ಸಂತ ಜೋಸೆಫರ ಪ್ರಧಾನಾಲಯ

ಸಂತ ಫಿಲೋಮಿನಮ್ಮನವರ ಹೆಸರಿನಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದರೂ ಇದನ್ನು ಸಂತ ಜೋಸೆಫರ ಪ್ರಧಾನ ದೇವಾಲಯವೆಂದು ಕರೆಯುವುದೇ ವಾಡಿಕೆ. ಮೈಸೂರು ಧರ್ಮಕ್ಷೇತ್ರಕ್ಕೆ ಸೇರಿದ ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ದೇವಾಲಯವಾದ ಇದಾದುದರಿಂದ ಇದನ್ನು ಪ್ರಧಾನ ದೇವಾಲಯವೆನ್ನುತ್ತಾರೆ. ೧೮೩೦ರಲ್ಲಿ ಸ್ವಾಮಿ ಜಾರಿಗೆಯವರು ಈ ದೇವಾಲಯದ ರೂಪರೇಷೆಗಳನ್ನು ಸಿದ್ದಪಡಿಸಿ, ದೇವಾಲಯವನ್ನು ನಿರ್ಮಿಸಿದಂದಿನಿಂದ ಇದುವರೆಗೆ ಒಟ್ಟು ೩೭ ಜನ ಪ್ರಧಾನ ಗುರುಗಳು ಈ ದೇವಾಲಯದಲ್ಲಿ ದುಡಿದು ಇದನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಅವರುಗಳಲ್ಲಿ ಸ್ಥಳೀಯರಾದ ಸ್ವಾಮಿ ಮಥಿಯಾಸ್ ಫೆರ್ನಾಂಡಿಸ್, ಸ್ವಾಮಿ ಮೈಕಲ್, ಸ್ವಾಮಿ ಗ್ರೆಗೋರಿಯಸ್ ಮಾಡಪಿಳ್ಳಿ, ಸ್ವಾಮಿ ಡೆನಿಸ್ ನೊರೋನ್ಹ, ಸ್ವಾಮಿ ಸಂತಿಯಗೊ, ಸ್ವಾಮಿ ಜೋಸೆಫ್ ಡಿಮೆಲ್ಲೊ ಮತ್ತು ಸ್ವಾಮಿ ಡಾ.ಎನ್.ಎಸ್.ಮರಿ ಜೋಸೆಫ್ ಪ್ರಮುಖರು.

ಸಂತ ಜೋಸೆಫರ ಪ್ರಧಾನಾಲಯದ ಪಾರ್ಶ್ವ ನೋಟ

ಪ್ರಧಾನಾಲಯದ ನೆರಳಲ್ಲಿ ಹಲವು ವಿದ್ಯಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳಲ್ಲಿ ಸಂತ ಫಿಲೋಮಿನ ಪ್ರೌಢಶಾಲೆ, ಸಂತ ಮೇರಿ ಬಾಲಕರ ಇಂಗ್ಲಿಷ್ ಮಾಧ್ಯಮ ಶಾಲೆ, ಸಂತ ಜೋಸೆಫರ ಮಾಧ್ಯಮಿಕ ಶಾಲೆ, ಸಂತ ಫಿಲೋಮಿನ ಕನ್ನಡ ಪ್ರೈಮರಿ ಶಾಲೆ, ಸಂತ ಫಿಲೋಮಿನಾ ಐಟಿಐ ಪ್ರಮುಖವಾದವು. ಈ ಚರ್ಚನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂತ ಫಿಲೋಮಿನ ವಸತಿಗ್ರಹ ಮತ್ತು ಸಂತ ಫಿಲೋಮಿನ ಬಾಯ್ಸ್ ಹೋಂ ಈಗ ಮುಚ್ಚುವ ಸ್ಥಿತಿಯಲ್ಲಿದೆ.

ಚಿಕ್ಕಮಗಳೂರಿನ ಸಂತ ಜೋಸೆಫರ ಪ್ರಧಾನಾಲಯ ಬದಲಾಯಿಸಿ

ಚಿಕ್ಕಮಗಳೂರು ಧರ್ಮಕ್ಷೇತ್ರದ ಪ್ರಧಾನ ದೇವಾಲಯವನ್ನೂ ಸಂತ ಜೋಸೆಫರ ಪ್ರಧಾನ ದೇವಾಲಯವೆಂದೇ ಕರೆಯುತ್ತಾರೆ.

ಶಿವಮೊಗ್ಗದ ಸಂತ ಜೋಸೆಫರ ಪ್ರಧಾನಾಲಯ ಬದಲಾಯಿಸಿ

ಶಿವಮೊಗ್ಗ ಧರ್ಮಕ್ಷೇತ್ರದ ಪ್ರಧಾನ ದೇವಾಲಯವನ್ನೂ ಸಂತ ಜೋಸೆಫರ ಪ್ರಧಾನ ದೇವಾಲಯವೆನ್ನುವ ಹೆಸರಿನಿಂದಲೇ ಕರೆಯುತ್ತಾರೆ.