A passport size photo of praveena.

ಪರಿಚಯ: ಬದಲಾಯಿಸಿ

ನನ್ನ ಹೆಸರು ಪ್ರವೀಣ. ನಾನು ೨೬ ಡಿಸೆಂಬರ್ ೨೦೦೦ರಂದು ಜನಿಸಿದ್ದೆ. ನನಗೆ ಹದಿನೆಂಟು ವಯಸ್ಸಾಗಿದೆ. ನಾನು ತಮಿಳುನಾಡಿನಲ್ಲಿ ತೂತುಕುಡಿ ಎನ್ನುವ ಸ್ಥಳದಲ್ಲಿ ಹುಟ್ಟಿದ್ದೇನೆ. ನಾನು ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ನನಗೆ ಗಣಿತವೆಂದರೆ ತುಂಬ ಇಷ್ಟ. ನಾನು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲ. ನಾನು ಹಾಡುಗಳನ್ನು ಕೇಳಲು ಇಷ್ಟಪಡುತ್ತೇನೆ. ನಾನು ಧೂಳಿನಿಂದ ಅಲರ್ಜಾಗಿದ್ದೇನೆ. ಇತ್ತೀಚೆಗೆ ನಾನು ಕಾಲೇಜಿನಲ್ಲಿ ಹೆಚ್ಚುವರಿ ಕೋರ್ಸ್ ಮೂಲಕ ಭರತನಾಟ್ಯದ ಮೂಲಗಳನ್ನು ಕಲಿತಿದ್ದೇನೆ. ನಾನು ಇತರರಿಗೆ ಸಹಾಯ ಮಾಡಲು ಇಷ್ಟಪಡುತ್ತೇನೆ. ನನ್ನ ಶಕ್ತಿ ನನ್ನ ಸಕಾರಾತ್ಮಕ ಚಿಂತನೆಯಾಗಿದೆ ಮತ್ತು ನನ್ನ ದೌರ್ಬಲ್ಯ ನನ್ನ ಹಂತದ ಭಯವಾಗಿದೆ. ನನ್ನ ಮಹತ್ವಾಕಾಂಕ್ಷೆಯು ಗಣಿತ ಶಿಕ್ಷಕಿಯಾಗುವುದು.

ಅಧ್ಯಯನಗಳು: ಬದಲಾಯಿಸಿ

ನನ್ನ ಮೊದಲ ಗುರು ನನ್ನ ತಾಯಿ. ನನ್ನ ಓದಿನ ಆಸಕ್ತಿ ಮನೆಯಲ್ಲೇ ಶುರುವಾಯಿತ್ತು. ನಂತರ ಸುರೇಖಾ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ಸೇರಿ ಹತ್ತನೆಯ ತರಗತಿಯನ್ನು ಬಹಳ ಯಶಸ್ವಿಯಾಗಿ ಮುಗಿಸಿದ್ದೆ.ನಾನು ಶಾಲೆಯಲ್ಲಿ ಗಣಿತವನ್ನು ಪ್ರೀತಿಸುತ್ತೇನೆ ಮತ್ತು ವಿಜ್ಞಾನವನ್ನು ದ್ವೇಷಿಸುತ್ತೇನೆ. ನನ್ನ ಹತ್ತನೆಯ ತರಗತಿಯಲ್ಲಿ ನಾನು ೯೬.೮ ಶೇಕಡವನ್ನು ಗಳಿಸಿದೆ. ತದನಂತರ ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದೆ. ನಾನು ಪಿಯುಸಿಯಲ್ಲಿ ವಿಜ್ಞಾನ ಕೋರ್ಸ್ ಅನ್ನು ಆಯ್ಕೆ ಮಾಡಿದ್ದೆ. ನಾನು ಪಿಯುಸಿಯಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿದ್ದೆ.ನಾನು ಪ್ರಥಮ ಪಿಯುಸಿಯಲ್ಲಿ ಕಡಿಮೆ ಅಂಕಗಳನ್ನು ಪಡೆಯುತ್ತಿದೆ. ಆದರೆ ದ್ವಿತೀಯ ಪಿಯುಸಿಯಲ್ಲಿ ಕಷ್ಟ ಪಟ್ಟು ಓದಿ, ನನ್ನ ಪೂರ್ಣ ಪ್ರಯತ್ನವನ್ನು ಹಾಕಿ ೯೪ ಶೇಕಡವನ್ನು ಗಳಿಸಿದೆ. ಈಗ ಕ್ರೈಷ್ಟ್ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಕೋರ್ಸ್ ಅನ್ನು ಆಯ್ಕೆ ಮಾಡಿದ್ದೆ. ಬಿಎಸ್ಸಿಯಲ್ಲಿ ಭೌತಶಾಸ್ತ್ರ,ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ಎಂಬ ಈ ಮೂರು ವಿಷಯವಿರುವ ಭಾಗವನ್ನು ಆಯ್ಕೆ ಮಾಡಿದ್ದೇನೆ. ಯಾಕೆಂದರೆ ನನಗೆ ಅರ್ಥ ಮಾಡಿಕೊಂಡು ಓದುವ ವಿಷಯಗಳೆಂದರೆ ಇಷ್ಟ.ನನಗೆ ಗಣಿತವೆಂದರೆ ತುಂಬ ಇಷ್ಟವಾದ ವಿಷಯ.

