ನಮಸ್ಕಾರ Fahimakthar


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-ತಮಿೞ್_ಕುರಿಸಿಲ್ தமிழ்க்குரிசில் (talk) ೦೮:೩೩, ೨೦ ಮೇ ೨೦೧೪ (UTC)

ವಿಶ್ವಕೋಶಕ್ಕೆ ತಕ್ಕ ಮಾಹಿತಿ ಬದಲಾಯಿಸಿ

ನಮಸ್ಕಾರ,

ನಿಮ್ಮ ಹಲವಾರು ಲೇಖನಗಳ ಶೀರ್ಷಿಕೆಗಳು ವಿಶ್ವಕೋಶಕ್ಕೆ ತಕ್ಕಂತೆ ಇಲ್ಲ. ಅಲ್ಲದೇ, ಹಲವಾರು ವರ್ಗ ಪುಟಗಳನ್ನು ಸೃಷ್ಟಿಸಿದ್ದೀರಿ. ಅವುಗಳನ್ನು ಡಿಲೀಟ್ ಮಾಡಲಾಗಿದೆ. ದಯವಿಟ್ಟು ವಿಕಿಪೀಡಿಯ ಸಂಪಾದನೆ ಬಗ್ಗೆ ಇರುವ ಪುಟಗಳನ್ನು ಓದಿ, ಅನುಸರಿಸಿರಿ. ~ ಹರೀಶ / ಚರ್ಚೆ / ಕಾಣಿಕೆಗಳು ೧೯:೦೯, ೨೫ ಆಗಸ್ಟ್ ೨೦೧೪ (UTC)

ನೀವು ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿದ್ದೀರಿ. ನಿಮ್ಮ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿಲ್ಲ. ಅವುಗಳನ್ನು ಅಳಿಸಲಾಗುವುದು. ದಯವಿಟ್ಟು ಇಂತಹ ಲೇಖನಗಳನ್ನು ಸೃಷ್ಠಿ ಮಾಡಬೇಡಿ. --Pavanaja (talk) ೧೬:೪೫, ೨೩ ಡಿಸೆಂಬರ್ ೨೦೧೪ (UTC)
ನಿಮಗೆ ಹಲವು ಸಲ ಎಚ್ಚರಿಸಲಾಗಿದೆ. ಮತ್ತೆ ಮತ್ತೆ ನೀವು ವಿಶ್ವಕೋಶಕ್ಕೆ ತಕ್ಕುದಲ್ಲದ ಲೇಖನಗಳನ್ನು ಸೇರಿಸುತ್ತಿದ್ದೀರಿ. ಅವುಗಳನ್ನು ಅಳಿಸುವುದು ನಿರ್ವಾಹಕರಿಗೆ ಅನವಶ್ಯಕ ಕೆಲಸವಾಗುತ್ತಿದೆ. ಇದೇ ರಿತಿ ಮುಂದುವರೆದರೆ ನಿಮ್ಮನ್ನು ಶಾಸ್ವತವಾಗಿ ನಿರ್ಬಂಧಿಸಬೇಕಾಗುತ್ತದೆ--Pavanaja (talk) ೦೮:೧೭, ೩ ಜನವರಿ ೨೦೧೫ (UTC)
ಮತ್ತೆ ಅದೇ ತಪ್ಪು ಮಾಡಿದ್ದೀರಿ. ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ವಿಶ್ವಕೋಶಕ್ಕೆ ತಕ್ಕುದಾದ ಲೇಖನ ಮಾತ್ರ ಸೇರಿಸಿ--Pavanaja (talk) ೧೩:೪೧, ೨೭ ಫೆಬ್ರುವರಿ ೨೦೧೫ (UTC)