ಮುಖ್ಯ ಮೆನು ತೆರೆ
Empalement.jpg

ಮರಣದಂಡನೆ ಮತ್ತು ಚಿತ್ರಹಿಂಸೆಯ ವಿಧಾನವಾಗಿ, ಶೂಲಕ್ಕೇರಿಸುವುದು ಎಂದರೆ ಒಬ್ಬ ವ್ಯಕ್ತಿಯ ದೇಹದೊಳಗೆ ಶೂಲ, ಕಂಬ, ಈಟಿ, ಅಥವಾ ಕೊಕ್ಕೆಯಂತಹ ವಸ್ತುವನ್ನು ತೂರಿಸುವುದು, ಹಲವುವೇಳೆ ಮುಂಡದ ಸಂಪೂರ್ಣ ಅಥವಾ ಭಾಗಶಃ ರಂಧ್ರೀಕರಣದ ಮೂಲಕ. ಇದನ್ನು ವಿಶೇಷವಾಗಿ ದೇಶದ ವಿರುದ್ಧದ ಅಪರಾಧಗಳಿಗೆ ಪ್ರತಿಯಾಗಿ ಬಳಸಲಾಗುತ್ತಿತ್ತು. ಇದನ್ನು ಅನೇಕ ಸಂಸ್ಕೃತಿಗಳಾದ್ಯಂತ ಮರಣದಂಡನೆಯ ಬಹಳ ಕಠೋರ ರೂಪವೆಂದು ಪರಿಗಣಿಸಲಾಗಿತ್ತು ಮತ್ತು ಕಾಲ್ಪನಿಕ ಕತೆಗಳು ಹಾಗೂ ಕಲೆಯಲ್ಲಿ ದಾಖಲಿತವಾಗಿತ್ತು. ಬಂಡಾಯಗಳನ್ನು ಹತ್ತಿಕ್ಕಲು, ದೇಶದ್ರೋಹಿಗಳು ಅಥವಾ ಸಹಯೋಗಿಗಳನ್ನು ಶಿಕ್ಷಿಸಲು, ಮತ್ತು ಸೇನಾಶಿಸ್ತಿನ ಉಲ್ಲಂಘನೆಗಳನ್ನು ಶಿಕ್ಷಿಸಲು ಈ ವಿಧಾನವನ್ನು ಯುದ್ಧದ ಸಮಯದಲ್ಲಿ ಕೂಡ ಬಳಸಲಾಗುತ್ತಿತ್ತು.

ಶೂಲಕ್ಕೇರಿಸುವ ಶಿಕ್ಷೆಯನ್ನು ಬಳಸಲಾದ ಅಪರಾಧಗಳ ಸಂದರ್ಭಗಳೆಂದರೆ: ಹೆದ್ದಾರಿ ದರೋಡೆ ಅಥವಾ ಭಾರೀ ದರೋಡೆ ಮಾಡುವುದು, ರಾಜ್ಯನೀತಿಗಳು ಅಥವಾ ಪೂರ್ಣಾಧಿಕಾರವನ್ನು ಉಲ್ಲಂಘಿಸುವುದು, ಅಥವಾ ವ್ಯಾಪಾರದ ಗುಣಮಟ್ಟಗಳನ್ನು ದುರ್ಬಲಗೊಳಿಸುವ ಮೂಲಕ ಸುರಕ್ಷಿತ ರಸ್ತೆಗಳು ಮತ್ತು ವ್ಯಾಪಾರ ಮಾರ್ಗಗಳ ರಾಜ್ಯದ ಹೊಣೆಗೆ ಅವಮಾನ.

ಉಲ್ಲೇಖಗಳುಸಂಪಾದಿಸಿ