ಶಿವರಾಮ ಕೆ. ಭಂಡಾರಿ

'ಶಿವರಾಮ ಕೆ. ಭಂಡಾರಿ,' 'ಪರಂಪರಾಗತ ಕ್ಷೌರಿಕ ವೃತ್ತಿಯಲ್ಲಿ ಒಂದು ಪರಿಕ್ರಮಮಾಡಿದ ಕರ್ನಾಟಕದ ವ್ಯಕ್ತಿ'. 'ಅಲ್ಟ್ರಸಾನಿಕ್', ತಂತ್ರದ ಬಳಕೆಯಿಂದ 'ಸ್ಟೆರಿಲೈಸ್' ಮಾಡಿದ ಅತ್ಯಾಧುನಿಕ ಉಪಕರಣಗಳನ್ನು ಬಳಸಿ, ಶಿವಾಸ್ ಸ್ಟೈಲೋ ಎಂಬ ಹೆಸರಿನಲ್ಲಿ ಗ್ರಾಹಕರಿಗೆ ಪರಿಚಿತರಾಗಿರುವ 'ಐ.ಎಸ್.ಒ' (ISO) ಮಾನ್ಯತೆ ಪಡೆದ 'ಕೇಶ ಶೃಂಗಾರ ಸಂಸ್ಥೆಯ ಹೆಮ್ಮೆಯ ಮಾಲೀಕ'ರಾಗಿ ಹೆಸರುಗಳಿಸಿದ್ದಾರೆ. ಸನ್, ೨೦೧೦ ರಲ್ಲಿ ಆರಂಭವಾದ 'ಕೇಶಶೃಂಗಾರ ಕಲೆ'ಯಲ್ಲಿ ಅತ್ಯಾಸಕ್ತಿಯಿಂದ ಭವಿಷ್ಯ ಅರಸುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಬೆಳಗಂಬವಾಗಿರುವ. ಶಿವರಾಮ ಕೆ. ಭಂಡಾರಿ' ಯವರು, ಇಲ್ಲಿಂದ ಹೊರಗೆ ಬಂದ ತಮ್ಮ ಸ್ವಯಂಪ್ರತಿಭೆಯನ್ನು ಉದ್ದೀಪಿಸಿ, 'ಮುಂಬೈನ ಫ್ಯಾಶನ್ ಲೋಕ'ದಲ್ಲಿ ತಮ್ಮದೇ ಆದ ಒಂದು ಹೊಸ ನೆಲೆಯನ್ನು ಕಂಡುಕೊಂಡಿದ್ದಾರೆ.

ಕೇಶ ಶೃಂಗಾರದ ಹಲವು ಪ್ರಕಾರಗಳುಸಂಪಾದಿಸಿ

'ಕೇಶಕರ್ತನ ಮತ್ತು ಶೃಂಗಾರ', ತಲೆಗೂದಲು, ಚರ್ಮ, ಉಗುರಿನ ಆರೈಕೆ, ಸೌಂದರ್ಯ ವರ್ಧನೆ, ಚಿಕಿತ್ಸೆ, ಎಲ್ಲ ರೀತಿಯಲ್ಲೂ ಬಹುಪ್ರಸಿದ್ಧಿಯಾಗಿದೆ. ಕರಾವಳಿಯ ಅನೇಕ ಯುವಕರಿಗೆ ಆಶ್ರತಾಣ. ಉಚಿತವಾಗಿ ವಸತಿ ಸೌಕರ್ಯವನ್ನೂ ಕೊಟ್ಟು ತರಬೇತಿಯನ್ನೂ ನೀಡಿದ್ದಾರೆ. ಈಗ, 'ಕ್ಷರಿಕ ಕಸುಬು' ಹೊಸ ಆಯಾಮವನ್ನು ಪಡೆದು ಉತ್ತಮ ಮಾರುಕಟ್ಟೆಯಸ್ಥಾನವನ್ನು ಗ್ರಹಿಸಿದೆ.

ಶಿವರಾಮರು ನಿರ್ವಹಿಸಿ ಸಾಧಿಸಿದ ಹಲವು ಮೈಲಿಗಲ್ಲುಗಳುಸಂಪಾದಿಸಿ

 • 'ಫಿಲ್ಮ್ ಫೇರ್ ಅವಾರ್ಡ್' ಗಳಿಗೆ ಪ್ರಸಾಧನ ಮತ್ತಿತರ ಪರಿಕರಗಳನ್ನು ಮಾರುವ ಹಲವಾರು 'ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಹೇರ್ ಸ್ಟೈಲಿಸ್ಟ್' ಆಗಿ ಕೆಲಸ ನಿರ್ವಹಿಸಿದ್ದು.
 • ಮಲೇಶಿಯ, ಜರ್ಮನಿ, ಇಟಲಿ, ಚೈನ, ಲಂಡನ್, ಕುವೈತ್, ಪ್ಯಾರಿಸ್ ಮೊದಲಾದ ಹಲವು ದೇಶಗಳನ್ನು ಕೇಶಶೃಂಗಾರ ಕಲೆಗಳಲ್ಲಿ ಭಾಗವಹಿಸಲು ಕಲಿತು ವೀಕ್ಷಿಸಲು, ನೋಡಿಕಲಿಯಲು ಸುತ್ತಿಬಂದಿದ್ದಾರೆ.
 • 'ಬ್ರಿಟಿಷ್ ಹೇರ್ ಡ್ರೆಸ್ಸಿಂಗ್ ಕಮೀಷನರ್' 'ಕ್ರಿಸ್ತ ಫರ್ಮಾನ್' ಅವರಿಂದ ೧೯೯೮ ರಲ್ಲಿ 'ಸೆಲೂನ್ ಇಂಟರ್ ನ್ಯಾಶನಲ್ ಅವಾರ್ಡ್' ಸ್ವೀಕರಿಸಿದರು. 'ಗೋಲ್ಡನ್ ಪ್ರೈಸ್ ಖ್ಯಾತಿ' ಪಡೆದ ಈ ಪ್ರಶಸ್ತಿಯಿಂದ ಲಂಡನ್ ನಲ್ಲಿ ಒಂದು ತಿಂಗಳು 'ಕೇಶವಿನ್ಯಾಸ ತರಬೇತಿ' ಪಡೆಯುವ ಅವಕಾಶ ಸಿಕ್ಕಿತು.
 • ಕಾಂಗ್ರೆಸ್ ಮತ್ತು ಬಿಜೆಪಿ ಮಾಧ್ಯದಲ್ಲಿ 'ತೆಹಲ್ಕಾದ ಲೋಗೋ' ಬರುವಂತೆ ಮೂರುಜನರ ತಲೆಯಲ್ಲಿ ರಚಿಸಿದ ಸುಂದರ ಕೇಶ ವಿನ್ಯಾಸದಿಂದ ಪ್ರಭಾವಿತವಾದ 'ಬಿಬಿಸಿ ಛಾನೆಲ್'(BBC) ಈ ವಿಶಿಷ್ಠ ಕಲೆಗಾರಿಕೆಯನ್ನು ಬಿತ್ತರಿಸಿ, ಶಿವರಾಮರಿಗೆ ಗೌರವ ನೀಡಿದೆ.
 • 'ಇಂಡಿಯನ್ ಪ್ರಿನ್ಸೆಸ್ ಫ್ಯಾಶನ್ ಶೋ' ನ ಪ್ರಸಿದ್ಧ ವಿನ್ಯಾಸಕಿ ಅರ್ಚನಾ ಕೋಚರ್ ಅವರ ವಿನ್ಯಾಸಗಳಿಗೆ 'ಕೇಶ ಶೃಂಗಾರ ದ ಸಾಥ್ ನೀಡಿದ್ದು' 'ಫ್ಯಾಶನ್ ದಿಗ್ಗಜರ ಸಾಲಿನಲ್ಲಿ ಶಿವರಾಮರನ್ನೂ ಸೇರಿಸಿದೆ'.
 • 'ಫ್ಯಾಶನ್ ಏಷ್ಯಾ'ದಿಂದ 'ಏಷ್ಯನ್ ಟಾಪ್ ಫ್ಯಾಷನ್ ಹೇರ್ ಸ್ಟೈಲಿಸ್ಟ್ ಆಫ್ ದ ಯಿಯರ್-೨೦೧೧,' ಸ್ಪರ್ಧೆಯಲ್ಲಿ ಮೆಚ್ಚುಗೆಯ ಪುರಸ್ಕಾರದ ಜೊತೆಗೆ ಮಲೇಶಿಯಾದಲ್ಲಿ ನಡೆದ, ಮಿಸ್ ಟೂರಿಸಂ ಇಂಟರ್ ನ್ಯಾಷನಲ್ ನ ಸುಂದರಿಯರಿಗೆ ಕೇಶ ವಿನ್ಯಾಸ ಮಾಡುವ ಅವಕಾಶ. ಇದು, 'ಸೃಜನ ಶೀಲ ಕೇಶವಿನ್ಯಾಸಕರಿಗೆ ದೊರೆಯುವ ಅನುಪಮ ಗೌರವ'.
 • ೨೦೧೧ ರ ಮೇ, ೨೯ ರಂದು 'ಗೋದ್ರೆಜ್ ಸಂಸ್ಥೆ' ಕೇವಲ ೧೨ ಗಂಟೆಗಳಲ್ಲಿ ೧,೫೧೧ ಜನರ ತೆಲೆಗೂದಲಿಗೆ ಬಣ್ಣ ಹಚ್ಚುವ ಮೂಲಕ ’ಲಿಮ್ಕಾ ದಾಖಲೆ ’ನಿರ್ಮಿಸಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕನಸನ್ನು ಕಾರ್ಯಗತಗೊಳಿಸಲು ಸಹಕರಿಸಿದ ಕೀರ್ತಿ.
 • 'ಸುಷ್ಮಾ' ಎಂಬ ಹುಡುಗಿಯ ತಲೆಯಲ್ಲಿ ಮೂಡಿಸಿದ 'ವರ್ಲ್ಡ್ ಕಪ್ ನ ಪ್ತತಿಕೃತಿ'
 • 'ರೂಪದರ್ಶಿ ಸೋಫಿಯಾ ಹಯಾತ್ ಳ, ತಲೆಯಲ್ಲಿ ಮೂಡಿಸಿದ ಆಕ್ಟೋಪಸ್ ನ ಪ್ರತಿಕೃತಿ', ಮತ್ತಿತರ ಹಲವು ವಿನ್ಯಾಸಗಳ ಮೂಲಕ ಗಮನ ಸೆಳೆದ ಶಿವರಾಂ, 'ಮುಂಬೈನಲ್ಲಿ ಅಧ್ಬುತವಾದ ಹೇರ್ ಶೋ' ಮಾಡುವ ಕನಸೊಂದನ್ನು ಇಟ್ಟುಕೊಂಡಿದ್ದಾರೆ.

