ಹೀತ್ ಲೆಡ್ಜರ್

ವಯಸ್ಕ ಮನರಂಜನೆ

ಹೀತ್ ಆಂಡ್ರ್ಯೂ ಲೆಡ್ಜರ್ ( 4 ಅಪ್ರಿಲ್ 1979 – 22 ಜನವರಿ 2008)[೧] ಆಸ್ಟ್ರೇಲಿಯಾದ ಪ್ರಸಿದ್ಧ ನಟ ಹಾಗು ನಿರ್ದೇಶಕರಾಗಿದ್ದರು. 1990ರಲ್ಲಿ ಅಲ್ಲಿನ ದೂರದರ್ಶನದಲ್ಲಿ ಕೆಲವು ಪಾತ್ರಗಳನ್ನು ನಿರ್ವಹಿಸಿ ಮತ್ತು ಹಲವು ಕಾರ್ಯಕ್ರಮಗಳನ್ನು ನಿರ್ಮಿಸಿ ಮುಂದಿನ ಸಿನಿಮಾ ಪಯಣಕ್ಕೆ 1998ರಲ್ಲಿ ಅಮೇರಿಕಾಗೆ ಬಂದಿಳಿದರು. 10 ತಿಂಗ್ಸ್ ಐ ಹೇಟ್ ಅಬೌಟ್ ಯೂ (1999), ದ ಪೇಟ್ರಿಯಟ್ (2000), ಅ ನೈಟ್ಸ್ ಟೇಲ್ (2001) ಮಾನ್ಸ್ಟರ್ಸ್ ಬಾಲ್(2001) ಹೀಗೆ ಒಟ್ಟು 19 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಚಲನಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲದೆ ಹಲವು ಸಂಗೀತಕ್ಕೆ ಬೇಕಾಗಿರುವ ಚಿತ್ರಗಳನ್ನು ನಿರ್ದೇಶಿಸಿದ್ದಾರೆ[೨]. ಬ್ರೋಕ್ ಬ್ಯಾಕ್ ಮೌನ್ಟೇನ್ ಚಿತ್ರದ ಅಭಿನಯಕ್ಕಾಗಿ ಲೆಡ್ಜರ್ ನಟನೆಗೆ ನ್ಯೂಯಾರ್ಕ ಫಿಲ್ಮ್ ಕ್ರಿಟೀಕ್ಸ್ ಸರ್ಕಲ್ ಪ್ರಶಸ್ತಿ ದೊರಕಿದ್ದು, ಬಾಫ್ತಾ ಪ್ರಶಸ್ತಿಗಾಗಿ ನಾಮಾಂಕಿತಗೊಂಡಿದ್ದರು. ಈ ಚಿತ್ರದ ನಟನೆಗೆ ಎಕಾಡೆಮಿ ಪ್ರಶಸ್ತಿ ಸಹ ಲಭಿಸಿದೆ. 22 ಜನವರಿ 2008ರಂದು ಲೆಡ್ಜರ್ ಗುಳಿಗೆಗಳ ಹೈಡೋಸೇಜ್ ನಿಂದಾಗಿ ಅಕಸ್ಮಾತ್ತಾಗಿ ನಿಧನರಾದರು[೩]. ನಿಧನದ ಕೆಲವು ದಿನದ ಮುನ್ನ ಅವರು ಡಾರ್ಕ ನೈಟ್ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು. ಜಗಜ್ಚಾಹೀರ ಖಳನಾಯಕನಾದ ‘ದಿ ಜೋಕರ್’ ಪಾತ್ರವನ್ನು ಇವರು ನಿರ್ವಹಿಸುತ್ತಿದ್ದರು. ಈ ಚಿತ್ರದ ಸಂಪಾದನದ ಹಾಗು ಅವರ ಕೊನೆಯ ಚಿತ್ರವಾದ ದಿ ಇಮಾಜಿನೇರಿಯಂ ಆಫ್ ಡಾಕ್ಟರ್ ಪರ್ನಾಸ್ಸಸ್‍ನ ಚಿತ್ರೀಕರಣದ ವೇಳೆ ವಿಧಿವಶರಾದರು. ಡಾರ್ಕ ನೈಟ್ ಚಿತ್ರದ ನಟನೆಗೆ ಹಲವು ಪ್ರಶಸ್ತಿಗಳನ್ನು ತಮ್ಮ ಸಾವಿನ ನಂತರವೂ ವಶಪಡಿಸಿಕೊಂಡರು.[೪]

