ಚಿತ್ರ:ಶಾರ್ಪ್ ಶೂಟರ್

ನಿರ್ಮಾಣ:ಬಾಲ ಸುಬ್ರಹ್ಮಣ್ಯಂ ಮತ್ತು ಬಿ.ವಿ.ಎಸ್ ಶ್ರೀನಿವಾಸ ಕಥೆ-ಚಿತ್ರಕಥೆ-ನಿರ್ದೇಶನ: ಗೌಸ್ ಪೀರ್ ಛಾಯಾಗ್ರಹಣ: ಕರುಣಾಕರ್ ಸಂಗೀತ:ಎಮ್.ಎಸ್.ಶಿವ ಸಂತೋಷ್ ಬಿಡುಗಡೆ ದಿನಾಂಕ: ೧೧-ಡಿಸೆಂಬರ್- ೨೦೧೫ ತಾರಾಗಣ: ದಿಗಂತ್, ಸಂಗೀತಾ ಚವ್ಹಾಣ್,ಭಜರಂಗಿ ಲೋಕಿ, ಚಿಕ್ಕಣ್ಣ, ಅಚ್ಯುತ್ ಕುಮಾರ್, ಸತ್ಯಜಿತ್, ಲಕ್ಷ್ಮೀ, ಸುಧಾರಾಣಿ, ವಿಶೇಷ ಪಾತ್ರದಲ್ಲಿ ಐಂದ್ರಿತಾ ರೈ ಮತ್ತು ಇತರರು. ಜೇಡರ ಕಣ್ಣಪ್ಪ(ದಿಗಂತ್) ಮತ್ತು ನಂದಿನಿ(ಸಂಗೀತಾ) ಎಂಬ ಎರಡು ಸರಳ ಪಾತ್ರಗಳ ನಡುವೆ ಸುತ್ತುವ ಕಥೆ. ಜೇಡರ ಕಣ್ಣಪ್ಪನಿಗೆ ಮೊದಲ ನೋಟದಲ್ಲಿಯೆ ನಂದಿನಿ ಮೇಲೆ ಪ್ರೀತಿ ಹುಟ್ಟುತ್ತದೆ. ಜೇಡರ ಕಣ್ಣಪ್ಪನಿಗೆ ಪ್ರೀತಿಯಾದರು ನಮ್ಮ ನಾಯಕಿ ನಂದಿನಿಗೆ ಅವನೆಂದರೆ ದ್ವೇಷ ಆದರೂ ನಾಯಕಿಗೆ ನಾಯಕನ ಮೇಲೆ ಪ್ರೀತಿಯಾಗುತ್ತದೆ. ಒಂದು ಬಾರಿ ನಾಯಕಿಯ ಮೇಲೆ ಗ್ಯಾಂಗ್ ದಾಳಿಮಾಡಲು ಬಂದಾಗ ನಾಯಕ ಬಂದು ಅವಳನ್ನು ಕಾಪಾಡುತ್ತಾನೆ.ಹೀಗೆ ನಮ್ಮ ನಾಯಕಿಗೆ ನಾಯಕನ ಮೇಲೆ ಪ್ರೀತಿಯಾಗುತ್ತದೆ. ದಿಗಂತ್ ನಟನೆಯ ೨೫ನೇ ಸಿನಿಮಾ ಶಾರ್ಪ್ ಶೂಟರ್ ನಟ ದಿಗಂತ್ ರವರ ಪ್ರಯತ್ನಕ್ಕು ಮೀರಿದ್ದು ಉತ್ತಮ ನಟನೆಯ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ.