರೂನೊ ಟೊನೆಲಿ ಎಂಬುವರ ಬಳಿ ಗಿಟಾರ್ ಅಭ್ಯಾಸ ಮಾಡಿದ್ದಾರೆ ಹಾಗು ಯೂಕಲೇಲಿ ಎನ್ನುವ ವಾದ್ಯವನ್ನು ಸ್ವತಃ ಕಲಿತು ನುದಿಸಿಕೊಂಡು ಆಂಗ್ಲ ಭಾಷೆಯ ಗೀತೆಗಳನ್ನು ಹಾಡಿ ಯೂಟ್ಯೂಬ್(YouTube)ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಬಹಳ ಮೆಚ್ಚುಗೆಯು ಜನರಿಂದ ಸಿಗುತ್ತಿದೆ.