ಹೀತ್ ಆಂಡ್ರ್ಯೂ

ಆರಂಭಿಕ ಜೀವನ ಬದಲಾಯಿಸಿ

ಲೆಡ್ಜರ್ ಆಸ್ಟ್ರೇಲಿಯಾದ ಪರ್ತ್‍ನಲ್ಲಿ ಜನಿಸಿದರು. ಇವರ ತಾಯಿಯ ಹೆಸರು ಸ್ಯಾಲಿ ಲೆಡ್ಜರ್ ಹಾಗು ತಂದೆ ಕಿಮ್ ಲೆಡ್ಜರ್. ತಾಯಿ ಫ್ರೆಂಚ್ ಶಿಕ್ಷಕಿ ಹಾಗು ತಂದೆ ರೆಸ್ ಕಾರ್ ಚಾಲಕ ಮತು ಲೆಡ್ಜರ್ ಇಂಜಿನಿಯರಿಂಗ ಸಂಸ್ಥೆಯ ಮಾಲಕರಾಗಿದ್ದರು. ಗೂಸ್ಬೆರಿ ಹಿಲ್ ಮೇರೀಸ್ ಮೌನ್ಟ್ ಶಾಲೆಯಲ್ಲಿ ಪ್ರರ್ಥಮಿಕ ಶಿಕ್ಷಣ ಮತ್ತು ಗಿಲ್ಡಫೋರ್ಡ್ ಗ್ರಾಮರ್ ಶಾಲೆಯಲ್ಲಿ ಅವರು ಶಿಕ್ಷಣ ಮುಂದುವರಿಸಿದರು. ಶಾಲೆ ನಿರ್ಮಿಸಿದ ಪೀmರ್ ಪ್ಯಾನ್ ನಾಟಕದಲ್ಲಿನ ಪಾತ್ರ ಇವರು ನಟನಾ ಹಾದಿಗೆ ನಾಂದಿ ಹಾಡಿತು. 10ನೆ ವಯಸ್ಸಿನಲ್ಲಿ ಇವರ ಹೆತ್ತವರು ಬೇರ್ಪಟ್ಟರು.[೫]

ವೃತ್ತಿಜೀವನ ಬದಲಾಯಿಸಿ

1990 ಬದಲಾಯಿಸಿ

17ನೆ ವಯಸ್ಸಿನಲ್ಲಿ ಅವರು ನಟನೆಯಲ್ಲಿ ಭವಿಶ್ಯವನ್ನು ಕಂಡುಕೊಳ್ಳಲು ಮುನ್ನಡೆದರು[೬]. ಕ್ಲೌನಿಂಗ್ ಎರೌಂಡ್ (1992), ಶಿಪ್ ಟು ಶೋರ್ (1993), ಸ್ವೆಟ್ (1996), ರೋರ್ (1997) ಹೊಮ್ ಎಂಡ್ ಎವೇ (1997) ಮುಂತಾದ ದಾರವಹಿಗಳಲ್ಲಿ ನಟನೆ. ಬ್ಲಾಕ್‍ರಾಕ್ ಚಿತ್ರದಿಂದ ಅವರು ಚಿತ್ರರಂಗಕ್ಕೆ ಪಾದಾರ್ಪಣೆವೈದರು. 1999ರಲ್ಲಿ ಕಾಮಿಡಿ ಡ್ರಾಮಾ ಚಿತ್ರವಾದ 10 ತಿಂಗ್ಸ್ ಐ ಹೇಟ್ ಅಬೌಟ್ ಯೂ ಚಿತ್ರದಲ್ಲಿ ಅದ್ಭುತ ಪಾತ್ರವನ್ನು ನೆರೆವೇರಿಸಿದರು.[೭]

