ಸೈರಸ್ ಪಲ್ಲೊಂಜಿ ಮಿಸ್ತ್ರಿ

ಸೈರಸ್ ಪಲ್ಲೊಂಜಿ ಮಿಸ್ತ್ರಿ[೨] ಒಬ್ಬ ಐರಿಶ್ ಮೂಲದ ವ್ಯಾಪಾರಿ ;ರತನ್ ನಾವಲ್ ಟಾಟರವರು ತಮ್ಮ ನಿವೃತ್ತಿಯನ್ನು ಘೋಷಿಸಿದ ಮೇಲೆ 'ಟಾಟಾ ಸಮೂಹ ಕಂಪೆನಿಯ ಛೇರ್ಮನ್' ಆಗಿ ೨೮ ಡಿಸೆಂಬರ್, ೨೦೧೨ ರಲ್ಲಿ ನೇಮಿಸಲ್ಪಟ್ಟಿದ್ದರು. [೩](೪, ಜುಲೈ,೧೯೬೮) ಟಾಟ ಸಮೂಹದ ೬ ನೆಯ ಛೇರ್ಮನ್ ಆಗಿ ನಿಯುಕ್ತರಾಗಿದ್ದ ಸೈರಸ್ ಪಲ್ಲೊಂಜಿ ಮಿಸ್ತ್ರಿಯವರು, 'ನವ್ರೋಜಿ ಸಕ್ಲಾಟ್ ವಾಲ'ರ ತರುವಾಯ ಟಾಟ ಮನೆತನಕ್ಕೆ ಸೇರದ ಛೇರ್ಮನ್ ಗಳ ಸಾಲಿನಲ್ಲಿ ಎರಡನೆಯವರು. [೪] ಸುಪ್ರಸಿದ್ಧ ಭಾರತದ ಕಟ್ಟಡ ನಿರ್ಮಾಪಕರಲ್ಲೊಬ್ಬರಾದ 'ಪಲ್ಲೊಂಜಿ ಮಿಸ್ತ್ರಿಯವರ ಕೊನೆಯ ಮಗ'. ಅರ್ಥ ಶಾಸ್ತ್ರಜ್ಜರು 'ಸೈರಸ್' ರವರನ್ನು ಭಾರತ ಹಾಗೂ ಬ್ರಿಟನ್ ನಲ್ಲಿ ಅತಿ ಪ್ರಮುಖ ಉದ್ಯೋಗಪತಿಯೆಂದು ವರ್ಣಿಸಿದ್ದಾರೆ.[೫] ಮುಂಬಯಿಯ ಕೆಥೆಡ್ರಲ್ ಮತ್ತು ಕಾನನ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸವಾಯಿತು. 'ಲಂಡನ್ ನ ಇಂಪೀರಿಯಲ್ ಕಾಲೇಜ್' ನ, 'ಸಿವಿಲ್ ಇಂಜಿನಿಯರಿಂಗ್ ವಿಷಯ'ದಲ್ಲಿ ಪದವಿಗಳಿಸಿದರು. 'ಲಂಡನ್ ಬಿಸಿನೆಸ್ ಸ್ಕೂಲ್' ನಿಂದ 'ಎಮ್.ಎಸ್.ಸಿ (ಮ್ಯಾನೇಜ್ಮೆಂಟ್') ನಲ್ಲಿ 'ಸಿವಿಲ್ ಇಂಜಿನಿಯರಿಂಗ್ ಫೆಲೋ' ಆಗಿದ್ದಾರೆ. (Institution of Civil Engineers)[೬]

ಸೈರಸ್ ಪಲ್ಲೊಂಜಿ ಮಿಸ್ತ್ರಿ
ಸೈರಸ್ ಮಿಸ್ತ್ರಿ
Cyrus Pallonji Mistry
ಜನನ(೧೯೬೮-೦೭-೦೪)೪ ಜುಲೈ ೧೯೬೮
ಮರಣ4 September 2022(2022-09-04) (aged 54)
ರಾಷ್ಟ್ರೀಯತೆಐರಿಶ್[೧]
ಹಳೆ ವಿದ್ಯಾರ್ಥಿಇಂಪೀರಿಯಲ್ ಕಾಲೇಜ್ ಆಫ್ ಲಂಡನ್
ಲಂಡನ್ ಬ್ಯುಸಿನೆಸ್ ಸ್ಕೂಲ್
ಉದ್ಯೋಗಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ
ಜೀವನ ಸಂಗಾತಿರೋಹಿಖ ಮಿಸ್ತ್ರಿ
ಮಕ್ಕಳು2
ಪೋಷಕರುಪಲ್ಲೊಂಜಿ ಮಿಸ್ತ್ರಿ
ಪಾಟ್ಸಿ ಪೆರಿನ್ ದುಬಾಶ್

