ಷರ್ವುಡ್ ಆಂಡರ್ಸನ್
ಷರ್ವುಡ್ ಆಂಡರ್ಸನ್ (ಸೆಪ್ಟೆಂಬರ್ 13, 1876 – ಮಾರ್ಚ್ 8, 1941) . ಅಮೆರಿಕದ ಬರೆಹಗಾರ,ಸಣ್ಣ ಕಥೆಗಾರ.
ಷರ್ವುಡ್ ಆಂಡರ್ಸನ್ | |
---|---|
ಜನನ | Camden, Ohio, United States | ೧೩ ಸೆಪ್ಟೆಂಬರ್ ೧೮೭೬
ಮರಣ | March 8, 1941 Colón, Panama | (aged 64)
ವೃತ್ತಿ | ಲೇಖಕ |
ಪ್ರಮುಖ ಕೆಲಸ(ಗಳು) | Winesburg, Ohio |
ಬಾಳ ಸಂಗಾತಿ | Cornelia Pratt Lane (1904–1916) Tennessee Claflin Mitchell (1916–1924) Elizabeth Prall (1924–1932) Eleanor Copenhaver (1933–1941) |
ಪ್ರಭಾವಗಳು | |
ಸಹಿ |
ಆರಂಭಿಕ ಜೀವನ
ಬದಲಾಯಿಸಿಷರ್ವುಡ್ ಆಂಡರ್ಸನ್ ಸೆಪ್ಟೆಂಬರ್ 13, 1876ರಲ್ಲಿ ಓಹಿಯೋದ ಕಾಮ್ಡೆನ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದನು. ೧೮೭೦ರಲ್ಲಿ ಈ ಹಳ್ಳಿಯ ಜನಸಂಖ್ಯೆ ಕೇವಲ ೬೫೦.[೧].ಆದರೆ ಆಂಡರ್ಸನ್ ಚಿಕ್ಕವನಿದ್ದಾಗಲೇ ಇವನ ಹೆತ್ತವರು ಈ ಹಳ್ಳಿಯನ್ನು ತೊರೆದರು.ಹಲವಾರು ಸ್ಥಳಗಳ ನಂತರೆ ೧೮೮೪ರಲ್ಲಿ ಕ್ಲೈಡ್ ಎಂಬಲ್ಲಿ ಈ ಕುಟುಂಬ ನೆಲೆಸಿತು[೨][೩].ಕಡು ಬಡತನದಿಂದಾಗಿ ಷರ್ವುಡ್ ಬಾಲ್ಯದಲ್ಲಿಯೇ ಸಂಪಾದನೆಗೆ ತೊಡಗಬೇಕಾಯಿತು.ಇದರಿಂದಾಗಿ ಇವನ ವಿದ್ಯಾಭ್ಯಾಸಕ್ಕೆ ತೊಡಕುಂಟಾಯಿತು.ಸ್ಪ್ಯಾನಿಷ್ ಅಮೆರಿಕನ್ ಯುದ್ಧದಲ್ಲಿ ಪಾಲುಗೊಂಡು ಅನಂತರ ಕೆಲಕಾಲ ಬಣ್ಣದ ಕಾರ್ಖಾನೆಯೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡಿದ.
ಸಾಹಿತ್ಯ ರಚನೆ
ಬದಲಾಯಿಸಿವಿಂಡಿ ಮೆಕ್ ಫರ್‍ಸನ್ಸ್ ಸನ್ (1916), ಮಾರ್ಚಿಂಗ್ ಮೆನ್ (1917) ಮೊದಲಾದ ಕಾದಂಬರಿಗಳನ್ನು ಬರೆದರೂ ವೈನ್ಸ್‍ಬರ್ಗ್ ಓಹಿಯೊ ಎಂಬ ಕಥಾಸಂಕಲನ ಪ್ರಕಟವಾದ ಮೇಲೆ ಪ್ರಸಿದ್ಧನಾದ. ಪೂರ್‍ವೈಟ್ (1920), ಡಾರ್ಕ್ ಲಾಫ್ಟರ್ (1925), ಪರ್‍ಹ್ಯಾಪ್ಸ್ ವಿಮೆನ್(1931) ಮೊದಲಾದ ಕಾದಂಬರಿಗಳು ಯಂತ್ರಗಳ ಆಗಮನದಿಂದ ನಗರ ಜೀವನದ ನೈರ್ಮಲ್ಯ ಕದಡಿದುದನ್ನೂ ಅವುಗಳನ್ನು ಅವಲಂಬಿಸಿ ಬಿಳಿಯರ ಬದುಕು ಪಕ್ವಹೀನವಾಗುತ್ತಿರುವುದನ್ನು ಅವುಗಳಿಂದ ಪಾರಾಗುವ ಬಗ್ಗೆ ಯಾವುದೆಂಬುದನ್ನೂ ಚಿತ್ರಿಸುತ್ತವೆ. ದಿ ಟ್ರಯಂಫ್ ಆಫ್ ದಿ ಎಗ್ (1921), ಹಾರ್ಸಸ್ ಅಂಡ್ ಮೆನ್ (1923), ಡೆತ್ ಇನ್ ದಿ ವುಡ್ಸ್ (1933)- ಇವು ಆತನ ಕೆಲವು ಕಥಾ ಸಂಗ್ರಹಗಳು. ಹೋಮ್‍ಟೌನ್ ಎಂಬ ಪ್ರಬಂಧ ಸಂಕಲನ ಮರಣಾನಂತರ ಪ್ರಕಟವಾಯಿತು.
ಉಲ್ಲೇಖಗಳು
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- Works by Sherwood Anderson at Project Gutenberg
- Works by Sherwood Anderson at Project Gutenberg Australia
- Sherwood Anderson Biography
- Sherwood Anderson Biography 2
- Sherwood Anderson in the Dial Archived 2012-04-29 ವೇಬ್ಯಾಕ್ ಮೆಷಿನ್ ನಲ್ಲಿ.
- Sherwood Anderson Links
- Winesburg, Ohio Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. hypertext from American Studies at the University of Virginia.
- The Triumph of the Egg Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. hypertext from American Studies at the University of Virginia.
- Oral History Interview with Eleanor Copenhaver Anderson from Oral Histories of the American South
- Sherwood Anderson Papers Archived 2015-05-13 ವೇಬ್ಯಾಕ್ ಮೆಷಿನ್ ನಲ್ಲಿ. at The Newberry Library
- Sherwood Anderson Archive Archived 2012-05-02 ವೇಬ್ಯಾಕ್ ಮೆಷಿನ್ ನಲ್ಲಿ. at the Smyth-Bland Regional Library
- Sherwood Anderson Literary Center Archived 2014-12-18 ವೇಬ್ಯಾಕ್ ಮೆಷಿನ್ ನಲ್ಲಿ.
- Ten Stories by Sherwood Anderson read aloud by contemporary writers including Charles Baxter, Deborah Eisenberg, Robert Boswell,Patricia Hampl, Siri Hustvedt, Ben Marcus, Rick Moody, Antonya Nelson and Benjamin Taylor