ಹೂದಾನಿಯು (ಹೂಕುಂಡ) ಒಂದು ತೆರೆದ ಧಾರಕವಾಗಿದೆ. ಇದನ್ನು ಅನೇಕ ಸಾಮಗ್ರಿಗಳಿಂದ ತಯಾರಿಸಬಹುದು, ಉದಾಹರಣೆಗೆ ಪಿಂಗಾಣಿ, ಗಾಜು, ಅಲ್ಯೂಮಿನಿಯಮ್, ಹಿತ್ತಾಳೆ, ಕಂಚಿನಂತಹ ತುಕ್ಕು ಹಿಡಿಯದ ಲೋಹಗಳು ಅಥವಾ ತುಕ್ಕುರಹಿತ ಉಕ್ಕು. ಹೂದಾನಿಗಳನ್ನು ತಯಾರಿಸಲು ಕಟ್ಟಿಗೆಯನ್ನು ಕೂಡ ಬಳಸಲಾಗಿದೆ, ಕೊಳೆತವನ್ನು ನೈಸರ್ಗಿಕವಾಗಿ ತಡೆದುಕೊಳ್ಳುವ ಸಾಗುವಾನಿಯಂತಹ ವೃಕ್ಷ ಪ್ರಜಾತಿಗಳನ್ನು ಬಳಸಿ, ಅಥವಾ ಸಾಮಾನ್ಯ ದಾರುವಿಗೆ ರಕ್ಷಣಾ ಕವಚವನ್ನು ಲೇಪಿಸಿ. ಹೂದಾನಿಗಳನ್ನು ಹಲವುವೇಳೆ ಅಲಂಕರಿಸಲಾಗುತ್ತದೆ, ಮತ್ತು ಅವನ್ನು ಹಲವುವೇಳೆ ಕತ್ತರಿಸಿದ ಹೂಗಳನ್ನು ಹಿಡಿದಿಡಲು ಬಳಸಲಾಗುತ್ತದೆ. ಹೂದಾನಿಗಳು ಅವು ಹೊಂದಿರುವ ಹೂವಿಗೆ ಆಸರೆಯಾಗಲು ಭಿನ್ನ ಆಕಾರಗಳಲ್ಲಿ ಬರುತ್ತವೆ.

ನಿಯೋಕ್ಲಾಸಿಕಲ್ ಹೂದಾನಿ, ಸುಮಾರು ೧೭೯೦

ಹೂದಾನಿಗಳು ಸಾಮಾನ್ಯವಾಗಿ ಹೋಲುವ ಆಕಾರವನ್ನು ಹೊಂದಿರುತ್ತವೆ. ಕೆಳಭಾಗ ಅಥವಾ ಬುಡವು ಬುರುಡೆಯಾಕಾರ, ಚಪ್ಪಟೆಯಾಕಾರ, ಅಡಿಗಟ್ಟಿನಂಥ ಏಣುಗೆರೆಯಾಕಾರ[೧], ಅಥವಾ ಮತ್ತೊಂದು ಆಕಾರದ್ದಾಗಿರಬಹುದು. ಕಾಯವು ಅಂಗದ ಮುಖ್ಯ ಭಾಗವನ್ನು ರೂಪಿಸುತ್ತದೆ. ಕೆಲವು ಹೂದಾನಿಗಳು ಭುಜಗಳನ್ನು ಹೊಂದಿರುತ್ತವೆ. ಇಲ್ಲಿ ಕಾಯವು ಒಳಗಡೆಗೆ ಬಾಗುತ್ತದೆ. ಜೊತೆಗೆ ಎತ್ತರ ನೀಡುವ ಕುತ್ತಿಗೆ, ಹಾಗೂ ಹೂದಾನಿಯು ಅಗ್ರಭಾಗದಲ್ಲಿ ಮತ್ತೆ ಅಗಲವಾಗುವ ಭಾಗವಾದ ತುಟಿಯನ್ನು ಹೊಂದಿರುತ್ತವೆ. ಕೆಲವು ಹೂದಾನಿಗಳಿಗೆ ಹಿಡಿಕೆಗಳನ್ನೂ ನೀಡಿರಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Emmanuel Cooper. 2000. Ten Thousand Years of Pottery, fourth edition, University of Pennsylvania Press,
"https://kn.wikipedia.org/w/index.php?title=ಹೂದಾನಿ&oldid=914595" ಇಂದ ಪಡೆಯಲ್ಪಟ್ಟಿದೆ