ಪರಿವಾರ ಬದಲಾಯಿಸಿ

'ಪಲ್ಲೊಂಜಿ ಮಿಸ್ತ್ರಿಯವರು', 'ಐರಿಶ್ ಪಾರ್ಸಿ ಮತಸ್ಥರು. ಭಾರತದ ಸುಪ್ರಸಿದ್ಧ ಕಟ್ಟಡ ಶಿಲ್ಪಿ'ಯಾಗಿದ್ದಾರೆ. ಮಿಸ್ತ್ರಿಯವರ ಅಜ್ಜ, ೧೯೩೦ ರಲ್ಲೇ 'ಟಾಟ ಸನ್ಸ್ ಲಿಮಿಟೆಡ್,' ನಿಂದ ಶೇರುಗಳನ್ನು ಖರೀದಿಸಿದ್ದರು. ನವೆಂಬರ್, ೨೦೧೧ ರಲ್ಲಿ ತಂದೆಯವರ ಹೆಸರಿನಲ್ಲಿ ೧೮.೫ % ಪ್ರತಿಶತ್ ಇತ್ತು. 'ಟಾಟ ಕಂಪೆನಿಯ ಅತಿಹೆಚ್ಚು ಶೇರ್ಹೋಲ್ಡರ್' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವೆಲ್ಲಾ ವಹಿವಾಟುಗಳನ್ನು ಟ್ರಸ್ಟ್ ಗಳು ನಿರ್ವಹಿಸುತ್ತಿದ್ದವು. ಮಿಸ್ತ್ರಿಯವರಿಗೆ, 'ಶಾಪೂರ್ ಮಿಸ್ತ್ರಿ'ಎಂಬ ಆಣ್ಣ ಇದ್ದಾರೆ. ಅವರು 'ರೂಸಿ ಸೇತ್ನಾ' ರ ಪುತ್ರಿ, 'ಬೆಹ್ರೋಝ್ ಸೇತ್ನ' ರಜೊತೆ ಲಗ್ನವಾಗಿದ್ದಾರೆ. ಸೈರಸ್ ಗೆ ಇಬ್ಬರು ಸೋದರಿಯರಿದ್ದಾರೆ. 'ಲೈಲ' ಮತ್ತು 'ಅಲೂ'. ಅಲೂ, 'ರತನ್ ನಾವೆಲ್ ಟಾಟರ ಮಲ ಸೋದರ', 'ನೊಯಲ್ ಟಾಟ'ರವರ ಪತ್ನಿ. 'ಲೈಲ,' 'ರುಸ್ತುಮ್ ಜೆಹಾಂಗೀರ್' ರವರನ್ನು ಲಗ್ನವಾಗಿದ್ದಾರೆ. ಮಿಸ್ತ್ರಿಯವರ ಪತ್ನಿ, 'ರೋಹಿಕ್ ಚಾಗ್ಲ' 'ಇಕ್ಬಾಲ್ ಚಾಗ್ಲ'ರ ಮಗಳು, ಹಾಗೂ ಸುಪ್ರಸಿದ್ಧ ಜೂರಿಸ್ಟ್, 'ಎಮ್.ಸಿ.ಚಾಗ್ಲ'ರ ಮೊಮ್ಮಗಳು.ಮಿಸ್ತ್ರಿ ಪರಿವಾರದಲ್ಲಿ ಇಬ್ಬರು ಗಂಡುಮಕ್ಕಳಿದ್ದಾರೆ. ತಂದೆ ಭಾರತೀಯರು, ತಾಯಿ ಐರಿಶ್ ರಾಷ್ಟ್ರೀಯಳಾಗಿರುವುದರಿಂದ ಮಿಸ್ತ್ರಿಯವರು ತಮ್ಮನ್ನು 'ಐರಿಶ್ ರಾಷ್ಟ್ರೀಯ' ಎಂದೇ ಭಾವಿಸುತ್ತಾರೆ. 'ಮಿಸ್ತ್ರಿ', 'ಶಾಪೂರ್ಜಿ ಪಲ್ಲಂಜಿ ಅಂಡ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್' ಆಗಿದ್ದರು. ಇದು 'ಶಾಪುರ್ಜಿ ಪಲ್ಲಂಜಿ ಸಮುದಾಯ'ದ ಒಂದು ಭಾಗ. ೧ ಸೆಪ್ಟೆಂಬರ್, ೨೦೦೬ ರಿಂದ 'ಟಾಟ ಸನ್ಸ್ ಬೋರ್ಡ್' ಜೊತೆ ಸೇರಿದರು. ಒಂದು ವರ್ಷದ ಬಳಿಕ ತಂದೆಯವರು ನಿವೃತ್ತರಾದರು. 'ಟಾಟಾ ಎಲೆಕ್ಸಿ ಲಿಮಿಟೆಡ್' ನಲ್ಲಿ ನಿರ್ದೇಶಕರಾಗಿ ಕೆಲಸಮಾಡಿದ್ದರು.

