ಹಾಫ್ನಿಯಮ್ ಒಂದು ಲೋಹ ಮೂಲಧಾತು.ಇದರ ಗುಣ ಲಕ್ಷಣಗಳು ಹೆಚ್ಚಾಗಿ ಜಿರ್ಕೋನಿಯಮ್ ನ್ನು ಹೋಲುತ್ತದೆ. ಇದು ಜಿರ್ಕೋನಿಯಮ್ ನೊಂದಿಗೆ ಮಿಶ್ರಣವಾಗಿಯೇ ದೊರೆಯುತ್ತದೆ.ಇದನ್ನು ಡೆನ್ಮಾರ್ಕ್ಡಿರ್ಕ್ ಕೋಸ್ಟರ್ ಮತ್ತು ಹಂಗರಿಜಿಯೋರ್ಗ್ ವಾನ್ ಹೆವಿಸೆ(Georg von Hevesy)ಎಂಬವರು ೧೯೨೩ ರಲ್ಲಿ ಕೋಪನ್ ಹೇಗನ್ ನಗರದಲ್ಲಿ ಕಂಡುಹಿಡಿದರು. ಇದಕ್ಕೆ ಹೆಸರನ್ನು ಇದೇ ನಗರಕ್ಕೆ ಲ್ಯಾಟಿನ್ ಬಾಷೆಯ ಹೆಸರಾದ " ಹಾಫ್ನಿಯ " ಎಂಬ ಶಬ್ದದಿಂದ ಇಡಲಾಗಿದೆ.ಇದನ್ನು ಅಣುರಿಯಾಕ್ಟರ್ ಗಳಲ್ಲಿ,ಕೆಲವು ಮಿಶ್ರ ಲೋಹಗಳ ಉತ್ಪಾದನೆಯಲ್ಲಿ ಬಳಸುತ್ತಾರೆ.