ಜನನ, ವಿದ್ಯಾಭ್ಯಾಸ ಹಾಗೂ ವೃತ್ತಿಜೀವನಸಂಪಾದಿಸಿ

ಹುಟ್ಟಿದ್ದು 'ಕಾರ್ಕಳ' ಜಿಲ್ಲೆಯ ಅತ್ತೂರ್ ನಲ್ಲಿ. ತಾಯಿ ಬೇಬಿ, ೪ ವರ್ಷತುಂಬುವುದರಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿಯೇ ಅವರಿಗೆ ಸರ್ವಸ್ವವಾಗಿ ಧೈರ್ಯವಾಗಿ ಬದುಕನ್ನು ಎದುರಿಸುವ ಕಲೆಯಲ್ಲಿ ತಮ್ಮನು ತೂಡಗಿಸಿಕೊಂಡರು. ಐದನೆಯ ತರಗತಿಯ ಬಳಿಕ ವಿದ್ಯಾಭ್ಯಾಸಕ್ಕೆ ತೊಂದರೆ ಸಂಭವಿಸಿತು. ಶಾಲೆಯಿಂದ ಹೊರಗೆ ಬಂಅದ ೧೦ ವರ್ಷದ ಬಾಲಕ ತಾಯಿಯ ಜೊತೆಗೂಡಿ ಅಲ್ಲಲ್ಲಿ ಕೆಲಸ, ಮತ್ತು ಕೂಲಿ-ನಾಲಿ ಕೆಲಸವನ್ನೂ ಮಾಡುತ್ತ, 'ಸೈಕಲ್ ಶಾಪ್' ನಲ್ಲಿ ಸಿಕ್ಕ ಕೆಲಸಮಾಡುತ್ತ, ಜೀವನ ನಿರ್ವಹಣೆ ಮಾಡುತ್ತಿದ್ದರು. 'ಕುಲಕಸುಬು ಕ್ಷರಿಕ ಕೆಲಸ'. ಚಿಕ್ಕಪ್ಪ ಚಿಕ್ಕಮಗಳೂರಿನ 'ಬಾಳೆಹೊನ್ನೂರ್' ನಲ್ಲಿ ಕ್ಷೌರದಂಗಡಿಯನ್ನು ನಡೆಸುತ್ತಿದ್ದರು. ಅಲ್ಲಿ ಹೋಗಿ ಜೊತೆಯಲ್ಲಿ ದುಡಿದು ಕೆಲಸ ಕಲಿತರು. ಅವರ ಮಗ, ವಿಠಲ ಭಂಡಾರಿ ಜೊತೆ ಬೊಂಬಾಯಿಗೆ ಬಂದು. ಒಂದು ಅಂಗಡಿಯನ್ನು ತೆರೆದರು. 'ಅಮಿತಾಬ್ ಬಚ್ಚನ್' ರವರ ತಂದೆ ಹರಿವಂಶರಾಯ್ ಬಚ್ಚನ್ ರವರ ಮನೆಗೇ ಹೋಗಿ 'ಕಟ್ಟಿಂಗ್,' 'ಶೇವಿಂಗ್' ಮಾಡಿದರು. ದುಡಿಯಲು ಶ್ರಮವಹಿಸಿ, ನವರಾತ್ರಿ ಹಬ್ಬದ ಸಮಯದಲ್ಲಿ ಹಗಲು ಕ್ಷೌರದ ಕೆಲಸ, ರಾತ್ರಿ, ಶರ್ಬತ್, ದೋಸೆಮಾಡುವ ಗಾಡಿಯನ್ನು ಸ್ಥಾಪಿಸಿಕೊಂಡು ಕೆಲಸ ಮಾಡುತ್ತಿದ್ದರು.

