ನಟ್ (nut) ಒಂದು ಥ್ರೆಡೆಡ್ ರಂಧ್ರವಿರುವ ಭದ್ರಪಡಿಸುವ ಸಾಧನ(fastener). ನಟ್ ಗಳು ಹೆಚ್ಚಾಗಿ ಯಾವಾಗಲೂ ಬೋಲ್ಟ್(bolt) ಜೊತೆಗಿನ ಮಿಲನದಿಂದ ಬಹಳ ಭಾಗಗಳನ್ನು ಜೋಡಣೆಗೆ ಬಳಸುತ್ತಾರೆ. ಎರಡು ಭಾಗಗಳನ್ನು ಅವುಗಳ ಘ‍ರ್ಷಣೆಯ, ಬೋಲ್ಟಿನ ಸ್ವಲ್ಪ ಏರಿಕೆ, ಮತ್ತು ಭಾಗಗಳ ಒತ್ತಡದ ಸಂಯೋಜನೆಯೊಂದಿಗೆ ಒಟ್ಟಿಗೆ ಇಡಲ್ಪಡುತ್ತವೆ.ಕಂಪಿಸುವ ಮತ್ತು ತಿರುಗುವ ಉಪಯೋಗಗಳಲ್ಲಿ ನಟ್ ಗಳು ಕಳಚಿಕೊಳ್ಳಬಹುದು. ಇಂತಹ ಸಂಧರ್ಬದಲ್ಲಿ ಬಗೆಬಗೆಯ ಬಂಧಿಸುವ ಯಾಂತ್ರಿಕರಚನೆಗಳನ್ನು ಬಳಸಬಹುದು: ಅಂಟು, ಸುರಕ್ಷತಾ ಪಿನ್ಗಳು, ಲಾಕ್ ತಂತಿ(lockwire), ನೈಲಾನ್ ಒಳಪಡಿಸುವಿಕೆ, ಅಂಡಾಕಾರದ ತ್ರಡ್ಗಳು. ಬೋಲ್ಟ್ ನ ತಲೆಯಲ್ಲಿ ಇರುವಂತೆಯೇ ಷಡ್ಭುಜಾಕೃತಿಯ(hexagonal) ಆಕಾರವು ಅತೀ ಸಾಮಾನ್ಯ. ಬೋಲ್ಟ್ ನ ೬ ಬದಿಗಳು ಉಪಕರಣಗಳ ಸಮೀಪಿಸುವಿಕೆಗೆ ಉತ್ತಮವಾದ ಸೊಕ್ಷ್ಮತೆಯನ್ನು ಒದಗಿಸುತ್ತವೆ. ಆದರೆ ಹೆಚ್ಚು ಮೂಲೆಗಳು ದುಂಡಾಗಿಸುವಿಕೆಯಲ್ಲಿ ದುರ್ಬಲವಾಗಿರುತ್ತವೆ. ಮುಂದಿನ ಬದಿಯನ್ನು ಪಡೆಯಲು ಇದು ಬರೀ ೧/೬ ಭಾಗದ ಆರ್ವತನೆಯನ್ನು ತೆಗೆದುಕೊಳ್ಳುತ್ತದೆ ಮತ್ತು ಹಿಡಿತವು ಸೂಕ್ತವಾಗಿರುತ್ತದೆ. ಅದಾಗ್ಯೂ ೬ಕ್ಕಿಂತ ಹೆಚ್ಚು ಬದಿಗಳಿರುವ ಬಹುಭುಜಾಕೃತಿಗಳು ಅಗತ್ಯಕ್ಕೆ ತಕ್ಕ ಆವರ್ತನವನ್ನು ನೀಡುವುದಿಲ್ಲ ಮತ್ತು ೬ಕ್ಕಿಂತ ಕಡಿಮೆ ಬದಿಗಳಿರುವ ಬಹುಭುಜಾಕೃತಿಗಳು ಒಂದು ಸಂಪೂರ್ಣ ಸುತ್ತು ಸುತ್ತಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಬೆರಳಿನ ಹೊಂದಾಣಿಕೆಗೆ ರೆಕ್ಕೆ ನಟ್ಗಳು ಮತ್ತು ಸಿಗದಿರುವ ಜಾಗಗಳಿಗೆ ಬಂಧಿತ ನಟ್ಗಳು ಮುಂತಾದ ಇತರೆ ವಿಶೇಷ ಆಕೃತಿಗಳು ಕೆಲವು ಅಗತ್ಯಗಳಿಗಾಗಿಯೇ ಇವೆ.