2000 ಬದಲಾಯಿಸಿ

ದಿ ಪೇಟ್ರಿಯಟ್ 2000 ಮಾನ್ಸ್ಟರ್ಸ ಬಾಲ್ 2000 ಚಿತ್ರಗಳಲ್ಲಿ ಪೋಶಕಪಾತ್ರ ವಹಿಸಿದರು. ಅ ಕ್ನೈಟ್ಸ್ ಟೇಲ್ 2001 ದಿ ಫೋರ್ ಫೆದರ್ಸ್ (2002) ದಿ ಆರ್ಡರ್ (2003) ನೆಡ್ ಕೆಲ್ಲಿ(2003) ಕ್ಯಾಸನೋವ (2005) ಮುಂತಾದ ಚಿತ್ರಗಳಲ್ಲಿ ಮುಖ್ಯಭೂಮಿಕೆಯಾದರು[೮]. 2001ರಲ್ಲಿ ಅವರು “ಮೇಲ್ ಸ್ಟಾರ್ ಆಫ್ ಟುಮಾರೋ” ಪ್ರಶಸ್ತಿಗಳಿಸಿದರು. 2005ರಲ್ಲಿ ಬ್ರೋಕ್‍ಬ್ಯಾಕ್ ಮೌನ್ಟೇನ್ ಚಿತ್ರದ ಅಭಿನಯಕ್ಕಾಗಿ ನ್ಯೂ ಯಾರ್ಕ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಹಾಗು ಸ್ಯಾನ್ ಫ್ರಾನ್ಸಿಸ್ಕೋ üಲ್ಮ್ ಕ್ರಿಟಿಕ್ಸ್ ಸರ್ಕಲ್‍ನಿಂದ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು. ಅಕಾಡೆಮಿ ಪ್ರಶಸ್ತಿ ಹಾಗು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೆ ನಾಮಾಮಕಿತಗೊಂಡಿದ್ದಾರೆ. ಬ್ರೋಕ್‍ಬ್ಯಾಕ್ ಮೌನ್ಟೇನ್ ನಂತರ ‘ಕ್ಯಾಂಡಿ’ ಆಸ್ಟ್ರೇಲಿಯನ್ ಚಿತ್ರದಲ್ಲಿ ಆಬ್ಬಿ ಕಾರ್ನಿಶ್‍ರೊಂದಿಗೆ ಸಹನಟರಾಗಿ ಕೆಲಸಮಾಡಿದರು[೯]. ಅಮೇರಿಕಾದ ಖ್ಯಾತ ಗಾಯಕ ಹಾಗು ಸಂಗೀತಗಾರ ಬಾಬ್ ಡಿಲ್ಲನ್ ಜೀವನವನ್ನಾಧರಿಸಿ ಮಾಡಿದ ಚಿತ್ರದಲ್ಲಿ, 6 ಪಾತ್ರದಲ್ಲೊಂದು ಮಾಡಿ ಮೆಚ್ಚುಗೆಗೆ ಪಾತ್ರರಾದರು. ಈ ಚಿತ್ರದ ನಟನೆಗೆ 2007 ಇನ್‍ಡಿಪೆನ್‍ಡೆನ್ಟ್ ಸ್ಪಿರಿಟ್ ರಾರ್ಬರ್ಟ್ ಆಲ್ಟಮನ್ ಪ್ರಶಸ್ತಿಯನ್ನು ತಮ್ಮ ಚಿತ್ರತಂಡದೊಂದೆಗೆ ಹಂಚಿಕೊಂಡರು. 2008ರಲ್ಲಿ ತೆರೆಕಂಡ, ಕ್ರಿಸ್ಟೊಫರ್ ನೋಲನ್ನ ನಿರ್ದೇಶನದ ಡಾರ್ಕ್ ನೈಟ್ ಚಿತ್ರದಲ್ಲಿ ಜೋಕರ್ ಆಗಿ ಎಲ್ಲರ ಗಮನ ಸೆಳೆದರು. ಅವರು ಸತ್ತು ಆರು ತಿಂಗಳ ನಂತರ ಈ ಚಿತ್ರ ಬಿಡುಗಡೆಗೊಂಡಿತು. ಜೋಕರ್ ಪಾತ್ರಕ್ಕಾಗಿ ಉತ್ತಮ ಪೋಶಕ ನಟ ಎಕಾಡೆಮಿ ಪ್ರಶಸ್ತಿ, ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದರು. ಚಲನಚತ್ರ ನಿರ್ದೇಶಕನಾಗಬೇಕೆಂಬ ಮಹದಾಸೆ ಲೆಡ್ಜರ್‍ಗಿತ್ತು. ಹಾಗಾಗಿ ಪ್ರಾರ್ಥಮಿಕ ಹಂತದಲ್ಲ ಹಲವು ಸಂಗಿತಗಳಿಗೆ ಚಿತನಿರ್ದೇಶನ ಮಾಡಿದ್ದಾರೆ. 2006ರಲ್ಲಿ ಆಸ್ಟ್ರೇಲಿಯಾದ ಹಿಪ್ ಹಾಪ್ ಗಾಯಕ ‘ನಫಾ’ ಅವರ ಚೊಚ್ಚಲ್ ಆಲ್ಬಮ್ ‘ಕಾಸ್ ಎನ್ ಎಫ್ಫೆಕ್ಟ್’, ಸಿಂಗಲ್ ಹಾಡಾಗಿರುವ ಸಿಡಕ್ಷನ್ ಇಸ್ ಇವಿಲ್’ನ್ನು ಇವರು ನಿರ್ದೇಸಿದ್ದಾರೆ.

