thumb


ಜನನ ಬದಲಾಯಿಸಿ

  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ದುರ್ಗಾ ಆಸ್ಪತ್ರೆಯಲ್ಲಿ ೨೨ನೇ ಸೆಪ್ಟೆಂಬರ್ ೨೦೦೦ರಂದು ಅಮರನಾಥ್,ಶೀಲ ದಂಪತಿಗಳಿಗೆ ಜನಿಸಿದ ನಾನು, ೨೬ನೇ ಜನವರಿ ೨೦೦೧ ರಂದು "ಆಕಾಶ್" ನಾದೆ. ಅಂದು ಕಛ್, ಗುಜರಾತ್ ಗಳಲ್ಲಿ ಭೀಕರ ಭೂಕಂಪನವಾದ ದಿನವೆಂದು ಇಂದಿಗೂ ನನ್ನ ತಾಯಿ ನೆನಪಿಸಿಕೊಳ್ಳುತ್ತಿರುತ್ತಾರೆ.ಅಂದು ನನ್ನ ಅಪ್ಪ ನನ್ನನ್ನು ನೊಡಲು ಬರುವಾಗ ಅವರ ಕಛೇರಿಯವರು ಕೊಟ್ಟ ಬೆಳ್ಳಿ ಚಮಚದೊಂದಿಗೆ ಬಂದಿದ್ದರು .ಅಂದಿನಿಂದ ಅವರ ಜೀವನದಲ್ಲಿ ಸ್ಟೀಲ್ ಚಮಚದಿಂದ ಬೆಳ್ಳಿ ಚಮಚಕ್ಕೆ ಬದಲಾಗುವ ಕಾಲ ಶುರುವಾಗಿತ್ತು.೮ ದಿನದ ಆಸ್ಪತ್ರೆಯವಾಸದಿಂದ ಮನೆಗೆ ಬಂದಾಗ ಅಜ್ಜ, ಅಜ್ಜಿ, ಚಿಕ್ಕಮ್ಮ ಎಲ್ಲರೂ ಸಂಭ್ರಮಿಸಿದ್ದರು. ಆದರೆ ಅಂದೇ ಅಪ್ಪ ಹೊರದೇಶಕ್ಕೆ ಹೊರಟು ನಿಂತಾಗ ಬೇಸರಗೊಂಡಿದ್ದು ನನ್ನಮ್ಮ. 

