ಬೇಡರ ವೇಷ ಬದಲಾಯಿಸಿ

ಬೇಡರ ವೇಷ ಆಚರಣೆಗೆ ಸುಮಾರು ೩೦೦ ವರ್ಷಗಳ ಇತಿಹಾಸವಿದೆ.

ಇತಿಹಾಸ ಬದಲಾಯಿಸಿ

ವಿಜಯನಗರ ಅರಸಆಡಳಿತದ ನಂತರ ಆರಂಭವಾಗಿದ್ದು, ಸೋಂದಾ ರಾಜಆಡಳಿತ. ಅಂದು ಕಲ್ಯಾಣ ಮಂಟಪವಾಗಿದ್ದ ಸೋಂದಾದ ಮೇಲೆ ಮುಸ್ಲಿಂರ ದಾಳಿ ನಡೆಯಬಾರದೆಂದು ಬೇಡ ಜನಾಂಗಮಲ್ಲೇಶಿ ಎಂಬ ಯುವ ವೀರಾಧಿವೀರನನ್ನು ರಕ್ಷಣೆಗೆ ನೇಮಿಸುತ್ತಾರೆ. ಮೊದಲು ಸರಿಯಾಗಿ ಕರ್ತವ್ಯ ನಿರ್ವಹಿಸಿದ ಮಲ್ಲೇಶಿ, ನಂತರ ದುರಾಡಳಿತ ಆರಂಭಿಸಿದ. ರುದ್ರಾಂಬಿಕಾ ಎಂಬ ಸುಂದರಿಯನ್ನು ಲಗ್ನವಾಗಬೇಕೆಂದು ಕೊಂಡಿರುತ್ತಾನೆ. ಮಲ್ಲೇಶಿಗೆ ಪಾಠ ಕಲಿಸಲೆಂದು ತನ್ನ ಜೀವನವನ್ನೆ ತ್ಯಾಗ ಮಾಡಿ, ರುದ್ರಾಂಬಿಕಾ ಮಲ್ಲೇಶಿಯನ್ನು ಲಗ್ನವಾಗಲು ಒಪ್ಪುತ್ತಾಳೆ. ಹೋಳಿ ರಾತ್ರಿಯಂದು ಬೇಡವೇಷಧಾರಿಯಾಗಿ ಕುಣಿಯುತ್ತ ಗಂಡನ ಕಣ್ಣಿಗೆ ಆಸಿಡ್ ಸುರಿದು ಹೆಂಡತಿಯೇ ಹಿಡಿದು ಕೊಡುತ್ತಾಳೆ. ಆಕೆಯನ್ನೇ ಕೊಲ್ಲಲು ಬಂದ ಗಂಡನನ್ನು ಜನರು ಹಿಡಿದು ಸಜೀವವಾಗಿ ಸುಟ್ಟು ಬಿಡುತ್ತಾರೆ. ಹೆಂಡತಿ ರುದ್ರಾಂಬಿಕೆ ಗಂಡನ ಚಿತೆಯೇರಿ ಪ್ರಾಣ ತ್ಯಾಗ ಮಾಡುತ್ತಾಳೆ. ಆಕೆಯ ತ್ಯಾಗದ ಸಂಕೇತವಾಗಿ ಬೇಡರ ವೇಷ ಹಾಕಿ ಕುಣಿಯುವ ಸಂಪ್ರದಾಯ ತಲ ತಲಾಂತರದಿಂದ ರೂಢಿಯಲ್ಲಿದೆ.

ಬೇಡರ ವೇಷ ಹಾಕುವ ನಿಯಮ ಬದಲಾಯಿಸಿ

ಬೇಡರ ವೇಷ ಹಾಕಿಕೊಳ್ಳುವವರಿಗೆ ತಿಂಗಳುಗಳ ಕಾಲ ಕುಣಿತದ ತಾಲೀಮು ನಡೆಯುತ್ತದೆ. ಕುಣಿತದ ದಿನ ನವಿಲು ಗರಿಬಣ್ಣ, ಗೆಜ್ಜೆ , ಮೀಸೆ, ಹತ್ತಿ, ಕೆಂಪುಬಟ್ಟೆ, ಕತ್ತಿ, ಡಾಲು, ಕೈಗೆ ನಿಂಬೆ ಹಣ್ಣು ಕಟ್ಟಿಕೊಂಡು ಬರುತ್ತಾರೆ. ನಗರಬೀದಿಗಳಲ್ಲಿ ಢಣ್ ಢಣಕು ಶಬ್ಧ ಕೇಳುತ್ತದೆ. ಪ್ರೇಕ್ಷಕರ ಮಧ್ಯೆ ಕತ್ತಿಬೀಸುತ್ತಾ ವೇಷ ತೊಟ್ಟಿಕೊಂಡ ವ್ಯಕ್ತಿಯೊರ್ವ ವಿಶಿಷ್ಟವಾಗಿ ಕುಣಿಯುತ್ತಿದ್ದರೆ, ಹಿಂಬದಿಯಿಂದ ಇಬ್ಬರು ಹಿಡಿದುಕೊಂಡು ನಿಯಂತ್ರಣ ಮಾಡುತ್ತಾರೆ. ತಮಟೆ ಬಡಿಯುತ್ತ, ಕುಣಿಯುತ್ತಿದ್ದ ವ್ಯಕ್ತಿಗೆ ಹುರುಪು ನೀಡುತ್ತಾನೆ. ಬೇಡರ ವೇಷಧಾರಿಯಾಗಿ ಕುಣಿಯೋದನ್ನ ನಗರದ ಜನ ರಾತ್ರಿಯಿಡೀ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಸಂಜೆಯಿಂದಲೇ ಬಣ್ಣ ಬಳಿದುಕೊಂಡು ನವಿಲು ಗರಿ ಸಿಕ್ಕಿಸಿಕೊಂಡು ಕತ್ತಿಹಿಡಿದು ರಾತ್ರಿ ೯ರ ಬಳಿಕ ಊರಿನ ಬೀದಿಗಳಲ್ಲಿ ಬೇಡರ ವೇಷ ಧಾರಿಯಾಗಿ ನಗರದಾದ್ಯಂತ ಕುಣಿಯುತ್ತಾನೆ. ತಡರಾತ್ರಿ ೧೨ ಗಂಟೆ ಮಾತ್ರವಲ್ಲ ಮುಂಜಾನೆಯ ತನಕವೂ ನಗರದ ಪ್ರಮುಖ ಬೀದಿಗಳಲ್ಲಿ ಬೇಡರ ವೇಷ ಗಮನ ಸೆಳೆಯುತ್ತದೆ. ವಿವಿಧ ಹರಕೆ ಹೊತ್ತುಕೊಂಡು ಈಡೇರಿದವರು ಹಗಲು ಹುಲಿ ವೇಷ ಹಾಕುತ್ತಾರೆ.

ಉಲ್ಲೇಖ ಬದಲಾಯಿಸಿ

  1. ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.