ಸಾಗರ್ ಟಿ
Born4/12/2000
ಕೆಂಪೇಗೌಡ ಆಸ್ಪತ್ರೆ, ಬೆಂಗಳೂರು.
Educationಬಿಕಾಂ, ಕ್ರೈಸ್ಟ್ ಯುನಿವರ್ಸಿಟಿ.
Parentತಂದೆ ತ್ಯಾಗರಾಜು ಮತ್ತು ತಾಯಿ ಮಂಜುಳ

"ಹುಟ್ಟು,ಬಾಲ್ಯ"

    ಅಂದು ಇಪ್ಪತ್ತನೇಯ ಶತಮಾನದ ಅಂತ್ಯದ ಡಿಸೆಂಬರ್ ತಿಂಗಳ ನಾಲ್ಕನೇಯ ದಿನದಂದು ಅಂದರೆ 04-12-2000 ಕರ್ನಾಟಕದ ಬೆಂಗಳೂರು ನಗರದಲ್ಲಿ ಇರುವ ಕೆಂಪೇಗೌಡ ಆಸ್ಪತ್ರೆಯಲ್ಲಿ ಜನಿಸಿದೆ.ನನ್ನ ತಂದೆ ತ್ಯಾಗರಾಜು ಮತ್ತು ತಾಯಿ ಮಂಜುಳ.ನನ್ನ ತಂದೆ ಮತ್ತು ತಾಯಿ ಇಬ್ಬರದ್ದೂ ಬೆಂಗಳೂರು ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರ ಎಂಬ ಗ್ರಾಮವಾಗಿದೆ. ನನ್ನ ತಂದೆ ತಾಯಿ  ಮದುವೆಯಾಗಿ ಐದು ವರ್ಷವಾದರೂ ಮಕ್ಕಳಿಲ್ಲದ್ದಿದ್ದ ಕಾರಣ ಅವರು ಬೇಸರವಾಗಿ ದೇವರಿಗೆ ಹರಕೆಯನ್ನು ಕಟ್ಟಿರುವರು.ಕೊನೆಗೆ ಐದನೇ ವರ್ಷದ ಅಂತ್ಯದಲ್ಲಿ ನಾನು ಹುಟ್ಟಿದೆ.ನನ್ನನ್ನು ತಂದೆ ತಾಯಿ,ಅಜ್ಜ ಅಜ್ಜಿ ಬಹಳ ಇಷ್ಟ ಪಟ್ಟು ಸಂತೋಷದಿಂದ ನನ್ನನ್ನು ಬೆಳೆಸಿದರು.ನನಗೆ ಆಟವಾಡಿಸಿ,ತಿಂಡಿಯನ್ನು ತಿನ್ನಿಸಲು ದೊಮ್ಮಸಂದ್ರದಲ್ಲಿರುವ ಗ್ರಾಮದೇವತೆ ಮಾರಮ್ಮ ದೇವಸ್ಥಾನದಲ್ಲಿ ಕರೆದುಕೊಂಡು ಹೋಗುತ್ತಿದ್ದರು.ಆದರೆ ದುರದೃಷ್ಟವಶಾತ್ ನಾನು ಎರಡು ವರ್ಷದ ಮಗುವಿದ್ದಾಗ ನನಗೆ ಮೂತ್ರಪಿಂಡದ ಸಮಸ್ಯೆ ಉಂಟಾಯಿತು.ನನ್ನನ್ನು ಉಳಿಸಿಕೊಳ್ಳಲು ನನ್ನ ತಂದೆ ತಾಯಿಗೆ ಬಹಳ ಕಷ್ಟವಾಗಿತ್ತು.ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಅದೇಗೋ ದೇವರ ಕೃಪೆಯಿಂದ ನನ್ನನ್ನು ಉಳಿಸಿದರು.ನಾನು ಸುಮಾರು ಎಂಟು ತಿಂಗಳ ಕಾಲ ಆಸ್ಪತ್ರೆಯಲ್ಲಿ ಇದ್ದೆನು.ಇಂದಿಗೂ ನಾನು ನನ್ನ ಆರೋಗ್ಯವನ್ನು ತೋರಿಸಲು ಪ್ರತಿ ಆರು ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗುತ್ತೇನೆ.