ನಟ್ಗಳು ಸಂಬಂದಪಟ್ಟ ಬೋಲ್ಟಗಳಿಗೆ ಜೊತೆಯಾಗುವಂತೆ ಬಲದರಗಳೊಂದಿಗೆ ಶ್ರೇಯಾಂಕಿತವಾಗಿರುತ್ತವೆ. ಉದಾಹರಣೆಗೆ, ಒಂದು ಐಎಸ್ಒ ಪ್ರಾಪರ್ಟಿ ವರ್ಗ ೧೦ರ ನಟ್ ಒಂದು ಐಎಸ್ಒ ಪ್ರಾಪರ್ಟಿ ವರ್ಗ ೧೦.೯ರ ಬೋಲ್ಟ್ ಪ್ರೂಫ್ ಬಲ ಹೊರೆ ಕಳಚಹಿಕೊಳ್ಳದಂತೆ ಬೆಂಬಲಿಸುವುದು. ಇದೇ ರೀತಿ ಪ್ರೂಫ್ ಬಲದ(proof strength) ಒಂದು ಎಸ್ಎಇ ವರ್ಗ ೫ ಬೋಲ್ಟ್ ನ್ನು ಒಂದು ಎಸ್ಎಇ ೫ ನಟ್ ಬೆಂಬಲಿಸುವುದು.

ಬಹಳ ತಾಂತ್ರಿಕ ಮಾನದಂಡಗಳುಳ್ಳ(technical standards) ನಿರ್ದಿಷ್ಟ ವಿನ್ಯಾಸಗಳು(engineered) ಮನೆ ಬಳಕೆಯ ವಸ್ತು(household hardware) ಆವ್ರುತ್ತಿಗಳಿಂದ ವಿಶೇಷವಾಗಿರುವ ಕೈಗಾರಿಕೆಗಳ ವರೆಗೆ ಬಹಳ ವಿಧವಾದ ನಟ್ ಗಳು ಇವೆ.

ವಿಧಗಳು ಬದಲಾಯಿಸಿ

೧. ಆಕ್ರಾನ್ ನಟ್ (Acorn nut) ೨. ಬ್ಯಾರೆಲ್ ನಟ್ (Barrel nut) ೩. ಕೇಜ್ ನಟ್ (Cage nut) ೪. ಕ್ಲಿಪ್ ಆನ್ ನಟ್ (Clip-on nut) ೫. ಕಪ್ಲಿಂಗ್ ನಟ್ (Coupling nut) ೬. ಕ್ರಾಸ್ ಡೊವೆಲ್ ನಟ್ (Cross dowel) ೭. ಫಾಂಜ್ ನಟ್ (Flange nut ) ೮. ಇನ್ಸರ್ಟ್ ನಟ್ (Insert nut) ೯.ಸೆಕ್ಸ್ ಬೋಲ್ಟ್ (Sex bolt) ೧೦. ಸ್ಪ್ಲಿಟ್ ನಟ್ (Split nut) ೧೧. ಸ್ಲೀವ್ ನಟ್ (Sleeve nut) ೧೨. ಸ್ಕ್ವೇರ್ ನಟ್ (Square nut) ೧೩. ಸ್ಡ್ಯಾಕ್ಡ್ ನಟ್ (Staked) ೧೪. ಸ್ವೇಗ್ ನಟ್ (Swage nut) ೧೫. ಟೀ-ನಟ್ (T-nut) ೧೬. ಟೀ-ಸ್ಲಾಟ್ ನಟ್ (T-slot nut) ೧೭. ವೆಲ್ಡ್ ನಟ್ (Weld nut) ೧೮. ವೆಲ್ ನಟ್ (Well nut) ೧೯. ವಿಂಗ್ ನಟ್ (Wing nut)