ಹಲವಾರು ಟಾಟ ಕಂಪೆನಿಗಳ ನಿರ್ದೇಶಕರಾಗಿ ಬದಲಾಯಿಸಿ

  • ೨೪ ಸೆಪ್ಟೆಂಬರ್, ೧೯೯೦ ರಿಂದ ೨೬ ಅಕ್ಟೋಬರ್, ೧೮ ಸೆಪ್ಟೆಂಬರ್, ೨೦೦೬ ರ ವರೆಗೆ, ೨೦೦೯ ರ ತನಕ 'ಟಾಟ ಪವರ್ ಕಂಪೆನಿಯ ನಿರ್ದೇಶಕ'ರಾಗಿದ್ದರು.
  • ೨೦೧೨,ರಲ್ಲಿ ಮಿಸ್ತ್ರಿಯವರು 'ಟಾಟ ಸನ್ಸ್ ಡೈರೆಕ್ಟರ್' ಆಗಿ ನೇಮಿಸಲ್ಪಟ್ಟರು. ಟಾಟ ಕಂಪೆನಿಯ ಪ್ರಮುಖ ಶಾಖೆಗಳ ಚೇರ್ಮನ್ ಆಗಿ ನೋಡಿಕೊಳ್ಳುತ್ತಿದ್ದಾರು.
  • 'ಟಾಟ ಇಂಡಸ್ಟ್ರೀಸ್,'
  • 'ಟಾಟ ಸ್ಟೀಲ್,'
  • 'ಟಾಟ ಮೋಟಾರ್ಸ್',
  • 'ಟಾಟ ಕನ್ಸಲ್ಟೆನ್ಸಿ ಸರ್ವಿಸಸ್',
  • 'ಇಂಡಿಯನ್ ಹೋಟೆಲ್ಸ್',
  • 'ಟಾಟ ಗ್ಲೋಬಲ್ ಬೆವೆರೆಜಸ್'
  • 'ಟಾಟ ಕೆಮಿಕಲ್ಸ್'

ನಿಧನ ಬದಲಾಯಿಸಿ

ಮಿಸ್ತ್ರಿಯವರು ೦೪ ಸೆಪ್ಟೆಂಬರ್ ೨೦೨೨ರಂದು ಅಹಮದಾಬಾದಿನಿಂದ ಮುಂಬೈಗೆ ಕಾರಿನಲ್ಲಿ ಬರುತ್ತಿದ್ದಾಗ ಸೂರ್ಯ ನದಿಯ ಸೇತುವೆಯ ಮೇಲೆ ಕಾರು ರಸ್ತೆವಿಭಜಕಕ್ಕೆ ಡಿಕ್ಕಿ ಹೊಡೆದು ಆದ ಅಪಘಾತದಲ್ಲಿ ಸಾವಿಗೀಡಾದರು.[೭]

ಬಾಹ್ಯ ಸಂಪರ್ಕಗಳು ಬದಲಾಯಿಸಿ


ಉಲ್ಲೇಖಗಳು ಬದಲಾಯಿಸಿ

  1. ರೀಬಾ ಜ಼ಕಾರಿಯಾ; ನಮ್ರತ ಸಿಂಗ್. "ಸೈರಸ್ ಮಿಸ್ತ್ರಿ ಪರಿಚಯ".
  2. BBC,Profile : Cyrus Mistry
  3. The Economic Times, Cyrus P Mistry to take over from Ratan Tata as Chairman of Tata Group in December 2012 nov, 23, 2011
  4. Money Control.com, Cyrus Mistry, a Tata in all but name, Nov 23, 2011
  5. Cyrus Mistry India Business Guide
  6. BBC News,Tata Group successor a 'surprise choice' - Indian media 24 November 2011
  7. https://www.prajavani.net/business/commerce-news/former-tata-sons-head-cyrus-mistry-killed-in-car-crash-near-mumbai-969080.html