ವಯಕ್ತಿಕ ಜೀವನ ಬದಲಾಯಿಸಿ

ಲೆಡ್ಜರ್ ಬಹಳ ಉತ್ತಮ ಚೆಸ್ ಆಟಗಾರರಾಗಿದ್ದರು. 10ನೆ ವಯಸ್ಸಿನಲ್ಲಿ ಅವರು ಆಸ್ಟ್ರೇಲಿಯಾದ ಜುನಿಯರ್ ಚಾಂಪಿಯನ್ಶಿಪ್‍ನಲ್ಲಿ ಪದಕಗಳಿಸಿದ್ದರು. ವಾಶಿಂಗಟನ್ ಸ್ಕ್ವೇರ್ ಪಾರ್ಕ್‍ನಲ್ಲಿ ಚೆಸ್ ಆಟವಾಡುತ್ತಿದ್ದರು. ನಟಿಯರಾದ ಲಿಸಾ ಜೇóನ್, ಹೆದರ್ ಗ್ರಹಮ್ ಹಾಗು ನಯೋಮಿ ವಾಟ್ಸ್ ಜೊತೆಗೆ ಸಂಭದವಿಟ್ಟುಕೊಂಡಿದ್ದರು. ಬ್ರೋಕಬ್ಯಾಕ್ ಮೌನ್ಟೇನ್ ಚಿತ್ರಿಕರಣದ ಸಂಧರ್ಬದಲ್ಲಿ ಮಿಶೆಲ್ ವಿಲಿಯಮ್ಸ್‍ರನ್ನು ಬೇಟಿಯಾದರು. 28 ಒಕ್ಟೋಬರ್ 2005ರಂದು ಮಗಳು ಮಟಿಲ್ಡಾ ರೋಸ್ ನ್ಯೂಯಾರ್ಕ್ ಜನಿಸಿದಳು. ಪ್ರೆಸ್ ವಿವಾದಗಳು ಆಸ್ಟ್ರೇಲಿಯಾದ ಪ್ರೆಸ್‍ನೊಂದಿಗೆ ಲೆಡ್ಜರ್ ಕಳಪೆ ಸಂಭಂದ ಹೊಂದಿದ್ದರು. ಇದರಿಂದಾಗಿ ತಮ್ಮ ಕುಟುಂಬ ಹಾಗು ಊರನ್ನು ಬಿಟ್ಟು ಸಿಡ್ನಿಯಲ್ಲಿರಬೇಕಾಗಿತ್ತು.[೧೦]