ಲಾಕ್ ನಟ್ (Locknut) ಬದಲಾಯಿಸಿ

೧. ಕ್ಯಾಸ್ಟೆಲೇಟೆಡ್ ನಟ್ (Castellated nut) ೨ ಡಿಸ್ಟೋರ್ಟೆಡ್ ಥ್ರೆಡ್ ಲಾಕ್ ನಟ್ (Distorted thread locknut) ಅ. ಸೆಂಟರ್ ಲಾಕ್ ನಟ್ (Centerlock nut) ಆ. ಎಲಿಪ್ಟಿಕಲ್ ಆಫ್ಸೆಟ್ ಲಾಕ್ ನಟ್ (Elliptical offset locknut) ಇ. ಟಾಪ್ ಲಾಕ್ ನಟ್ (Toplock nut) ೩. ಇಂಟರ್ಫೇಸಿಂಗ್ ಥ್ರೆಡ್ ನಟ್ (Interfering thread nut) ಅ. ಟೇಪರ್ಡ್ ಥ್ರೆಡ್ ನಟ್ (Tapered thread nut) ಆ. ಜಾಮ್ ನಟ್ (Jam nut) ಇ. ಜೆಟ್ ನಟ್ (Jet nut) ಈ. ಕೆಪ್ಸ್ ನಟ್ (Keps nut) ಉ. ನೈಲಾಕ್ ಪ್ಲೇಟ್ ನಟ್ (Nyloc plate nut) ಊ. ಪಾಲಿಮರ್ ಇನ್ಸರ್ಟ್ ನಟ್ (Polymer insert nut) ಋ. ಸೆರ್ರೇಟೆಡ್ ಫೇಸ್ ನಟ್ (Serrated face nut) ಎ. ಸೆರ್ರೇಟೆಡ್ ಫ್ಲಾಂಜ್ (Serrated flange nut) ಏ ಸ್ಪೀಡ್ ನಟ್ (Speed nut) ಐ. ಸ್ಪ್ಲಿಟ್ ಬೀಮ್ ನಟ್ (Split beam nut)