ಕುಟುಂಬ: ಬದಲಾಯಿಸಿ

ನನ್ನ ಪೋಷಕರ ಬಗ್ಗೆ ಪರಿಚಯಿಸಲು ನಾನು ಹೆಮ್ಮೆ ಪಡುತ್ತೇನೆ. ನನ್ನ ತಂದೆಯ ಹೆಸರು ಸೆಲ್ವರಾಜ್ ಮತ್ತು ಅವರು ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ಕನಿಸೆಲ್ವಿ ಮತ್ತು ಅವರು ಗೃಹಿಣಿಯಾಗಿದ್ದಾರೆ. ನನ್ನ ತಂದೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನನ್ನ ತಂದೆ ಯಾವಾಗಲೂ ತಮ್ಮ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡುತ್ತಾರೆ. ನನ್ನ ತಂದೆ ಮನೆಯಲ್ಲಿ ಎಲ್ಲರನ್ನು ಪ್ರೀತಿಸುತ್ತಾರೆ. ಅವರು ನಮ್ಮನ್ನು ಸಂತೋಷವಾಗಿ ಇಡುತ್ತಾರೆ. ನನ್ನ ತಾಯಿ ಹರ್ಷ ಚಿತ್ತತೆಯಿಂದು ಇರುವ ವ್ಯಕ್ತಿ. ನನ್ನ ತಾಯಿ ನನಗೆ ಶಿಸ್ತುಗಳನ್ನು ಕಲಿಸುತ್ತಾರೆ, ಆದ್ದರಿಂದ ನಾನು ಉತ್ತಮ ವ್ಯಕ್ತಿಯಾಗುತ್ತೇನೆ. ಅವರು ನಮಗೆ ರುಚಿಕರವಾದ ಆಹಾರವನ್ನು ಮಾಡುತ್ತಾರೆ. ನನಗೆ ಒಬ್ಬ ಕಿರಿಯ ಸಹೋದರನಿದ್ದಾನೆ. ಅವನ ಹೆಸರು ಪ್ರವೀಣ್ ಕುಮಾರ್. ಅವನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ.

ಹವ್ಯಾಸಗಳು: ಬದಲಾಯಿಸಿ

ನನಗೆ ಗಣಿತವೆಂದರೆ ಬಹಳ ಇಷ್ಟವಾದ ವಿಷಯ. ನಾನು ಚಿಕ್ಕವಯಸ್ಸಿನಿಂದ ಗಣಿತವನ್ನು ಚೆನ್ನಾಗಿ ಮಾಡುತ್ತೇನೆ. ನಾನು ಗಣಿತಶಾಸ್ತ್ರದಲ್ಲಿ ಸಮಸ್ಯೆಗಳನ್ನು ಮಾಡಲು ಇಷ್ಟಪಡುತ್ತೇನೆ. ಗಣಿತಶಾಸ್ತ್ರದಲ್ಲಿ ನನಗೆ ಎಲ್ಲವು ಸಾಧ್ಯ ಎಂದು ನಾನು ನಂಬುತ್ತೇನೆ. ಇದು ನನ್ನ ಜೀವನದಲ್ಲಿ ಕೂಡ ಸಮಸ್ಯೆ ಬಗೆಹರಿಸುವಲ್ಲಿ ನನ್ನ ವಿಶ್ವಾಸವನ್ನು ಬೆಳೆಸುತ್ತದೆ. ಜೀವನದಲ್ಲಿ ನನಗೆ ಒಂದು ದೊಡ್ಡ ಆಸೆ ಇದೆ, ಅದು ನನ್ನ ಗುರೀಯು ಕೂಡ ಹೌದು. ನನ್ನ ಗುರಿ ಭಾರತದ ಬಹುತೇಕ ಸ್ಥಳಗಳನ್ನು ಭೇಟಿ ಮಾಡುವುದು, ಆದರೆ ನನ್ನ ಗುರಿ ಸಾಧಿಸಬಹುದೇ ಎಂದು ನನಗೆ ಗೊತ್ತಿಲ್ಲ.