ಆರೋಗ್ಯ ಸಮಸ್ಯಗಳು ಬದಲಾಯಿಸಿ

ಅತೀಯಾದ ಕೆಲಸದ ಒತ್ತಡದಿಂದಾಗ ಅವರ ನಿದ್ರೆಯ ಮೇಲೆ ಬಲವಾದ ಪರಿಣಾಮ ಬೀರುತ್ತಿತು ಎಂದು ಅವರು ನ್ಯೂಯಾರ್ಕ್ ಟೈಮ್ಸ್ ಸಂದರ್ಶನದಲ್ಲಿ ಹೇಳಿದ್ದರು. ದೇಹ ಎಷ್ಟೇ ದಣಿದಿದ್ದರು ಮನಸ್ಸು ಮಾತ್ರ ಓಡುತ್ತಲೇ ಇತ್ತು ಎಂದಿದ್ದರು. ನಿದ್ರ ಮಾತ್ರೆ ಸೇವಿಸಿದರೂ ಕೂಡ ಒಂದೆರಡು ಗಂಟೆಯಲ್ಲಿ ಮತ್ತೆ ಎಚ್ಚರವಾಗುತ್ತಿತ್ತು. ಕೊನೆಯ ಚಿತ್ರದ ಚಿತ್ರೀಕರಣದ ವೇಳೆ ಲಂಡನ್‍ನಲ್ಲಿದ್ದಾಗ ಉಸಿರಿನ ಸಮಸ್ಯೆಯಿಂದ ಬಳಲುತ್ತಿದ್ದರು. ಚಿತ್ರದ ಸಹನಟನಾದ ಕ್ರಿಸ್ಟೊಫರ್ ಪ್ಲಮರ್‍ರೊಂದಿಗೆ ಮಾತನಾಡಿಕೊಳ್ಳುತ್ತಿದ್ದರು. "ಅಲ್ಲಿನ ಚಳಿಯಿಂದಾಗಿ ಚಿತ್ರೀಕರಣದ ಸಂಧರ್ಬ ಎಲ್ಲರಿಗೂ ದೇಹ ಕೈಕೊಟ್ಟಿತ್ತು. ಆದರೆ ಹೀತ್ ಎಲ್ಲರಂತೆ ಬೇಗನೆ ಗುಣಮುಖರಾಗಲಿಲ"್ಲ ಎನ್ನುತ್ತಾರೆ ಕ್ರಿಸ್ಟೊಫರ್.[೧೧]

