ಸಂತೆಬೆನ್ನೂರು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಒಂದು ಪಟ್ಟಣ. ಇದು ದಾವಣೆಗೆರೆಯಿಂದ ೪೦ ಕಿ.ಮೀ ಮತ್ತು ಶಿವಮೊಗ್ಗದಿಂದ ೬೦ ಕಿ.ಮೀ ದೂರವಿದೆ. ಚನ್ನಗಿರಿ, ತಾಲೂಕಿನ ಕೇಂದ್ರ ಕಾರ್ಯಾಲಯವಗಿದ್ದು ಸಂತೆಬೆನ್ನೂರಿಗೆ ೨೨ ಕಿ.ಮೀ ದೂರವಿದೆ.

ಇತಿಹಾಸ

ಬದಲಾಯಿಸಿ

ಈ ಊರಿನ ವಿಶೇಷವೆಂದರೆ ಇಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿತವಾದ ಬಹು ಸುಂದರ ಪುಷ್ಕರಣಿ (Pond) ಇದೆ. ಇದಕ್ಕೆ ರಾಮತೀರ್ಥ ಪುಷ್ಕರಣಿ ಅಥವಾ ಪವಿತ್ರ ಪುಷ್ಕರಣಿ ಎಂದು ಹೆಸರಿದೆ. ಈ ಪುಷ್ಕರಣಿಯಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಒಂದು ಕಾಲದಲ್ಲಿ ಸಂತೆಬೆನ್ನೂರು ಬರಗಾಲಕ್ಕೆ ತುತ್ತದಾಗಲೂ ಈ ಕೊಳದಲ್ಲಿ ನೀರು ತುಂಬಿತ್ತೆಂದು ನಂಬಲಾಗುತ್ತದೆ. ಈ ಕಾರಣದಿಂದ ಇದಕ್ಕೆ ಅಕ್ಷಯ ಪಾತ್ರೆ ಎಂತಲೂ ಕರೆಯುತ್ತಾರೆ. ಇದಲ್ಲದೆ ಕೊಳದ ಮದ್ಯದಲ್ಲಿ ಹಿಂದೂ-ಅರಬ್ ಶೈಲಿಯಲ್ಲಿ ನಿರ್ಮಿತವಾದ ಐದು ಅಂತಸ್ತಿನ "ವಸಂತ ಮಂಟಪ" ಈ ಕೊಳಕ್ಕೆ ಅದ್ಬುತವಾದ ಶೋಬೆಯನ್ನು ಕೊಡುತ್ತದೆ.

ಇತರೆ ಮಾಹಿತಿ

ಬದಲಾಯಿಸಿ

ಸಂತೆಬೆನ್ನೂರಿನಲ್ಲಿ ವಿಜಯ ಯುವಕ ಸಂಘದವರು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯನ್ನು ಸತ್ಯನಾರಾಯಣ ನಾಡಿಗ್ ಎಂಬುವವರು ಸ್ಥಾಪಿಸಿದರು. ಈಗ ಆ ಸಂಘವನ್ನು ಶ್ರೀ ಸುಮತೀಂದ್ರ ನಾಡಿಗ್'ರವರು ನೋಡಿಕೊಳ್ಳುತ್ತಿದ್ದಾರೆ.

ಸಂತೆಬೆನ್ನೂರಿನಲ್ಲಿ ಮದುವೆಯ ಮಂಟಪ ಮತ್ತು ಒಂದು ಪದವಿ ಕಾಲೇಜು ಕೂಡ ಇದೆ. ಅಲ್ಲಿ ಶ್ರೀ ರಾಮನ ದೇವ್ವಸ್ಥಾನವೂ ಇದೆ.