ಗಲ್ಫ್ ನಲ್ಲಿ ನೌಕರಿಸಂಪಾದಿಸಿ

ಪತ್ರಿಕೆಯೊಂದರಲ್ಲಿ ಜಾಹಿರಾತನ್ನು ಕಂಡು ಒಬ್ಬ ಏಂಟ್ ಮೂಲಕ ಕತಾರ್ ನಗರಕ್ಕೆ ಹೊರಡಲು ಸಿದ್ಧರಾದರು. ಅದಕ್ಕಾಗಿ ಹಣ ಬಹಳ ಬೇಕಾಗಿತ್ತು. ಮನೆಯಲ್ಲಿದ ಬಂಗಾರದ ಒಡವೆಗಳನ್ನು ಅಡವಿಟ್ಟು ಹಣ ಪಡೆದು 'ಕತಾರ್' ಗೆ ತೆರಳಿದರು. ೧೯೮೪ ಆಲ್-ಸದ್-ಸ್ಪೋರ್ಟ್ಸ್ ಕ್ಲಬ್ ಬಳಿ ಒಂದು ಸಣ್ಣ ನೌಕರಿಗೆ ಸೇರಿಕೊಂಡರು. ಕ್ರೀಡಾ ಸಚಿವರಿಂದ ಕ್ರೀಡಾಪಟುಗಳವರೆಗೆ ಮತ್ತು ವಿಶ್ವದ ಹಲವೆಡೆಗಳಿಂದ ಅಲ್ಲಿಗೆ ಬರುತ್ತಿದ್ದ ಜನರಿಗೆ ಕೂದಲು ವಿನ್ಯಾಸ ಮಾಡಿದರು. ತಮ್ಮ ಕಸುಬಿನಲ್ಲಿ ಸೃಜನಶೀಲತೆಯನ್ನು ಹೊರಗೆಡಹಿದ ಉತ್ತಮ ಕೆಲಸವನ್ನು ಕಂಡು ಮೆಚ್ಚಿದ ಅಲ್ಲಿನ ಮ್ಯಾನೇಜರ್ ರಿಸ್ಕ್ ಆತಿಫ್ 'ನೀವು ಕ್ಷೌರಿಕರಿಗಿಂತ ಕೂದಲು ಶೃಂಗಾರಪಡಿಸುವ ಇಂಜಿನಿಯರ್ ಆಗಿದ್ದೀರಿ,' ಎಂದು ಹೊಗಳಿಕೆಯ ಮಾತಾಡಿದರು. ಹಾಗೆ ಕತಾರ್ ನಲ್ಲಿ ೩ ವರ್ಷಕ್ಕೂ ಮೇಲ್ಪಟ್ಟು ದುಡಿದು ಮೇರುಮಟ್ಟದ ಕೌಶಲ್ಯವನ್ನು ಗಳಿಸಿಕೊಂಡರು. ಆ ಕ್ಲಬ್ ಗೆ ಬರುತ್ತಿದ್ದ ಜನರಲ್ಲಿ ಹಲವು ದೇಶದ ನಾಗರಿಕರಿದ್ದರು. ಬ್ರೆಝಿಲ್, ಈಜಿಪ್ಟ್, ಸೂಡಾನ್, ಕೊರಿಯ, ದೇಶದವರು. ಪ್ರತಿದೇಶದವರೂ ವಿಭಿನ್ನ ಮಾದರಿಯ ಕೂದಲನ್ನು ಹೊಂದಿದ್ದರು,ಬ್ರೆಜಿಲ್ ದೇಶದವರು ಸ್ಪ್ರಿಂಗ್ ಕೂದಲು, ಫಿಲಿಫೈನ್ಸ್ ದೇಶದವರ ಕೂದಲು, ಹಂದಿ ಮುಳ್ಳಿನಂತಹದು, ಅಮೆರಿಕನ್ನರ ನೇರ ಕೂದಲು, ಇತ್ಯಾದಿ. ಶಿವರಾಮರ ಪರಿಶ್ರಮದ ಜೊತೆ ಹಣದ ಗಳಿಕೆಯೂ ಪ್ರಾರಂಭವಾಯಿತು. ೧೯೮೮ ರಲ್ಲಿ ಅವರು ಮುಂಬೈಗೆ ಬಂದು 'ಥಾಣೆ'ಯಲ್ಲಿ ೩ ಚೇರ್ ಗಳ ಕ್ಷೌರದಂಗಡಿ ತೆರೆದರು. ಕೆಲಸ ಬೆಳಿಗ್ಯೆ ೬ ರಿಂದ -ರಾತ್ರಿ ೧೨ ರವರೆಗೆ ನಿರಂತರವಾಗಿ ಸಾಗಿತ್ತು. ಅನೇಕ ಶಾಖೆಗಳನ್ನೂ ತೆರೆದರು.