ಸಾವು ಬದಲಾಯಿಸಿ

ಜನವರಿ 22 2008 ಸುಮಾರು 2:45ಕ್ಕೆ ಮಧ್ಯಾಹ್ನ ಲೆಡ್ಜರ್ ಮ್ಯಾನ್‍ಹಾಟ್ಟನ್‍ನ ತಮ್ಮ ನಿವಾಸದಲ್ಲಿ ಹಾಸಿಗೆಯ ಮೆಲೆ ಅಪ್ರಜ್ಞಾ ಸ್ಥಿತಿಯಲ್ಲಿದ್ದರು. ಪೋಲಿಸರ ಹೇಳಿಕೆಯ ಪ್ರಕಾರ ಸುಮಾರು 3:00 ಗಂಟೆಗೆ ಮನೆಕೆಲಸದವಳು ಬಂದು ನೋಡಿದ್ದರು. ಆಮೇಲೆ ಆತನ ಗೆಳತಿ ಮೇರಿ ಕೇಟ್ ಆಸ್ಲೇನ್‍ನ್ನು ಕರೆದಳು. ಕ್ಯಾಲಿಫೋರ್ನಿಯಾದಲ್ಲಿದ್ದ ಆಸ್ಲೇನ್ ಒಬ್ಬ ಸೆಕ್ಯೂರಿಟಿ ಗಾರ್ಡ್‍ನ್ನು ಅಲ್ಲಿಗೆ ಕಳುಹಿಸಿದಳು. ಪ್ರಾರ್ಥಮಿಕ ಚಿಕಿತ್ಸೆ ಫಲಿಸಲಿಲ್ಲ ಎಂದು ಪೋಲಿಸರು ಹೆಳಿಕೆ ನೀಡಿದ್ದರು. 7 ನಿಮಿಷದ ನಂತರ ತುರ್ತು ಚಿಕಿತ್ಸೆಗಾಗಿ ವೈದ್ಯರು ಬಂದರೂ ಕೂಡ ಲೆಡ್ಜರ್‍ನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. 3:36ಕ್ಕೆ ಲೆಡ್ಜರ್‍ನ ಸಾವು ಘೋಶಿಸಲಾಯಿತು. ದೇಹವನ್ನು ಸ್ಥಳಾಂತರಿಸಲಾಯಿತು. ಶವಪರೀಕ್ಷೆ ವರದಿ ಎರಡು ವಾರದ ಕಳೆದು ಫೇಬ್ರವರಿ 6 2008ರಂದು, ಶವಪರೀಕ್ಷೆಯ ನಂತರ ನ್ಯೂಯಾರ್ಕ್‍ನ ಮುಖ್ಯ ವೈದ್ಯಕೀಯ ತಪಾಸಕರ ಕಚೇರಿ ವರದಿ ಸಲ್ಲಿಸಿತು. ಒಕ್ಸಿಕೊಡೊನ್, ಹೈಡ್ರೊಕೊಡೊನ್, ಡಯಜೆಪಾಮ್, ಟೆಮಾಜೆಪಾಮ್, ಆಲ್ಪ್ರಾಜೊಲಾಮ್ ಮತ್ತು ಡೊಕ್ಸಿಲಾಮೈನ್‍ನ ಸಂಯೋಜಿತ ಪರಿಣಾಮದಿಂದಾಗಿ ಅತಿ ಮಾದಕತೆಯನ್ನು ಹೊಂದಿ ಸಾವನ್ನಪ್ಪಿದರು. ಈ ಗುಳಿಗೆಗಳನ್ನು ಅತಿಯಾಗಿ ಸೇವಿಸಿದ್ದರಿಂದ ಲೆಡ್ಜರ್ ಮರಣಹೊಂದಿದರು. ವರದಿಯಲ್ಲಿ ಸಿಕ್ಕಿದ್ದ ಔಷಧಿಗಳು ಅಮೇರಿಕಾದಲ್ಲಿ ವೈದ್ಯರೂ ಕೊಡಬಹುದಾದರು ಹಲವು ಮಂದಿ ವೈದ್ಯರು ಈ ಮೇಲ್ಕಂಡ ಮಾತ್ರೆಗಳನ್ನು ಒಬ್ಬ ರೋಗಿಗೆ ಸೂಚಿಸಲು ನಿರಾಕರಿಸುತ್ತಾರೆ. ಲೆಡ್ಜರ್‍ರ ಮರಣದಿಂದಾಗಿ ದೇಶದಲ್ಲಿ ಮಾದಕವ್ಯಸನ ಸಮಸ್ಯೆಯ ಬೆಳವಣಿಗೆ ಎದ್ದುಕಾಣುತ್ತಿತ್ತು.[೧೨][೧೩]

