ಹದಿಮೂರನೆಯ ವರ್ಷಾಚರಣೆಗೆ ಸ್ವಾಗತ ಬದಲಾಯಿಸಿ

  ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು  
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಂಡು, ತಮ್ಮೆಲ್ಲರ ಇರುವಿಕೆಯಿಂದ ಕನ್ನಡ ವಿಕಿಪೀಡಿಯ ಸಮುದಾಯದ ಬಲ ಹೆಚ್ಚುವಂತೆ ಆಗಲಿ ಎಂದು ಆಶಿಸುತ್ತೇವೆ. ತಮ್ಮ ಪಾಲ್ಗೊಳ್ಳುವಿಕೆಯನ್ನು ಈ ಪುಟದ ಕೊನೆಯ ಪಟ್ಟಿಯಲ್ಲಿ ಸೇರಿಸಿರಿ. ಕನ್ನಡ ವಿಕಿಪೀಡಿಯ ಸಮುದಾಯದ ಮತ್ತು ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ಪ್ರತಿಯೊಬ್ಬರಿಗೂ ಪ್ರೀತಿಯ ಸ್ವಾಗತ --Vishwanatha Badikana (ಚರ್ಚೆ) ೧೮:೦೦, ೩ ಫೆಬ್ರುವರಿ ೨೦೧೬ (UTC)