ಹಿಂದೂಗಳು ಒಳ್ಳೆ ಕರ್ಮ, ಭಕ್ತಿ, ಅಥವಾ ಜ್ಞಾನವನ್ನು ಆಚರಿಸಿ ಮೋಕ್ಷವನ್ನು ಪಡೆಯಬಹುದು (ಬ್ರಹ್ಮನ್‍ನೊಂದಿಗೆ ವಿಲೀನ) ಎಂದು ನಂಬುವ ಜನ. ವೈಷ್ಣವ ಪಂಥ, ಶೈವ ಪಂಥ, ಶಾಕ್ತ ಪಂಥ ಮತ್ತು ಸ್ಮಾರ್ತ ಸಂಪ್ರದಾಯ ಹಿಂದೂ ಧರ್ಮದ ಮುಖ್ಯ ಪಂಥಗಳು. ಈ ನಾಲ್ಕು ಪಂಥಗಳು ಕ್ರಿಯಾವಿಧಿಗಳು, ನಂಬಿಕೆಗಳು, ಮತ್ತು ಸಂಪ್ರದಾಯಗಳನ್ನು ಹಂಚಿಕೊಳ್ಳಬಹುದು, ಆದರೆ ಪ್ರತಿ ಪಂಥವು ಜೀವನದ ಪರಮ ಗುರಿಯಾದ ಆತ್ಮಜ್ಞಾನವನ್ನು (ಆತ್ಮ ಸಾಕ್ಷಾತ್ಕಾರ) ಹೇಗೆ ಸಾಧಿಸಬೇಕು ಎಂಬುದಕ್ಕೆ ಒಂದು ಬೇರೆ ಜೀವನಕ್ರಮವನ್ನು ಹೊಂದಿದೆ.