ಫೆಡರಲ್ ತನಿಖೆ ಬದಲಾಯಿಸಿ

2008 ಫೆಬ್ರವರಿಯಲ್ಲಿ ಅಲ್ಲಿನ ತನಿಖಾಧಿಕಾರಿಗಳು, ಇಬ್ಬರು ವೈದ್ಯರನ್ನು ತಪಾಸಣೆಗೊಳಗಾಗಿಸಿದ್ದರು, ಹಾಗು ನಿರಪರಾಧಿ ಎಂದು ಘೋಶಿಸಲಾಯಿತು. ಅವರು ಸೂಚಿಸ ಗುಳಿಗೆಗಳು ಬೆರೆಯೇ ಆಗಿತ್ತು ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಸರಿಯಾದ ಮಾಹಿತಿ ಇಲ್ಲದಿದ್ದರಿಂದ, ಹಾಗು ತನಿಖೆಗೊಳಗಾದವರು ನಿರಪರಾಧಿಗಳು ಎಂದು ಘೋಶಿಸಿರುವುರಿಂದ ಈ ಕೇಸನ್ನು ಮುಚ್ಚಲಾಯಿತು. ಇಂದಿವರೆಗು ಲೆಡ್ಜರ್ ಕೈಗೆ ಆ ಮಾತ್ರಗಳು ಹೇಗೆ ಸಿಕ್ಕವು ಎಂಬುದು ಂiÀiಕ್ಷಪ್ರಶ್ನೆಯಾಗಿ ಉಳಿದಿದೆ. ಅಭಿಮಾನಿಗಳ ಮೇಲೆ ಪರಿಣಾಮ ಸಿನಿಮಾ ಜಗತ್ತು ಮಾತ್ರವಲ್ಲದೆ ಅಭಿಮಾನಿಗಳು ಸಹ ಧಿಗ್ಭ್ರಾಂತರಾದರು. ಸಾವಿನ ಕಾರಣ ತಿಳಿಯದೆ ಕಂಗಾಲಾಗಿ ಹೋಗಿದ್ದರು ಎಂದು ಅಸೋಸಿಯೇಟಡ್ ಪ್ರೆಸ್ ಲೇಖಕ ಜೇಕ್ ಕೋಲ್ ಹೇಳಿದ್ದರು. ಡಾರ್ಕ್ ನೈಟ್ ಚಿತ್ರದ ಅವರ ಜೋಕರ್ ಪಾತ್ರ ಜನರ ಮನೆಮಾತಾಗಿತ್ತು. ಹಲವು ಪ್ರಶಸ್ತಿಗಳನ್ನು ಆ ಪಾತ್ರ ಅವರಿಗೆ ಮರಣೋತ್ತರವಾಗಿ ತಂದು ಕೊಟ್ಟಿತು.[೧೪][೧೫]

ಸ್ಮಾರಕಗಳು ಮತ್ತು ಗೌರವಗಳು ಬದಲಾಯಿಸಿ

ದಿನಾಂಕ 22 ಜನವರಿ 2008ರ ರಾತ್ರಿ ಲೆಡ್ಜರ್‍ರ ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆಯೆ, ಮಾರನೆ ದಿನ ಹಲವಾರು ಮಿಡಿಯಾದವರು, ಶೋಕತಪ್ತರು, ಅಭಿಮಾನಿಗಳು ಅವರ ಮನೆಯ ಮುಂಭಾಗದಲ್ಲಿ ನಿಂತು ಅವರ ಸ್ಮರಣಾರ್ಥವಾಗಿ ಹೂವುಗಳನ್ನು ಅರ್ಪಿಸಿದರು. ಮಾರನೆ ದಿನ 10:50 ಆಸ್ಟ್ರೇಲಿಯಾದ ಸಮಯದಲ್ಲಿ ಲೆಡ್ಜರ್‍ರ ಹೆತ್ತವರು ಹಾಗು ಸಹೋದರಿಯರು, ತಮ್ಮ ಪರ್ತ್‍ನ ನಿವಾಸದಲ್ಲಿ ಸೇರಿ ಸಾಮೂಹಿಕ ಹೇಳಿಕೆಗಳೊಂದಿಗೆ ಶೋಕ ವ್ಯಕ್ತಪಡಿಸಿದರು. ಕೆಲವು ದಿನಗಳವರೆಗೆ ಹಲವಾರು ವ್ಯಕ್ತಿಗಳು ಶೋಕಾಚರಣೆ ಹಾಗು ಗೌರವಗಳನ್ನು ಅರ್ಪಿಸಿದರು. ಆಸ್ಟ್ರೇಲಿಯಾದ ಆಗಿನ ಪ್ರಧಾನಿ ಕೆವಿನ್ ರಡ್ ಮುಂತಾದವರು ಶೋಕಾಚರಣೆಯಲ್ಲಿ ಭಾಗಿಯಾಗಿದ್ದರು.