"ಕುಟುಂಬ"
     ನನ್ನ ತಂದೆ ನೌಕರ ಅಂದರೆ ಮಗ್ಗದ ಕೆಲಸ ಮತ್ತು ತಾಯಿ ಗ್ರಹಿಣಿಯ ಕೆಲಸ ಮಾಡುತ್ತಿದ್ದಾರೆ. ನನಗೆ ಒಬ್ಬ ಕಲ್ಯಾಣ್ ಕುಮಾರ್ ಎಂಬ ತಮ್ಮನಿದ್ದಾನೆ.ಅವನು ಬೆಂಗಳೂರಿನ ದೊಮ್ಮಸಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.ಅವನು ಓದು ಅಲ್ಲದೆ ಕ್ರೀಡೆಗಳಲ್ಲಿ ಆಸಕ್ತಿ ಇದ್ದು ಹಲವಾರು ಪ್ರಶಸ್ತಿ ಪತ್ರಗಳನ್ನು ತೆಗೆದುಕೊಂಡಿದ್ದಾನೆ.ಆಗೂ ಸಂಜೆ ಶಾಲೆಯಿಂದ ಬಂದು ನನ್ನ ತಂದೆಯ ಮಗ್ಗದ ಕೆಲಸಕ್ಕೆ ಸಹಾಯ ಮಾಡುತ್ತಾನೆ.

ವಿದ್ಯಾಭ್ಯಾಸ ಮತ್ತು ಆಸಕ್ತಿಗಳು

     ನನ್ನ ತಂದೆತಾಯಿಯರು ಅವಿದ್ಯಾವಂತರಾದ ಕಾರಣ ತಮ್ಮಷ್ಟು ಕಷ್ಟಗಳನ್ನು ತಮ್ಮ ಮಕ್ಕಳು ಪಡೆಯಬಾರದು ಎಂದು ನಮಗೆ ವಿದ್ಯೆಯನ್ನು ನೀಡಿಸುತ್ತಾ,ತುಂಬಾ ಚೆನ್ನಾಗಿ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ.ನಾನು ನನ್ನ ವಿದ್ಯಾಭ್ಯಾಸವನ್ನು ಐದನೇ ವರ್ಷದಲ್ಲಿರುವಾಗ ಪ್ರಾರಂಭಿಸಿ,ದೊಮ್ಮಸಂದ್ರ ಗ್ರಾಮದ ಶ್ರೀ ಸರಸ್ವತಿ ವಿದ್ಯಾನಿಕೇತನ ಎಂಬ ಶಾಲೆಯಲ್ಲಿ ಶಿಶುವಿಹಾರದಿಂದ ಹತ್ತನೇ ತರಗತಿಯವರೆಗೂ ಹನ್ನೆರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದೆ.ಈ ಶಾಲೆಯು ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾಸಂಸ್ಥಾನವಾಗಿದೆ ಮತ್ತು ಆನೇಕಲ್ ತಾಲ್ಲೂಕಿಗೆ ಹೆಸರುವಾಸಿಯಾಗಿದೆ.ನಾನು ಈ ಶಾಲೆಯಲ್ಲಿ ಶಿಶುವಿಹಾರದಿಂದ ಏಳನೇಯ ತರಗತಿಯವರೆಗೂ ಕನ್ನಡಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದೆ.ನನ್ನ ಈ ಕನ್ನಡ ಮಾಧ್ಯಮದಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ವಿದ್ಯಾರ್ಥಿಗಳು ಇದ್ದರು.ಪ್ರತಿ ವರ್ಷವೂ ಶೇಕಡ ತೊಂಬತ್ತೈದು ಅಂಕಗಳನ್ನು ಪಡೆಯುತ್ತಿದ್ದೆ.ನಂತರ ನನ್ನ ತಂದೆ ತಾಯಿ ಶುಲ್ಕವನ್ನು ಕಟ್ಟಲಾಗದೆ ಎಂಟನೆಯ ತರಗತಿಯನ್ನು ಸರ್ಕಾರಿ ಪ್ರೌಢಶಾಲೆಯಲ್ಲಿ ಒದಿಸುವಂತೆ ತೀರ್ಮಾನಕ್ಕೆ ಬಂದರು.ಆದರೆ ಶಾಲೆಯ ಮುಖ್ಯೋಪಾಧ್ಯಾಯರು ವರ್ಗಾವಣೆ ಪ್ರಮಾಣ ಪತ್ರವನ್ನು ನೀಡಲಿಲ್ಲ.ನಾನು ಅದೇ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಮುಖ್ಯೋಪಾಧ್ಯಾಯರು ಶುಲ್ಕ ಕಟ್ಟಿಸಿಕೊಳ್ಳದೆ ನನಗೆ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನೀಡಿದರು.ನಾನು ಹತ್ತು ವರ್ಷದಲ್ಲಿ ಸುಮಾರು ಆರು ವರ್ಷಗಳ ಕಾಲ ತರಗತಿಯ ನಾಯಕನಾಗಿದ್ದೆನು.ಆ ಶಾಲೆಯಲ್ಲಿದ್ದ ಶಿಕ್ಷಕರನ್ನು ಗುರೂಜೆ,ಮಾತಾಜಿ ಎಂದು ಕರೆಯುತ್ತಿದ್ದೆವು.