ಸ್ವಯಂ ಬಿಡಿಬಿಡಿಯಾಗುವುದನ್ನು ತಡೆಯಲು ಎರಡು ನಟ್ ಗಳ ಉಪಯೋಗ: ಬದಲಾಯಿಸಿ

ಸಾಮಾನ್ಯ ಉಪಯೋಗದಲ್ಲಿ ಒಂದು ನಟ್ ಮತ್ತು ಬೋಲ್ಟ್ ನ ಜಂಟಿ ಒಟ್ಟಿಗೆ ಇರುತ್ತದೆ ಏಕೆಂದರೆ, ಬೋಲ್ಟ್ ಪೂರ್ವ ಭಾರ ಎಂದು ಕರೆಯುವ ನಿರಂತರ ಕರ್ಷಕ ಒತ್ತಡದ(tensile stress) ಅಡಿಯಲ್ಲಿರುತ್ತದೆ. ಪೂರ್ವ ಭಾರವು ನಟ್ ನ ಥ್ರೆಡ್ ಗಳನ್ನು ಬೋಲ್ಟ್ ನ ಥ್ರೆಡ್ ಗಳಿಗೆ ವಿರುದ್ಧವಾಗಿ,ನಟ್ ನ ಮುಖವನ್ನು ಬೇರಿಂಗ್ ನ ಮೆಲ್ಮೈ ಗೆ ವಿರುದ್ಧವಾಗಿ ನಿರಂತರ ಶಕ್ತಿಯ(force) ಜೊತೆಗೆ ಎಳೆಯುತ್ತದೆ. ಹಾಗಾಗಿ ನಟ್ ಈ ಮೆಲ್ಮೈಗಳ ನಡುವಿನ ಘರ್ಷಣೆಯಿಂದ(friction) ಹೊರಬರದೆ ತಿರುಗಲು ಸಾದ್ಯವಿಲ್ಲ. ಒಂದು ವೇಳೆ ಜಂಟಿಯು ಕಂಪನಕ್ಕೆ(vibration) ಒಳಪಟ್ಟರೆ ಚಲನೆಯ ಪ್ರತೀ ಆವರ್ತನದಲ್ಲೂ ಪೂರ್ವಭಾರದಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತದೆ. ಕಂಪನದ ಆವರ್ತನದ ಸಂದರ್ಭದಲ್ಲಿ ನಟ್ ನ ಬೋಲ್ಟ್ ಮತ್ತು ಬೇರಿಂಗ್ ಮೇಲ್ಮೈ ಜೊತೆಗಿನ ಸಂಪರ್ಕವನ್ನು ದೃಧಪಡಿಸಲು ಕನಿಷ್ಠ ಪೂರ್ವ ಭಾರವು ಸಾಕಾದೇ ಹೋದರೆ, ಆಗ ನಟ್ ಸಡಿಲಗೊಳ್ಳುತ್ತದೆ. ಈ ಸಮಸ್ಯೆಯನ್ನು ತಡೆಯಲು ವಿಶೇಷ ಲಾಕಿಂಗ್ ನಟ್ಗಳು(locking nuts) ಅಸ್ತಿತ್ವದಲ್ಲಿದ್ದಿವೆ, ಆದರೆ ಕೆಲವೊಮ್ಮೆ ಎರಡನೇ ನಟ್ ಸೇರಿಸಬೇಕಾಗುತ್ತದೆ. ಈ ತಂತ್ರದ ಮೇಲೆ ಭರವಸೆ ಇಡಲು ಪ್ರತಿಯೊಂದು ನಟ್ ಅನ್ನು ಸರಿಯಾದ ಭ್ರಾಮಕಶಕ್ತಿಗೆ(torque) ಬಿಗಿಮಾಡಬೇಕು. ಒಳಗಿನ ನಟ್ ಅನ್ನು ಹೊರಗಿನ ನಟ್ಟಿನ ಭ್ರಾಮಕ ಶಕ್ತಿಯ ಅರ್ಧ ತ್ರೈಮಾಸಿಕದಷ್ಟು ಬಿಗಿಗೊಳಿಸಬೇಕು. ಹೊರಗಿನ ನಟ್ ಪೂರ್ತಿ ಭ್ರಮಣ ಶಕ್ತಿಯನ್ನು ಉಪಯೋಗಿಸಿಕೊಂಡು ಬಿಗಿಯಾಗುತ್ತಿರುವಾಗ ಇದನ್ನು ಒಂದು ವ್ರೆಂಚ್(wrench) ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳಬೇಕು. ಈ ವ್ಯವಸ್ಥೆಯು ಎರಡೂ ನಟ್ ಗಳ ನಡುವೆ ಇರುವ ಬೋಲ್ಟಿನ ಚಿಕ್ಕ ಭಾಗದಲ್ಲಿ ಕರ್ಷಕ ಒತ್ತಡವನ್ನು ರಚಿಸಿ ಅವುಗಳನ್ನು ಪರಸ್ಪರ ನೂಕುವಂತೆ ಮಾಡುತ್ತದೆ. ಒಂದುವೇಳೆ ಮುಖ್ಯ ಜಂಟಿಯು ಕಂಪಿಸಿದರೂ ನಟ್ಗಳ ಥ್ರೆಡ್ ಮತ್ತು ಬೋಲ್ಟ್ ನ ಥ್ರೆಡ್ ನಡುವಿನ ಸಂಪರ್ಕವನ್ನು ಸ್ಥಿತಿಗತಿಯಲ್ಲಿ ಇಡುವುದರ ಮೂಲಕ ನಟ್ ಗಳ ನಡುವಿನ ಒತ್ತಡ ನಿರಂತರವಾಗಿರುತ್ತದೆ ಮತ್ತು ಸ್ವಯಂ ಬಿಡಿಬಿಡಿಯಾಗುವುದನ್ನು ತಡೆಯುತ್ತದೆ. ನಟ್ ನ ಜೋಡಣೆ ಸರಿಯಾಗಿದ್ದಾಗ, ಹೊರಗಿನ ನಟ್ ಜಂಟಿಯ ಪೂರ್ಣ ಒತ್ತಡವನ್ನು ಸಹಿಸಿಕೊಳ್ಳುತ್ತದೆ. ಒಳಗಿನ ನಟ್ ನ ಕಾರ್ಯವು ಕೇವಲ ಒಂದು ಸಣ್ಣ ಹೆಚ್ಚುವರಿ ಶಕ್ತಿಯನ್ನು ಒದಗಿಸುವುದಾಗಿದೆ ಮತ್ತು ಇದು ಬಲವಾಗಿರುವ ಅಗತ್ಯವಿಲ್ಲ. ಹಾಗಾಗಿ ತೆಳುವಾದ ನಟ್ ಕೂಡಾ ಬಳಸಬಹುದು.(ಜಾಮ್ ನಟ್(jam nut) ಎಂದು ಕರೆಯಲ್ಪಡುತ್ತದೆ.)

ಇವನ್ನೂ ನೋಡಿ ಬದಲಾಯಿಸಿ

  * ಬೋಲ್ಟೆಡ್ ಜಂಟಿ (Bolted joint)
  * ಪೈಪ್ ಕ್ಯಾಪ್ (Pipe cap)
  * ಸ್ಕ್ರೂ ಥ್ರೆಡ್ (Screw thread)
  * ಟ್ಯಾಪ್ Tap
  * ಟ್ಯಾಪ್ಡ್ ಹೋಲ್ (Tapped hole)
  * ಥ್ರೆಡೆಡ್ ಇನ್ಸರ್ಟ್ (Threaded insert)
  * ವಾಷರ್ (Washer)