ಬಾಲ್ಯ ಜೇವನ ಬದಲಾಯಿಸಿ

    ಕಾಲ ಸರಿಯುತ್ತಿತ್ತು. ನನ್ನ ಆಟೋಟಗಳಲ್ಲಿ ಮನೆಯವರೆಲ್ಲರೂ ಮುಳುಗಿದ್ದರು. ಆಗ ಜನವರಿ ತಿಂಗಳು ನನ್ನ ತಂದೆ ವಿದೇಶದಿಂದ ಬಂದವರು ನನ್ನ ನಾಮಕರಣ ಶಾಸ್ತ್ರ ಮುಗಿಸಿ ಮಾರ್ಚ್ ೩ ರಂದು ನಾನು ಹಾಗೂ ನಮ್ಮಮ್ಮನನ್ನೂ ಇಂಗ್ಲೆಂಡ್ ಗೆ ಕರೆದೊಯ್ದರು. ನನ್ನ ಅಜ್ಜಿ ಚಿಕ್ಕಮ್ಮ ಎಲ್ಲರಿಗೂ ಬಹಳ ಬೇಸರದ ಸಂಗತಿಯಾಗಿತ್ತು. ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಬಿಡಲು ಬಂದಾಗ ಅವರೆಲ್ಲರ ಕಣ್ಣುಗಳು ತೇವವಾಗಿದ್ದವು ,ಇನ್ನು ಎರಡು ವರ್ಷ ಮಗುವನ್ನು ನೋಡಲು ಆಗುವುದಿಲ್ಲವೆಂದು. ಐದು ತಿಂಗಳು ಮಗುವಾಗಿದ್ದ ನಾನು, ವಿಮಾನ ಹತ್ತಿದಾಗ ಅಳಲು ಶುರು ಮಾಡಿದ ನಾನು ಸುಮಾರು ೨-೩ ಗಂಟೆಗಳ ಕಾಲ ಅತ್ತಿದ್ದೆ.ಅದ್ಯಾವ ದುಃಖವೋ ಅಥವಾ ವಿಮಾನದ ಶಬ್ದವೋ ಗೊತ್ತಿಲ್ಲ . ಅತ್ತು ಅತ್ತು ನಮ್ಮಪ್ಪನ ಕೈಯಲ್ಲಿ ಹಾಗೆ ನಿದ್ರಿಸಿದೆ ಎಂದು ಅಮ್ಮ ಇಂದಿಗೂ ಹೇಳುತ್ತಿರುತ್ತಾರೆ.ಭದ್ರಾವತಿಯಿಂದ ಬೆಂಗಳೂರು,ಬೆಂಗಳೂರಿನಿಂದ ಡೆಲ್ಲಿ, ಡೆಲ್ಲಿಯಿಂದ ವಿಯಾನ, ವಿಯಾನದಿಂದ ಲಂಡನ್ ಪ್ರಯಾಣ ಮೂರು ಜನರ ಜನರನ್ನು ಸುಸ್ತು ಗೊಳಿಸಿತ್ತು. ನಾವು ಹೋದ ದಿನ ಅಲ್ಲಿ ಮಂಜಿನ ಮಳೆಯಾಗುತ್ತಿತ್ತು.
    ದಿನಗಳು ಉರುಳುತ್ತಿತ್ತು. ನಾವು ಅಲ್ಲಿ ಹೈವೇಕೋಂಬ್ ಎನ್ನುವ ಜಾಗದಲ್ಲಿ ಮನೆಮಾಡಿದ್ದೆವು.ಪಕ್ಕದಲ್ಲಿ ಒಂದು ಭಾರತೀಯ ಸಂಸಾರ ನೆಲೆಸಿತ್ತು. ಎಂಟು ತಿಂಗಳ ನಂತರ ಭಾರತಕ್ಕೆ ಮರಳಿ ಬಂದೆವು. ಬೆಂಗಳೂರಿನಲ್ಲಿ ನೆಲೆಸಿದ್ದೆವು. ನಾನು ನಾನು ಎರಡು ವರ್ಷದವನಿದ್ದಾಗ ರಾಜರಾಜೇಶ್ವರಿ ನಗರ ನಗರದಲ್ಲಿ ಸ್ವಂತ ಮನೆ ಖರೀದಿಸಿ ಅಲ್ಲೇ ವಾಸ ಮಾಡಲು ಪ್ರಾರಂಭಿಸಿದವು. 

ಹವ್ಯಾಸ ಮತ್ತು ಆಸಕ್ತಿ ಬದಲಾಯಿಸಿ

     ನಾನು ನಾಲ್ಕು ವರ್ಷದವನಾದಾಗ ಸಂಗೀತ ಶಾಲೆಗೆ ಹೋಗುತ್ತಿದ್ದೆ. ಸುಮಾರು ಮೂರು ವರ್ಷಗಳ ಕಾಲ ಅಭ್ಯಾಸ ಮಾಡಿದೆ. ಶಾಲೆಯಲ್ಲಿ ಸುಮಾರು ಸಾಧಾರಣ ಹುಡುಗನಾಗಿದ್ದೆ. ನನಗೆ ಸ್ವಲ್ಪ ಅಂಜಿಕೆ. ಹಾಗಾಗಿ ಶಾಲೆಯಲ್ಲಿ ನಡೆಸುತ್ತಿದ್ದ ಸ್ಪರ್ಧೆಗಳಲ್ಲಿ ಹೆದರಿಕೆಯಿಂದಲೇ ಭಾಗವಹಿಸುತ್ತಿದ್ದೆ.ಆದರೆ ಬಹುಮಾನ ದೊರೆತದ್ದು ಮಾತ್ರ ಒಂದೆರಡರಲ್ಲಿ ಮಾತ್ರ. ನಾನು ಏಳನೇ ತರಗತಿಯ ಹಾಡುವ ಸ್ಪರ್ಧೆಯಲ್ಲಿ ಹಾಡಿದ "ಅಚ್ಯುತಂ ಕೇಶವ೦...." ಮಾತ್ರ ಎಲ್ಲರ ಮೆಚ್ಚುಗೆ ಪಡೆದದ್ದು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಆಟಗಳಲ್ಲಿ  ನನಗೆ ಆಸಕ್ತಿ ಕಡಿಮೆ. ಆಟದ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದ್ದೇ ನೆನಪಿಲ್ಲ. ಆದರೆ ಎಂಟನೇ ತರಗತಿಯ ನಂತರ ಕ್ರಿಕೆಟ್ ಕೋಚಿಂಗ್ ಕ್ಲಾಸ್ ಸೇರಿ ಒಂದು ವರ್ಷ ಸತತ ಅಭ್ಯಾಸ ನಡೆಸಿದೆ. ಸ್ವಿಮಿಂಗ್ ಶಾಲೆಗೆ ಹೋಗುತ್ತಿದ್ದೆ ಮತ್ತು ಶಟಲ್ ಕ್ಲಾಸ್ ಗೂ ಸೇರಿದ್ದೆ. ಹೀಗೆ ನನ್ನ ಆಸಕ್ತಿ ಆಟಗಳ ಕಡೆಗೂ ಹರಿಯಿತು. ಆನಂತರ ಶಾಲೆಯಲ್ಲಿ ಒಂದೆರಡು ಬಹುಮಾನಗಳು ದೊರೆತವು. 

