ಸಂಗ್ಯಾ ಬಾಳ್ಯ
ಟೆಂಪ್ಲೇಟು:Infobox film/short description
ಸಂಗ್ಯಾ ಬಾಳ್ಯ |
---|
ಸಂಗ್ಯಾ ಬಾಳ್ಯಾ 1992 ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಸುಂದರ್ ಕೃಷ್ಣ ಅರಸ್ ನಿರ್ದೇಶಿಸಿದ್ದಾರೆ. ಚಲನಚಿತ್ರದ ಕಥೆಯು ಅದೇ ಹೆಸರಿನ ಜಾನಪದ ಕಥೆಯನ್ನು ಆಧರಿಸಿದೆ, ಇದನ್ನು ನೂರು ವರ್ಷಗಳ ಹಿಂದೆ ನಡೆದ ಣಯಜ ಘಟನೆಯನ್ನು ಚಲನಚಿತ್ರಮಾಡಲಾಗಿದೆ. ವಿಜಯ ಭಾಸ್ಕರ್ ಸಂಗೀತ ಸಂಯೋಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತುರಮರಿ ಮತ್ತು ಹುಣಶಿಕಟ್ಟಿ ಗ್ರಾಮಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.[೨]
ಕಥೆ
ಬದಲಾಯಿಸಿಸಂಗ್ಯಾ ಊರ ಶ್ರೀಮಂತರ ಮಗ. ಗಂಗಾ ಸಜ್ಜನ ಮನೆತನಸ್ಥದ ಹೆಣ್ಣು. ವೀರಭದ್ರ ಊರಿನ ಗಣ್ಯ ನಾಗರಿಕ. ನಾಟಕದ ಪ್ರಾರಂಭದಲ್ಲಿ ಬಾಳಣ್ಣನೊಡನೆ ಪೇಟೆಗೆ ಬಂದಾಗ ಸಂಗ್ಯಾ ಮರ್ಯಾದೆಯಿಂದ ವರ್ತಿಸುತ್ತಾನೆ. ಮರಡಿ ಬಸವಣ್ಣನ ಜಾತ್ರೆಗೆ ಹೋಗುವ ತನಕ ಗಂಗಾ ವಿನಯದಿಂದ ವರ್ತಿಸುತ್ತಾಳೆ. ಜಾತ್ರೆಯಲ್ಲಿ ಗಂಗಾಳ ರೂಪಕ್ಕೆ ಮರುಳಾಗುವ ಸಂಗ್ಯಾ ಅವಳನ್ನು ಮೋಹಿಸುವ ಆಸೆಯನ್ನು ಗೆಳೆಯ ಬಾಳ್ಯನ ಬಳಿ ಹೇಳಿಕೊಳ್ಳುತ್ತಾನೆ. ಗಂಡನ ಅಗಲಿಕೆಯಿಂದ ಉಂಟಾದ ಶೂನ್ಯ ಮತ್ತು ಪರಮ್ಮನ ಕುಟಿಲ ಬುದ್ಧಿಯ ಫಲವಾಗಿ ಗಂಗಾ ಸಂಗ್ಯಾನಿಗೆ ವಶವಾಗುತ್ತಾಳೆ. ಗಂಡುಳ್ಳ ಗರತಿಯನ್ನು ಮೋಹಿಸಬಾರದೆಂದು ಗೊತ್ತಿದ್ದೂ ಸಂಗ್ಯಾ ಅವಳನ್ನು ಕೂಡಲು ಮನಸ್ಸು ಮಾಡುತ್ತಾನೆ. ಕೊನೆಯವರೆಗೆ ಅವನಲ್ಲಿರುವ ಗುಣವೆಂದರೆ ಧೈರ್ಯವೊಂದೇ.[೩]
ಉಲ್ಲೇಖಗಳು
ಬದಲಾಯಿಸಿ- ↑ "Sangya Balya (1992) Kannada movie: Cast & Crew". chiloka.com.
- ↑ (PDF) http://dff.nic.in/images/Documents/132_IPCatalogue1992.pdf.
{{cite journal}}
: Cite journal requires|journal=
(help); Missing or empty|title=
(help) - ↑ "ಸಂಗ್ಯಾ-ಬಾಳ್ಯಾ".