ಅವರು ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ,ನಮ್ಮ ತಪ್ಪುಗಳನ್ನು ಸರಿಪಡಿಸುತ್ತಾ ತಂದೆ ತಾಯಿಯ ರೀತಿಯಲ್ಲಿ ವಿದ್ಯಾಭ್ಯಾಸ ನೀಡಿ ಬೆಳೆಸಿದರು.ನನ್ನ ಶಾಲೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು.ಶಾಲೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆನು.ಅದರಲ್ಲಿ ನನಗೆ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಇತ್ತು.ನಾನು ಎಂಟನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ,ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳ ಜೊತೆ ಸುಮಾರು ನೂರು ವಿದ್ಯಾರ್ಥಿಗಳಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಮೊದಲನೆಯ ಸ್ಥಾನ ಪಡೆದು ಮೂರು ಸಾವಿರ ರೂಪಾಯಿಗಳನ್ನು ಗಳಿಸಿದೆ.ಅದಲ್ಲದೆ ಐದನೆಯ ತರಗತಿಯಿಂದ ಹತ್ತನೇ ತರಗತಿಯವರೆಗೂ ಸಂಸ್ಕೃತಿಜ್ಞಾನ ಪರೀಕ್ಷೆ ಮತ್ತು ರಾಮಾಯಣ ಮಹಾಭಾರತ ಪರೀಕ್ಷೆಗಳನ್ನು ನೀಡುತ್ತಿದ್ದರು.ಅದಲ್ಲದೆ ಪ್ರತಿ ವರ್ಷವೂ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ.ನಾನು ನನ್ನ ಹತ್ತನೇಯ ತರಗತಿಯನ್ನು 2016 ವರ್ಷದಲ್ಲಿ ಶೇಕಡ 83%ಗಳಿಸಿ ಉತ್ತೀರ್ಣನಾಗಿದೆ.ನನ್ನ ಜೀವನದ ಶಿಕ್ಷಣವನ್ನು ಮತ್ತು ಮೌಲ್ಯಗಳನ್ನು ಮತ್ತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ನನ್ನ ಶಾಲೆಯೇ ಕಾರಣವಾಗಿದೆ.ಮುಂದೆ ನನ್ನ ತಂದೆ ತಾಯಿಯು ನನ್ನನ್ನು ಮುಂದಿನ ಕಾಲೇಜು ಶಿಕ್ಷಣವನ್ನು ಅದೇ ಸಂಸ್ಥೆಯ ದೊಮ್ಮಸಂದ್ರದ ಶ್ರೀ ಸರಸ್ವತಿ ವಿದ್ಯಾನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನೀಡಿದರು.ಈ ಕಾಲೇಜು 2012ರಲ್ಲಿ ಪ್ರಾರಂಭವಾಯಿತು.ನನಗೆ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇತ್ತು. ಕಾಲೇಜು ನನ್ನನ್ನು ಕಡಿಮೆ ಶುಲ್ಕದಿಂದ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಮಾಡಿದರು.ನಾನು ಕಾಲೇಜಿನಲ್ಲಿ ಸ್ನೇಹಿತರನ್ನು ಬೆರೆಯಲು ಆರು ತಿಂಗಳು ತೆಗೆದುಕೊಂಡೆ. ನಾನು ಕಾಲೇಜಿನಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿದ್ದೇನೆ.ಚಿತ್ರಕಲೆ,ಬೆಂಕಿ ಇಲ್ಲದೆ ಅಡುಗೆ,ಹರಟೆ,ನಿಘಂಟು ಬರೆಯುವುದು ಮುಂತಾದವುಗಳಲ್ಲಿಯೂ ಭಾಗವಹಿಸಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೂಂಡೆ.ನಾನು ಈ ಕಾಲೇಜಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡಲು ನನ್ನ ಶಿಕ್ಷಕರು ಮತ್ತು ಸ್ನೇಹಿತರಿಂದ ಕಲಿತುಕೊಂಡೆ. ನಾವು ಈ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯನ್ನು ಆರಂಭಿಸಿದೆವು.ನಾನು ಅದರಲ್ಲಿ ಬಾಗಿಯಾಗಿ ದೊಮ್ಮಸಂದ್ರ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಸ್ವಚ್ಛತೆಯನ್ನು ಮಾಡಿ ಸ್ವಾತಂತ್ರ್ಯ ದಿನಾಚರಣೆಗೆ ಒಂದು ಕಾರ್ಯಕ್ರಮವನ್ನು ನೀಡಿದೆವು.ನನಗೆ ಇದರಿಂದ ಒಂದು ಪ್ರಶಸ್ತಿ ದೊರಕಿತುನನಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ನಾನು ಕ್ರೀಡೆಯಲ್ಲಿ ಭಾಗವಹಿಸಲು ಆಗಲಿಲ್ಲ.ನನಗೆ ಆಂಗ್ಲ ಭಾಷೆ ಬರದಿದ್ದ ಕಾರಣ ಪ್ರಥಮ ಪಿ.ಯು.ಸಿಯಲ್ಲಿ ಆಂಗ್ಲ ಭಾಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿ ಶೇಕಡ 91% ತೆಗೆದುಕೊಂಡು ಉತ್ತೀರ್ಣನಾದೆ.ಈ ಕಾಲೇಜಿನಲ್ಲಿ ಮುಂದಿನ ಗುರಿಗಳ ಬಗ್ಗೆ,ವ್ಯಕ್ತಿತ್ವ,ಜೀವನ ಮೌಲ್ಯಗಳು ಮತ್ತು ಇನ್ನಿತರ ಬಗ್ಗೆ ತಿಳಿದುಕೊಂಡೆ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ 93%ಗಳನ್ನು ಗಳಿಸಿ ಉತ್ತೀರ್ಣನಾಗಿ ಪ್ರಶಸ್ತಿಪತ್ರ,ಹಣ ಮತ್ತು ನೂರು ಗ್ರಾಂ ತೂಕದ ಒಂದು ಬೆಳ್ಳಿಯ ಪದಕವನ್ನು ಪಡೆದುಕೂಂಡೆ.
ನಾನು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಮೂರು ಕಾಲೇಜುಗಳನ್ನು ಆಯ್ದುಕೊಂಡಿದ್ದೆ,ಅದರಲ್ಲಿ ದೇಶಾದ್ಯಂತ ಹೆಸರುವಾಸಿಯಾದ ಬೆಂಗಳೂರಿನ  ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ಶಿಕ್ಷಣವನ್ನು ಪಡೆಯಲು ಆಯ್ಕೆಯಾಗಿದ್ದೇನೆ.ಮುಂಚೆ ನನಗೆ ಈ ಕಾಲೇಜಿನ ಬಗ್ಗೆ ತಿಳಿದಿರಲಿಲ್ಲ,ನನಗೆ ಈ ಕಾಲೇಜಿನಲ್ಲಿ ಆಯ್ಕೆಯಾಗಿ ಬಂದ ಮೇಲೆ ನನಗೆ ಈ ಕಾಲೇಜಿನ ಪರಿಸರ, ವಾತಾವರಣ,ಶಿಕ್ಷಣ,ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡೆ.ನಾನು ಈ ಕಾಲೇಜಿನಲ್ಲಿ ವೇದಿಕೆಯ ಭಯವನ್ನು ದೂರಮಾಡಿಕೊಂಡೆ.ಇಲ್ಲಿ ನಾನು ಮೊದಲನೆಯ ಸೆಮಿಸ್ಟರಲ್ಲಿ ಶೇಕಡ 68%ಗಳನ್ನುಗಳಿಸಿ ಉತ್ತೀರ್ಣನಾಗಿದೆನು.ನಾನು ಆಂಗ್ಲ ಭಾಷೆಯಲ್ಲಿ ಇನ್ನು ಹೆಚ್ಚು ಮಾತನಾಡಲು ಮತ್ತು ವೇದಿಕೆಯ ಮೇಲೆ ಮಾತನಾಡಲು ಕಲಿಯುತ್ತಿದ್ದೇನೆ.ನಮಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುತ್ತಾಯಿದೆ.ನಾನು ನನ್ನ ತಂದೆ ತಾಯಿಯ ಆಸೆಯಂತೆ ಒಳ್ಳೆಯ ಶಿಕ್ಷಣವನ್ನು ಕಲಿತು ಒಬ್ಬ ಉತ್ತಮ ವ್ಯಕ್ತಿ ಆಗಿ ತಾಯಿ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವುದು ನನ್ನ ಗುರಿಯಾಗಿದೆ.