ಚಿತ್ರರಂಗದ ಹಲವು ನಟರು ತಮ್ಮ ಹೇಳಿಕೆಗಳ ಮೂಲಕ ಹತಾಷೆಯನ್ನು ಸೂಚಿಸಿದರು. ಡೇನಿಯಲ್ ಡೇ-ಲೀವಿಸ್ ತಮಗೆ ಸಿಕ್ಕಿದ್ದ ಸ್ಕ್ರೀನ್ ಆ್ಯಕ್ಟರ್ಸ್ ಗಿಲ್ಡ್ ಪ್ರಶಸ್ತಿಯನ್ನು ಲೆಡ್ಜರ್‍ಗೆ ಅರ್ಪಿಸಿದರು. ಬ್ರೊಕ್‍ಬ್ಯಾಕ್ ಮೌನ್‍ಟೇನ್ ಹಾಗು ಮಾನ್ಸ್ಟರ್ಸ್ ಬಾಲ್ ಚಿತ್ರದಲ್ಲಿನ ಅವರ ನಟನೆಯನ್ನು ಮುಕ್ತ ಖಂಟದಿಂದ ಶ್ಲಾಘಿಸಿದರು. ಫೆಬ್ರವರಿ 1 ರಂದು, ಮಿಶೆಲ್ ವಿಲಿಯಮ್ಸ್ ಅವರ ಮೊದಲ ಸಾರ್ವಜನಿಕೆ ಹೇಳಿಕೆಯಲ್ಲಿ ತಮ್ಮ ಶೋಕ ವ್ಯಕ್ತ ಪಡಿಸಿದರು. ಲೆಡ್ಜರ್‍ನ ಸಂಕೇತವಾಗ ಅವರು ಮಗಳು ಇದ್ದಾಳೆ ಎಂದರು. ಖಾಸಗಿ ಕಾರ್ಯಕ್ರಮ ನಂತರ ಅವರ ದೇಹವನ್ನು ಕುಟುಂಬದವರೋಂದಿಗೆ ಪರ್ತ್‍ಗೆ ಕಳುಹಿಸಲಾಯಿತು.[೧೬][೧೭][೧೮]

ಉಲ್ಲೇಖಗಳು ಬದಲಾಯಿಸಿ

  1. https://www.nytimes.com/2008/01/23/movies/23ledger.html
  2. http://www.tvguide.com/celebrities/heath-ledger/credits/153347/
  3. http://www.timesonline.co.uk/tol/comment/obituaries/article3237974.ece
  4. https://www.nytimes.com/2008/03/09/movies/09halb.html?pagewanted=all&_r=0
  5. https://web.archive.org/web/20080416193932/http://www.tiscali.co.uk/entertainment/film/biographies/heath_ledger_biog.html
  6. "ಆರ್ಕೈವ್ ನಕಲು". Archived from the original on 2014-02-22. Retrieved 2018-04-05.
  7. https://web.archive.org/web/20080416193932/http://www.tiscali.co.uk/entertainment/film/biographies/heath_ledger_biog.html
  8. http://www.tvguide.com/celebrities/heath-ledger/credits/153347/
  9. https://www.washingtonpost.com/wp-dyn/content/article/2005/12/15/AR2005121500491_pf.html
  10. https://www.theage.com.au/news/opinion/ledger-another-great-who-died-too-young/2008/01/24/1201157560500.html
  11. https://www.nytimes.com/2007/11/04/movies/moviesspecial/04lyal.html
  12. http://www.timesonline.co.uk/tol/comment/obituaries/article3237974.ece
  13. https://www.theage.com.au/news/opinion/ledger-another-great-who-died-too-young/2008/01/24/1201157560500.html
  14. https://cityroom.blogs.nytimes.com/2008/02/06/heath-ledgers-death-is-ruled-an-accident/
  15. http://edition.cnn.com/2008/SHOWBIZ/Movies/02/06/heath.ledger/index.html
  16. https://www.theguardian.com/music/2009/mar/16/heath-ledger-modest-mouse-music-video
  17. "ಆರ್ಕೈವ್ ನಕಲು". Archived from the original on 2018-04-02. Retrieved 2018-04-05.
  18. https://www.telegraph.co.uk/news/worldnews/1577062/Heath-Ledger-refused-help-for-heroin-abuse.html