ಸತ್ಯನಾರಾಯಣ್ ತುಲಸಿ ಮಾನಸ್ ಮಂದಿರ್, ಬನಾರಸ್, (ಉ.ಪ್ರ)

'ಸತ್ಯನಾರಾಯಣ್ ತುಲಸಿ ಮಾನಸ್ ಮಂದಿರ್, ಉತ್ತರ ಪ್ರದೇಶದ, ವಾರಣಾಸಿ ಪಟ್ಟಣದ ದುರ್ಗಾ ಕುಂಡ್ ದೇವಾಲಯದ ಹತ್ತಿರವಿದೆ. ಇದು, ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ೨ ಕಿ.ಮೀ ಸಮೀಪದಲ್ಲಿದ್ದು, ದುರ್ಗಾಕುಂಡ್ ರಸ್ತೆಯಮೂಲಕ ಮುಂದೆ ಹೋದರೆ, 'ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ' ಸಿಗುತ್ತದೆ.

ಚಿತ್ರ:L11.JPG
'ತುಲಸಿ ಮಾನಸ್ ಮಂದಿರ್'

ದೇವಸ್ಥಾನವನ್ನು ಸಂದರ್ಶಿಸಲು ಬದಲಾಯಿಸಿ

'ವಾರ್ಷಿಕ ಜಾತ್ರೆ' ಯ ೨ ನೆಯ ದಿನ, ಶುಕ್ಲ ಪಕ್ಷದ ಮಾಘಮಾಸದ ಒಂದು ತಿಂಗಳು ಜರುಗುವ ಶಿವರಾತ್ರಿಯ ದಿನ, ರಾಮನವಮಿಯ ದಿನ (೭ ದಿನಗಳ ಕಾಲ)ಕೃಷ್ಣ ಜನ್ಮಾಶ್ಠಮಿ, ವೈಶಾಖ ಉತ್ಸವ ಪ್ರತಿವರ್ಷವೂ ಬಸಂತ್ ಪಂಚಮಿಯ ದಿನ. ಜರುಗುತ್ತದೆ. ಇಲ್ಲಿಗೆ ಬಂದು ತಲುಪಲು, ಆಟೋ ರಿಕ್ಷಾ ಸೈಕಲ್ ರಿಕ್ಷಾ, ಟ್ಯಾಕ್ಸಿಗಳು ಸಿಗುತ್ತವೆ. ತುಲಸಿ ಮಾನಸ್ ಮಂದಿರ್, ವಾರಣಾಸಿಯಲ್ಲಿ ನೋಡಬೇಕಾದ ಆಕರ್ಷಣಾ ಸ್ಥಳಗಳಲ್ಲಿ ಮುಖ್ಯವಾದದ್ದು. ಅಮೃತಶಿಲೆಯಿಂದ ಶಿಖಾರ ಶೈಲಿಯಲ್ಲಿ ನಿರ್ಮಿಸಿದ ಈ ದೇವಾಲಯ, ೧೯೬೪ ರಲ್ಲಿ ಮುಕ್ತಾಯವಾಯಿತು. ವಾರಣಾಸಿಯ ಪರಿವಾರವೊಂದು, ಶ್ರೀರಾಮನಿಗೆ ಕಟ್ಟಿದ ದೇವಾಲಯ. ೧೬ ನೆಯ ಶತಮಾನದಲ್ಲಿ ರಾಮಚರಿತ ಮಾನಸದಿಂದ ಉದ್ಧರಿಸಿದ ಸ್ತೋತ್ರಗಳು, ಗೋಸ್ವಾಮಿ ತುಳಸೀದಾಸ್ ರಿಂದ ರಚಿತವಾದ ಶ್ಲೋಕಗಳನ್ನು, ಗೋಡೆಗಳಮೇಲೆ ಕೆತ್ತಲಾಗಿದೆ. ತುಳಸೀದಾಸರು, ಈ ಸ್ಥಳದಲ್ಲೇ ಕುಳಿತು, 'ರಾಮಚರಿತ ಮಾನಸ್' ರಚಿಸಿದರೆಂದು ಭಕ್ತರು, ನಂಬುತ್ತಾರೆ.

ಮಂದಿರವನ್ನು ಸಂದರ್ಶಿಸುವ ಸಮಯ ಬದಲಾಯಿಸಿ

  • ಬೆಳಿಗ್ಯೆ ೫ ರಿಂದ ಮದ್ಯಾನ್ಹ ೧೨ ರವರೆಗೆ,
  • ನಂತರ, ಮದ್ಯಾನ್ಹ, ೩-೩೦ ರಿಂದ, ೯ ಗಂಟೆಯ ವರೆಗೆ,
  • ವಸ್ತುಪ್ರದರ್ಶನದ ವೇಳೆ : ೮-೩೦ ರಿಂದ ೧೨ ರವರೆಗೆ, ೩ ೩೦ ರಿಂದ ೮ ೩೦ . ಮಂದಿರ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.

'ರಾಮ್-ಕೃಷ್ಣ ಲೀಲಾ ಉದ್ಯಾನ್' ಬದಲಾಯಿಸಿ

'ಎಲೆಕ್ಟ್ರಾನಿಕ್ಸ್ ದ್ವಾರ, ರಚಿತವಾದ ಚಲಿಸುವ, ಮೂರ್ತಿಗಳ ಮಾದರಿಗಳು', 'ರಾಮಚರಿತ ಮಾನಸ'ದಲ್ಲಿ ಬರುವ 'ಲೀಲಾ ಪ್ರಸಂಗ'ಗಳನ್ನು, ಹಾಗೂ, 'ಕೃಷ್ಣಲೀಲಾ ಸಹಿತ', ಮೊದಲನೆಯ ಅಂತಸ್ತಿನ, 'ರಾಮ್ ಕೃಷ್ಣ ಲೀಲಾ ಉದ್ಯಾನ್' ನಲ್ಲಿ ಪ್ರದರ್ಶಿಸಲ್ಪಟ್ಟಿವೆ.