(talk)

ನಮಸ್ಕಾರ ;ಕ್ಷಮಿಸಿ ; ಮೊದಲಿನ ವಾಕ್ಯಗಳನ್ನು ಬದಲಿಸಿ , ಹೊಸ ವಾಕ್ಯಗಳನ್ನು ಯಾರು ಹಾಕಿದರೆಂದು ತಿಳಿಯುವುದಿಲ್ಲ. ಕೊನೆಯ ಸಂಪಾದನೆ ನಿಮದಿದ್ದುರಿಂದ ಹಾಗೆ ಭಾವಿಸಿದೆ. ಆದರೂ ನೀವೂ ವಚನಸಾಹಿತ್ಯದಲ್ಲಿ ಸಾಕಷ್ಟು ಅದ್ಯನ ಮಾಡಿದ್ದೀರಿ ಎಂದು ಭಾವಿಸಿದ್ದೇನೆ; ಇಲ್ಲಿ 'ಅನುಭಾವ' ಪದದ ಬದಲಿಗೆ 'ಜೀವನಾನುಭವ' ಸೇರಿಸಿ ಹೊಸವಾಕ್ಯಗಳನ್ನೇ ಹಾಕಲಾಗಿದೆ. ನನಗೆ ಇಷ್ಟ ವಾಗಲಿಲ್ಲ. ಕಾರಣ, ಅಪ್ರಸ್ತುವಾದರೂ, ಹೇಳಲು ಬಯಸುತ್ತೇನೆ ; - "ಆಕ್ಕ ಒಬ್ಬ ಅನುಭಾವಿ ಶರಣೆ, ಆಕೆ ಚಕ್ಕಂದಿನಿಂದಲೂ ಗುರುಗಳಿಂದ ಸಾಹಿತ್ಯ,, ತತ್ವ (ಶಿವಾದ್ವೈತ) ಕಲಿತು, ಚನ್ನಮಲ್ಲಿಕಾರ್ಜು ನ ಹೆಸರಿನಲ್ಲಿ ಆತ್ಮ ಸಾದನೆಯಲ್ಲಿ ತೊಡಗಿ ೧೫-೧೬ (?) ವಯಸ್ಸಿಗೆಲ್ಲಾ ಆತ್ಮಾನುಭವ ಪಡೆದವಳು ; ಆತ್ಮಾನುಭವಕ್ಕೆ ವಚನಗಳಲ್ಲಿ 'ಅನುಭಾವ' ಎನ್ನುತ್ತಾರೆ ಎಂದು ನನ್ನ ನಂಬುಗೆ. ಅವಳು ಬಯಸಿ ಮದುವೆಯಾಗಲಿಲ್ಲ. ಪುರುಷ ಸುಖ ಕಾಣಳು, ಬಸುರಿಯಾಗಿ ಮಗುವನ್ನು ಹೆತ್ತು ಅದನ್ನು ನೋಡಿ ಆನಂದ ಪಡಲಿಲ್ಲ ; ಮಗುವಿಗೆ ಮೊಲೆಯುಣಿಸಿ ಎತ್ತಿ ಮುದ್ದಾಡಿ ಅನಂದ ಪಡಲಿಲ್ಲ. ಅಕ್ಕಪಕ್ಕದವರ, ನೆಂಟರಿಷ್ಟರ ಸುಖ ಕಷ್ಟಗಳಿಗೆ ಸ್ಪಂದಿಸಿ ಅನುಭವಿಸಲಿಲ್ಲ . ಇದು ಜೀವನಾನುಭವವೆಂದು ನನ್ನ ಭಾವನೆ; ಕೇವಲ ನೋಡಿದ್ದು ಅನುಭವವ ಅಗುವುದಿಲ್ಲ. ಅವಳ ವಚನಗಳಲ್ಲಿ ಜೀವನಾನುಭವದ ವಿಷಯ ಬಂದರೆ ಅದು ಅಂತರಂಗದ ಹುಟ್ಟುಕವಿಯ ಕಾವ್ಯದ ಕಾಣ್ಕೆ . ಅವಳು ಹುಟ್ಟು ಕವಯತ್ರಿ. ಆದರೆ ಅನುಭಾವಿ ಶಿವಶರಣೆ. ಚಿಕ್ಕ ವಯಸ್ಸಿನಲ್ಲೇ ಆತ್ಮಾನುಭೂತಿ ಪಡೆದು (೧೭-೧೮ ಪ್ರಾಯ ?) ಕಲ್ಯಾಣಕ್ಕೆ ಹೋಗಿ ಅಲ್ಲಿ ಸ್ವಲ್ಪ ದಿನವಿದ್ದು ಶ್ರೀಶೈಲಕ್ಕೆ ಹೋಗಿ ಅಲ್ಪ ಕಾಲದಲ್ಲೇ ಸಮಾಧಿಸ್ಥಿತಿ ತಲುಪಿ ಶಿವೈಕ್ಯಳಾದಳೆಂದು (ಪ್ರಾಯ ೨೦-೨೧?) ನನ್ನ ಅನಿಸಿಕೆ ; ಕಲ್ಯಾಣಕ್ಕೆ ಬರುವಾಗಲೇ ಅವಳು ದೇಹ ಭಾವನೆಯಿಂದ / ಪ್ರಾಪಂಚಕ ಭಾವನೆಯಿಂದ ಆಚೆ ಶಿವ ತತ್ವದಲ್ಲಿ (ಪರ ಬ್ರಹ್ಮ) ಮುಳುಗಿದ್ದಳೆಂದು ನನ್ನ ಅನಿಸಿಕೆ. ಆಕಾಲದಲ್ಲಿ ಅವಳನ್ನು ಅರಿಯಬಲ್ಲವರು -ಅಲ್ಲಮ, ಚನ್ನಬಸವಣ್ಣ, ಮಾತ್ರಾ ಎಂಬುದು. ಅವಳ-ಅವರ ಮಾತಿನಿಂದ ತಿಳಿಯುವುದು. ಬಸವಣ್ಣ ಇನ್ನೂ ಪ್ರಾಪಂಚಿಕ ಕಾರ್ಯವಿದ್ದುದರಿಂದ (ಅರಿತೂ) ಪ್ರಾಪಂಚಿಕನಾಗಿಯೆ ಇದ್ದನೆಂದು ನನ್ನ ಅನಿಸಿಕೆ .