ಶಿಕ್ಷಣ ಬದಲಾಯಿಸಿ

     ಮೂರು ವರ್ಷದವನಾದಾಗ ನನ್ನ ಮೊದಲ ಮತ್ತು ಕೊನೆಯ ಶಾಲೆ "ಸ್ವರ್ಗರಾಣಿಗೆ" ಪ್ರಿನರ್ಸರಿಗೆ ದಾಖಲಾದೆ.ಅಲ್ಲಿಂದ ನಾನು ನನ್ನ ೨ನೇ ಪಿ.ಯು.ಸಿ ಯೂ ಕೂಡ ಅದೇ ಶಾಲೆಯಲ್ಲಿ ಮುಗಿಸಿದೆ. ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳೊಂದಿಗೆ ಪಿಯುಸಿ ವಿಜ್ಞಾನ ಸೇರಿದೆ. ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಬಿ ಎಸ್ಸಿ  (ಪಿ ಸಿ ಮ್) ಗಾಗಿ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ದಾಖಲಾದೆ. ಸಿ ಇ ಟಿ ಮತ್ತು ಜೆ ಇ ಇ ರಾಷ್ಟ್ರಮಟ್ಟ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೂ ನಾನು ಇಂಜಿನಿಯರಿಂಗ್ ಸೇರದೆ ಬಿ ಎಸ್ ಸಿ ಸೇರಿಕೊಂಡೆ. ಯಾಕೆಂದರೆ ಅದು ನನ್ನ ಆಸೆ ಮತ್ತು ಗುರಿ. ನನಗೆ ಭೌತಶಾಸ್ತ್ರ ತುಂಬಾ ಇಷ್ಟ. ಅದು ಒಂದು ಕಠಿಣ ವಿಷಯವಾದರೂ ಆದರೂ ಅದು ನನಗೆ ತುಂಬಾ ಇಷ್ಟ. ನಾನು ಅದರಲ್ಲಿ ಎಂಎಸ್ಸಿ ಮಾಡಬೇಕು ಎನ್ನುವುದೇ ನನ್ನ ಗುರಿ. 

ನನ್ನ ಮನ ಬದಲಾಯಿಸಿ

    ನನ್ನ ಬಗ್ಗೆ ನಾನು ಹೇಳಿ ಕೊಳ್ಳಬೇಕಾದರೆ ನಾನೊಬ್ಬ ಭಾವುಕ ಜೀವಿ . ನಾನು ಜನಗಳ ಜೊತೆ ಬೆರೆಯಲು ಇಷ್ಟಪಡುತ್ತೇನೆ. ಸ್ನೇಹಿತರು ಅಂದರೆ ನನಗೆ ಪ್ರಾಣ. ಆದರೆ ನನಗಿರುವುದು ಕೆಲವೇ ಸ್ನೇಹಿತರು. ನಾನು ನನ್ನ ಸ್ನೇಹಿತರ ಜೊತೆ ಚೆನ್ನಾಗಿರಲು ಬಯಸುತ್ತೇನೆ. ನಾನು ತುಂಬಾ ಸಾಮಾನ್ಯವಾಗಿ ಬದುಕಲು ಇಷ್ಟಪಡುತ್ತೇನೆ. ನನಗೆ ನನ್ನದೇ ಆದ ಗುರಿ ಇದೆ .ಅದನ್ನು ಸಾಧಿಸಲು ಸದಾ ಪ್ರಯತ್ನಿಸುತ್ತೇನೆ. ನನ್ನ ಜೀವನವನ್ನು ತುಂಬಾ ಚೆನ್ನಾಗಿ ನಡೆಸಲು ಇಷ್ಟಪಡುತ್ತೇನೆ ಹಾಗೂ ನಡೆಸುತ್ತೇನೆ ಕೂಡ.....