 • ೧೯೯೩ ರಲ್ಲಿ, 'ಮುಲುಂಡ್',
 • ೨೦೦೦ ರಲ್ಲಿ, 'ಅಂಧೇರಿಯ ಲೋಖಂಡ್ ವಾಲದಲ್ಲಿ',
 • ೨೦೦೯ ರಲ್ಲಿ, 'ಜುಹು', ಗಳಲ್ಲಿ ಅತ್ಯಾಧುನಿಕ ಸೆಲೂನ್ ಗಳನ್ನು ತೆರೆದರು.
 • ಥಾಣೆಯ ಸೆಲೂನ್ ಬಿಟ್ಟರೆ ,ಉಳಿದವೆಲ್ಲ,'ಯೂನಿಸೆಕ್ಸ್' ಮಾದರಿಯದಾಗಿತ್ತು. 'ಮುಂಬೈನ ಬಾಲಿವುಡ್ ಜಗತ್ತು' ಅವರನು ಗುರುತಿಸಿತು. ಕಿರುತೆರೆಯ ಅಭಿನೇತರು, ಮಾಡೆಲ್ ಗಳು, ಸೆಲೆಬ್ರಿಟಿಗಳು,

ಹಾಗೂ 'ಫ್ಯಾಶನ್ ಪ್ರಿಯ', ಹೈ ಪ್ರೊಫೈಲ್ ಜನ, ಶಿವರಾಮ ಭಂಡಾರಿಯವರನ್ನು ಹುಡುಕಿಕೊಂಡು ಬರುತ್ತಿದ್ದರು.

ಗ್ರಾಹಕರ ಪಟ್ಟಿಯಲ್ಲಿ ಸೇರಿದ ಸೆಲೆಬ್ರಿಟಿಗಳುಸಂಪಾದಿಸಿ

 • ಮಧುರ್ ಭಂಡಾರ್ಕರ್,
 • ಬಾಳಾ ಸಾಹೆಬ್ ಠಾಕ್ರೆ,
 • ನೀಲ್ ನಿತಿನ್,
 • ಮುಕೇಶ್
 • ಮುಘ್ದಾ ಗೋಡ್ಸೆ,
 • ಶಾನ್,
 • ಬಾಬುಲ್,
 • ಸುಪ್ರಿಯೊ

ಬಾಹ್ಯ ಸಂಪರ್ಕಸಂಪಾದಿಸಿ