ಆ ಪಾಠ ಬದಲಿಸಿದವರು ದಯಮಾಡಿ ಇದನ್ನು ಓದಲಿ ಎಂದು ಇಲ್ಲಿ ದಾಖಲಿಸಿದ್ದೇನೆ.

Bschandrasgr ೧೦:೨೭, ೩೧ ಡಿಸೆಂಬರ್ ೨೦೧೩ (UTC)


ಇದು ಇನ್ನೂ ಖಾತೆಯನ್ನು ರಚಿಸದ ಅಥವಾ ಅದನ್ನು ಬಳಸದ ಅನಾಮಧೇಯ ಬಳಕೆದಾರರ ಚರ್ಚಾ ಪುಟವಾಗಿದೆ. ಆದ್ದರಿಂದ ನಾವು ಅವುಗಳನ್ನು ಗುರುತಿಸಲು ಸಂಖ್ಯಾತ್ಮಕ IP ವಿಳಾಸವನ್ನು ಬಳಸಬೇಕಾಗುತ್ತದೆ. ಅಂತಹ IP ವಿಳಾಸವನ್ನು ಹಲವಾರು ಬಳಕೆದಾರರು ಹಂಚಿಕೊಳ್ಳಬಹುದು. ನೀವು ಅನಾಮಧೇಯ ಬಳಕೆದಾರರಾಗಿದ್ದರೆ ಮತ್ತು ಅಪ್ರಸ್ತುತ ಕಾಮೆಂಟ್‌ಗಳನ್ನು ನಿಮಗೆ ನಿರ್ದೇಶಿಸಲಾಗಿದೆ ಎಂದು ಭಾವಿಸಿದರೆ, ದಯವಿಟ್ಟು ಖಾತೆಯನ್ನು ರಚಿಸಿ ಅಥವಾ ಲಾಗ್ ಇನ್ ಇತರ ಅನಾಮಧೇಯ ಬಳಕೆದಾರರೊಂದಿಗೆ ಭವಿಷ್ಯದ ಗೊಂದಲವನ್ನು ತಪ್ಪಿಸಲು.